*ಕೆಲಸದಆರಂಭದಲ್ಲಿಯೇ ಒದಗುವ ವಿಘ್ನ ಚಿಕ್ಕ ಮಕ್ಕಳಿಗೆ ಸೆಟೆಬೇನೆ ಬರುತ್ತದೆ. ಇದೊಂದು ಥರ ಅಪಸ್ಮಾರ ರೋಗ. ದೊಡ್ಡದಾಗಿ ಅಳುತ್ತ ಹಟ ಮಾಡುತ್ತ ರಚ್ಚೆ ಹಿಡಿಯುತ್ತ ಮಕ್ಕಳ ಮುಖ ಕಪ್ಪಿಟ್ಟು ಪ್ರಜ್ಞೆ ತಪ್ಪುತ್ತಾರೆ. ಸರಿಯಾದ ಪ್ರಮಾಣದಲ್ಲಿ ಆಮ್ಲಜನಕದ ಪೂರೈಕೆ ಆಗದೆ ಇರುವುದೇ ಇದಕ್ಕೆ ಕಾರಣ. ಇದು ವೈದ್ಯಕೀಯ ವಿಜ್ಞಾನದ ಕಾರಣ. ಆದರೆ ಹೆತ್ತವರು ಇದನ್ನು ಬಾಲಗ್ರಹ ಎಂದು ಕರೆದು ದೇವರಿಗೆ ಪೂಜೆ ಮಾಡಿಸುತ್ತಾರೆ. ಭಟ್ಟರಿಂದ ಯಂತ್ರ ಕಟ್ಟಿಸುವುದು, ಹರಕೆ ಹೊರುವುದು ಇತ್ಯಾದಿ ಮಾಡುತ್ತಾರೆ. ಬಾಲಗ್ರಹವೆಂದರೆ ಇಲ್ಲಿ ಚಿಕ್ಕ ಮಕ್ಕಳಿಗೆ ಕಾಡುವ...
ಮೋಡಗಳು ಕವುಚಿಕೊಂಡಿವೆ ಆಗಸದ ತುಂಬ ಸೂರ್ಯನ ಪ್ರಖರ ಕಿರಣಗಳಾಗಲಿ ಚಂದ್ರನ ತಂಗದಿರಾಗಲಿ ಯಾವವೂ ನಿಮ್ಮ ತಲುಪುವುದೇ ಇಲ್ಲ ಮೋಡಗಳು ಕವುಚಿಕೊಂಡಿವೆ ಮಬ್ಬುಗತ್ತಲೆ ಕವಿದಿದೆ ಹೊರಗೆ ಹಗಲಲ್ಲೇ ಮನೆಯೊಳಗೆ ಹಚ್ಚಿದ ದೀಪ ಆಗೋ ಈಗೋ ಬಂದೇ ಬಿಡುವುದು ಮಳೆ ಎನ್ನುವಂತೆ ಬಿರುಗಾಳಿ ಪತರಗುಟ್ಟುವ ಬೆಳಕು ಸಂದಣಿಸಿದ ಮೋಡಗಳು ಹೊಡೆದ ಡಿಕ್ಕಿಗೆ ಫಳ್ ಫಳ್ ಮಿಂಚು ಒಮ್ಮೆಲೇ ಕತ್ತಲೆಲ್ಲ ಬೆತ್ತಲು ಒಬ್ಬರ ಮುಖ ಒಬ್ಬರು ದಿಟ್ಟಿಸಲು ಸಿಕ್ಕಿತು ಒಂದರೆಕ್ಷಣ ಅದೇ ಬದುಕು ಕಣಾ ಕವಿದ ಮೋಡ ಕರಗಲೇ ಬೇಕು ಮುಪ್ಪಿನೆಡೆಗೆ...
*ತುಂಬ ಹಳೆಯದಾದ ರಕ್ತಸಂಬಂಧಿಗಳು ವ್ಯಾಸ ಮಹರ್ಷಿಯ ಇನ್ನೊಂದು ಹೆಸರೇ ಬಾದರಾಯಣ. ಈ ಬಾದರಾಯಣರು ದೇಶದ ಬಹುದೊಡ್ಡ ಮಹಾಕಾವ್ಯ ಮಹಾಭಾರತವನ್ನು ಬರೆದರು. ಮಹಾಭಾರತಚಂದ್ರವಂಶದ ರಾಜರ ಸಂಪೂರ್ಣ ಚರಿತ್ರೆಯನ್ನು ಒಳಗೊಂಡಿದೆ. ಕತೆ, ಕತೆಯೊಳಗೊಂದು ಉಪಕತೆ, ಅದೆಷ್ಟೋ ಸಂಬಂಧಗಳು, ಆ ಸಂಬಂಧಗಳಾದರೂ ಎಲ್ಲಿಯೂ ತಪ್ಪಿಹೋಗುವುದೇ ಇಲ್ಲ. ಧುತ್ತನೆ ಅದೆಲ್ಲಿಂದಲೋ ಅದ್ಯಾವಾಗಲೋ ಪ್ರತ್ಯಕ್ಷವಾಗಿಬಿಡುತ್ತವೆ. ಇಡೀ ಮಹಾಕಾವ್ಯ ಸಂಬಂಧಿಗಳ ಕಥನವೇ ಆಗಿದೆ. ಸ್ವತಃ ಬಾದರಾಯಣ ಕೂಡ ಒಬ್ಬ ಸಂಬಂಧಿಯೇ. ಹಾಗೆ ನೋಡಿದರೆ ಧೃತರಾಷ್ಟ್ರ, ಪಾಂಡು, ವಿದುರರು ಆತನ ಮಕ್ಕಳೇ ಆಗಿದ್ದಾರೆ. ಆ ಮಹಾಕಾವ್ಯದ ಯಾವುದೇ...
*ದುರ್ಬಲ ದೈಹಿಕ ಸ್ಥಿತಿ ಬಡಕಲಾಗಿರುವ ಹಸುವನ್ನು ಕಂಡಾಗ ಅದನ್ನು ಬಲರಾಮನ ಗೋವು ಎಂದು ಹೇಳುವುದಿದೆ. ಅದೇ ರೀತಿ ಬಡಪಾಯಿ ವ್ಯಕ್ತಿಯನ್ನೂ ಬಲರಾಮನ ಗೋವು ಎಂದು ಕರೆಯುತ್ತಾರೆ. ಏನಿದು ಬಲರಾಮನ ಗೋವು? ಒಂದು ದಿನ ಬಲರಾಮನ ಮನೆಯ ಮುಂದಿನ ತೋಟವನ್ನು ಹೊಕ್ಕ ಒಂದು ಗೋವು ಗಿಡಗಳನ್ನು ತಿನ್ನುತ್ತಿತ್ತು. ಅದನ್ನು ಓಡಿಸಲು ಬಲರಾಮ ಒಂದು ಚಿಕ್ಕ ಕಲ್ಲನ್ನು ಎತ್ತಿ ಹೊಡೆಯುತ್ತಾನೆ. ಆ ಕಲ್ಲು ತಾಗಿದ ಕೂಡಲೇ ಗೋವು ಸತ್ತುಹೋಗುತ್ತದೆ. ಅಲ್ಲಿಗೆ ಬಂದ ಶ್ರೀಕೃಷ್ಣ, ಗೋಹತ್ಯೆಯ ಪಾಪ ನಿವಾರಣೆಗಾಗಿ ತೀರ್ಥಯಾತ್ರೆಗೆ ಹೋಗುವಂತೆ...
*ಶ್ರೀಸಾಮಾನ್ಯನ ಪ್ರತಿನಿಧಿ ಈತ ಬೆಂಗಳೂರಿಗೆ ಬಂದ ಬೋರೇಗೌಡ ಎಂಬ ಹೆಸರಿನ ಚಲನಚಿತ್ರ ಹಿಂದೆ ಬಹಳ ಪ್ರಸಿದ್ಧವಾಗಿತ್ತು. ಬೋರೇಗೌಡ ಏನೂ ಅರಿಯದ ಮುಗ್ಧ. ಶ್ರೀಸಾಮಾನ್ಯ ಈತ. ಇಂಥ ಶ್ರೀಸಾಮಾನ್ಯ ರಾಜ್ಯದ ಆಡಳಿತ ಕೇಂದ್ರಕ್ಕೆ ಬಂದಾಗ ಏನೇನು ಅವ್ಯವಸ್ಥೆ ಅನುಭವಿಸಿದ ಎಂಬುದು ಚಿತ್ರದ ಕತೆ. ಆ ಬಳಿಕ ಬೋರೇಗೌಡ ಎಂಬುದು ದಿನಬಳಕೆಯ ಪದವಾಗಿಬಿಟ್ಟಿತು. ಬೋರೇಗೌಡ ಶ್ರೀಸಾಮಾನ್ಯನ ಪ್ರತೀಕವಾಗಿಬಿಟ್ಟ. ಶೋಷಣೆಗೆ ಒಳಗಾದ ವ್ಯಕ್ತಿಯಾದ. ನಿರಕ್ಷರಿಯ ಪ್ರತಿನಿಧಿಯಾದ. ಹಾಲುಮನಸ್ಸಿನ ನಿಷ್ಕಪಟಿಯ ಪ್ರತಿನಿಧಿಯಾದ. ಶಾಸನ ಸಭೆಯಲ್ಲಿ ಸರ್ಕಾರವನ್ನು ಚುಚ್ಚುವ ಪ್ರಸಂಗ ಪ್ರತಿಪಕ್ಷಗಳಿಗೆ ಬಂದಾಗ, ಈ...
*ಎಲ್ಲ ಕಷ್ಟ ಒಂದೇ ಸಲ ಬರುವುದು ಬಕನ ಬಾರಿ, ಮಗನ ಮದುವೆ, ಹೊಳೆಯಾಚೆಗಿನ ಶ್ರಾದ್ಧ… ಓಹೋ ಎಲ್ಲವೂ ಒಂದೇ ಬಾರಿ. ಹೇಗಪ್ಪ ನಿಭಾಯಿಸುವುದು? ಹತ್ತಾರು ಕೆಲಸಗಳು ಒಟ್ಟೊಟ್ಟಿಗೆ ಬಂದು ಹೇರಿಕೊಂಡಾಗ ಕಂಗಾಲಾದ ಮನುಷ್ಯನ ಬಾಯಿಂದ ಸಹಜವಾಗಿ ಹೊರಹೊಮ್ಮುವ ಮಾತುಗಳು ಇವು. ಏನು ಇವುಗಳ ಹಿಂದಿನ ಪುರಾಣ? ಈ ಮೂರು ಕಾರ್ಯಗಳು ಮಹಾಭಾರತದ ಇಡೀ ಒಂದು ಅಧ್ಯಾಯವನ್ನೇ ಒಳಗೊಂಡಿವೆ. ಮಹಾಭಾರತ ಪರಿಚಯವಿದ್ದವರಿಗೆ ತಟ್ಟನೆ ಇದು ಅರ್ಥವಾಗುತ್ತದೆ. ಇಲ್ಲದವರಿಗೆ ಅದು ಬರೀ ಹೇಳಿಕೆಗಳಾಗಿ ನಿಲ್ಲುತ್ತವೆ. ಅರಗಿನ ಮನೆಯ ಅವಘಡದಿಂದ ಪಾರಾಗಿ...
*ಗುಟ್ಟನ್ನು ಬಿಟ್ಟುಕೊಡದ ತಂತ್ರಗಾರರು ಬಕಪಕ್ಷಿಯೊಂದು ಕೊಳದ ನೀರಿನಲ್ಲಿ ಧ್ಯಾನದ ಭಂಗಿಯಲ್ಲಿ ನಿಂತುಕೊಂಡಿತ್ತು. ಅದರ ಎರಡೂ ಕಣ್ಣುಗಳೂ ಮುಚ್ಚಿದ್ದವು. ಒಂದು ಕಾಲನ್ನು ಮೇಲೆ ಎತ್ತಿ ಹಿಡಿದಿತ್ತು. ಅರೇ, ಇದೇನಿದು, ಬಕ ಯಾವಾಗ ಸನ್ಯಾಸವನ್ನು ಸ್ವೀಕರಿಸಿತು ಎಂಬ ಆಶ್ಚರ್ಯ ಕೊಳದಲ್ಲಿಯ ಎಲ್ಲ ಮೀನುಗಳಿಗೆ. ಇನ್ನು ತಮಗೆ ಅಪಾಯವಿಲ್ಲ ಎಂದು ಅವು ಎಣಿಸಿದವು. ಬಕ ತಮಗೆ ಏನೂ ಮಾಡುವುದಿಲ್ಲವೆಂದು ಮೀನುಗಳು ಅದರ ಸುತ್ತಲೂ ಜಮಾಯಿಸಲು ಆರಂಭಿಸಿದವು. ಬಕ ನಿಧಾನಕ್ಕೆ ಕಣ್ಣು ತೆರೆದದ್ದು ಅವುಗಳಿಗೆ ಕಾಣಲಿಲ್ಲ. ಆ…. ಎಂದು ತೆರೆದ ಬಾಯನ್ನು ನೀರಿನೊಳಕ್ಕೆ...
*ಬದುಕಿಗೆ ಲೋಕಜ್ಞಾನ ಬಲು ಅಗತ್ಯ ನಿನಗೇನು ಗೊತ್ತು ಪುಸ್ತಕದ ಬದನೆಕಾಯಿ ಎಂದು ಮನೆಯಲ್ಲಿದ್ದ ಹಿರಿಯರು ಶಾಲೆ ಕಾಲೇಜು ಕಟ್ಟೆ ಹತ್ತಿ ಎಲ್ಲವೂ ತಮಗೆ ಗೊತ್ತಿದೆ ಎಂದು ಅಹಂನಿಂದ ವರ್ತಿಸುವ ಮಕ್ಕಳಿಗೆ ಗದರುವುದನ್ನು ಕೇಳಿದ್ದೇವೆ. ಪುಸ್ತಕ ಓದಿದವರಿಗೆ ಬದನೆಕಾಯಿಯ ಚಿತ್ರ ನೋಡಿ ಗೊತ್ತಿರುತ್ತದೆ. ಆದರೆ ಅದನ್ನು ಹೇಗೆ ಬೆಳೆಯುತ್ತಾರೆ, ಅದರಿಂದ ಏನೇನು ಮಾಡಬಹುದು, ಆರೋಗ್ಯಕ್ಕೆ ಅದು ಪೂರಕವೋ ಮಾರಕವೋ ಇತ್ಯಾದಿ ಗೊತ್ತಿರುತ್ತದೆ ಎಂದು ಹೇಳಲು ಬರುವುದಿಲ್ಲ. ಬದುಕಿನ ಅನುಭವ ಇದನ್ನೆಲ್ಲ ಕಲಿಸಿಕೊಡುತ್ತದೆ. ಜ್ಞಾನಾರ್ಜನೆಗೆ ಎರಡು ರೀತಿಗಳನ್ನು ಪ್ರಾಜ್ಞರು ಹೇಳಿದ್ದಾರೆ....
*ಸಂಪತ್ತು ಇದ್ದಾಗ ಬೇಕಾಬಿಟ್ಟಿ ಖರ್ಚು ಮಾಡುವವ ಅತಿಯಾಗಿ ದುಂದುವೆಚ್ಚ ಮಾಡುತ್ತಿರುವುದನ್ನು ಕಂಡಾಗ, ವೈಭವದ ಜೀವನ ನಡೆಸುವವರನ್ನು ಕಂಡಾಗ `ಅವಂದೇನು, ನಂದೋರಾಯನ ದರ್ಬಾರು' ಎಂದು ಹೇಳಿಬಿಡುತ್ತಾರೆ. ಹಾಗೆ ಹೇಳುವವರಿಗೆ ಈ ನಂದೋರಾಯ ಯಾರು ಎನ್ನುವುದು ಗೊತ್ತಿರುವುದಿಲ್ಲ. ದಾನದಲ್ಲಿ ಪ್ರಸಿದ್ಧರಾದವರು ಬಲಿ ಮತ್ತು ಕರ್ಣ ಇಬ್ಬರೇ. ಈ ನಂದೋರಾಯ ಯಾರು? ಈ ಮಾತು ಹುಟ್ಟಿಕೊಂಡ ಕಾಲದಲ್ಲಿ ಮತ್ತು ಪ್ರದೇಶದಲ್ಲಿ ಇದ್ದ ಬಹುದೊಡ್ಡ ಶ್ರೀಮಂತನಿರಬೇಕು. ದಾನ ಮಾಡಿ ಮಾಡಿ ಕೊನೆಯಲ್ಲಿ ಎಲ್ಲವನ್ನೂ ಕಳೆದುಕೊಂಡವನಿರಬೇಕು. ಅದಕ್ಕಾಗಿಯೇಎಷ್ಟು ದಿನ ನಡೆಯುತ್ತದೆ ಈ ನಂದೋರಾಯನ ದರ್ಬಾರು?’...
*ಮತ್ತೆ ಇದನ್ನು ಬಳಸುವಂತಿಲ್ಲ ಅವಳ ಬದುಕು ನಾಯಿ ಮುಟ್ಟಿದ ಮಡಕೆಯಂತಾಯ್ತು ಎಂದು ಹೇಳುವುದು ನಿಮ್ಮ ಕಿವಿಗೂ ಬಿದ್ದಿರಬಹುದು. ಶೀಲ ಕಳೆದುಕೊಂಡ, ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಕುರಿತು ಈ ಮಾತು ಒಮ್ಮೊಮ್ಮೆ ಅನುಕಂಪವಾಗಿ ಕೆಲವೊಮ್ಮೆ ಕಟಕಿಯಾಗಿ ಹೊರಬೀಳುತ್ತದೆ. ಹಾಗೆ ನೋಡಿದರೆ ಇದನ್ನು ಪುರುಷ ಪ್ರಧಾನ ಸಮಾಜ ರೂಢಿಗೆ ತಂದದ್ದು ಎಂದು ಹೇಳಬಹುದು. ಮಡಕೆಯಲ್ಲಿ ಮಾಡಿದ ಅಡುಗೆಯನ್ನು ನಾಯಿ ಬಂದು ತಿಂದುಬಿಟ್ಟರೆ ಆ ಅಡುಗೆಯನ್ನು ತಿನ್ನುವಂತಿಲ್ಲ. ಅಷ್ಟೇ ಅಲ್ಲ ಮಡಕೆಯನ್ನೂ ಅನ್ಯ ಕೆಲಸಕ್ಕೆ ಬಳಸುವುದಿಲ್ಲ. ಮಡಕೆ ಮಾತ್ರ ತ್ಯಾಜ್ಯ. ತಾಮ್ರ...