ನಾಗಪ್ಪಯ್ಯನ ಗರ್ವಭಂಗ

ಹೊಳೆಸಾಲಿನವರಿಗೆ ನಮ್ಮೂರಿನ ನಾಗಪ್ಪಯ್ಯನವರ ಪರಿಚಯ ಇಲ್ಲದೇ ಇಲ್ಲ. ಸ್ವಾತಂತ್ರ್ಯ ಬರುವುದಕ್ಕೆ ಪೂರ್ವದಲ್ಲಿಯೇ ಅವರು ಮೂಲ್ಕಿ ಪರೀಕ್ಷೆಗೆ ಕಟ್ಟಿದ್ದವರಂತೆ. ಆದರೆ ಪಾಸಾಗಿರಲಿಲ್ಲ. ಅವರು ಮನಸ್ಸು ಮಾಡಿದ್ದರೆ ಸರ್ಕಾರಿ ನೌಕರಿಯನ್ನು ಪಡೆಯಬಹುದಿತ್ತು. ಆದರೆ ಏಕೋ ಏನೋ ಅವರು ಸರ್ಕಾರಿ ನೌಕರಿಗೆ ಹೋಗಲಿಲ್ಲ. ನಮ್ಮೂರಿನ ಅಕ್ಷರ ಬಲ್ಲ ಕೆಲವೇ ಕೆಲವು ಜನರಲ್ಲಿ ನಾಗಪ್ಪಯ್ಯ ಪ್ರಮುಖರಾಗಿದ್ದರು. ನಮ್ಮೂರಿಗೆ ಬರುವ ಶಾಲೆಯ ಮೇಸ್ಟ್ರು, ಕಂದಾಯ ಇಲಾಖೆಯ ಶಾನುಭೋಗರನ್ನು ಬಿಟ್ಟರೆ ಹೆಚ್ಚು ಕಾಯಿದೆ ಜ್ಞಾನ ನಾಗಪ್ಪಯ್ಯನವರಲ್ಲಿತ್ತು. ಊರ ಜನರು ತಮಗೆ ಸರ್ಕಾರದಿಂದ ಏನಾದರೂ ಕೆಲಸವಾಗಬೇಕಿದ್ದರೆ ಅದಕ್ಕೆ...