ನಿತ್ಯ ಶುದ್ಧಿಯ ಪ್ರಮಾಣದಿಂದ ತಪ್ಪಿಸಿಕೊಂಡ ಸುಬ್ಬಿಯ ಕತೆ

ಹೊಳೆಸಾಲು ಎಂದರೆ ನೆಗಸು, ಯಕ್ಷಗಾನ, ಕೋಳಿಅಂಕ, ತೇರು, ಊರಹಬ್ಬ ಎಲ್ಲ ಇದ್ದಿದ್ದೇ. ಈ ಪ್ರದೇಶದ ಜನರ ನಂಬಿಕೆಗಳು ತರಹೇವಾರಿ ಚಿತ್ರವಿಚಿತ್ರವಾದದ್ದು. ನಂಬಿಕೆ ಎನ್ನುವುದು ತೀರ ಖಾಸಗಿಯಾದದ್ದು ಮತ್ತು ಅವರವರಿಗೆ ಸಂಬಂಧಪಟ್ಟ ವಿಷಯ. ಇದು ದೇವರ ಅಸ್ತಿತ್ವದ ಕುರಿತು ಇರಬಹುದು, ತಾನು ಇವತ್ತು ಈ ಅಂಗಿಯನ್ನು ತೊಟ್ಟು ಹೊರಗೆ ಹೊರಟರೆ ಕಾರ್ಯಸಿದ್ಧಿಯಾಗುತ್ತದೆ ಎಂದುಕೊಳ್ಳುವವರೆಗೂ ಇರಬಹುದು. ಮನೆಯಿಂದ ಹೊರಗೆ ಹೊರಡುವಾಗ ಬೋಳು ತಲೆಯವರು ಎದುರಾದರೆ ಕೆಲಸವಾಗುವುದಿಲ್ಲ ಎಂದುಕೊಳ್ಳುವಂಥ ತರ್ಕಕ್ಕೆ ನಿಲುಕದ ನಂಬಿಕೆಗಳೂ ಇವೆ. ಕೆಲವು ನಂಬಿಕೆಗಳ ಬೆನ್ನು ಬಿದ್ದರೆ ಅದೇನೇನೋ...

ವಕೀಲರು ಹೇಳಿದ ಆತ್ಮಹತ್ಯೆಯ ಕತೆ

ಹೊಳೆಸಾಲಿನವರ ಜಗಳಗಳು ಕೋರ್ಟು, ಪೊಲೀಸ್ ಠಾಣೆ ಮಟ್ಟಿಲೇರಿದರೆ ಅದನ್ನು ಸುಧಾರಿಸಲು ವಕೀಲರು ಬೇಕಿತ್ತಲ್ಲವೆ, ಹೊನ್ನಾವರದಲ್ಲಿ ಖ್ಯಾತ ನಾಮರಾದ ಮೂರ್ನಾಲ್ಕು ವಕೀಲರಿದ್ದರು. ಅವರಲ್ಲಿ ಒಬ್ಬರು ಎಂ.ಎಂ.ಜಾಲಿಸತ್ಗಿ ವಕೀಲರು. ಇವರ ಕಾನೂನು ಪಾಂಡಿತ್ಯದ ಕುರಿತು ಹೊಳೆಸಾಲಿನಲ್ಲಿ ಹಲವಾರು ಕತೆಗಳು ಹರಿದಾಡುತ್ತಿದ್ದವು. ಜಾಲಿಸತ್ಗಿಯವರು ಕಾಂಗ್ರೆಸ್ ಮುಖಂಡರೂ ಹೌದು. ಸ್ವಾತಂತ್ರ್ಯ ಚಳವಳಿಯ ಕಾಲದಲ್ಲೇ ಅವರು ವಿದ್ಯಾರ್ಥಿಗಳಾಗಿ ಹೋರಾಟ ನಡೆಸಿದವರಂತೆ. ಒಮ್ಮೆ ಅವರು ರಾಜ್ಯ ವಿಧಾನ ಸಭೆಗೆ ಪ್ರಜಾ ಸೋಶಲಿಸ್ಟ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯೂ ಆಗಿದ್ದರು.ಆ ಬಳಿಕವೇ ಅವರು ಕಾಂಗ್ರೆಸ್ ಪಕ್ಷ ಸೇರಿ ಜಿಲ್ಲಾ...

ಮನೆ ಕಟ್ಟಿದ ಅವನು ಇರವಾಣಕ್ಕೆ ಇರಲಿಲ್ಲ

ಹೊಳೆಸಾಲಿನ ಎಲ್ಲ ಊರು ಕೇರಿಯವರಿಗೆ ಪುರವೆಂದರೆ ಹೊನ್ನಾವರವೇ. ಹೊಳೆ ಬಂದು ಸಮುದ್ರ ಕೂಡುವ ಅಳವೆಯಲ್ಲಿ ಈ ಪುರವಿದೆ. ಮೊದಲೆಂದರೆ ಪುರ ಸೇರಬೇಕೆಂದರೆ ಹೊಳೆಯ ಮೂಲಕವೇ ದೋಣಿಯಲ್ಲೋ ಲಾಂಚಿನಲ್ಲೋ ಬರಬೇಕಿತ್ತು. ಇಲ್ಲವೆಂದರೆ ಹತ್ತಿರದವರು ಕಾಲುನಡಿಗೆಯಲ್ಲೇ ಬಂದು ಹೋಗುತ್ತಿದ್ದರು. ತಾವು ಬೆಳೆದುದು ಸ್ವಂತಕ್ಕೆ ಬಳಸಿ ಹೆಚ್ಚಾಗಿದ್ದನ್ನು ತಂದು ಮಾರುವುದರಿಂದ ಹಿಡಿದು ತಾವು ಬೆಳೆಯದ ಜೀವನಾವಶ್ಯಕ ವಸ್ತುಗಳನ್ನು ಖರೀದಿಸುವುದರ ವರೆಗೆ ಹೊಳೆಸಾಲು ಮತ್ತು ಪುರಕ್ಕೆ ಹೊಕ್ಕು ಬಳಕೆ ಇತ್ತು. ಜೊತೆಗೆ ಪುರದವರ ಮನೆಗೆಲಸ, ಬಂದರದ ವಖಾರಗಳಿಗೆ ಟ್ರಕ್ಕುಗಳಿಂದ ಸಾಮಾನುಗಳನ್ನು ಇಳಿಸುವ ಕೂಲಿಯ...