ಮುನ್ನುಡಿ

ಜೀವನ ಪ್ರೀತಿಯನ್ನು ತುಂಬುವ ಕೃತಿ

ಶ್ರೀಯುತ ಎಲ್‌.ಎಸ್‌.ಶಾಸ್ತ್ರಿಯವರು ಅವಿಶ್ರಾಂತ ಬರೆಹಗಾರರು. ಅವರ ಬರೆವಣಿಗೆಯನ್ನು ನಾನು ಮೂರು ದಶಕಗಳಿಗೂ ಅಧಿಕ ಕಾಲದಿಂದ ಓದುತ್ತ ಬಂದವನು. ನಾನು ಬೆಳಗಾವಿಯಲ್ಲಿ ನಾಡೋಜ ಪತ್ರಿಕೆಯಲ್ಲಿ ನನ್ನ ಪತ್ರಿಕೋದ್ಯೋಗವನ್ನು ಆರಂಭಿಸಿದಾಗ ನನ್ನ ಮತ್ತು ಅವರ ಮೊದಲ ಭೇಟಿ. ಅವರ ತಾಲೂಕಿನವನೇ ನಾನು ಆಗಿದ್ದರಿಂದ ಅವರಿಗೆ ನನ್ನ ಮೇಲೆ ವಿಶೇಷ ಪ್ರೀತಿ. ನಾಡೋಜದ ಸಾಪ್ತಾಹಿಕ ಪುರವಣಿಯನ್ನು ಅವರೇ ಆಗ ನೋಡಿಕೊಳ್ಳುತ್ತಿದ್ದರು. ಶಾಸ್ತ್ರಿಯವರು ಹಲವು ಪ್ರಕಾರದ ಬರೆವಣಿಗೆಯನ್ನು ಮಾಡಿದ್ದರೂ ಕಾದಂಬರಿಯೊಂದನ್ನು ಬರೆದಿರುವುದು ಇದೇ ಮೊದಲು. ಅವರಿಗೆ ಈಗ ಹತ್ತಿರ ಹತ್ತಿರ 80 ವರ್ಷ....

ಸಹೃದಯ ವಿಮರ್ಶೆ

ಸಹೃದಯ ವಿಮರ್ಶೆ ವಿಭಾವರಿ ಭಟ್ಟರು ರಮೇಶ ಭಟ್‌‌ ಬೆಳಗೋಡು ಎಂದು ನನಗೆ ಗೊತ್ತಾಗಿದ್ದು ಅದೆಷ್ಟೋ ದಿನಗಳ ಬಳಿಕ. `ಕನ್ನಡಪ್ರಭ’ದ `ಅಕ್ಷರ ತೋರಣ’ ಪುಟಕ್ಕೆ ನಿಯಮಿತವಾಗಿ ಅವರು ವಿಮರ್ಶೆ ಬರೆಯುತ್ತಿದ್ದರು. ಹೇಳಿದ ದಿನಕ್ಕೆ ಹೇಳಿದ ಸಮಯಕ್ಕೆ ಸರಿಯಾಗಿ ಮೇಲ್ ಮಾಡುತ್ತಿದ್ದ ವಿಭಾವರಿ ಭಟ್ಟರು ನಂತರ ಫೋನ್‌ ಮಾಡಿ `ಕಳುಹಿಸಿದ್ದೇನೆ’ ಎಂದೂ ಹೇಳುತ್ತಿದ್ದರು. ಇದು ಅವರ ಕಾರ್ಯತತ್ಪರತೆ ಮತ್ತು ಶ್ರದ್ಧೆಯನ್ನು ತೋರಿಸುತ್ತದೆ. ಈ `ಶ್ರದ್ಧೆ’ ಎಂಬ ಮಾತನ್ನು ನಾನು ಒತ್ತಿ ಹೇಳುವುದಕ್ಕೆ ಇಷ್ಟಪಡುತ್ತೇನೆ. ಏಕೆಂದರೆ, ಇದು ನಮ್ಮ ಸಸಂಸ್ಕೃತಿಯ ಪದ....

ಮನುಷ್ಯತ್ವದ ಶೋಧ

ಆಧುನಿಕ ಕನ್ನಡದ ಪ್ರಮುಖ ಕತೆಗಾರರಲ್ಲಿ ಡಾ.ನಾ.ಮೊಗಸಾಲೆಯವರಿಗೆ ಸುಲಭವಾಗಿಯೇ ಸ್ಥಾನ ಲಭಿಸುವುದು. ಕರಾವಳಿ ಕನರ್ಾಟಕದ ವಿಶಿಷ್ಟ ಭಾಷೆಯೊಂದಿಗೆ ಸೃಜನಿಸುವ ಮೊಗಸಾಲೆ ಸದಾ ಮನುಷ್ಯನಲ್ಲಿಯ ಮನುಷ್ಯತ್ವವನ್ನು ಶೋಧಿಸುತ್ತ ಇರುತ್ತಾರೆ. ಸುಂದರಿಯ ಎರಡನೆಯ ಅವತಾರ, ಸೀತಾಪುರದ ಕತೆಗಳು, ಸೀತಾಪುರದಲ್ಲಿ ಗಾಂಧೀಜಿ ಕಥಾಸಂಕಲನಗಳ ನಂತರ ಈಗ ಈ ನಾಲ್ಕನೆಯ ಸಂಕಲನವನ್ನು ನೀಡುತ್ತಿದ್ದಾರೆ. ಮೊದಲ ಸಂಕಲನದಲ್ಲಿ ಏಳು ಕತೆಗಳು, ಎರಡನೆಯ ಸಂಕಲನದಲ್ಲಿ ಹದಿನಾಲ್ಕು ಕತೆಗಳು, ಮೂರನೆಯ ಸಂಕಲನದಲ್ಲಿ ಒಂಬತ್ತು ಕತೆಗಳು ಹಾಗೂ ಈ ಸಂಕಲನದಲ್ಲಿ ಹನ್ನೆರಡು ಕತೆಗಳು ಇವೆ. ಸಂಕಲನಗಳಲ್ಲಿ ಅವರು ಸೇರಿಸದೆ ಇರುವ...