*ಮಳೆ ಬರದೇ ಹೋದರೆ ಇದರ ಕತೆ?

ಸಗೊಬ್ಬರ ಬರುವುದೆಂದು ರೈತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದರು ಎಂದು ಪತ್ರಿಕೆಯಲ್ಲಿ ಬಂದುದನ್ನು ಓದಿದ್ದೇವೆ. ಅತ್ಯಂತ ನಿರೀಕ್ಷೆಯಿಂದ ಕಾಯುವುದಕ್ಕೆ ಚಾತಕಪಕ್ಷಿಯನ್ನು ಉದಾಹರಣೆಯನ್ನಾಗಿ ನೀಡುತ್ತಾರೆ. ಇದು ಆಡುಮಾತಿನಲ್ಲಿರುವುದಕ್ಕಿಂತ ಪುಸ್ತಕದ ಸಾಹಿತ್ಯದಲ್ಲಿ ಕಂಡುಬುರುವುದು ಅಧಿಕ.
ಚಾತಕಪಕ್ಷಿಯನ್ನು ಚಾದಗೆ ಎಂದೂ ಕರೆಯುತ್ತಾರೆ. ಈ ಪಕ್ಷಿಯದು ಒಂದು ವಿಶೇಷ ಗುಣವಿದೆ. ಮಳೆಯು ಬಂದಾಗ ಮಳೆಯ ಹನಿಯನ್ನಷ್ಟೇ ಕುಡಿದು ಇದು ಬದುಕುವುದಂತೆ. ಹೀಗಾಗಿ ತನ್ನ ಜೀವವನ್ನು ಉಳಿಸಿಕೊಳ್ಳಲು ಅದು ಮಳೆಗಾಗಿ ಕಾಯುವುದು ಸಹಜ. ಜೀವಕ್ಕೂ ಮಳೆಗೂ ಸಂಬಂಧವಿರುವುದರಿಂದ ನಿರೀಕ್ಷೆಯ ತೀವ್ರತೆಯೂ ಹೆಚ್ಚು. ಮಳೆಯು ಬರದೇ ಹೋದರೆ ಇದರ ಕತೆ? ಪರಮಾತ್ಮನಿಗೇ ಪ್ರೀತಿ.
ವಾಸ್ತವದಲ್ಲಿ ಹೇಳಬೇಕೆಂದರೆ ಇಂಥ ಯಾವುದೇ ಪಕ್ಷಿ ಇಲ್ಲ. ಇದೊಂದು ಕವಿಸಮಯ ಅಷ್ಟೇ. ಬೆಳದಿಂಗಳನ್ನಷ್ಟೇ ಕುಡಿದು ಬದುಕುವ ಚಕೋರ ಪಕ್ಷಿಯೂ ಇದೆಯಂತೆ.