ಚೋರ ಗುರು ಚಾಂಡಾಳ ಶಿಷ್ಯ

*ಒಬ್ಬರನ್ನು ಮೀರಿಸುವ ಇನ್ನೊಬ್ಬ ಒಬ್ಬ ಕೆಟ್ಟ ವ್ಯಕ್ತಿ ಇರುತ್ತಾನೆ. ಅವನ ಮಾತನ್ನೆಲ್ಲ ವೇದವಾಕ್ಯವೆಂದು ಪರಿಗಣಿಸಿ ಪಾಲಿಸುವ ಅನುಯಾಯಿ ಇನ್ನೊಬ್ಬ ಇರುತ್ತಾನೆ. ಇವರಿಬ್ಬರೂ ಸೇರಿಬಿಟ್ಟರೆ ಅತ್ಯಂತ ಕೆಟ್ಟ ಸನ್ನಿವೇಶವನ್ನೇ ಸೃಷ್ಟಿಸಿಬಿಡುತ್ತಾರೆ. ಪೋಕರಿಗಳ ಪಟಾಲಾಂ ಅಂತಾರಲ್ಲ ಹಾಗೆ ಇದು. ಒಬ್ಬರನ್ನು ಮೀರಿಸುವ ಕೆಟ್ಟ ಸಾಹಸಗಳನ್ನೆಲ್ಲ ಇವರು ಮಾಡುತ್ತಿರುತ್ತಾರೆ. ಬೆಂಕಿಗೆ ಗಾಳಿ ಸೇರಿದಂತೆ ಇದು. ಇದನ್ನು ಕಂಡು ಚೋರ ಗುರು ಚಾಂಡಾಳ ಶಿಷ್ಯ ಎಂಬ ಮಾತು ಪ್ರಚಾರಕ್ಕೆ ಬಂತು. ಯಾರಾದರೊಬ್ಬರು ದಾರಿ ತಪ್ಪುತ್ತಿದ್ದರೆ ಅವರನ್ನು ಸರಿದಾರಿಗೆ ತರುವಂಥ ಸ್ನೇಹಿತರು ಇರಬೇಕು. ಕೆಟ್ಟ...

ಚಿದಂಬರ ರಹಸ್ಯ

*ಬಿಡಿಸಲಾಗದ ಮಹಾ ಒಗಟು `ಚಿದಂಬರ ರಹಸ್ಯ'ವೆಂಬುದು ಬಿಡಿಸಲಾಗದ ಮಹಾ ಒಗಟು ಎಂಬ ಅರ್ಥದಲ್ಲಿ ಬಳಕೆಯಾಗುತ್ತಿದೆ. ಇದೇ ಹೆಸರಿನಲ್ಲಿ ಪೂರ್ಣಚಂದ್ರತೇಜಸ್ವಿಯವರು ಒಂದು ಕಾದಂಬರಿಯನ್ನೂ ಬರೆದಿದ್ದಾರೆ. ಅದರ ಶೀರ್ಷಿಕೆಯೂ ಇದೇ ಅರ್ಥವನ್ನು ಸಮರ್ಥಿಸುತ್ತದೆ. ಏನಿದುಚಿದಂಬರ ರಹಸ್ಯ’? ಚಿದಂಬರ ಎಂಬುದು ತಮಿಳುನಾಡಿನ ಪವಿತ್ರ ಕ್ಷೇತ್ರ. ಇಲ್ಲಿಯ ದೇವಾಲಯದ ಗರ್ಭಗುಡಿಯಲ್ಲಿ ಶಿವನ ಲಿಂಗವಿಲ್ಲ. ಶಿವನನ್ನು ನಿರಾಕಾರ ರೂಪದಲ್ಲಿ ಇಲ್ಲಿ ಪೂಜಿಸಲಾಗುತ್ತದೆ. ಅಂದರೆ ಅದು ಅಂಬರ ರೂಪಿ ಶಿವ. ಅಂಬರವೆಂದರೆ ಆಕಾಶ ಎಂಬ ಅರ್ಥವೂ ಇದೆ. ಬಟ್ಟೆ ಎಂಬ ಅರ್ಥವೂ ಇದೆ. ಗರ್ಭಗುಡಿಯ ಮುಂದೆ...

ಚಾತಕಪಕ್ಷಿ

*ಮಳೆ ಬರದೇ ಹೋದರೆ ಇದರ ಕತೆ? ರಸಗೊಬ್ಬರ ಬರುವುದೆಂದು ರೈತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದರು ಎಂದು ಪತ್ರಿಕೆಯಲ್ಲಿ ಬಂದುದನ್ನು ಓದಿದ್ದೇವೆ. ಅತ್ಯಂತ ನಿರೀಕ್ಷೆಯಿಂದ ಕಾಯುವುದಕ್ಕೆ ಚಾತಕಪಕ್ಷಿಯನ್ನು ಉದಾಹರಣೆಯನ್ನಾಗಿ ನೀಡುತ್ತಾರೆ. ಇದು ಆಡುಮಾತಿನಲ್ಲಿರುವುದಕ್ಕಿಂತ ಪುಸ್ತಕದ ಸಾಹಿತ್ಯದಲ್ಲಿ ಕಂಡುಬುರುವುದು ಅಧಿಕ. ಚಾತಕಪಕ್ಷಿಯನ್ನು ಚಾದಗೆ ಎಂದೂ ಕರೆಯುತ್ತಾರೆ. ಈ ಪಕ್ಷಿಯದು ಒಂದು ವಿಶೇಷ ಗುಣವಿದೆ. ಮಳೆಯು ಬಂದಾಗ ಮಳೆಯ ಹನಿಯನ್ನಷ್ಟೇ ಕುಡಿದು ಇದು ಬದುಕುವುದಂತೆ. ಹೀಗಾಗಿ ತನ್ನ ಜೀವವನ್ನು ಉಳಿಸಿಕೊಳ್ಳಲು ಅದು ಮಳೆಗಾಗಿ ಕಾಯುವುದು ಸಹಜ. ಜೀವಕ್ಕೂ ಮಳೆಗೂ ಸಂಬಂಧವಿರುವುದರಿಂದ ನಿರೀಕ್ಷೆಯ...

ಚಾಣಕ್ಯ ತಂತ್ರ

*ರಾಜಕಾರಣದ ಕೂಟ ನೀತಿ ಇದು ರಾಜಕಾರಣದ ತಂತ್ರ ಪ್ರತಿತಂತ್ರಗಳಲ್ಲಿ ಚಾಣಕ್ಯತಂತ್ರ ಪ್ರಸಿದ್ಧವಾದದ್ದು. ಬಹಳ ಚಾಣಾಕ್ಷ ರಾಜಕೀಯ ನಡೆಯನ್ನು ಚಾಣಕ್ಯ ತಂತ್ರ ಎಂದು ಕರೆಯುತ್ತಾರೆ. ಚತುರ ರಾಜಕಾರಣಿಯನ್ನು ಚಾಣಕ್ಯ ಎಂದು ಕರೆಯುವುದನ್ನು ಕೇಳಿದ್ದೇವೆ. ಒಬ್ಬನ ರಾಜಕೀಯ ಚಾತುರ್ಯವನ್ನು ಹೊಗಳಬೇಕೆಂದರೆ, ಅವನು ಚಾಣಕ್ಯ ಕಣ್ರಿ' ಎಂದು ಹೇಳುವುದನ್ನು ಕೇಳಿದ್ದೇವೆ. ಯಾರು ಈ ಚಾಣಕ್ಯ? ಚಂದ್ರಗುಪ್ತ ಮೌರ್ಯನಿಗೆ ನಂದರ ವಿರುದ್ಧ ಗೆಲವು ತಂದುಕೊಟ್ಟುಚಕ್ರವರ್ತಿಯನ್ನಾಗಿ ಮಾಡಿದವನು. ಕೌಟಿಲ್ಯ ಎಂಬುದು ಇವನ ಮೂಲ ಹೆಸರು. ಇವನ `ಅರ್ಥಶಾಸ್ತ್ರ’ ಕೃತಿಯು ರಾಜಕೀಯ ಪ್ರವೇಶಕ್ಕೊಂದು ಮಾರ್ಗದರ್ಶಿ. ಹೇಗೆ...

ಚಕ್ರವ್ಯೂಹ

*ತಪ್ಪಿಸಿಕೊಳ್ಳಲಾಗದ ಸಮಸ್ಯೆ ಕಷ್ಟದ ಮೇಲೆ ಕಷ್ಟ. ಅದರಿಂದ ಹೊರಬರಲು ಆಗದೆ ಸುಸ್ತಾದ ವ್ಯಕ್ತಿ `ಚಕ್ರವ್ಯೂಹ’ದಲ್ಲಿ ಸಿಕ್ಕಿಬಿದ್ದು ಒದ್ದಾಡುತ್ತಿದ್ದೇನೆ ಎಂದು ಹೇಳುವುದನ್ನು ಕೇಳಿಸಿಕೊಂಡಿದ್ದೇವೆ. ಅದೇನು ಚಕ್ರವ್ಯೂಹ? ಕುರುಕ್ಷೇತ್ರ ಯುದ್ಧದಲ್ಲಿ ಕೌರವ ಸೇನಾಪತಿ ದ್ರೋಣಾಚಾರ್ಯರು ಪಾಂಡವರನ್ನು ಸೋಲಿಸಲು ಚಕ್ರವ್ಯೂಹವನ್ನು ರಚಿಸುತ್ತಾರೆ. ಚಕ್ರವ್ಯೂಹವನ್ನು ಭೇದಿಸುವುದು ಅರ್ಜುನನಿಗೆ ಮಾತ್ರ ಸಾಧ್ಯವಿತ್ತು. ಆದರೆ ಅರ್ಜುನನ್ನು ಉಪಾಯದಿಂದ ದೂರ ಕರೆದೊಯ್ದರು. ಆಗ ಅರ್ಜುನನ ಮಗ ಅಭಿಮನ್ಯು ಮುಂದೆ ಬರುತ್ತಾನೆ. ತನಗೆ ಚಕ್ರವ್ಯೂಹವನ್ನು ಪ್ರವೇಶಿಸುವುದು ಗೊತ್ತು. ಆದರೆ ಹೊರಗೆ ಬರುವುದು ಗೊತ್ತಿಲ್ಲವೆಂದು ಹೇಳುತ್ತಾನೆ. ಅನಿವಾರ್ಯವಾಗಿ ಅಭಿಮನ್ಯುವೇ ಪಾಂಡವ...

ಗಂಜಿಯಲ್ಲಿ ಬಿದ್ದ ನೊಣ

*ಹಗುರವಾಗಿದ್ದಾಗ ಹಾರುವುದು ಸುಲಭ ನೊಣ ಗಂಜಿಯಲ್ಲಿ ಬಿದ್ದರೆ ಏನಾಗುತ್ತದೆ? ರೆಕ್ಕೆಗಳೆಲ್ಲ ಒದ್ದೆಯಾಗಿ ಮೇಲೆದ್ದು ಹಾರಾಡಲಾಗದೆ ಒದ್ದಾಡುತ್ತಿರುತ್ತದೆ. ಚಟುವಟಿಕೆ ಇಲ್ಲದ ವ್ಯಕ್ತಿಯನ್ನು ಕಂಡಾಗ ಈ ರೀತಿ ಫಾರ್ಸು ಮಾಡುವುದು ಇದೆ. ಎಲ್ಲ ಕೆಲಸದಲ್ಲೂ ನಿಧಾನವೇ ಪ್ರಧಾನ ಎಂದುಕೊಂಡು ನಿಷ್ಕ್ರಿಯತೆಯನ್ನು ತೋರಿಸುವವರು ಇದ್ದಾರೆ. ಅದು ಉದ್ದೇಶಪೂರ್ವಕವಾಗಿ ಅವರು ನಿಧಾನವನ್ನು ಅನುಸರಿಸುವುದಲ್ಲ. ಅವರ ಸ್ವಭಾವ, ಅವರ ವ್ಯಕ್ತಿತ್ವದಲ್ಲೇ ಜಡತೆ ತುಂಬಿದೆ. ಇವರು ಜಡಭರತರು. ಇಂಥವರನ್ನು ಕಂಡಾಗ ಗಂಜಿಯಲ್ಲಿ ಬಿದ್ದ ನೊಣ ಎಂದೋ ಬೆಲ್ಲದಲ್ಲಿ ಬಿದ್ದ ನೊಣ ಎಂದೋ ಹೆಸರಿಡುತ್ತಾರೆ. ಇನ್ನು, ತುಂಬ...

ಗೋಸುಂಬೆ

*ಇವರನ್ನು ಊಸರವಳ್ಳಿ ಎಂದೂ ಕರೆಯುತ್ತಾರೆ ಕೆಲವರನ್ನು ಗೋಸುಂಬೆ ಅಂತಲೋ ಊಸರವಳ್ಳಿ ಅಂತಲೋ ಕರಯುತ್ತೇವೆ. ಮಾತಿಗೊಮ್ಮೆ ಬಣ್ಣ ಬದಲಾಯಿಸುತ್ತಾನೆ ಎಂದು ತಿವಿಯುತ್ತೇವೆ. ಗೋಸುಂಬೆ ಎಂದು ಕರೆಯುವುದರಲ್ಲಿ ಏನಿದೆ ವಿಶೇಷ? ಗೋಸುಂಬೆ ಓತಿಯಂಥ ಪ್ರಾಣಿ. ಸದಾ ಗಿಡಮರಗಳ ಮೇಲೆ ಇರುವಂಥದ್ದು. ಶತ್ರುಗಳಿಂದ ರಕ್ಷಣೆ ಪಡೆಯಲು ತನ್ನ ಚರ್ಮದ ಬಣ್ಣವನ್ನು ಬದಲಾಯಿಸುವ ನಿಸರ್ಗ ಸಹಜವಾದ ಶಕ್ತಿಯನ್ನು ಅದು ಪಡೆದುಕೊಂಡಿದೆ. ಹಸಿರು ಎಲೆಗಳ ನಡುವೆ ಅದು ತನ್ನ ಮೈಬಣ್ಣವನ್ನು ಹಸಿರನ್ನಾಗಿ ಮಾಡಿಕೊಳ್ಳಬಹುದು. ಮರದ ಕಾಂಡದ ಮೇಲೆ ಇದ್ದಾಗ ಅದರ ಬಣ್ಣವನ್ನೇ ತಾನು ಪಡೆಯಬಲ್ಲುದು....

ಗುಲಗುಂಜಿ

*ಅತ್ಯಲ್ಪ ತೂಕ ಗುಲಗುಂಜಿಯಷ್ಟೂ ಸಿಗಲಿಲ್ಲ ಎಂದೋ, ಗುಲಗುಂಜಿಯಷ್ಟೂ ಅವನಿಗೆ ಮಾನ ಇಲ್ಲವೆಂದೋ, ಗುಲಗುಂಜಿಯಷ್ಟೂ ಅಭಿಮಾನ ಇಲ್ಲವೆಂದೋ ಹೇಳುವುದನ್ನು ಕೇಳಿದ್ದೇವೆ. ಏನಿದು ಗುಲಗುಂಜಿ? ಗುಲಗುಂಜಿ ಒಂದು ವೃಕ್ಷದ ಬೀಜ. ಕೆಂಬೂತದ ಕಣ್ಣಿನ ಹಾಗೆ ಕೆಂಪಗಿನ ಕಾಳು ಇದು ಮತ್ತು ಇದಕ್ಕೆ ಕಪ್ಪಾದ ಟೊಪ್ಪಿ ಇದೆ. ಇದನ್ನು ಬಂಗಾರವನ್ನು ತೂಗಲು ಉಪಯೋಗಿಸುತ್ತಾರೆ. ಹಳ್ಳಿಗಳ ಅಕ್ಕಸಾಲಿಗರು ಇಂದೂ ಈ ಗುಂಜಿಯಲ್ಲೇ ಬಂಗಾರದ ತೂಕವನ್ನು ಮಾಡುವುದು. ಬಂಗಾರದ ತೂಕವನ್ನು ಗುಂಜಿ, ಆಣೆ, ತೊಲೆ ಲೆಕ್ಕದಲ್ಲಿಹೇಳುವರು. ಒಂದು ಗುಂಜಿ ಎಂದರೆ ಅಂದಾಜು 122 ಮಿಲಿ...

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ

*ಅಬಲರ ಮೇಲೆ ಸಬಲರ ದೌರ್ಜನ್ಯ ಹಿಂದೆ ರಾಕ್ಷಸರೆಲ್ಲ ಶಕ್ತಿಸಂಪನ್ನರಾಗಲು ಬ್ರಹ್ಮದೇವನನ್ನು ಕುರಿತು ತಪಸ್ಸು ಮಾಡುತ್ತಿದ್ದರು. ಬ್ರಹ್ಮನು ಅವರಿಗೆ ವರಗಳನ್ನು ಕೊಡುತ್ತಿದ್ದ. ಶಸ್ತ್ರ, ಅಸ್ತ್ರಗಳನ್ನು ನೀಡುತ್ತಿದ್ದ. ಆ ಅಸ್ತ್ರಗಳಲ್ಲಿ ಬ್ರಹ್ಮಾಸ್ತ್ರ ಅತ್ಯಂತ ಶಕ್ತಿಶಾಲಿಯಾದುದು. ಅತ್ಯಂತ ಬಲಿಷ್ಠ ಎದುರಾಳಿಯನ್ನೂ ಅದು ನಾಶಮಾಡಿಬಿಡುತ್ತದೆ. ಅಂಥ ಮಹಾನ್‌ ಅಸ್ತ್ರವನ್ನು ಸಮರ್ಥರಾದ ಎದುರಾಳಿಗಳ ಮೇಲೆ ಪ್ರಯೋಗಿಸಬೇಕೆ ಹೊರತು ಕಲ್ಲು ತಾಗಿದರೂ ಸತ್ತುಹೋಗುವಂಥ ಗುಬ್ಬಚ್ಚಿಯ ಮೇಲೆ ಬಳಸಿದರೆ ಏನು ಬಂತು? ಅಂದಿನ ಬ್ರಹ್ಮಾಸ್ತ್ರವನ್ನು ಇಂದಿನ ಪರಮಾಣು ಬಾಂಬ್‌ಗೆ ಹೋಲಿಸಬಹುದೇನೋ. ಪರಮಾಣು ಬಾಂಬ್‌ಗಳನ್ನು ಕೂಡ ತುಂಬ ಕಷ್ಟಪಟ್ಟು...

ಗಳಸ್ಯ ಕಂಠಸ್ಯ

*ದ್ವೈತ ಅಳಿದ ಅದ್ವೈತ ಭಾವ ಅವರಿಬ್ಬರೂ ತುಂಬಾ ಸ್ನೇಹಿತರು ಎಂದು ಹೇಳುವಾಗ `ಗಳಸ್ಯ ಕಂಠಸ್ಯ' ಎಂದು ಹೇಳುತ್ತಾರೆ. ಒಂದೇ ತಾಟಿನಲ್ಲು ಊಟ ಮಾಡುವವರು ಎಂದೋ, ಚಡ್ಡಿ ದೋಸ್ತರು ಎಂದೋ, ಲಂಗೋಟಿ ಸ್ನೇಹಿತರು ಎಂದೋ ಈ ಸ್ನೇಹವನ್ನು ವಿವರಿಸುವವರು ಇದ್ದಾರೆ. ಅವನ ಕಣ್ಣಿಗೆ ಇರಿದರೆ ಇವನ ಕಣ್ಣಲ್ಲಿ ನೀರು ಎನ್ನುವ ಮಾತೂ ಇದೆ. ಗಳಸ್ಯ ಕಂಠಸ್ಯ’ದಲ್ಲಿ ಏನು ವಿಶೇಷ? ಗಳ ಎಂದರೂ ಕೊರಳು ಕಂಠ ಎಂದರೂ ಕೊರಳು. ಎರಡೂ ಒಂದೇ. ಅದೊಂದು ಅವಿನಾಭಾವ ಸಂಬಂಧ. ದ್ವಿರುಕ್ತಿ. ಸ್ನೇಹದಲ್ಲಿ ಸ್ವಾರ್ಥ...