ಘಾಚರ್ ಘೋಚರ್ ಹ್ರಾಂ ಹ್ರೀಂ ಹ್ರೂಂ ಫಟ್ !!!

ವಿವೇಕ ಶಾನಭಾಗ ಅವರ ಹೊಸ ಕತೆಗಳ ಸಂಕಲನ ‘ಘಾಚರ್ ಘೋಚರ್’. ಇದರಲ್ಲಿ ಆರು ಕತೆಗಳಿವೆ. ಮೊದಲ ಕತೆ ಘಾಚರ್ ಘೋಚರ್ 63 ಪುಟಗಳಷ್ಟು ದೀರ್ಘವಾಗಿರುವುದರಿಂದ ಅದೊಂದು ಕಿರುಕಾದಂಬರಿಯೇ ಸೈ. ಇದರಲ್ಲಿ ಕಥಾನಾಯಕ, ಆತನ ಪತ್ನಿ ಅನಿತಾ, ಆತನ ತಂದೆ, ಚಿಕ್ಕಪ್ಪ, ತಾಯಿ, ಗಂಡನ ಬಿಟ್ಟು ಬಂದಿರುವ ತಂಗಿ ಮಾಲತಿ ಇವರನ್ನೊಳಗೊಂಡ ಒಂದು ಕೂಡು ಕುಟುಂಬವಿದೆ. ಚಿಕ್ಕಪ್ಪ ವೆಂಕಟಾಚಲನೇ ಕುಟುಂಬದ ಕೇಂದ್ರ ವ್ಯಕ್ತಿ. ಏಕೆಂದರೆ ಅವನು ಕುಟುಂಬದ ಆದಾಯ ಮೂಲ. ಬಡತನದಲ್ಲಿದ್ದ ಕುಟುಂಬವು ಈ ವೆಂಕಟಾಚಲ ಸೋನಾ ಮಸಾಲಾ ಕಾರ್ಖಾನೆಯನ್ನು...

ಕಥನ ಪ್ರಕಾರದ ತ್ರಿವಿಕ್ರಮ ರೂಪ

ಕ  ಹೊಸ ತಲೆಮಾರಿನ ಕತೆಗಾರರಲ್ಲಿ ಬಹಳ ಭರವಸೆ ಮೂಡಿಸಿರುವ ವಿಕ್ರಮ ಹತ್ವಾರ ಅವರ ‘ಝೀರೋ ಮತ್ತು ಒಂದು’ ಕಥಾಸಂಕಲನದ ಒಂದು ಕತೆಯಲ್ಲಿ ‘ನಾನು ಬರೆಯುತ್ತಿರುವ ಕಥೆ ನಿಜದಲ್ಲಿ ಕಾಣಿಸತೊಡಗಿದೆ. ಕಲ್ಪಿಸಿಕೊಂಡ ಪಾತ್ರಗಳೆಲ್ಲ ನಿಜದಲ್ಲಿ ಕಾಣಿಸುತ್ತಿವೆ. ನಿಜದಲ್ಲಿ ಕಾಣಿಸುತ್ತಿದ್ದವೆಲ್ಲ ಕಥೆಯೆನಿಸತೊಡಗಿದೆ. ಬದುಕು, ಸತ್ಯ, ಕಥೆ, ಮಿಥ್ಯೆ ಎಲ್ಲವೂ ಮಿಲತಗೊಂಡಿವೆ. ಕಥೆಯಲ್ಲಿ ಸತ್ಯವೂ ಇಲ್ಲ; ಮಿಥ್ಯೆಯೂ ಇಲ್ಲ’.ಬಹುಶಃ ಎಲ್ಲ ಕಥೆಗಾರ ಅನುಭವಿಸುವ ಒಳತೋಟಿ ಇದಾಗಿರಬಹುದು ಮತ್ತು ಈ ಮೂಲಕ ಕಥೆಗಳಿಗೊಂದು ವ್ಯಾಖ್ಯೆಯನ್ನು ನೀಡಲು ಹತ್ವಾರ ಇಲ್ಲಿ ಪ್ರಯತ್ನಿಸಿರಬಹುದು.ಬದುಕಿನ ಸಾರ್ಥಕತೆಯ ಬಗ್ಗೆ...

ಡಬಲ್ ಕ್ರಾಸರ್ ಸೀಕ್ರೆಟ್ ಏಜೆಂಟ್‌ನ ಸೂಪರ್ ಸ್ಟೋರಿ

ಶೀತಲ ಯುದ್ಧದ ಸಮಯದಲ್ಲಿ ಬ್ರಿಟನ್ನಿನ ಬೇಹುಗಾರನಾಗಿ ನಿಯುಕ್ತನಾಗಿದ್ದ ವ್ಯಕ್ತಿಯೊಬ್ಬ ರಶಿಯಾದ ಕೆಜಿಬಿಗೆ ಕೆಲಸ ಮಾಡಿ ಯುರೋಪಿನ ನೂರಾರು ಬೇಹುಗಾರರ ಪ್ರಚ್ಛನ್ನ ಬದುಕಿನ ಬಗ್ಗೆ ಮಾಹಿತಿ ನೀಡಿ ಹಲವರ ಹತ್ಯೆಗೆ ಕಾರಣನಾದ ರೋಚಕ ಕಥೆ ಇದು. ಆತ ಡಬ್ಬಲ್ ಏಜೆಂಟ್ ಜಾರ್ಜ್ ಬ್ಲೇಕ್. ಇದೀಗ ರಶಿಯಾದಲ್ಲಿ ನೆಮ್ಮದಿಯ ಬದುಕನ್ನು ಕಳೆಯುತ್ತಿರುವ ಬ್ಲೇಕ್ ಇತ್ತೀಚೆ ತಮ್ಮ 90ನೆ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇವರ ವಿದ್ರೋಹದಿಂದ ಯುರೋಪಿನ ನೂರಾರು ಗುಪ್ತ ಏಜೆಂಟರ ಹತ್ಯೆ ನಡೆದುಹೋಯಿತು.– ಜೈಲು ಸಿಬ್ಬಂದಿಯೊಬ್ಬರು ನನ್ನನ್ನು ಸಂದರ್ಶಕರ ಕೊಠಡಿಗೆ ಕರೆದುಕೊಂಡು...

ಕಂಬಾರರಿಗೇ ಏಕೆ ಜ್ಞಾನಪೀಠ, ಭೈರಪ್ಪಗೇಕಿಲ್ಲ?

ಕನ್ನಡದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾದ ಚಂದ್ರಶೇಖರ ಕಂಬಾರರಿಗೆ  ಪ್ರತಿಷ್ಠಿತ ಜ್ಞಾನಪೀಠ ಪುರಸ್ಕಾರವು ಸಂದಿರುವ ಈ ಸಂದರ್ಭದಲ್ಲಿ ನಾವೆಲ್ಲ ಈ ಬಗ್ಗೆ ಹೆಮ್ಮೆ ಪಡಬೇಕೆ ಹೊರತು ಅಪಸ್ವರ ಎತ್ತಬಾರದು. ನಾಡಿನ ಇನ್ನೊಬ್ಬ ಶ್ರೇಷ್ಠ ಸಾಹಿತಿ ಎಸ್.ಎಲ್.ಭೈರಪ್ಪ ಕೂಡ ಈ ಪ್ರಶಸ್ತಿಗೆ ಅರ್ಹರಾಗಿದ್ದವರೇ. ಅವರಿಗೆ ಇದಕ್ಕಿಂತಲೂ ಬಹಳ ಮೊದಲೇ ಈ ಪ್ರಶಸ್ತಿ ಲಭಿಸಬೇಕಿತ್ತು. ಆದರೆ “ಭಾರತೀಯ ಜ್ಞಾನಪೀಠವು’ ಪ್ರಶಸ್ತಿಗೆ ಹೇಗೆ ಆಯ್ಕೆಮಾಡುತ್ತದೆ ಎಂಬುದನ್ನು ಗಮನಿಸಿದರೆ ಪ್ರಶಸ್ತಿಗಾಗಿ ಲಾಬಿ ಮಾಡಿದ್ದಾರೆ ಎಂಬಂಥ ಅಪಸ್ವರಗಳಿಗೆ ಆಸ್ಪದವಿರುವುದಿಲ್ಲ. ಹಲವರು ಕೇಂದ್ರ ಸರ್ಕಾರವೇ ಜ್ಞಾನಪೀಠ ಪ್ರಶಸ್ತಿಯನ್ನು ಕೊಡುತ್ತದೆ...

ವೇಣು ನಾದ

ಲೋಕದಲ್ಲಿ ಜನಿಸಿದಾ ಬಳಿಕ..  ನಮ್ಮ ಬದುಕಿನ ಕಥೆಯನ್ನು ನಾವೇ ಬರೆದುಕೊಂಡರೆ ಅದು ಆತ್ಮಕಥನವಾಗುತ್ತದೆ. ನಮ್ಮ ಜೀವನ ಕಥೆಯನ್ನು ಬೇರೆಯವರು ಬರೆದಾಗ ಅದು ಜೀವನ ಚರಿತ್ರೆಯಾಗುತ್ತದೆ. ಈ ಎರಡೂ ಪ್ರಕಾರಗಳಲ್ಲಿ ಕೆಲವು ಲೋಪಗಳು ತಲೆದೋರುವ ಸಾಧ್ಯತೆಗಳಿವೆ. ಆತ್ಮಕಥನದಲ್ಲಿ ಲೇಖಕ ತನ್ನ ಮೂಗಿನ ನೇರಕ್ಕೆ ಸರಿ ಎನಿಸಿದ್ದನ್ನಷ್ಟೇ ಬರೆಯುತ್ತಾನೆ. ಬದುಕಿನ ಘಟನೆಗಳಿಗೆ ಎರಡನೆಯ ಮಗ್ಗಲೂ ಇರುತ್ತದೆ. ಆ ಮಗ್ಗಲು ಇಲ್ಲಿ ತಪ್ಪಿಹೋಗುತ್ತದೆ. ಜೀವನಚರಿತ್ರಕಾರನಿಗೆ ಬರೆಯುವಾಗ ಆಯ್ಕೆಗಳಿರುತ್ತವೆ. ಈ ಆಯ್ಕೆಯಲ್ಲಿ ಕೆಲವು ಬಿಟ್ಟುಹೋಗುವ ಸಾಧ್ಯತೆಯೂ ಇರುತ್ತದೆ. ಆತ್ಮಕಥನಗಳು ಒಂದು ಸಾಹಿತ್ಯ ಪ್ರಕಾರ ಎನ್ನುವಷ್ಟು...