`ಗ್ರಹಣ’ದ ಭೈರಪ್ಪ ಒಬ್ಬ ಪುರೋಗಾಮಿ ಲೇಖಕ

ಕಾದಂಬರಿಕಾರ ಎಸ್‌.ಎಲ್‌. ಭೈರಪ್ಪನವರ ಮೇಲೆ ವಿಮರ್ಶಕರ ಮತ್ತು ಚಿಂತಕರ ಹಲವು ಆಕ್ಷೇಪಗಳಿವೆ. ಅವರೊಬ್ಬ ಪ್ರತಿಗಾಮಿ ಲೇಖಕ, ಸ್ತ್ರೀಪಾತ್ರಗಳನ್ನು ಗೌಣವಾಗಿ ತೋರಿಸುತ್ತಾರೆ, ಜೀವವಿರೋಧಿ ಧೋರಣೆ ಅವರದು ಎಂದೆಲ್ಲ ಹೇಳುತ್ತಾರೆ. ಆದರೆ ಈ ಆಕ್ಷೇಪಗಳಿಗೆಲ್ಲ ಉತ್ತರ ಎನ್ನುವಂತೆ ಇದೆ ಅವರ `ಗ್ರಹಣ’ ಕಾದಂಬರಿ.