ಹಂಸ ಕ್ಷೀರ ನ್ಯಾಯ

*ಕೆಡುಕನ್ನು ಬಿಟ್ಟು ಕೇವಲ ಒಳಿತನ್ನು ಮಾತ್ರ ಸ್ವೀಕರಿಸುವುದು ಹಂಸವನ್ನು ನಿರ್ಮಲತೆಗೆ ಸಂಕೇತವಾಗಿ ಬಳಸುತ್ತಾರೆ. ಬೆಳ್ಳಗಿರುವ ಹಂಸ ಪರಿಶುಭ್ರವಾಗಿರುತ್ತದೆ. ಕಪಟ, ಕಲ್ಮಷ ಇಲ್ಲದವರು ಎಂದು ಹೇಳಬೇಕೆಂದರೆ ಹಂಸದಂತೆ ಅವರು ಎಂದು ಹೇಳುವುದಿದೆ. ಹೇಗೆ ಹಂಸವು ಶುಭ್ರವೋ ಅದು ಸೇವಿಸುವ ಆಹಾರವೂ ಶುಭ್ರವೇ. ಬೆಳ್ಳಗಿರುವ ಹಂಸ ಶುಭ್ರತೆಯ ಇನ್ನೊಂದು ಪ್ರಮಾಣವಾದ ಹಾಲನ್ನು ಕುಡಿಯುತ್ತದೆ ಎನ್ನುವ ಪ್ರತೀತಿ ಇದೆ. ಹಂಸ ಪಕ್ಷಿಯು ನೀರು ಬೆರೆಸಿದ ಹಾಲನ್ನು ಅದಕ್ಕೆ ನೀಡಿದರೂ ಅದು ಹಾಲನ್ನಷ್ಟೇ ಬೇರೆ ಮಾಡಿ ಕುಡಿದು ನೀರನ್ನು ಉಗುಳುತ್ತದೆಯಂತೆ. ನೀರು ಬೆರೆಸಿದ...

ಹಂಸಗೀತೆ

*ಸಾಯುವಾಗ ಮಾತ್ರ ಶ್ರೇಷ್ಠತೆ ಹೊರಬೀಳುತ್ತದೆ ಹಂಸ ತುಂಬ ಸುಂದರವಾದ ಪಕ್ಷಿ. ಪರಿಶುದ್ಧತೆಯ ಸಂಕೇತ ಅದು. ಹಾಲಿನಿಂದ ನೀರನ್ನು ಬೇರ್ಪಡಿಸಿ ಅದು ಕುಡಿಯುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ. ಹಂಸಕ್ಕೆ ಸಂಬಂಧಿಸಿದ ಇನ್ನೊಂದು ನಂಬಿಕೆ, ಅದು ಸಾಯುವಾಗ ಅತ್ಯಂತ ಮಧುರವಾಗಿ ಹೃದಯಂಗಮವಾಗಿ ಹಾಡುತ್ತದೆಯಂತೆ. ಹಾಗೆ ಹಾಡುತ್ತ ಹಾಡುತ್ತ ಅದು ಸತ್ತುಹೋಗುವುದಂತೆ. ಭಾರತೀಯ ಸಾಹಿತ್ಯದಲ್ಲಿ ಇದನ್ನು ಉಪಮೆಯ ರೀತಿಯಲ್ಲೋ ದೃಷ್ಟಾಂತದ ರೀತಿಯಲ್ಲೋ ಬಳಸಿಕೊಂಡಿದ್ದಾರೆ. ಅದೇ ಪಾಶ್ಚಾತ್ಯ ಸಾಹಿತ್ಯದಲ್ಲೂ ಇದು ಸ್ವಾನ್‌ ಸಾಂಗ್‌ ಎಂದು ಬಳಕೆಯಾಗಿದೆ. ಷೇಕ್ಸ್‌ಪಿಯರ್‌ನ ಮರ್ಚೆಂಟ್‌ ಆಫ್‌ ವೆನಿಸ್‌ನಲ್ಲಿ ಇದರ...

ಹೋದಪುಟ್ಟ ಬಂದ ಪುಟ್ಟ

*ಸ್ವಂತ ಬುದ್ಧಿ ಬಳಸದ ಕೆಲಸಗಾರ ಒಂದೂರಿನಲ್ಲಿ ಪುಟ್ಟ ಎಂಬ ಹೆಸರಿನವನಿದ್ದ. ಸ್ವಲ್ಪ ಆತುರ ಸ್ವಭಾವದವನು. ಹೇಳಿದ್ದಷ್ಟೇ ಮಾಡುವವನು. ಸ್ವಂತ ಬುದ್ಧಿ ಉಪಯೋಗಿಸುವವನಲ್ಲ. ರಾತ್ರಿ ಮನೆಯಲ್ಲಿ ಏನೋ ಗಹನವಾದ ವಿಚಾರ ಮಾತನಾಡುತ್ತಿದ್ದರು. ಮಾತಿನ ನಡುವೆ ಬೆಳಿಗ್ಗೆ ಪುಟ್ಟನನ್ನು ಪಕ್ಕದೂರಿಗೆ ಕಳುಹಿಸಬೇಕು ಎಂಬ ಮಾತು ಇವನ ಕಿವಿಗೂ ಬಿತ್ತು. ಬೆಳಿಗ್ಗೆ ಎದ್ದು ನೋಡಿದರೆ ಮನೆಯಲ್ಲಿ ಪುಟ್ಟ ಇಲ್ಲ. ಪುಟ್ಟ ಎಲ್ಲಿ ಎಂದು ಹುಡುಕಿಯೇ ಹುಡುಕಿದರು. ಪುಟ್ಟನ ಪತ್ತೆಯೇ ಇಲ್ಲ. ಹೊತ್ತು ಮಾರು ಏರುವ ಹೊತ್ತಿಗೆ ಪುಟ್ಟ ಬೈಸಾರದಿಂದ ಬೆವರು ಒರೆಸಿಕೊಳ್ಳುತ್ತ...

ಹೊನ್ನಶೂಲ

*ಹೊಗಳಿ ಅಟ್ಟಕ್ಕೇರಿಸುವುದು ಹೊಗಳಿದವರೆನ್ನ ಹೊನ್ನಶೂಲದಲ್ಲಿಕ್ಕಿದರು ಎಂದು ಬಸವಣ್ಣನವರು ಹೇಳಿದ್ದು ಹಲವರಿಗೆ ಗೊತ್ತು. ಕೆಲಸವಾಗಬೇಕು ಎಂದರೆ ಹೊಗಳಬೇಕು ಅಥವಾ ಹೊಗಳಿದರಷ್ಟೇ ಕೆಲಸವಾಗುತ್ತದೆ ಎನ್ನುವ ಕಾಲ ಬಂದಿದೆ. ಇಂಥ ಸಂದರ್ಭದಲ್ಲಿ ಅಪಾತ್ರರಿಗೂ ಹೊಗಳಿಕೆ ಸಂದಾಯವಾಗುತ್ತದೆ. ಅನೇಕರಿಗೆ ತಮ್ಮನ್ನು ಏಕೆ ಹೊಗಳುತ್ತಿದ್ದಾರೆ ಎನ್ನುವುದು ಗೊತ್ತಾಗುವುದಿಲ್ಲ. ಹೊಗಳಿದಾಗ ಉಬ್ಬಿಬಿಡುತ್ತಾರೆ. ಅಲ್ಲಿಗೆ ಹೊಗಳಿದವರ ಉದ್ದೇಶ ಈಡೇರಿದಂತೆ. ತಮ್ಮನ್ನು ಹೊಗಳಿದಾಗ ಆ ಹೊಗಳಿಕೆಗೆ ಅರ್ಹರಾದವರೆ ತಾವು ಎಂಬ ಆತ್ಮವಿಮರ್ಶೆಯಲ್ಲಿ ಕೆಲವರು ತೊಡಗುತ್ತಾರೆ. ಅದಕ್ಕೆ ತಾವು ಅರ್ಹರು ಎಂದು ಅನ್ನಿಸಿದರೆ ಸಂಭ್ರಮಪಡುತ್ತಾರೆ. ಇಲ್ಲದಿದ್ದರೆ ಅಪಮಾನ ಹೊಂದಿದವರಂತೆ ಕುಗ್ಗುತ್ತಾರೆ....

ಹಾವೇರಿ ನ್ಯಾಯ

*ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಮಾತು ಹೋಗಯ್ಯ ಹೋಗ್‌, ನಿಂದೊಳ್ಳೆ ಹಾವೇರಿ ನ್ಯಾಯ ಆಯ್ತಲ್ಲ ಎಂದು ಮಾತಿನ ನಡುವೆ ಹೇಳಿಬಿಡುತ್ತೇವೆ. ಹಾವೇರಿ ನ್ಯಾಯ ಎಂದರೇನು ಎಂಬುದು ಸ್ವತಃ ಹಾವೇರಿಯವರಿಗೂ ಗೊತ್ತಿಲ್ಲ. ನಿಮ್ಮೂರಿಂದೇ ನ್ಯಾಯ ಇದು. ನಿಮಗೇ ಗೊತ್ತಿಲ್ಲಂದ್ರ ಹೆಂಗ್ರಿ ಎಂದು ಕೇಳಿದರೆ ಪೆಚ್ಚಾಗಿ ನಗೆ ಬೀರುತ್ತಾರೆ. ಹಾವೇರಿಗೂ ಹಾವೇರಿ ನ್ಯಾಯಕ್ಕೂ ಎಂಥ ನಂಟು ಎಂಬುದು ಇಂದಿಗೂ ಬಿಡಿಸಲಾಗದ ಒಗಟು. ಅತ್ತ ಕಡೆಯೂ ಅಲ್ಲ, ಇತ್ತ ಕಡೆಯೂ ಇಲ್ಲ ಎಂಬಂತೆ ನ್ಯಾಯ ಹೇಳುವುದು ಹಾವೇರಿ ನ್ಯಾಯ. ಅಡ್ಡ ಗೋಡಯ...

ಹುಲಿಗಾಯ

*ಪರಿಹಾರವೇ ಇಲ್ಲದ ಸಮಸ್ಯೆ ಒಮ್ಮೆ ಕಾಡಿನಲ್ಲಿ ಹುಲಿಗೆ ತೀವ್ರ ಗಾಯವಾಗಿತ್ತಂತೆ. ಕಾಡಿನ ಹುಲಿಗೆ ಔಷಧ ನೀಡುವವರು ಯಾರು? ಹುಲಿಗೆ ಹುಲಿಯೇ ವೈದ್ಯ. ತನ್ನ ಗಾಯವನ್ನು ಮುಚ್ಚಲು ಅದು ತನ್ನದೇ ಶರೀರದ ಇನ್ನೊಂದು ಕಡೆಯ ಚರ್ಮವನ್ನು ಕಿತ್ತು ಮೆತ್ತಿತು. ಹಳೆಯ ಗಾಯ ವಾಸಿಯಾಯಿತು. ಹೊಸ ಗಾಯ ಕೊಳೆಯತೊಡಗಿತು. ಮತ್ತೆ ಇನ್ನೊಂದು ಕಡೆಯ ಚರ್ಮ ಕಿತ್ತು ಅಲ್ಲಿ ತೇಪೆ ಹಾಕಿತು. ಹೀಗೆ ಹುಲಿಯ ದೇಹದಲ್ಲಿ ಗಾಯ ವಾಸಿಯಾಗಲೇ ಇಲ್ಲ. ಜಾಗ ಮಾತ್ರ ಬೇರೆಯಾಗುತ್ತ ಹೋಯಿತು. ಸಮಸ್ಯೆಯ ಸುಳಿಯಲ್ಲಿ ಸಿಕ್ಕ ಮನುಷ್ಯನೂ...

ಹಾವು ಮುಂಗಸಿ

*ಬದ್ಧ ವೈರತ್ವವನ್ನು ಇದು ಹೇಳುತ್ತದೆ ಇಬ್ಬರು ಶತ್ರುಗಳು ಬಹಳ ವೈರಿಗಳು ಎಂದು ಒತ್ತಿ ಹೇಳುವುದಕ್ಕೆ ಅವರಿಬ್ಬರೂ ಹಾವು ಮುಂಗಸಿ ಎಂದು ಹೇಳುವುದನ್ನು ಕೇಳಿದ್ದೇವೆ. ರಾಜಕೀಯದಲ್ಲಿ ಅವರಿಬ್ಬರೂ ಹಾವು ಮುಂಗಸಿ ಎಂದು ಹೇಳುವುದನ್ನು ಕೇಳಿದ್ದೇವೆ. ಇಬ್ಬರ ಹೋರಾಟವನ್ನು ಹೇಳುವಾಗಲೂ ಅವರಿಬ್ರೂ ಹಾವು ಮುಂಗಸಿಯ ಹಾಗೆ ಹೋರಾಡಿದರು ಎಂದು ಹೇಳುತ್ತೇವೆ. ಅಂದರೆ ಜೀವದ ಹಂಗು ತೊರೆದು ಹೋರಾಡಿದರು. ಇಬ್ಬರಲ್ಲಿ ಯಾರಾದರೂ ಒಬ್ಬರು ಸಾಯಬಹುದಿತ್ತು ಎಂಬ ತಾತ್ಪರ್ಯ. ಹಾವು ಮುಂಗಸಿಯ ನಡುವೆ ಅದೇನು ಶತ್ರುತ್ವ? ಇಲ್ಲಿ ಶತ್ರುತ್ವದ ಪ್ರಶ್ನೆ ಇಲ್ಲ. ಮುಂಗಲಿಗಳ...

ಹರಿಶ್ಚಂದ್ರ ಘಾಟ್‌

*ಸತ್ಯಹರಿಶ್ಚಂದ್ರ ಇಲ್ಲಿ ಕಾವಲುಗಾರನಾಗಿದ್ದ ಯಾರ ಮೇಲಾದರೂ ತುಂಬಾ ಕೋಪ ಬಂದಾಗ, ನಿನ್ನ ಹರಿಶ್ಚಂದ್ರ ಘಾಟ್‌ಗೆ ಕಳುಹಿಸುತ್ತೇನೆ ಎಂದು ಹೇಳುವವರಿದ್ದಾರೆ. ಅಂದರೆ ಶ್ಮಶಾನಕ್ಕೆ ಕಳುಹಿಸುತ್ತೇನೆ ಎಂದೇ ಅರ್ಥ. ಎಷ್ಟೋ ಊರುಗಳಲ್ಲಿ ಶ್ಮಶಾನಗಳಿಗೆ ಹರಿಶ್ಚಂದ್ರ ಘಾಟ್‌ ಎಂದು ಫಲಕದಲ್ಲಿ ಬರೆದಿರುವುದನ್ನು ಕಂಡಿದ್ದೇವೆ. ಏನಪ್ಪಾ ಸೈಟುಗೀಟು ಮಾಡಿದ್ಯಾ? ಎಂದು ಪ್ರಶ್ನಿಸಿದರೆ, ಹರಿಶ್ಚಂದ್ರ ಘಾಟ್‌ನಲ್ಲಿ ಆರಡಿ ಮೂರಡಿ ಸೈಟ್‌ ಮಾಡಿದ್ದೀನಿ ಎಂದು ಹೇಳುವವರನ್ನು ಕಂಡಿದ್ದೇವೆ. ಪುಣ್ಯಕ್ಷೇತ್ರ ಕಾಶಿಯಲ್ಲಿ ಅಪರಕರ್ಮವನ್ನು ಮಾಡುವ ಸ್ಥಳಕ್ಕೆ ಹರಿಶ್ಚಂದ್ರ ಘಾಟ್‌ ಎಂದು ಹೇಳುತ್ತಾರೆ. ಕಾಶಿಗೆ ಹತ್ತಿರದವರೆಲ್ಲ ಸತ್ತರೆ ಈ...

ಹನುಮನ ಬಾಲ

*ಜಗ್ಗಿದಷ್ಟೂ ಹಿಗ್ಗುವುದು ಈ ಬಾಲ ಹಿಗ್ಗಿಸಿ ಹಿಗ್ಗಿಸಿ ಬರೆಯುವವರನ್ನು ಕಂಡಾಗ, ತುಂಡಿಲ್ಲದೆ ಮಾತನಾಡುವುದನ್ನು ಕೇಳಿದಾಗ ಅದೇನು ಹನುಮಂತನ ಬಾಲದ ಹಾಗೆ ಬೆಳೆಸುತ್ತಾನಪ್ಪ ಎಂದು ಮೂಗುಮುರಿಯುತ್ತೇವೆ. ಅವನದೇನು ಹರಿಕಥೆ ಮುಗಿಯುವುದೇ ಇಲ್ಲ, ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದೆ ಎಂದು ಉದ್ಗಾರ ತೆಗೆಯುತ್ತೇವೆ. ಏನಿದು ಹನುಮಂತನ ಬಾಲ? ರಾಮನ ಭಂಟ ಹನುಮಂತ ಎಲ್ಲರಿಗೂ ಗೊತ್ತು. ಆದರೆ ಅವನ ಬಾಲದ ಬಗ್ಗೆ ಗೊತ್ತಿದ್ದವರು ವಿರಳ. ಸೀತಾನ್ವೇಷಣೆಗೆ ಹನುಮಂತ ಉಳಿದವರೊಂದಿಗೆ ಹೊರಡುತ್ತಾನೆ. ಹನುಮಂತ ಕಾಮರೂಪಿ. ಅಂದರೆ ಇಷ್ಟಪಟ್ಟ ರೂಪವನ್ನು ಧರಿಸುವ ಸಾಮರ್ಥ್ಯ ಅವನಲ್ಲಿತ್ತು....

ಹಗ್ಗಜಗ್ಗಾಟ

*ಪರಮ ಚೌಕಾಶಿ ಇದು ಅವನೂ ಬಿಡ್ತಾ ಇಲ್ಲ, ಇವನೂ ಬಿಡ್ತಾ ಇಲ್ಲ. ಇಬ್ಬರದೂ ಹಗ್ಗಜಗ್ಗಾಟ ಜೋರಾಗಿ ನಡೆದಿದೆ ಎಂದು ಹೇಳುವುದನ್ನು ಕೇಳಿದ್ದೇವೆ. ವ್ಯವಹಾರದ ಚೌಕಾಶಿಯಲ್ಲೋ ನಿಜವಾದ ಬಲಪ್ರದರ್ಶನದಲ್ಲೋ ಸ್ವಲ್ಪವೂ ಬಿಟ್ಟುಕೊಡದೆ ಜಿದ್ದಿನಿಂದ ವರ್ತಿಸುವುದು ಹಗ್ಗಜಗ್ಗಾಟ. ರಾಜಕೀಯ ಪಕ್ಷಗಳು ಅಧಿಕಾರ ಹಂಚಿಕೆ ಸಂಬಂಧದಲ್ಲಿ ಇಂಥ ಹಗ್ಗಜಗ್ಗಾಟ ನಡೆಸುತ್ತವೆ. ಪರಮಾಣು ಒಪ್ಪಂದದ ವಿಷಯದಲ್ಲಿ ಯು.ಪಿ.ಎ. ಮತ್ತು ಎಡಪಕ್ಷಗಳು ನಡೆಸಿದ ಚೌಕಾಶಿ ಇಂಥ ಹಗ್ಗಜಗ್ಗಾಟಕ್ಕೆ ಉತ್ತಮ ಉದಾಹರಣೆ. ಹಗ್ಗಜಗ್ಗಾಟ ನಿಜವಾಗಿ ಒಂದು ಜನಪದ ಕ್ರೀಡೆ. ಒಂದು ಹಗ್ಗವನ್ನು ಎರಡೂ ಬದಿಯಲ್ಲಿ ಅಷ್ಟಷ್ಟೇ...