ಗುಂಡೂಮನೆಯ ಮೂರು ಮುತ್ತು

ಜಿ.ಎಸ್‌.ಸದಾಶಿವ ಅವರು ಮೂರು ಕೃತಿಗಳು ಕನ್ನಡ ಕಾವ್ಯಲೋಕಕ್ಕೆ ಒಬ್ಬರು ಜಿಎಸ್‌ಎಸ್‌ ಇದ್ದಾರೆ. ಅದೇ ರೀತಿ ಕನ್ನಡ ಪತ್ರಿಕಾ ಲೋಕಕ್ಕೂ ಒಬ್ಬರು ಜಿಎಸ್‌ಎಸ್‌ ಇದ್ದರು. ಅವರೇ ಡೂಮನೆ ಶ್ರೀಪಾದರಾವ್‌ ಸದಾಶಿವ. ಕಾಲೇಜಿನಲ್ಲಿ ಪ್ರೊಫೆಸರ್‌ ಆಗಬೇಕು ಎಂದುಕೊಂಡಿದ್ದ ಸದಾಶಿವ ಪತ್ರಿಕಾರಂಗಕ್ಕೆ ಬಂದದ್ದು ತೀರ ಆಕಸ್ಮಿಕ. `ಸಂಯುಕ್ತ ಕರ್ನಾಟಕ'ದಲ್ಲಿ ವೃತ್ತಿ ಆರಂಭಿಸಿದ ಅವರು `ಪ್ರಜಾವಾಣಿ', `ಸುಧಾ' ಬಳಿಕ `ಕನ್ನಡಪ್ರಭ'ಕ್ಕೂ ಕಾಲಿಟ್ಟರು. ಮಹಾಮೌನಿಯಾಗಿದ್ದ ಸದಾಶಿವ ಅವರೊಳಗೊಬ್ಬ ನಗೆಗಾರ ಇದ್ದ ಎಂದರೆ ನಂಬುವುದಕ್ಕೇ ಆಗುವುದಿಲ್ಲ. ಸದಾಶಿವ ಕಥೆಗಾರರೆಂದು ಪ್ರಸಿದ್ಧರಾದವರು. ಹಾಗೆಯೇ ಮಕ್ಕಳ ಸಾಹಿತ್ಯವನ್ನೂ ಅವರು...

ಅವತಾರ- ನಾಟಕ

ಅವತರಿಸುವ ಮುನ್ನ (1995ರ ಸುಮಾರಿಗೆ ಬರೆದ ನಾಟಕ ಇದು. ಆಗ ನಾನು ಬೆಳಗಾವಿಯ ನಾಡೋಜ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದೆ.) ಅವತಾರದ ರಚನಾ ಶಿಲ್ಪದಲ್ಲಿ ಪೌರಾಣಿಕ ಕಲ್ಪನೆ ಇದ್ದರೂ ಅದು ಸ್ಫೋಟಗೊಳಿಸುವ ಬೀಜಾಣುಗಳು ತೀರ ಸಮಕಾಲೀನವಾದುದಾಗಿದೆ. ಅದು ಹೇಳಹೊರಟ ಗುರಿಯತ್ತ ತಡೆಯಿಲ್ಲದೆ ಸಾಗಿದೆ ಎಂಬುದು ನನ್ನ ಭಾವನೆ. ಜಾನಪದ ಗೇಯತೆಯುಳ್ಳ ಪದ್ಯಗಳ ಬಾಹುಳ್ಯತೆಯಿಂದಾಗಿ ಇದೊಂದು ಸಂಗೀತ ನಾಟಕವೇನೋ ಎನ್ನುವ ಗುಮಾನಿಯೂ ಬರಬಹುದು.ವಿಶೇಷ ಸಲಕರಣೆಗಳಿಲ್ಲದೆ, ರಂಗದಲ್ಲಿಯೇ ಜೋಡಿಸಬಹುದಾದ ಖುರ್ಚಿಯೊಂದನ್ನುಳಿದು, ಇದನ್ನು ಬೀದಿ ನಾಟಕವನ್ನಾಗಿಯೂ ನಟಿಸಬಹುದಾದ ಸಾಧ್ಯತೆ ಇದೆ. ರಂಗಪ್ರಯೋಗದ ವೇಳೆಯಲ್ಲಿ...

ಕ್ಷಯ

ಕಾದಂಬರಿ ಬರೆಹಗಾರನ ಬಿನ್ನವತ್ತಳೆ ಸೃಜನಶೀಲ ವ್ಯಕ್ತಿಯೊಬ್ಬನ ಸವಾಲುಗಳು ಉಳಿದವರ ಸವಾಲುಗಳಿಗಿಂತ ಭಿನ್ನವಾಗಿರುತ್ತವೆ. ಏಕೆಂದರೆ ಸೃಜನಶೀಲ ವ್ಯಕ್ತಿ ಪರಿಭಾವಿಸುತ್ತಾನೆ. ಚಿಂತಿಸುತ್ತಾನೆ. ನೊಂದುಕೊಳ್ಳುತ್ತಾನೆ. ಉಸಿರುಕಟ್ಟಿದವನಂತೆ ಚಡಪಡಿಸುತ್ತಾನೆ. ಏಕಕಾಲದಲ್ಲಿ ಖಾಸಗಿಯಾಗಿಯೂ ಸಾರ್ವಜನಿಕವಾಗಿಯೂ ವರ್ತಿಸಬೇಕಾದ ಜವಾಬ್ದಾರಿ ಅವನ ಮೇಲಿರುತ್ತದೆ. ಈ ಕಾರಣಕ್ಕಾಗಿಯೇ ಅವನು ಇತರರಿಂದ ಭಿನ್ನವಾಗಿರುತ್ತಾನೆ.ಇದನ್ನೇ ಒಂದು ಚಿಕ್ಕ ಉದಾಹರಣೆಯ ಮೂಲಕ ಸ್ಪಷ್ಟಪಡಿಸಿಕೊಳ್ಳಬಹುದು. ರಸ್ತೆ ಬದಿಯಲ್ಲಿ ಒಂದು ಮಾವಿನ ಮರ ಇದೆ. ಅದಕ್ಕೊಬ್ಬ ಮಾಲೀಕನೂ ಇದ್ದಾನೆ. ಅವನೊಬ್ಬ ಸಾಮಾನ್ಯ ವ್ಯಕ್ತಿ. ಆ ಮಾವಿನ ಮರದ ಬಗ್ಗೆ ಆತನ ಆಲೋಚನೆಗಳು, ಅದು ಬಿಡುವ ಹಣ್ಣು...

ಇರುವುದೆಲ್ಲವ ಬಿಟ್ಟು ಇರದುದರತ್ತ…..

ಡಾ.ನಾ. ಮೊಗಸಾಲೆಯವರ ಇದ್ದೂ ಇಲ್ಲದ್ದು ಕಾದಂಬರಿಯ ಕುರಿತು ಸಮಕಾಲೀನ ಕನ್ನಡ ಸಾಹಿತ್ಯದಲ್ಲಿ ಸಮೃದ್ಧವಾಗಿ ಕೃತಿ ರಚನೆಯಲ್ಲಿ ತೊಡಗಿರುವವರಲ್ಲಿ ಡಾ.ನಾ ಮೊಗಸಾಲೆಯವರು ಮೊದಲ ಶ್ರೇಣಿಯಲ್ಲಿ ನಿಲ್ಲುತ್ತಾರೆ. ನಾನು ಕಳೆದ ಒಂದೂವರೆ ದಶಕದಿಂದ ಡಾ.ನಾ.ಮೊಗಸಾಲೆಯವರು ರಚಿಸಿದ ಎಲ್ಲ ಕೃತಿಗಳನ್ನೂ ಬಹುತೇಕ ಓದಿದ್ದೇನೆ. ಕಾಂತಾವರದಲ್ಲಿ ಕುಳಿತು ಕನ್ನಡ ಕಟ್ಟುವ ಕೆಲಸವನ್ನು ಅವರು ಬಹಳ ಶ್ರದ್ಧೆಯಿಂದ ಮಾಡುತ್ತ ಬಂದಿದ್ದಾರೆ. ಈ ಅವಧಿಯಲ್ಲಿ ಅವರ ಪರಿಸರದಲ್ಲಿ ಬಹಳಷ್ಟು ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ, ಆರ್ಥಿಕ ಸ್ಥಿತ್ಯಂತರಗಳು ನಡೆದಿವೆ. ಇವುಗಳಲ್ಲಿ ಮೊಗಸಾಲೆಯವರು ಬಹಿರಂಗದಲ್ಲಿ ಯಾವುದೇ ಚಳವಳಿಯಲ್ಲಿ ಕಾಣಿಸಿಕೊಂಡು...

ತೀರ್ಪು

ಭಾಗ 1.ಬೆಡಗು ಅವಳು ಸತ್ತಳಂತೆ' ಅವ್ವ ಹೇಳಿದಳು. ನನಗೇ ಹೇಳಿದಳು ಅಂದುಕೊಂಡೆ ನಾನು. ಮತ್ತೆ ಮತ್ತೆ ಅದನ್ನೇ ಅವ್ವ ಪುನರಾವರ್ತಿಸಿದಾಗ ನನಗೆ ಅನುಮಾನ. ಅವಳು ಹೇಳಿದ್ದು ನನಗಲ್ಲ. ತನಗೆ ತಾನೇ ಹೇಳಿಕೊಳ್ಳುತ್ತಿದ್ದಾಳೆ ಎನ್ನುವುದು ನನಗೆ ಖಾತ್ರಿಯಾಯಿತು. ಧ್ವನಿಯಲ್ಲಿ ದುಃಖವಿತ್ತೆ, ಎಲ್ಲವೂ ಸರಿಹೋಯಿತು ಎಂಬ ಸಮಾಧಾನವಿತ್ತೆ ಒಂದೂ ಗೊತ್ತಾಗದೆ ತಬ್ಬಿಬ್ಬಾದೆ. ಅವ್ವ, ಸತ್ತದ್ದು ಯಾರು?’ ಎಂದು ಪ್ರಶ್ನಿಸಿದೆ. ನನ್ನ ಪ್ರಶ್ನೆ ಅವ್ವನ ಕಿವಿಯ ಮೇಲೆ ಬಿದ್ದಂತೆ ನನಗೆ ತೋರಲಿಲ್ಲ. ಅವಳು ತನ್ನದೇ ಲೋಕದಲ್ಲಿ ಗರ್ಕಾಗಿದ್ದಳು. ಮೆರೆಯವುದಕ್ಕೂ ಒಂದು ಲೆಕ್ಕ...

ಮನುಷ್ಯ ಬದಲಾಗಲೇಬೇಕು…

ಕತೆಯೇನೋ ಯಾವಾಗಲೂ ತನ್ನ ಪಾಡಿಗೆ ತಾನು ತನ್ನದೇ ಜಗತ್ತಿನಲ್ಲಿ ಇರುತ್ತದೆ. ಅದನ್ನು ನೋಡುವುದರಿಂದ, ಹೇಳುವವರಿಂದ, ಬರೆಯುವವರಿಂದ ಕತೆಯ ಒಂದಷ್ಟು ಭಾಗ ಮಾತ್ರ ಈ ಜಗತ್ತಿಗೆ ಬರುತ್ತದಷ್ಟೆ.. (ಒಂದು ಭೋಜನ ಮೀಮಾಂಸೆ) ಎಂಬ ನಂಬಿಕೆಯಿಂದ ಬರೆಯುತ್ತಿರುವ ಕತೆಗಾರ ಕೆ. ಸತ್ಯನಾರಾಯಣ ಅವರ `ಮನುಷ್ಯರು ಬದಲಾಗುವರೆ?’ ಕಥಾಸಂಕಲನ ಮನುಷ್ಯ ಜಗತ್ತಿನ ಹಲವು ಸೂಕ್ಷ್ಮ ಸುಳಿಹುಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ನೆರವಾಗುತ್ತದೆ. ಕತೆಗಾರನ ಮುಂದೆ ವಿಶಾಲವಾದ, ವಿಚಿತ್ರವಾದ ಜಗತ್ತಿದೆ. ಅವರವರ ನೋಟಕ್ಕೆ ತಕ್ಕಂತೆ ಅದು ಅವರಿಗೆ ದಕ್ಕುತ್ತದೆ. ಹಾಗೆ ದಕ್ಕಿಸಿಕೊಳ್ಳುವಾಗ ಅವರಿಗೆ ಜವಾಬ್ದಾರಿಯೂ ಇರುತ್ತದೆ....

ಮರುಳ ಮುನಿಯನ ಕಗ್ಗ ಒಂದು ದರ್ಶನ ಕಾವ್ಯ

ಮಂಕು ತಿಮ್ಮನ ಕಗ್ಗಕ್ಕಿಂತ ಒಂದು ಮೆಟ್ಟಿಲು ಮೇಲಿನ ವೈಚಾರಿಕತೆ ಇದರಲ್ಲಿದೆ (ನಾನು ಮರುಳ ಮುನಿಯನ ಕಗ್ಗವನ್ನು ಓದಿದ್ದು ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ 1984ರಲ್ಲಿ. ಪಠ್ಯಕ್ರಮದ ಭಾಗವಾಗಿ ಬರೆದ ವಿಮರ್ಶೆ ಇದು. ಸುಮಾರು 38 ವರ್ಷಗಳ ಹಿಂದೆ.) ಅಕಸ್ಮಾತ್ತಾಗಿ ಡಿವಿಜಿ ಕನ್ನಡಿಗರ ನೆನಪಿನಿಂದ ಮರೆಯಾದರೂ ಅವರ ಮಂಕುತಿಮ್ಮ ಮಾತ್ರ ಮರೆಯಾಗಲಾರ. ಡಿವಿಜಿ ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲ. ಅವರು ಟ್ಟುಹೋದ ಸಾಹಿತ್ಯ ರಾಶಿ ಮಾತ್ರ ಇದೆ. ಅವರು ನಿಧನರಾಗಿ ಒಂಬತ್ತು ವರ್ಷಗಳ ನಂತರ (1984) ಅವರದೇ ಆದ ಕೃತಿಯೊಂದು...

ಜೀವನ ಪ್ರೀತಿಯನ್ನು ತುಂಬುವ ಕೃತಿ

ಶ್ರೀಯುತ ಎಲ್‌.ಎಸ್‌.ಶಾಸ್ತ್ರಿಯವರು ಅವಿಶ್ರಾಂತ ಬರೆಹಗಾರರು. ಅವರ ಬರೆವಣಿಗೆಯನ್ನು ನಾನು ಮೂರು ದಶಕಗಳಿಗೂ ಅಧಿಕ ಕಾಲದಿಂದ ಓದುತ್ತ ಬಂದವನು. ನಾನು ಬೆಳಗಾವಿಯಲ್ಲಿ ನಾಡೋಜ ಪತ್ರಿಕೆಯಲ್ಲಿ ನನ್ನ ಪತ್ರಿಕೋದ್ಯೋಗವನ್ನು ಆರಂಭಿಸಿದಾಗ ನನ್ನ ಮತ್ತು ಅವರ ಮೊದಲ ಭೇಟಿ. ಅವರ ತಾಲೂಕಿನವನೇ ನಾನು ಆಗಿದ್ದರಿಂದ ಅವರಿಗೆ ನನ್ನ ಮೇಲೆ ವಿಶೇಷ ಪ್ರೀತಿ. ನಾಡೋಜದ ಸಾಪ್ತಾಹಿಕ ಪುರವಣಿಯನ್ನು ಅವರೇ ಆಗ ನೋಡಿಕೊಳ್ಳುತ್ತಿದ್ದರು. ಶಾಸ್ತ್ರಿಯವರು ಹಲವು ಪ್ರಕಾರದ ಬರೆವಣಿಗೆಯನ್ನು ಮಾಡಿದ್ದರೂ ಕಾದಂಬರಿಯೊಂದನ್ನು ಬರೆದಿರುವುದು ಇದೇ ಮೊದಲು. ಅವರಿಗೆ ಈಗ ಹತ್ತಿರ ಹತ್ತಿರ 80 ವರ್ಷ....

ಹೇರಾಮ್‌! ಏಯ್‌ ನಥೂರಾಮ್‌!!

(ಈ ಲೇಖನ ಕನ್ನಡಪ್ರಭ ಪತ್ರಿಕೆಯ ಸಾಪ್ತಾಹಿಕ ಪ್ರಭದಲ್ಲಿ 26-1-2003ರಂದು ಪ್ರಕಟವಾದದ್ದು)ಮೋಹನದಾಸ ಕರಮಚಂದ ಗಾಂಧಿ ಉರ್ಫ್‌ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನು 1948ರ ಜನವರಿ 30ರಂದು ನಥೂರಾಮ ಗೋಡಸೆ ದಿಲ್ಲಿಯ ಬಿರ್ಲಾ ಭವನದಲ್ಲಿ ಗುಂಡಿಕ್ಕಿ ಕೊಂದು ಹಾಕಿದ. ಈ ಹತ್ಯೆಗಾಗಿ ಅವನನ್ನು ಗಲ್ಲಿಗೇರಿಸಲಾಯತು.ಈ ಎರಡು ವಾಕ್ಯಗಳಲ್ಲಿ ಸ್ವತಂತ್ರ ಭಾರತದ ಅತ್ಯಂತ ದುರಂತವಾದ ಘಟನೆಯೊಂದನ್ನು ಪೊಲೀಸ್‌‌ ಶೈಲಿಯಲ್ಲಿ ಹೇಳಿ ಮುಗಿಸಬಹುದು. ಗಾಂಧೀಜಿಯವರ ಹತ್ಯೆ ನಡೆದು 55 ವರ್ಷಗಳಾದವು. ಗಾಂಧೀಜಿ ಹತ್ಯೆ ನಂತರದ ಎರಡನೆ ತಲೆಮಾರು ಗಾಂಧೀಜಿ ಹತ್ಯೆಯ ವಿವರಗಳ ಬಗೆಗೆ ಕತ್ತಲೆಯಲ್ಲಿದೆ....

ಹೊದಿಕೆಯ ಹನುಮಯ್ಯನ ವಿಚಿತ್ರ ಸಾವು

ಹಿಂದೆಲ್ಲ ಹೊಳೆಸಾಲಿನಲ್ಲಿ ಹೆಂಚಿನ ಮನೆಗಳು ಅಪರೂಪ. ಒಂದೂರಿನಲ್ಲಿ ಹೆಂಚಿನ ಮನೆಗಳು ಎಷ್ಟು ಎಂದು ಕೇಳಿದರೆ ಕೈಬೆರಳಿನಲ್ಲಿ ಎಣಿಕೆ ಮಾಡಿ ಹೇಳಬಹುದಾಗಿತ್ತು. ಕಾಸರಕೋಡು, ಮಾವಿನಕುರ್ವೆಗಳಲ್ಲಿ ಹೆಂಚಿನ ಕಾರ್ಖಾನೆಗಳಿದ್ದರೂ ಮಚ್ವೆಯಲ್ಲಿ ತಂದ ಮಂಗಳೂರು ಹೆಂಚಿನ ಮನೆಯೇ ಶ್ರೇಷ್ಠ ಎಂಬ ನಂಬಿಕೆಯೂ ಇತ್ತು. ಅಂಥ ಒಂದೆರಡು ಮನೆಗಳೂ ಹೊಳೆಸಾಲಿನಲ್ಲಿದ್ದವು. ಅದು ಬಿಟ್ಟರೆ ಉಳಿದವು ಹೊದಿಕೆಯ ಮನೆಗಳಾಗಿದ್ದವು. ಹೊದಿಕೆಯ ಮನೆಗಳೆಂದರೆ ತೆಂಗಿನ ಮಡ್ಲು ನೇಯ್ದು ಮಾಡಿದ ತಡಿಕೆಯನ್ನು ಹೊದಿಸಿದ್ದು, ಕಬ್ಬಿನ ಗರಿಗಳನ್ನು ಹೊದೆಸಿದ್ದು, ಅಡಕೆ ಮರದ ಸೋಗೆಯನ್ನು ಹೊದೆಸಿದ್ದು, ತಾಳೆ ಮರದ ಗರಿಯನ್ನು...