ಹಿಂಗೋನಿಯಾ ಗೋಶಾಲೆ ನರಕದಿಂದ ನಂದಗೋಕುಲವಾದ ಕತೆ

ಗೋವು ಇಲ್ಲದೆ ಶ್ರೀಕೃಷ್ಣನನ್ನು ಕಲ್ಪಿಸಿಕೊಳ್ಳುವುದೂ ಕಷ್ಟ. ಅದಕ್ಕೇ ಕೃಷ್ಣನನ್ನು ಗೋಪಾಲಕೃಷ್ಣ ಎಂದೂ ಕರೆಯುವುದು. ಬೃಂದಾವನದಲ್ಲಿ ಗೋವುಗಳನ್ನು ಕಾಯುತ್ತಲೇ ಬೆಳೆದವನು ಕೃಷ್ಣ. ಬೆಣ್ಣೆಕಳ್ಳನೆಂದು ಭಕ್ತರು ಪ್ರೀತಿಯಿಂದ ಆತನಿಗೆ ಬಿರುದನ್ನೂ ನೀಡಿದ್ದಾರೆ. ಆತನ ಬಾಲಲೀಲೆಗಳಲ್ಲಿ ಬೆಣ್ಣೆಯ ಕಳ್ಳತನ, ಮೊಸರು ಗಡಿಗೆಗಳನ್ನು ಒಡೆದು ಮೊಸರು ಕುಡಿಯುವುದು ಎಲ್ಲವೂ ಸೇರಿದೆ. ಕೃಷ್ಣ ಭಕ್ತಿಯ ಪ್ರಸಾರ ಮಾಡುವ ಇಸ್ಕಾನ್ ಸಂಸ್ಥೆಗೆ ಕೃಷ್ಣ ಬೇರೆಯಲ್ಲ ಗೋವು ಬೇರೆಯಲ್ಲ. ಗೋ ಸೇವೆಯಲ್ಲಿಯೇ ಕೃಷ್ಣನನ್ನು ಕಾಣಬಹುದು ಎಂದು ಅವರು ನಂಬಿದ್ದಾರೆ. ಇದಕ್ಕೆ ಉದಾಹರಣೆ ರಾಜಸ್ಥಾನದ ಹಿಂಗೋನಿಯಾದ ಗೋಶಾಲೆಯ ಉಸ್ತುವಾರಿಯನ್ನು...