ಎಲ್ಲ ನೇಮದೆಲ್ಲೆ ಮೀರಿ ಅನಂತ ಸುಖದೆಡೆ ಮುಖವ ಮಾಡಿ- ಹಾದರವಲ್ಲ, ಆದರದ ಸಂಬಂಧ, ಇದು ಪೊಲಿಯೋಮರಿ

ಒಬ್ಬರಿಗಿಂತ ಹೆಚ್ಚು ಜನರೊಂದಿಗೆ ಪ್ರೇಮ ಸಂಬಂಧವನ್ನು ಹೊಂದುವುದನ್ನು ಭಾರತೀಯ ಸಂಸ್ಕೃತಿಯಲ್ಲಿ ಹಾದರ ಎಂದು ಕರೆಯುತ್ತಾರೆ. ಆದರೆ ಕೆಲವು ಪಾಶ್ಚಾತ್ಯ ದೇಶಗಳಲ್ಲಿ ಪರಸ್ಪರ ಒಪ್ಪಿಗೆಯ ಮೇಲೆ ಒಬ್ಬರಿಗಿಂತ ಹೆಚ್ಚು ಜನರೊಂದಿಗೆ ಸಂಬಂಧ ಇಟ್ಟುಕೊಳ್ಳುವ ಪರಿಪಾಠವೊಂದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಹಾದರದ ಸಂಬಂಧ ಅಲ್ಲಿ ಆದರದ ಸಂಬಂಧವಾಗುತ್ತಿದೆ. ಈ ಸಂಬಂಧ ಪರಸ್ಪರ ಒಪ್ಪಿಗೆಯದು, ನೈತಿಕವಾದದ್ದು ಮತ್ತು ಜವಾಬ್ದಾರಿಯುತವಾದದ್ದು. ಒಬ್ಬರಿಗೊಬ್ಬರು ಇಲ್ಲಿ ಮೋಸ ಮಾಡುವ ಪ್ರಶ್ನೆಯೇ ಇಲ್ಲ. ಈ ಬಹುಮುಖಿ ಪ್ರೇಮಸಂಬಂಧದಲ್ಲಿ ಒಳಗೊಳ್ಳುವವರಿಗೆ ಪರಸ್ಪರರ ಅನ್ಯ ಸಂಬಂಧಗಳ ಕುರಿತು ಗೊತ್ತಿರುತ್ತದೆ. ಅಲ್ಲಿ...