ಷಡ್ಯಂತ್ರ

ಷಡ್ಯಂತ್ರ ಎಂಬ ಪದವನ್ನು ನಾವು ನಿತ್ಯವೂ ಒಂದಲ್ಲ ಒಂದು ಸಂದರ್ಭದಲ್ಲಿ ಬಳಸುತ್ತೇವೆ. ಹೀಗಂದರೆ ಏನು? ನನ್ನ ವಿರುದ್ಧ ಅವನು ಷಡ್ಯಂತ್ರ ರಚಿಸಿದ್ದಾನೆ ಎನ್ನುತ್ತೇವೆ, ರಾಜಕೀಯ ನಾಯಕರಾದವರು ಪ್ರತಿಪಕ್ಷದವರು ತಮ್ಮ ವಿರುದ್ಧ ಷಡ್ಯಂತ್ರ ರಚಿಸಿದ್ದಾರೆ ಎನ್ನುತ್ತಾರೆ. ಇಲ್ಲೆಲ್ಲ ಸಾಮಾನ್ಯವಾಗಿ ಹೊರಹೊಮ್ಮುವ ಅರ್ಥ ಒಳಸಂಚು ಎಂದು. ಷಡ್ಯಂತ್ರ ಎಂಬುದು ಸಂಸ್ಕೃತ ಪದ. ಇದರಲ್ಲಿ ಷಟ್ ಮತ್ತು ಯಂತ್ರ ಎಂಬ ಎರಡು ಪದಗಳಿವೆ. ಷಟ್ ಅಂದರೆ ಆರು ಮತ್ತು ಯಂತ್ರ ಎಂಬುದಕ್ಕೆ ಹಲವು ರ್ಥಗಳಿವೆ. ಅವುಗಳಲ್ಲಿ ಒಂದು ಬಲ ಎಂಬುದು. ಅಂದರೆ...