ಸ್ವಾತಂತ್ರ್ಯದ ಭ್ರಮನಿರಸನದ ಕತೆ ಹೇಳುವ `ಕೊನ್ನಾರ ಕಿಂಕಿಣಿ’

ಕನ್ನಡದ ಜನಪ್ರಿಯ ಕಾದಂಬರಿಕಾರರಲ್ಲಿ ಒಬ್ಬರಾದ ಕೃಷ್ಣಮೂರ್ತಿ ಪುರಾಣಿಕರ ಕೊನ್ನಾರ ಕಿಂಕಿಣಿ' ಕಾದಂಬರಿಯು ಅವರ ಬರೆವಣಿಗೆಯ ಆರಂಭದ ದಿನಗಳಲ್ಲಿ ರಚನೆಗೊಂಡಿದ್ದು. ಇದು ಪ್ರಕಟವಾದದ್ದು 1961ರ ಆಗಸ್ಟ್‌ ತಿಂಗಳಿನಲ್ಲಿ. ಸರಿಸುಮಾರು ಅರವತ್ತು ವರ್ಷಗಳ ನಂತರ ಈ ಕಾದಂಬರಿಯ ಮರು ಅವಲೋಕನ ಮಾಡುವಾಗ ಕೆಲವು ಹೊಳಹುಗಳು ನಮಗೆ ಇರಬೇಕಾಗುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಕನ್ನಡ ನವೋದಯ ಮತ್ತು ಪ್ರಗತಿಶೀಲ ಲೇಖಕರು ಕಾದಂಬರಿ ಪ್ರಕಾರಕ್ಕೆ ಒಂದು ಗಟ್ಟಿಯಾದ ಪರಂಪರೆಯನ್ನು ಹಾಕಿಕೊಟ್ಟಿದ್ದರು. ಐತಿಹಾಸಿಕ ಕಾದಂಬರಿಗಳು, ಸಾಮಾಜಿಕ ಕಾದಂಬರಿಗಳು, ಅನ್ಯಭಾಷೆಯಿಂದ ಅನುವಾದಗೊಂಡ ಕಾದಂಬರಿಗಳು ಎಲ್ಲವೂ ಹುಲುಸಾಗಿ ಎಂಬಂತೆ...

ಸ್ವಪ್ನವಾಸ್ತವ

ನನಗೆ ಅರ್ಥವಾಗದ ಅದೆಷ್ಟೋ ಸಂಗತಿಗಳು ಈ ಜಗತ್ತಿನಲ್ಲಿ ಇವೆ ಎಂಬುದು ನನಗೆ ಅರ್ಥವಾಗಿದ್ದು ಅವತ್ತೇ, ಅದೇಕ್ಷಣದಲ್ಲಿ. ಅದು ಅರಿವಾದೊಡನೆಯೇ ನನ್ನ ಬಗೆಗೇ ನನಗೆ ಕ್ಷುಲ್ಲಕ ಅನ್ನಿಸಿಬಿಟ್ಟಿತು. ಬಾವಿಯೊಳಗಿನ ಕಪ್ಪೆಯಂತೆ ಬದುಕಿದ್ದೆನಲ್ಲ ಇಷ್ಟು ದಿನ ಅನ್ನಿಸಿತು. ಮೆಲ್ಲನೆ ಅತ್ತ ಇತ್ತ ಕಣ್ಣು ಹೊರಳಿಸಿದೆ. ನಿಜಕ್ಕೂ ಆ ಕ್ಷಣದಲ್ಲಿ ನಿನ್ನ ನೆನಪು ಬಂದುಬಿಟ್ಟಿತು. ಇದೀಗ ನೀನು ನನ್ನ ಜೊತೆಯಲ್ಲಿ ಇದ್ದಿದ್ದರೆ.. ನಿನ್ನ ಕೋಮಲ ಕೈ ಬೆರಳುಗಳು ನನ್ನ ಭುಜವನ್ನು ಮೆಲ್ಲಾತಿಮೆಲ್ಲನೆ ಅದುಮದೆ ಇರುತ್ತಿರಲಿಲ್ಲ. ಭರವಸೆಯ ಬೆಳಕಿನ ಕಿಡಿ ನಿನ್ನ ಕಣ್ಣಿಂದ...

ಹೆಸರಿಲ್ಲದವನು ಹೆಸರುವಾಸಿಯಾಗಿದ್ದು

ಅವನು ಮೈತುಂಬಿಕೊಂಡ ನಾಗಬೆತ್ತದ ಹಾಗೆ ಇದ್ದ. ತುಂಬ ಸಣಕಲು. ನೆಟ್ಟಗೆ ಅಂದರೆ ನೆಟ್ಟಗೆ ನಿಲವು. ನಾಗಬೆತ್ತದ ಮೇಲಿನ ಕಪ್ಪು ಬಳೆಗಳಂತೆ ಅವನ ಪಕ್ಕೆಲಬುಗಳೆಲ್ಲವೂ ಕಾಣಿಸುತ್ತಿದ್ದವು. ಕೆಂಪಗಿನ ದಪ್ಪಗಿರುವ ಒಂದು ದಾರವನ್ನು ಉಡಿದಾರ ಮಾಡಿಕೊಂಡಿದ್ದ. ಆರು ಮೊಳದ ಮಗ್ಗದ ಪಂಚೆಯ ಒಂದು ತುದಿಯನ್ನು ಕಚ್ಚೆಯಾಗಿ ಹಿಂಬದಿಗೆ ಸಿಕ್ಕಿಸಿಕೊಂಡು ಅದರ ಉಳಿದ ಭಾಗವನ್ನು ಲುಂಗಿಯಂತೆ ಅಡ್ಡ ಸುತ್ತಿಕೊಳ್ಳುತ್ತಿದ್ದ. ಅದು ಬಿಟ್ಟರೆ ಮೈಯೆಲ್ಲ ಬೋಳು ಬೋಳು. ಸೊಂಟಕ್ಕೆ ಕತ್ತಿ ಸಿಕ್ಕಿಸಿಕೊಳ್ಳುವ ಒಂದು ಕೊಕ್ಕೆಯನ್ನು ಕಟ್ಟಿಕೊಳ್ಳುತ್ತಿದ್ದ. ಆದರೆ ಮನೆಯಿಂದ ಅವನು ಕತ್ತಿಯನ್ನು ತರುತ್ತಿರಲಿಲ್ಲ....

ನೇಮೋಲಂಘನ

ನೇಮಯ್ಯನದು ಇದು ಮರುಹುಟ್ಟು ಎಂದು ಹೊಳೆಸಾಲಿನವರು ಮಾತನಾಡಿಕೊಳ್ಳುತ್ತಾರೆ. ತನ್ನ ಬಗ್ಗೆ ಈ ಜನ ಹೀಗೆಲ್ಲ ಮಾತನಾಡುತ್ತಾರೆ ಎಂಬುದು ಸ್ವತಃ ನೇಮಯ್ಯನಿಗೇ ಗೊತ್ತಿರಲಿಲ್ಲ. ಈ ನೇಮಯ್ಯನನ್ನು ಒಂದು ಪದದಲ್ಲಿ ಹೇಳಬೇಕೆಂದರೆ ಅದು ಸಾಧ್ಯವೇ ಇಲ್ಲ. ವೃತ್ತಿಯಿಂದ ಹೇಳೋಣವೆ? ಒಂದೆಕರೆಯಷ್ಟು ಬಾಗಾಯ್ತ ಇತ್ತು. ಹೀಗಾಗಿ ಅವನನ್ನು ರೈತ ಎನ್ನಬಹುದೆ? ಊರಲ್ಲಿಯ ಮಾಸ್ತಿಮನೆಯ ಪೂಜೆಯನ್ನು ಅವನೇ ಮಾಡಿಕೊಂಡು ಬಂದಿದ್ದ. ಅಂದರೆ ಅವನನ್ನು ಪೂಜಾರಿ ಎನ್ನಬಹುದೆ? ಊರಲ್ಲಿಯ ಮಕ್ಕಳಿಗೆ ಮುದುಕರಿಗೆ ದೆವ್ವದ ಕಾಟ ಇದೆ ಎಂದು ಯಾರಾದರೂ ಅವನ ಬಳಿಗೆ ಬಂದರೆ ಅವನು...