ಮೊಗಸಾಲೆಯವರ ಗಾಂಧಿ ಮಾರ್ಗ

ಕನ್ನಡ ಸಾಹಿತ್ಯದಲ್ಲಿ ಕಾದಂಬರಿ ಪ್ರಕಾರವು ಮಹಾಕಾದಂಬರಿಯ ರೂಪಕ್ಕೆ ಹಿಗ್ಗಿಕೊಂಡ ಗಳಿಗೆಯಲ್ಲಿಯೇ ಸಾಹಿತ್ಯವೆನ್ನುವುದು ತಲೆಮಾರುಗಳ ಶತಮಾನಗಳ ದೀರ್ಘ ಹರಹಿನ ಚಿತ್ರಣ ಎಂಬ ಅರ್ಥವ್ಯಾಪ್ತಿಯನ್ನು ಪಡೆದುಕೊಂಡಿತು. ಮಹಾಕಾದಂಬರಿಗೆ ವ್ಯಾಖ್ಯೆಯೊಂದನ್ನು ರೂಪಿಸಿಕೊಡುವ ಪರ್ವಕಾಲ ಈಗ ಪ್ರಾಪ್ತವಾದಂತೆ ಕಾಣುತ್ತಿದೆ. ಏಕೆಂದರೆ ವಿಸ್ತಾರವಾದ ವಸ್ತುವಿನ್ಯಾಸದ ಹಲವು ಕೃತಿಗಳು ಈಗ ಬರುತ್ತಿವೆ. ಕುವೆಂಪು ಅವರ ಎರಡು ಮಹಾಕಾದಂಬರಿಗಳು, ಕಾರಂತರ ಮರಳಿ ಮಣ್ಣಿಗೆ, ಗೋಕಾಕರ ಸಮರಸವೇ ಜೀವನ, ರಾವ್‌ಬಹಾದ್ದೂರ್‌ ಅವರ ಗ್ರಾಮಾಯಣ, ಮಾಸ್ತಿಯವರ ಚಿಕವೀರ ರಾಜೇಂದ್ರ, ಭೈರಪ್ಪನವರ ದಾಟು, ಶ್ರೀಕೃಷ್ಣ ಅಲನಹಳ್ಳಿಯವರ ಭುಜಂಗಯ್ಯನ ದಶಾವತಾರಗಳು, ಲಂಕೇಶರ ಮುಸ್ಸಂಜೆಯ...

ಸಹೃದಯ ವಿಮರ್ಶೆ

ಸಹೃದಯ ವಿಮರ್ಶೆ ವಿಭಾವರಿ ಭಟ್ಟರು ರಮೇಶ ಭಟ್‌‌ ಬೆಳಗೋಡು ಎಂದು ನನಗೆ ಗೊತ್ತಾಗಿದ್ದು ಅದೆಷ್ಟೋ ದಿನಗಳ ಬಳಿಕ. `ಕನ್ನಡಪ್ರಭ’ದ `ಅಕ್ಷರ ತೋರಣ’ ಪುಟಕ್ಕೆ ನಿಯಮಿತವಾಗಿ ಅವರು ವಿಮರ್ಶೆ ಬರೆಯುತ್ತಿದ್ದರು. ಹೇಳಿದ ದಿನಕ್ಕೆ ಹೇಳಿದ ಸಮಯಕ್ಕೆ ಸರಿಯಾಗಿ ಮೇಲ್ ಮಾಡುತ್ತಿದ್ದ ವಿಭಾವರಿ ಭಟ್ಟರು ನಂತರ ಫೋನ್‌ ಮಾಡಿ `ಕಳುಹಿಸಿದ್ದೇನೆ’ ಎಂದೂ ಹೇಳುತ್ತಿದ್ದರು. ಇದು ಅವರ ಕಾರ್ಯತತ್ಪರತೆ ಮತ್ತು ಶ್ರದ್ಧೆಯನ್ನು ತೋರಿಸುತ್ತದೆ. ಈ `ಶ್ರದ್ಧೆ’ ಎಂಬ ಮಾತನ್ನು ನಾನು ಒತ್ತಿ ಹೇಳುವುದಕ್ಕೆ ಇಷ್ಟಪಡುತ್ತೇನೆ. ಏಕೆಂದರೆ, ಇದು ನಮ್ಮ ಸಸಂಸ್ಕೃತಿಯ ಪದ....

ಸೇತು

ಕರಾವಳಿಯ ಹೊಳೆಸಾಲಿನಲ್ಲಾದರೆ ಸೆಪ್ಟೆಂಬರ್ ಕೊನೆಯೆಂದರೆ ಗೊರಬು, ಕಂಬಳಿಯನ್ನೆಲ್ಲ ಹೊಗೆ ಅಟ್ಟಕ್ಕೆ ಸೇರಿಸುವ ಸಮಯ. ಆಕಾಶಕ್ಕೇ ತೂತುಬಿದ್ದಂತೆ ಹೊಯ್ಯುವ ಮಳೆ ಆಗಂತೂ ಇರುವುದೇ ಇಲ್ಲ. ಬಂದರೆ ಬಂತು ಹೊದರೆ ಹೋಯ್ತು ಎನ್ನುವಂತೆ ಆಗೊಮ್ಮೆ ಈಗೊಮ್ಮೆ ಒಂದೆರಡು ಜುಮುರು ಮಳೆ ಬಂದು ಹೋಗಿಬಿಡುತ್ತದೆ. ಅದೇ ಬೆಂಗಳೂರಿನಲ್ಲಿ ಮಾತ್ರ ಎಲ್ಲ ಉಲ್ಟಾಪಲ್ಟಾ. ಸೆಪ್ಟೆಂಬರ್ ತಿಂಗಳಲ್ಲೇ ಜೋರು ಮಳೆ. ಮೂರು ದಿನ ರಾತ್ರಿ ಮಳೆ ಸುರಿುತೆಂದರೆ ಎಲ್ಲೆಲ್ಲಿ ತಗ್ಗು ಪ್ರದೇಶಗಳಿವೆಯೋ ಅಲ್ಲೆಲ್ಲ ನೀರು ನಿಂತು ಬಿಡುತ್ತಬೆ. ಪೂರ್ವಯೋಜಿತವಲ್ಲದ ಹೊಸಹೊಸ ಬಡಾವಣೆಗಳು ಈ ಬೆಂಗಳೂರಿನಲ್ಲಿ...