ರಾಧೆಯ ನೆಲದಲ್ಲಿ ಕೃಷ್ಣನ ಹುಡುಕಾಟ

ಶ್ರೀಕೃಷ್ಣನ ಜನ್ಮಸ್ಥಾನ ಮಥುರಾ ಮತ್ತು ಆತನು ಆಡಿ ಬೆಳೆದ ಬೃಂದಾವನಕ್ಕೆ ನೀವು ಕಾಲಿಡುತ್ತಿದ್ದಂತೆ ಕೇಳುವುದು ಒಂದೇ ನಾಮ, ಅದು ರಾಧೆ! ಜೊತೆಯಲ್ಲಿ ಹರೇರಾಮ ಹರೇಕೃಷ್ಣ, ಕೃಷ್ಣಕೃಷ್ಣ ಹರೇಹರೇ ಎಂಬ ನಾಮ ಸಂಕೀರ್ತನ. ನಿಜ ಭಕ್ತರಿಗೆ ಮಾತ್ರ ಬೃಂದಾವನ. ಕೃಷ್ಣ-ರಾಧೆಯರ ನಾಮಸ್ಮರಣೆ ಮಾಡದ ವ್ಯಕ್ತಿ ಅಲ್ಲಿ ಇಲ್ಲವೇ ಇಲ್ಲ. ದಿನ ನಿತ್ಯವೂ ಜಾತ್ರೆ. ದೇವಾಲಯಗಳಲ್ಲಿ ನೂಕುನುಗ್ಗಲು. ಹಲವು ರೀತಿಯ ಪರಿಕ್ರಮಗಳು. ಉದ್ದಂಡ ನಮಸ್ಕಾರ ಹಾಕುತ್ತಲೇ ಪರಿಕ್ರಮ ನಡೆಸುವ ಭಕ್ತಿಯ ಪರಾಕಾಷ್ಠೆ. ವಿದೇಶಗಳಿಂದಲೂ ಭಕ್ತರ ದಂಡು. ಅವರೂ ಹರಿನಾಮ ಧರಿಸಿ,...