ಶೇಕಮಾಮನ ಕನಸು

*ತಳವೇ ಇಲ್ಲದೆ ಗಾಳಿಯಲ್ಲಿ ಗೋಪುರ ಕಟ್ಟುವವರು ನಿರ್ದಿಷ್ಟ ಗುರಿಯಿಲ್ಲದೆ ಹಗಲುಗನಸು ಕಾಣುವವರನ್ನು ಶೇಕಮಾಮನ ಹಾಗೆ ಕನಸು ಕಾಣಬೇಡ ಎಂದು ಎಚ್ಚರಿಸುವ ಹಿರಿಯರು ಕರಾವಳಿ ಭಾಗದಲ್ಲಿದ್ದಾರೆ. ಎಲ್ಲವೂ ದೈವ ಲೀಲೆ, ನಮ್ಮದೇನಿದೆ ಎಂದು ಸ್ವಪ್ರಯತ್ನವನ್ನು ಬಿಟ್ಟುಬಿಡುವವರು, ಎಲ್ಲವನ್ನೂ ಮಾಡಿ ಎಲ್ಲ ಕಡೆಯೂ ಸೋಲನ್ನೇ ಕಂಡವರು ಅದ್ಯಾವುದೋ ಕಾಣದ ಶಕ್ತಿ ಬಂದು ನಮ್ಮನ್ನು ಉದ್ಧಾರ ಮಾಡುತ್ತದೆ ಎಂದುಕೊಳ್ಳುತ್ತಾರೆ. ಇವರೆಲ್ಲ ಈ ಶೇಕಮಾಮನ ಸಂಬಂಧಿಗಳೋ ದಾಯಾದಿಗಳೋ ಆಗಿರುತ್ತಾರೆ. ಒಂದೂರಿನಲ್ಲಿ ಈ ಶೇಕಮಾಮ ಎನ್ನುವವನಿದ್ದನಂತೆ. ಸಂತೆಗೆ ಎಣ್ಣೆಯನ್ನು ಗಡಿಗೆಯಲ್ಲಿ ತುಂಬಿಕೊಂಡು ತಲೆಯ ಮೇಲೆ...

ಶುಕ್ರದೆಸೆ

*ಈ ದೆಸೆ ಬಂದವರಿಗೆ ಬರೀ ಸುಖ ಯಾರಿಗಾದರೂ ಸುಖ ಸಮೃದ್ಧಿ ಅತಿಯಾಗಿ ಬಂದರೆ ಅವರನ್ನು ಕಂಡು ಅವನಿಗೆ ಶುಕ್ರದೆಸೆ ತಿರುಗಿದೆ ಎಂದು ಹೇಳುತ್ತಾರೆ. ಶುಕ್ರ ಭೃಗು ಮುನಿಯ ಪುತ್ರ. ರಾಕ್ಷಸರ ಗುರು. ಗ್ರಹಗಳ ರಾಶಿಯಲ್ಲಿ ಶುಕ್ರನಿಗೂ ಸ್ಥಾನವಿದೆ. ಶುಕ್ರ ಸಂಪತ್ತು, ಸಮೃದ್ಧಿ, ಸಂತಾನದ ಪ್ರತೀಕ. ಯಾರ ರಾಶಿಯಲ್ಲಿ ಶುಕ್ರನ ಬಲ ಇರುತ್ತದೋ ಅವರಿಗೆ ಸಂಪತ್ತು ಸಿದ್ಧಿಸಿರುತ್ತದೆ. ಪ್ರತಿಯೊಬ್ಬರ ಕುಂಡಲಿಯಲ್ಲಿ ಬೇರೆಬೇರೆ ಗ್ರಹಗಳ ದೆಸೆ ನಡೆಯುತ್ತದೆ. ಶುಕ್ರದೆಸೆಯು ಇಪ್ಪತ್ತು ವರ್ಷಗಳ ಕಾಲ ನಡೆಯುವುದು. ಶುಕ್ರ ಇದ್ದ ಅವಧಿಯಲ್ಲಿ ಅವರಿಗೆ...

ಶಿವಪೂಜೆಯಲ್ಲಿ ಕರಡಿಗೆ ಬಿಟ್ಟಹಾಗೆ

*ಶಿವಪೂಜೆಯಲ್ಲಿ ಕರಡಿ ಬಂದ ಹಾಗೆ ಅನ್ನುವುದು ತಪ್ಪು ಶಿವಪೂಜೆಯನ್ನು ಎರಡು ರೀತಿಯಲ್ಲಿ ಮಾಡುತ್ತಾರೆ. ಒಂದು ಸ್ಥಾವರ ಲಿಂಗ ಪೂಜೆ, ಇನ್ನೊಂದು ಇಷ್ಟಲಿಂಗ ಪೂಜೆ. ಇಷ್ಟಲಿಂಗ ಪೂಜೆಯನ್ನು ವೀರಶೈವರು ರೂಢಿಗೆ ತಂದರು. ಅವರಲ್ಲಿ ಲಿಂಗದೀಕ್ಷೆ ಕೊಡುತ್ತಾರೆ. ಲಿಂಗಧಾರಣೆ ಮಾಡಿದ ವ್ಯಕ್ತಿಯ ಕೊರಳಲ್ಲಿ ಒಂದು ಕರಡಿಗೆಯಲ್ಲಿ ಇಷ್ಟಲಿಂಗವು ಇರುತ್ತದೆ. ಪೂಜೆಯ ವೇಳೆಯಲ್ಲಿ ಅದನ್ನು ತೆಗೆದು ಅಂಗೈ ಮೇಲೆ ಪ್ರತಿಷ್ಠಾಪಿಸಿಕೊಂಡು ಪೂಜೆಯನ್ನು ಮಾಡುತ್ತಾರೆ. ಇಂಥ ಲಿಂಗಪೂಜೆಯ ವೇಳೆಯಲ್ಲಿ ಕರಡಿಗೆಯನ್ನೇ ಮರೆತರೆ ಪೂಜೆಯನ್ನು ಮಾಡುವುದು ಹೇಗೆ? ಯುದ್ಧಭೂಮಿಗೆ ತೆರಳಬೇಕಾದ ಸೈನಿಕ ಶಸ್ತ್ರಾಸ್ತ್ರಗಳನ್ನು ಒಯ್ಯದೆ...

ವನವಾಸ

*ಬಹಳ ಕಷ್ಟಪಡುವುದು ಹಗಲೂ ರಾತ್ರಿ ದುಡಿದ, ಎಷ್ಟೋ ಕಷ್ಟಪಟ್ಟ, ಆದ್ರೂ ಅವನ ವನವಾಸ ತಪ್ಪಲಿಲ್ಲ, ಅವನಿಗೆ ವನವಾಸ ತಪ್ಪಲಿಲ್ಲ, ಇಷ್ಟು ದಿನ ವನವಾಸದಲ್ಲಿದ್ದ, ಈಗ ಅವನಿಗೆ ಸೂಕ್ತ ಸ್ಥಾನ ದೊರೆತಿದೆ ಎಂದೆಲ್ಲಾ ಹೇಳುವುದನ್ನು ಕೇಳಿದ್ದೇವೆ. ಇದನ್ನೆಲ್ಲ ನೋಡಿದಾಗ, ಒಬ್ಬ ವ್ಯಕ್ತಿ ಒಂದು ಸ್ಥಾನಕ್ಕೆ ಯೋಗ್ಯನಿರುತ್ತಾನೆ. ಆದರೆ ಕಾರಣಾಂತರಗಳಿಂದ ಅದರಿಂದ ವಂಚಿತನಾಗುತ್ತಾನೆ ಎಂಬ ಭಾವನೆ ಮೂಡುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಎರಡು ಪ್ರಸಿದ್ಧ ವನವಾಸಗಳಿವೆ. ಅವೆರಡೂ ನಮ್ಮ ಎರಡು ಮಹಾಕಾವ್ಯಗಳಲ್ಲಿ ಮಹತ್ವದ ಭಾಗವಾಗಿ ಬಂದಿವೆ. ಒಂದು ರಾಮಾಯಣದ ಶ್ರೀರಾಮನ ವನವಾಸ,...

ಲೈಲಾ ಮಜ್ನು

*ಅಖಂಡ ಪ್ರೇಮಿಗಳ ಪ್ರತೀಕ ಇವರು ಪ್ರೇಮ ಒಂದು ವಿಚಿತ್ರ ರೋಗ. ಈ ರೋಗ ಹತ್ತಿತು ಎಂದರೆ ವಾಸಿಯಾಗುವುದಕ್ಕೆ ಹಲವು ವರ್ಷಗಳೇ ಬೇಕು. ಈ ರೋಗ ತೀವ್ರವಾಗಿ ಸತ್ತವರೂ ಇದ್ದಾರೆ. ಪ್ರೇಮಜ್ವರ ತೀವ್ರವಾಗಿ ಜೀವ ಕೊಟ್ಟ ಪಾತ್ರಗಳಲ್ಲಿ ಲೈಲಾ ಮತ್ತು ಮಜ್ನು ಜಗದ್ವಿಖ್ಯಾತರು. ಇವರು ಇತಿಹಾಸ ಪುರುಷರೇನಲ್ಲ. ಹಾಶ್ಮೀತ್‌ ಶಾ ಎನ್ನುವವರು ಬರೆದ ಕತೆಯ ಪಾತ್ರಗಳು ಈ ಲೈಲಾ ಮಜ್ನು. ಮಜ್ನು ನಾಜಿದ್‌ನ ದೊರೆ ಓಮರ್‌ನ ಮಗ. ಆತನನ್ನು ಆರನೆ ವರ್ಷಕ್ಕೆ ಒಂದು ಶಾಲೆಗೆ ಸೇರಿಸುತ್ತಾರೆ. ಅಲ್ಲಿ ಆತ...

ಲಕ್ಷ್ಮಣ ರೇಖೆ

*ಉಲ್ಲಂಘಿಸಬಾರದ ಗಡಿ ಗೆರೆ ನಾವು ಲಕ್ಷ್ಮಣ ರೇಖೆಯನ್ನು ದಾಟುವುದಿಲ್ಲ ಎಂದು ಎರಡು ರಾಜಕೀಯ ಪಕ್ಷಗಳು ಹೇಳಿಕೊಳ್ಳುವುದನ್ನು ಕೇಳಿದ್ದೇವೆ. ಲಕ್ಷ್ಮಣ ರೇಖೆ ದಾಟಿದ್ದೇ ಅವನ ಅಧೋಗತಿಗೆ ಕಾರಣವಾಯಿತು ಎಂದು ಯಾರ ಬಗ್ಗೆಯೋ ಯಾರೋ ಹೇಳಿದ್ದು ಕಿವಿಯ ಮೇಲೆ ಬಿದ್ದಿರುತ್ತದೆ. ಈ ಲಕ್ಷ್ಮಣ ರೇಖೆ ಎನ್ನುವುದು ಮೀರಲೇ ಬಾರದ ಮಿತಿಯಾಗಿರುತ್ತದೆ. ಅದನ್ನು ಮೀರಿದರೆಂದರೆ ಗಂಡಾಂತರ. ಏನಿದು ಲಕ್ಷ್ಮಣ ರೇಖೆ? ರಾಮಾಯಣದಲ್ಲಿ ಸೀತಾಪಹರಣದ ಘಟನೆ ಗೊತ್ತಲ್ಲವೆ? ಚಿನ್ನದ ಜಿಂಕೆಯ ಬೇಟೆಗೆ ಶ್ರೀರಾಮ ಹೋಗುತ್ತಾನೆ. ಮಾರೀಚನನ್ನು ಬಾಣದಿಂದ ಕೊಲ್ಲುತ್ತಾನೆ. ಮಾರೀಚ ಸಾಯುವಾಗ ಓ...

ರಂಗೋಲಿ ಕೆಳಗೆ ತೂರುವುದು

*ಚತುರತೆಯನ್ನು ಇದಕ್ಕೂ ಪರಿಣಾಮಕಾರಿಯಾಗಿ ಹೇಳುವುದು ಸಾಧ್ಯವಿಲ್ಲ ಅವನು ಚಾಪೆ ಕೆಳಗೆ ತೂರಿದರೆ ಇವನು ರಂಗೋಲಿ ಕೆಳಗೇ ತೂರಿದನು ಎಂದು ಹೇಳುವುದನ್ನು ಕೇಳಿದ್ದೇವೆ. ಒಬ್ಬ ಬಹಳ ಚಾಣಾಕ್ಷ ಎಂದು ಹೇಳುವುದಕ್ಕೆ ಈ ಉಪಮೆಯನ್ನು ಬಳಸುತ್ತಾರೆ. ಬಹಳ ಒಳ್ಳೆಯದಕ್ಕೆ ಹೇಳುವಾಗಲೂ ಇದನ್ನು ಹೇಳುತ್ತಾರೆ. ಬಹಳ ಕೆಟ್ಟವನ ಚಾಣಾಕ್ಷತೆಯನ್ನು ಹೇಳುವಾಗಲೂ ಇದನ್ನೇ ಹೇಳುತ್ತಾರೆ. ಒಬ್ಬನ ಚತುರತೆಗಿಂತ ಇನ್ನೊಬ್ಬನ ಚತುರತೆ ಮಿಗಿಲು ಎಂದು ಹೇಳುವಾಗ ಒಳ್ಳೆಯದು ಕೆಟ್ಟದ್ದು ಎಂಬ ತಾರತಮ್ಯ ತಲೆ ಎತ್ತುವುದಿಲ್ಲ. ಚಾಪೆಯ ಕೆಳಗೆ ತೂರಿ ಹೋಗುವುದಕ್ಕೆ ಭೂಮಿ ಮತ್ತು ಚಾಪೆಯ...

ರಾಮಾಯ ಸ್ವಸ್ತಿ ರಾವಣಾಯ ಸ್ವಸ್ತಿ

*ಇದು ನಾಯಕರ ದಾರಿಯಲ್ಲ, ಅನುಯಾಯಿಗಳದ್ದು ರಾಮ ಮತ್ತು ರಾವಣ ಬದ್ಧ ವೈರಿಗಳು. ಇಬ್ಬರಿಗೂ ಸ್ವಸ್ತಿ ಹೇಳಿಕೊಂಡು ಬದುಕುವುದು ಹೇಗೆ? ಎರಡೂ ಕಡೆಯೂ ಒಳ್ಳೆಯನಾಗುವುದು ಎಲ್ಲರಿಗೂ ಸಿದ್ಧಿಸುವ ಕಲೆಯಲ್ಲ. ಕೆಲವರಷ್ಟೇ ಅದನ್ನು ಸಿದ್ಧಿಸಿಕೊಂಡಿರುತ್ತಾರೆ. ಎರಡೂ ಕಡೆಯವರು ಬಲಶಾಲಿಗಳಾಗಿದ್ದಾಗ ಯಾರು ಗೆಲ್ಲುತ್ತಾರೆ, ಯಾರ ಕೈ ಮೇಲಾಗುತ್ತದೆ ಎಂದು ನಿರ್ಧರಿಸುವುದು ಕಷ್ಟವಾಗುತ್ತದೆ. ಆಗ ಅವರ ಹತ್ತಿರದಲ್ಲಿರುವವರು ಒಂದು ಸಮಾನಾಂತರವನ್ನು ಕಾಯ್ದುಕೊಂಡು ಹೋಗುವುದಕ್ಕೆ ಪ್ರಯತ್ನಿಸುತ್ತಾರೆ. ತಕ್ಕಡಿಯ ಯಾವ ಬದಿ ಯಾವಾಗ ಮೇಲೇಳುತ್ತದೆ ಗೊತ್ತಾಗುವುದಿಲ್ಲ. ಒಬ್ಬರು ಗೆದ್ದೆತ್ತಿನ ಬಾಲ ಹಿಡಿಯುವುದಕ್ಕೆ ಇಂಥ ಲೆಕ್ಕಾಚಾರದ ನಡೆ...

ರಾಮರಾಜ್ಯ

*ಈ ರಾಜ್ಯದಲ್ಲಿ ಸುಭಿಕ್ಷವೇ ಸುಭಿಕ್ಷ ಶ್ರೀರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಕರೆಯುತ್ತಾರೆ. ಸರ್ವಗುಣ ಸಂಪನ್ನನಾದ ಒಬ್ಬ ವ್ಯಕ್ತಿ ಪ್ರಸ್ತುತ ಕಾಲದಲ್ಲಿ ಯಾರು ಇದ್ದಾರೆ ಎಂದು ವಾಲ್ಮೀಕಿ ಮಹರ್ಷಿಯು ನಾರದ ಮುನಿಗಳನ್ನು ಪ್ರಶ್ನಿಸುತ್ತಾರಂತೆ. ಆಗ ನಾರದರು ವಾಲ್ಮೀಕಿಗೆ ಶ್ರೀರಾಮನ ಚರಿತ್ರೆಯನ್ನು ಹೇಳುತ್ತಾರಂತೆ. ಶ್ರೀರಾಮನ ರಾಜ್ಯದಲ್ಲಿ ಯಾವುದೇ ರೀತಿಯ ಕುಂದುಕೊರತೆಗಳು ಇರಲಿಲ್ಲವಂತೆ. ಎಲ್ಲರೂ ಸುಖಿಗಳಾಗಿದ್ದರಂತೆ. ಶ್ರೀರಾಮ ಸ್ವತಃ ಪಿತೃವಾಕ್ಯ ಪರಿಪಾಲನೆಗಾಗಿ ಕಾಡಿಗೆ ತೆರಳಿದ್ದ. ಜನರ ಅಪವಾದಕ್ಕೆ ಅಂಜಿ ತನ್ನ ಪತ್ನಿ ಸೀತೆಯನ್ನು ತ್ಯಾಗ ಮಾಡಿದ್ದ. ನ್ಯಾಯದಾನದಲ್ಲಿ ಶ್ರೀರಾಮನು ಅತ್ಯಂತ ಹೆಸರುವಾಸಿಯಾಗಿದ್ದ....

ರಕ್ತಬೀಜಾಸುರ

*ದುಷ್ಟ ಸಂತತಿಗೆ ಸಾವಿಲ್ಲವಂತೆ ಸಮಾಜಕ್ಕೆ ಸದಾ ಕೆಡುಕನ್ನು ಮಾಡುತ್ತಿರುವ ಜನರು ಇರುತ್ತಾರೆ. ಅವರಿಂದ ಎಂದಿಗೂ ಯಾರಿಗೂ ಒಳಿತು ಆಗುವುದಿಲ್ಲ. ಅವನು ಸಾಯಲಿ ಎಂದು ಜನ ದಿನವೂ ಬಯಸುತ್ತಿರುತ್ತಾರೆ. ಒಬ್ಬ ದುಷ್ಟ ಹೋದರೆ ಅವನ ಹೆಜ್ಜೆಯಲ್ಲೇ ಕಾಲಿಟ್ಟು ಇನ್ನೊಬ್ಬ ದುಷ್ಟ ಬರುತ್ತಾನೆ. ಇಂಥ ದುಷ್ಟ ಪರಂಪರೆ ಮುಂದುವರಿಯುವುದನ್ನು ಕಂಡಾಗ ನೊಂದವರು ರಕ್ತಬೀಜಾಸುರ ಸಂತತಿ ಎಂದು ಕರೆಯುತ್ತಾರೆ. ಯಾರೀತ ರಕ್ತಬೀಜಾಸುರ? ದೇವೀಪುರಾಣದಲ್ಲಿ ಈ ರಕ್ತಬೀಜಾಸುರನ ಪ್ರಸ್ತಾಪ ಬರುತ್ತದೆ. ಮಹಿಷಾಸುರನ ಸೇನಾಪತಿಗಳಲ್ಲಿ ಒಬ್ಬ ಈ ರಕ್ತಬೀಜಾಸುರ. ಇವನ ಮೈಯಿಂದ ಬಿದ್ದ ಹನಿ...