ಬದಲಾಗಬೇಕು ಬದಲಾಯಿಸಬೇಕು

ಮಗಳು ಹೇಳಿದಳು-ನಿನ್ನೆಯೂ ದೋಸೆ ಇವತ್ತೂ ದೋಸೆಅಮ್ಮ ನಿನ್ನದೇನು ವರಸೆ?ನೀ ಬದಲಾಗಬೇಕುರುಚಿ ಬದಲಾಯಿಸಬೇಕು ಮಗ ಹೇಳಿದ-ಮೊನ್ನೆಯೂ ಇದೇ ಚಡ್ಡಿಇವತ್ತೂ ಇದೇ ಚಡ್ಡಿಬೆವರು ನಾರುತ್ತಿದೆಗೆಳೆಯರು ಮೂಗು ಮುಚ್ಚಿಕೊಳ್ಳುತ್ತಿದ್ದಾರೆಬದಲಾಯಿಸು ಅನ್ನುತ್ತಿದ್ದಾರೆಅಮ್ಮ ಬೇರೆಯದು ಕೊಡುಸ್ವಲ್ಪ ಹರಿದಿದ್ದರೂ ಅಡ್ಡಿಯಿಲ್ಲಕೊಳಕಾದುದು ಬೇಡವೇ ಬೇಡ ಅತ್ತೆ ಹೇಳಿದಳು-ಈ ಚಾಳೀಸು ಬದಲಿಸಬೇಕು ಮಗಳೆಹತ್ತು ವರ್ಷದ ಹಿಂದೆ ಖರೀದಿಸಿದ್ದುನಂಬರು ಬದಲಾಗಿದೆ ದೃಷ್ಟಿ ಮಂಜಾಗಿದೆಟೀವಿಯಲ್ಲಿ ಯಾರನ್ನೋ ಕಂಡರೆಯಾರನ್ನೋ ಕಂಡಂತೆಮುಖವಿದ್ದರೂ ಮಖವಾಡ ಧರಿಸಿದವರಂತೆರಾಮನ ಮಾತು ಕೇಳುತ್ತದೆಆದರೆ ಚಹರೆ ರಾವಣನದುಸೀತೆಯೋ ಶೂರ್ಪನಖಿಯೋಒಂದೂ ತಿಳಿಯುತ್ತಿಲ್ಲಚಾಳೀಸು ಮೊದಲು ಬದಲಾಯಿಸಬೇಕು ಗಂಡ ಹೇಳಿದ-ಅದೇನು ನಿನ್ನ ಹಾಡು ನಿತ್ಯಸುಳ್ಳು ಹೇಳಿದ್ದೇ...