ಮೊನ್ನಾಚಾರಿಯ ಅರ್ಧಸತ್ಯ

ಮೊನ್ನಾಚಾರಿಯನ್ನು ನಿಮಗೆ ಪರಿಚಯಿಸಬೇಕು ಎಂದುಕೊಂಡು ಒಂದು ದಶಕವೇ ಕಳೆದುಹೋಯಿತು. ನನ್ನೆದೆಯ ಕವಾಟದಲ್ಲಿ ಗೂಡುಕಟ್ಟಿಕೊಂಡು ಹುರುಸಾನಹಕ್ಕಿಯ ಹಾಗೆ ಗುಟುರು ಗುಟುರು ಕೂಗುತ್ತ, ನನ್ನ ಮರೆಯಬೇಡ ಎಂದು ಆಗಾಗ ಎಚ್ಚರಿಸುತ್ತಲೇ ಇದ್ದ ಆತ. ಹೊಳೆಸಾಲಿನ ಹತ್ತೂರಲ್ಲಿ ಮೊನ್ನಾಚಾರಿಯ ಕಸಬುದಾರಿಕೆಗೆ ಯಾರೂ ಸಾಟಿಯೇ ಇರಲಿಲ್ಲ. ಅವನಿಂದ ಕೆಲಸ ಮಾಡಿಸಿಕೊಳ್ಳಲು ಆಜುಬಾಜಿನ ಊರಿನವರೂ ಅವನಲ್ಲಿಗೆ ಬರುತ್ತಿದ್ದರು. ನಮ್ಮೂರಲ್ಲಿ ನಾಲ್ಕು ಕೇರಿಯ ಜನರಿಗೆ ಸಮಾನ ದೂರ ಇರುವ ಹಾಗೆ ಗುಡ್ಡದ ಬದಿಯಲ್ಲಿ ಮೊನ್ನಾಚಾರಿ ತನ್ನ ಸಾಲೆಯನ್ನು ತೆರೆದಿದ್ದ. ಅವನೊಬ್ಬನೇ ಅಲ್ಲಿ ಇರುತ್ತಿದ್ದುದು. ಅವನ ಸೋದರ...

ಕಾಲ ಬದ್ಲಾಯಿತು ಎಂದು ಊರು ಬಿಟ್ಟ ಕಲಾಯಿ ಸಾಬಿ

ಕತೆಯನ್ನು ಹುಡುಕುತ್ತಿದ್ದವರಿಗೆ ಅದು ನಮ್ಮ ಪಕ್ಕದಲ್ಲಿಯೇ ಹರಿದಾಡುತ್ತಿದ್ದರೂ ಒಮ್ಮೊಮ್ಮೆ ಗೊತ್ತೇ ಆಗುವುದಿಲ್ಲ. ಕತೆ ಕಣ್ಣಿಗೆ ಬೀಳುವುದಿಲ್ಲ. ನನಗೂ ಒಮ್ಮೆ ಹೀಗೇ ಆಗಿತ್ತು. ನಾನು ಸಣ್ಣವನಿದ್ದಾಗ ನಮ್ಮೂರಿಗೆ ಪಾತ್ರೆಗಳನ್ನು ದುರಸ್ತಿ ಮಾಡುವ ಸಾಬಿ ಒಬ್ಬ ಬರುತ್ತಿದ್ದ. ಕಲಾಯಿ ಸಾಬಿ ಎಂದು ಅವನನ್ನು ಕರೆಯುತ್ತಿದ್ದರು. ಅವರಿಗೆ ಕಾಯಂ ವಿಳಾಸ ಎಂಬುದು ಇರುತ್ತಿರಲಿಲ್ಲ. ಸಾಬಿ ಹೋದಲ್ಲೇ ಊರು ಎಂಬಂತೆ ಒಂದಲ್ಲ ಒಂದು ಊರಿಗೆ ತಮ್ಮ ಟಂಬು ಬದಲಾಯಿಸುತ್ತಲೇ ಇರುತ್ತಿದ್ದ. ನಿಮ್ಮ ಮನೆಯಲ್ಲಿ ಮೂರ್ನಾಲ್ಕು ದಿನಗಳ ಕೆಲಸ ಇದೆ ಎಂದಾದರೆ ನಿಮ್ಮ ಮನೆಯಲ್ಲಿಯೇ...

ಹರಿವ ಹೊಳೆಯಲ್ಲಿನ ಪಿಸುಮಾತು ಆತ್ಮವನ್ನು ಸೀಳಿಕೊಂಡು ಬರುವ ದನಿ

ಸೃಜನಶೀಲ ಮನಸ್ಸು ಸದಾ ವಸ್ತುವಿನ ಹುಡುಕಾಟದಲ್ಲಿರುತ್ತದೆ. ಬರೆಹಗಾರನೊಬ್ಬ ತನ್ನ ತುಡಿತದೊಂದಿಗೆ ಸದಾ ಧ್ಯಾನದಲ್ಲಿರುತ್ತಾನೆ. ಸಖ ಸಖಿಗಾಗಿ ಕಾಯುವಂತೆ, ಕೊಟ್ಟಿಗೆಯಲ್ಲಿರುವ ಕರು ಮೇಯಲು ಹೋದ ತನ್ನ ತಾಯಿ ಯಾವಾಗ ಮರಳುವುದೋ ಎಂಬ ಕಾತರದಿಂದ ಕೂಡಿರುವಂತೆ. ಸಖಿ ಎದುರಾದಾಗ ಸಖ ಅವಳನ್ನು ಮತ್ತೆಂದೂ ತಪ್ಪಿಸಿಕೊಂಡು ಹೋಗದಂತೆ ಬಿಗಿದಪ್ಪಿಕೊಳ್ಳುತ್ತಾನೆ. ಮೇಯಲು ಹೋದ ಹಸು ಮರಳಿದಾಗ ಕರು ಕೆಚ್ಚಲಿಗೆ ಬಾಯಿಕ್ಕಿ ಒಂದೂ ಹನಿ ಉಳಿಯದಂತೆ ಹಾಲನ್ನು ಹೀರಿಬಿಡುತ್ತದೆ. ನಾನೂ ಹೀಗೇ ನನ್ನ ಕತೆಯ ಹುಡುಕಾಟದಲ್ಲಿ ಎಲ್ಲೆಲ್ಲೋ ಅಲೆದಿದ್ದೇನೆ. ಯಾವುದು ಬದುಕು, ಯಾವುದು ಕತೆ,...