ಹುಲಿಯ ನೆರಳಿನೊಳಗೆ ಬೆಳೆದ ಬದುಕು

ಮರಾಠಿ ಸಾಹಿತ್ಯದಲ್ಲಿ ಆತ್ಮಕಥನವು ಅತ್ಯಂತ ಪ್ರಬಲವಾದ ಅಭಿವ್ಯಕ್ತಿಯಾಗಿದೆ. ಅಲ್ಲಿಯ ಸತ್ವಶಾಲಿ ಮತ್ತು ಬೆಂಕಿಯುಂಡೆಯಂಥ ಬರೆಹಗಳು ಅವತರಿಸಿದ್ದು ಆತ್ಮಕಥನದ ರೂಪದಲ್ಲಿಯೇ. ಅದರಲ್ಲಿಯೂ ದಲಿತ ವರ್ಗದವರು ಬರೆದಿರುವ ಆತ್ಮಕಥನಗಳು ಅದರಲ್ಲಿಯ ಹಸಿಹಸಿಯಾದ ಮತ್ತು ಅಕ್ಷರಲೋಕಕ್ಕೆ ಮುಖಾಮುಖಿಯಾದವರ ತಾಜಾತನದಿಂದಾಗಿ ಉತ್ಕೃಷ್ಟ ಸಾಹಿತ್ಯವಾಗಿಯೂ ಮನ್ನಣೆ ಗಳಿಸಿದವು. ಆ ಸಾಲಿನಲ್ಲಿ ನಿಲ್ಲುವ ಆತ್ಮಕಥನ ಪ್ರಸಿದ್ಧ ವಿಜ್ಞಾನಿ ನಾಮದೇವ ನಿಮ್ಗಾಡೆಯವರ ‘ಹುಲಿಯ ನೆರಳಿನೊಳಗೆ’. ಇದಕ್ಕೊಂದು ಉಪಶೀರ್ಷಿಕೆ ‘ಅಂಬೇಡ್ಕರ್‌ವಾದಿಯ ಆತ್ಮಕಥೆ’ ಎಂದು. ಇದನ್ನು ಬಿ.ಶ್ರೀಪಾದ ಅವರು ಭಾವಾನುವಾದ ಮಾಡಿದ್ದಾರೆ. ಮೂಲ ಆತ್ಮಕತೆಯನ್ನು ಓದುವಾಗ ತಮಗೆ ಮುಖ್ಯವೆನಿಸಿದ್ದು ಕನ್ನಡದ...