ಗುಡಿಗಾರ ನೀಲಿ

ಗುಡಿಗಾರರು ಕರಾವಳಿ ಮತ್ತು ಮಲೆನಾಡು ಭಾಗದಲ್ಲಿರುವ ಕುಶಲಕರ್ಮಿಗಳು. ಕಟ್ಟಿಗೆಯಲ್ಲಿ ಕುಸುರಿಕಲೆಯನ್ನು ಅರಳಿಸುವುದರಲ್ಲಿ ಅವರು ಎತ್ತಿದ ಕೈ. ಗುಡಿಗಾರರ ಶ್ರೀಗಂಧದ ಕೆತ್ತನೆ ದೇಶ ವಿದೇಶಗಳಲ್ಲಿಯೂ ಪ್ರಸಿದ್ಧವಾದದ್ದು. ಗಣೇಶನ ಹಬ್ಬದ ಸಮಯದಲ್ಲಿ ಅವರು ಗಣೇಶನ ಮಣ್ಣಿನ ಮೂರ್ತಿಗಳನ್ನೂ ಮಾಡುತ್ತಾರೆ. ಎಲ್ಲೆಡೆ ಈಗ ಗಣೇಶನ ಅಚ್ಚುಗಳು ಸಿದ್ಧವಾಗಿ ಗಣೇಶನ ಮೂರ್ತಿ ತಯಾರಿಸುವುದು ಸುಲಭ ಎನ್ನುವಂತಾಗಿದೆ. ಆದರೆ ಈ ಗುಡಿಗಾರರು ಯಾವುದೇ ಅಚ್ಚನ್ನು ಬಳಸದೆಯೇ ವೈವಿಧ್ಯಮಯ ಮೂರ್ತಿಗಳನ್ನು ಮಾಡುವುದರಲ್ಲಿ ಪ್ರಖ್ಯಾತರು. ಇಂಥ ಗುಡಿಗಾರರು ಗಣೇಶನ ಮೂರ್ತಿಗೆ ಬಣ್ಣ ಬಳಿಯುವಾಗ ಆ ಬಣ್ಣ ಸರಿಯಾಗಿ...