ಕತೆ

ತೀರ್ಪು

ಭಾಗ 1.ಬೆಡಗು ಅವಳು ಸತ್ತಳಂತೆ' ಅವ್ವ ಹೇಳಿದಳು. ನನಗೇ ಹೇಳಿದಳು ಅಂದುಕೊಂಡೆ ನಾನು. ಮತ್ತೆ ಮತ್ತೆ ಅದನ್ನೇ ಅವ್ವ ಪುನರಾವರ್ತಿಸಿದಾಗ ನನಗೆ ಅನುಮಾನ. ಅವಳು ಹೇಳಿದ್ದು ನನಗಲ್ಲ. ತನಗೆ ತಾನೇ ಹೇಳಿಕೊಳ್ಳುತ್ತಿದ್ದಾಳೆ ಎನ್ನುವುದು ನನಗೆ ಖಾತ್ರಿಯಾಯಿತು. ಧ್ವನಿಯಲ್ಲಿ ದುಃಖವಿತ್ತೆ, ಎಲ್ಲವೂ ಸರಿಹೋಯಿತು ಎಂಬ ಸಮಾಧಾನವಿತ್ತೆ ಒಂದೂ ಗೊತ್ತಾಗದೆ ತಬ್ಬಿಬ್ಬಾದೆ. ಅವ್ವ, ಸತ್ತದ್ದು ಯಾರು?’ ಎಂದು ಪ್ರಶ್ನಿಸಿದೆ. ನನ್ನ ಪ್ರಶ್ನೆ ಅವ್ವನ ಕಿವಿಯ ಮೇಲೆ ಬಿದ್ದಂತೆ ನನಗೆ ತೋರಲಿಲ್ಲ. ಅವಳು ತನ್ನದೇ ಲೋಕದಲ್ಲಿ ಗರ್ಕಾಗಿದ್ದಳು. ಮೆರೆಯವುದಕ್ಕೂ ಒಂದು ಲೆಕ್ಕ...

ಹೊದಿಕೆಯ ಹನುಮಯ್ಯನ ವಿಚಿತ್ರ ಸಾವು

ಹಿಂದೆಲ್ಲ ಹೊಳೆಸಾಲಿನಲ್ಲಿ ಹೆಂಚಿನ ಮನೆಗಳು ಅಪರೂಪ. ಒಂದೂರಿನಲ್ಲಿ ಹೆಂಚಿನ ಮನೆಗಳು ಎಷ್ಟು ಎಂದು ಕೇಳಿದರೆ ಕೈಬೆರಳಿನಲ್ಲಿ ಎಣಿಕೆ ಮಾಡಿ ಹೇಳಬಹುದಾಗಿತ್ತು. ಕಾಸರಕೋಡು, ಮಾವಿನಕುರ್ವೆಗಳಲ್ಲಿ ಹೆಂಚಿನ ಕಾರ್ಖಾನೆಗಳಿದ್ದರೂ ಮಚ್ವೆಯಲ್ಲಿ ತಂದ ಮಂಗಳೂರು ಹೆಂಚಿನ ಮನೆಯೇ ಶ್ರೇಷ್ಠ ಎಂಬ ನಂಬಿಕೆಯೂ ಇತ್ತು. ಅಂಥ ಒಂದೆರಡು ಮನೆಗಳೂ ಹೊಳೆಸಾಲಿನಲ್ಲಿದ್ದವು. ಅದು ಬಿಟ್ಟರೆ ಉಳಿದವು ಹೊದಿಕೆಯ ಮನೆಗಳಾಗಿದ್ದವು. ಹೊದಿಕೆಯ ಮನೆಗಳೆಂದರೆ ತೆಂಗಿನ ಮಡ್ಲು ನೇಯ್ದು ಮಾಡಿದ ತಡಿಕೆಯನ್ನು ಹೊದಿಸಿದ್ದು, ಕಬ್ಬಿನ ಗರಿಗಳನ್ನು ಹೊದೆಸಿದ್ದು, ಅಡಕೆ ಮರದ ಸೋಗೆಯನ್ನು ಹೊದೆಸಿದ್ದು, ತಾಳೆ ಮರದ ಗರಿಯನ್ನು...

ಕಾಲುಬಂದ ಕುರುವ ಮತ್ತು ಇತರ ಕತೆಗಳು

ಕಾಲುಬಂದ ಕುರುವ ಕಥಾಸಂಕಲನ ಇದರಲ್ಲಿ 10 ಕತೆಗಳು ಇವೆ. ಬೆಂಗಳೂರಿನ ಶ್ರೀನಿವಾಸ ಪುಸ್ತಕ ಪ್ರಕಾಶನ ಇದನ್ನು 2011ರಲ್ಲಿ ಪ್ರಕಟಿಸಿತು. 1.ಚಂಪಾಲು ಸೆಟ್ಟಿಯೂ ಲಕುಮವ್ವಿಯೂ 2.ಬೆಟ್ಟದ ನೆಲ್ಲಿಕಾಯ ಸಮುದ್ರದೊಳಗಣ ಉಪ್ಪು 3.ಕುನ್ನಿಯೊಂದು ದಾಸನಾಗಿ ಸತ್ತುದರ ವಿವರಗಳು 4.ಗೋಕರ್ಣದಲ್ಲಿ ಹೀಗೊಂದು ಲಿಂಗಪೂಜೆ 5.ಕಾಲುಬಂದ ಕುರುವ 6.ಸಂಕರ 7.ವಿಲೋಮ 8.ಪತ್ತೆ 9.ಕ್ಷೇತ್ರೋತ್ಸವ 10.ನಿರಾಕರಣ ನನ್ನ ಬಗೆಗೆ ನಾನು ನಾನು ಒಬ್ಬ ಬರೆಹಗಾರ ಆಗುವ ಪೂರ್ವದಲ್ಲಿ ನಾನೊಬ್ಬ ಒಳ್ಳೆಯ ಓದುಗ ಆಗಿದ್ದೆ. ಈಗಲೂ ಒಳ್ಳೆಯ ಗ್ರಂಥಗಳನ್ನು ಓದಬೇಕು ಎಂಬ ಆಸೆಯನ್ನು ಇಟ್ಟುಕೊಂಡಿದ್ದೇನೆ. ಹೊನ್ನಾವರ...

ಸ್ವಪ್ನವಾಸ್ತವ

ನನಗೆ ಅರ್ಥವಾಗದ ಅದೆಷ್ಟೋ ಸಂಗತಿಗಳು ಈ ಜಗತ್ತಿನಲ್ಲಿ ಇವೆ ಎಂಬುದು ನನಗೆ ಅರ್ಥವಾಗಿದ್ದು ಅವತ್ತೇ, ಅದೇಕ್ಷಣದಲ್ಲಿ. ಅದು ಅರಿವಾದೊಡನೆಯೇ ನನ್ನ ಬಗೆಗೇ ನನಗೆ ಕ್ಷುಲ್ಲಕ ಅನ್ನಿಸಿಬಿಟ್ಟಿತು. ಬಾವಿಯೊಳಗಿನ ಕಪ್ಪೆಯಂತೆ ಬದುಕಿದ್ದೆನಲ್ಲ ಇಷ್ಟು ದಿನ ಅನ್ನಿಸಿತು. ಮೆಲ್ಲನೆ ಅತ್ತ ಇತ್ತ ಕಣ್ಣು ಹೊರಳಿಸಿದೆ. ನಿಜಕ್ಕೂ ಆ ಕ್ಷಣದಲ್ಲಿ ನಿನ್ನ ನೆನಪು ಬಂದುಬಿಟ್ಟಿತು. ಇದೀಗ ನೀನು ನನ್ನ ಜೊತೆಯಲ್ಲಿ ಇದ್ದಿದ್ದರೆ.. ನಿನ್ನ ಕೋಮಲ ಕೈ ಬೆರಳುಗಳು ನನ್ನ ಭುಜವನ್ನು ಮೆಲ್ಲಾತಿಮೆಲ್ಲನೆ ಅದುಮದೆ ಇರುತ್ತಿರಲಿಲ್ಲ. ಭರವಸೆಯ ಬೆಳಕಿನ ಕಿಡಿ ನಿನ್ನ ಕಣ್ಣಿಂದ...

ಹೆಸರಿಲ್ಲದವನು ಹೆಸರುವಾಸಿಯಾಗಿದ್ದು

ಅವನು ಮೈತುಂಬಿಕೊಂಡ ನಾಗಬೆತ್ತದ ಹಾಗೆ ಇದ್ದ. ತುಂಬ ಸಣಕಲು. ನೆಟ್ಟಗೆ ಅಂದರೆ ನೆಟ್ಟಗೆ ನಿಲವು. ನಾಗಬೆತ್ತದ ಮೇಲಿನ ಕಪ್ಪು ಬಳೆಗಳಂತೆ ಅವನ ಪಕ್ಕೆಲಬುಗಳೆಲ್ಲವೂ ಕಾಣಿಸುತ್ತಿದ್ದವು. ಕೆಂಪಗಿನ ದಪ್ಪಗಿರುವ ಒಂದು ದಾರವನ್ನು ಉಡಿದಾರ ಮಾಡಿಕೊಂಡಿದ್ದ. ಆರು ಮೊಳದ ಮಗ್ಗದ ಪಂಚೆಯ ಒಂದು ತುದಿಯನ್ನು ಕಚ್ಚೆಯಾಗಿ ಹಿಂಬದಿಗೆ ಸಿಕ್ಕಿಸಿಕೊಂಡು ಅದರ ಉಳಿದ ಭಾಗವನ್ನು ಲುಂಗಿಯಂತೆ ಅಡ್ಡ ಸುತ್ತಿಕೊಳ್ಳುತ್ತಿದ್ದ. ಅದು ಬಿಟ್ಟರೆ ಮೈಯೆಲ್ಲ ಬೋಳು ಬೋಳು. ಸೊಂಟಕ್ಕೆ ಕತ್ತಿ ಸಿಕ್ಕಿಸಿಕೊಳ್ಳುವ ಒಂದು ಕೊಕ್ಕೆಯನ್ನು ಕಟ್ಟಿಕೊಳ್ಳುತ್ತಿದ್ದ. ಆದರೆ ಮನೆಯಿಂದ ಅವನು ಕತ್ತಿಯನ್ನು ತರುತ್ತಿರಲಿಲ್ಲ....

ನೇಮೋಲಂಘನ

ನೇಮಯ್ಯನದು ಇದು ಮರುಹುಟ್ಟು ಎಂದು ಹೊಳೆಸಾಲಿನವರು ಮಾತನಾಡಿಕೊಳ್ಳುತ್ತಾರೆ. ತನ್ನ ಬಗ್ಗೆ ಈ ಜನ ಹೀಗೆಲ್ಲ ಮಾತನಾಡುತ್ತಾರೆ ಎಂಬುದು ಸ್ವತಃ ನೇಮಯ್ಯನಿಗೇ ಗೊತ್ತಿರಲಿಲ್ಲ. ಈ ನೇಮಯ್ಯನನ್ನು ಒಂದು ಪದದಲ್ಲಿ ಹೇಳಬೇಕೆಂದರೆ ಅದು ಸಾಧ್ಯವೇ ಇಲ್ಲ. ವೃತ್ತಿಯಿಂದ ಹೇಳೋಣವೆ? ಒಂದೆಕರೆಯಷ್ಟು ಬಾಗಾಯ್ತ ಇತ್ತು. ಹೀಗಾಗಿ ಅವನನ್ನು ರೈತ ಎನ್ನಬಹುದೆ? ಊರಲ್ಲಿಯ ಮಾಸ್ತಿಮನೆಯ ಪೂಜೆಯನ್ನು ಅವನೇ ಮಾಡಿಕೊಂಡು ಬಂದಿದ್ದ. ಅಂದರೆ ಅವನನ್ನು ಪೂಜಾರಿ ಎನ್ನಬಹುದೆ? ಊರಲ್ಲಿಯ ಮಕ್ಕಳಿಗೆ ಮುದುಕರಿಗೆ ದೆವ್ವದ ಕಾಟ ಇದೆ ಎಂದು ಯಾರಾದರೂ ಅವನ ಬಳಿಗೆ ಬಂದರೆ ಅವನು...

ಸೇತು

ಕರಾವಳಿಯ ಹೊಳೆಸಾಲಿನಲ್ಲಾದರೆ ಸೆಪ್ಟೆಂಬರ್ ಕೊನೆಯೆಂದರೆ ಗೊರಬು, ಕಂಬಳಿಯನ್ನೆಲ್ಲ ಹೊಗೆ ಅಟ್ಟಕ್ಕೆ ಸೇರಿಸುವ ಸಮಯ. ಆಕಾಶಕ್ಕೇ ತೂತುಬಿದ್ದಂತೆ ಹೊಯ್ಯುವ ಮಳೆ ಆಗಂತೂ ಇರುವುದೇ ಇಲ್ಲ. ಬಂದರೆ ಬಂತು ಹೊದರೆ ಹೋಯ್ತು ಎನ್ನುವಂತೆ ಆಗೊಮ್ಮೆ ಈಗೊಮ್ಮೆ ಒಂದೆರಡು ಜುಮುರು ಮಳೆ ಬಂದು ಹೋಗಿಬಿಡುತ್ತದೆ. ಅದೇ ಬೆಂಗಳೂರಿನಲ್ಲಿ ಮಾತ್ರ ಎಲ್ಲ ಉಲ್ಟಾಪಲ್ಟಾ. ಸೆಪ್ಟೆಂಬರ್ ತಿಂಗಳಲ್ಲೇ ಜೋರು ಮಳೆ. ಮೂರು ದಿನ ರಾತ್ರಿ ಮಳೆ ಸುರಿುತೆಂದರೆ ಎಲ್ಲೆಲ್ಲಿ ತಗ್ಗು ಪ್ರದೇಶಗಳಿವೆಯೋ ಅಲ್ಲೆಲ್ಲ ನೀರು ನಿಂತು ಬಿಡುತ್ತಬೆ. ಪೂರ್ವಯೋಜಿತವಲ್ಲದ ಹೊಸಹೊಸ ಬಡಾವಣೆಗಳು ಈ ಬೆಂಗಳೂರಿನಲ್ಲಿ...

ನಾಗಪ್ಪಯ್ಯನ ಗರ್ವಭಂಗ

ಹೊಳೆಸಾಲಿನವರಿಗೆ ನಮ್ಮೂರಿನ ನಾಗಪ್ಪಯ್ಯನವರ ಪರಿಚಯ ಇಲ್ಲದೇ ಇಲ್ಲ. ಸ್ವಾತಂತ್ರ್ಯ ಬರುವುದಕ್ಕೆ ಪೂರ್ವದಲ್ಲಿಯೇ ಅವರು ಮೂಲ್ಕಿ ಪರೀಕ್ಷೆಗೆ ಕಟ್ಟಿದ್ದವರಂತೆ. ಆದರೆ ಪಾಸಾಗಿರಲಿಲ್ಲ. ಅವರು ಮನಸ್ಸು ಮಾಡಿದ್ದರೆ ಸರ್ಕಾರಿ ನೌಕರಿಯನ್ನು ಪಡೆಯಬಹುದಿತ್ತು. ಆದರೆ ಏಕೋ ಏನೋ ಅವರು ಸರ್ಕಾರಿ ನೌಕರಿಗೆ ಹೋಗಲಿಲ್ಲ. ನಮ್ಮೂರಿನ ಅಕ್ಷರ ಬಲ್ಲ ಕೆಲವೇ ಕೆಲವು ಜನರಲ್ಲಿ ನಾಗಪ್ಪಯ್ಯ ಪ್ರಮುಖರಾಗಿದ್ದರು. ನಮ್ಮೂರಿಗೆ ಬರುವ ಶಾಲೆಯ ಮೇಸ್ಟ್ರು, ಕಂದಾಯ ಇಲಾಖೆಯ ಶಾನುಭೋಗರನ್ನು ಬಿಟ್ಟರೆ ಹೆಚ್ಚು ಕಾಯಿದೆ ಜ್ಞಾನ ನಾಗಪ್ಪಯ್ಯನವರಲ್ಲಿತ್ತು. ಊರ ಜನರು ತಮಗೆ ಸರ್ಕಾರದಿಂದ ಏನಾದರೂ ಕೆಲಸವಾಗಬೇಕಿದ್ದರೆ ಅದಕ್ಕೆ...

ಮೊನ್ನಾಚಾರಿಯ ಅರ್ಧಸತ್ಯ

ಮೊನ್ನಾಚಾರಿಯನ್ನು ನಿಮಗೆ ಪರಿಚಯಿಸಬೇಕು ಎಂದುಕೊಂಡು ಒಂದು ದಶಕವೇ ಕಳೆದುಹೋಯಿತು. ನನ್ನೆದೆಯ ಕವಾಟದಲ್ಲಿ ಗೂಡುಕಟ್ಟಿಕೊಂಡು ಹುರುಸಾನಹಕ್ಕಿಯ ಹಾಗೆ ಗುಟುರು ಗುಟುರು ಕೂಗುತ್ತ, ನನ್ನ ಮರೆಯಬೇಡ ಎಂದು ಆಗಾಗ ಎಚ್ಚರಿಸುತ್ತಲೇ ಇದ್ದ ಆತ. ಹೊಳೆಸಾಲಿನ ಹತ್ತೂರಲ್ಲಿ ಮೊನ್ನಾಚಾರಿಯ ಕಸಬುದಾರಿಕೆಗೆ ಯಾರೂ ಸಾಟಿಯೇ ಇರಲಿಲ್ಲ. ಅವನಿಂದ ಕೆಲಸ ಮಾಡಿಸಿಕೊಳ್ಳಲು ಆಜುಬಾಜಿನ ಊರಿನವರೂ ಅವನಲ್ಲಿಗೆ ಬರುತ್ತಿದ್ದರು. ನಮ್ಮೂರಲ್ಲಿ ನಾಲ್ಕು ಕೇರಿಯ ಜನರಿಗೆ ಸಮಾನ ದೂರ ಇರುವ ಹಾಗೆ ಗುಡ್ಡದ ಬದಿಯಲ್ಲಿ ಮೊನ್ನಾಚಾರಿ ತನ್ನ ಸಾಲೆಯನ್ನು ತೆರೆದಿದ್ದ. ಅವನೊಬ್ಬನೇ ಅಲ್ಲಿ ಇರುತ್ತಿದ್ದುದು. ಅವನ ಸೋದರ...

ಕುರುಡು ನಾಗಪ್ಪನ ಲೀಲೆಗಳು

ತಮ್ಮದೆನ್ನುವ ಊರು ಬಿಟ್ಟ ನನ್ನಂಥವರಿಗೆ ಊರ ದಾರಿ ಬಹು ದೂರ ಮತ್ತು ಅಷ್ಟೇ ಹತ್ತಿರ ಕೂಡ. ದೂರ ಏಕೆಂದರೆ ನಾವು ಊರಿಗೆ ಹೋಗುವುದೇ ಅಪರೂಪವಾಗಿರುತ್ತದೆ. ಹೋಗಬೇಕು ಅಂದುಕೊಂಡಾಗಲೆಲ್ಲ ಏನೇನೋ ಅಡಚಣೆಗಳು ಎದುರಾಗಿ ಪ್ರಯಾಣ ಮುಂದಕ್ಕೆ ಹೋಗುತ್ತಲೇ ಇರುತ್ತದೆ. ಹತ್ತಿರ ಏಕೆಂದರೆ ಅನಕ್ಷಣವೂ ನಾವು ನಮ್ಮೂರನ್ನು ನೆನಪಿಸಿಕೊಳ್ಳುತ್ತಲೇ ಇರುತ್ತೇವೆ. ನಮ್ಮ ಹೃದಯದ ಚಿಪ್ಪಿನಲ್ಲಿ ಅಡುಗಾಗಿ ವಾಸನೆಯಾಡುತ್ತಲೇ ಇರುತ್ತದೆ ನಮ್ಮೂರು. ನಮ್ಮ ಮಾತಿನಲ್ಲಿ, ಅಷ್ಟೇಕೆ ನಮ್ಮ ಇರುವಿಕೆಯಲ್ಲಿಯೇ ನಮ್ಮ ಎದುರಿನವರಿಗೆ ನಮ್ಮೂರು ಪ್ರತಿಫಲಿಸುತ್ತಿರುತ್ತದೆ. ಪ್ರತಿ ಬಾರಿ ಊರಿಗೆ ಹೋಗುವಾಗಲೂ ಒಂದು...