*ಈ ದೆಸೆ ಬಂದವರಿಗೆ ಬರೀ ಸುಖ

ಯಾರಿಗಾದರೂ ಸುಖ ಸಮೃದ್ಧಿ ಅತಿಯಾಗಿ ಬಂದರೆ ಅವರನ್ನು ಕಂಡು ಅವನಿಗೆ ಶುಕ್ರದೆಸೆ ತಿರುಗಿದೆ ಎಂದು ಹೇಳುತ್ತಾರೆ.
ಶುಕ್ರ ಭೃಗು ಮುನಿಯ ಪುತ್ರ. ರಾಕ್ಷಸರ ಗುರು. ಗ್ರಹಗಳ ರಾಶಿಯಲ್ಲಿ ಶುಕ್ರನಿಗೂ ಸ್ಥಾನವಿದೆ. ಶುಕ್ರ ಸಂಪತ್ತು, ಸಮೃದ್ಧಿ, ಸಂತಾನದ ಪ್ರತೀಕ. ಯಾರ ರಾಶಿಯಲ್ಲಿ ಶುಕ್ರನ ಬಲ ಇರುತ್ತದೋ ಅವರಿಗೆ ಸಂಪತ್ತು ಸಿದ್ಧಿಸಿರುತ್ತದೆ.
ಪ್ರತಿಯೊಬ್ಬರ ಕುಂಡಲಿಯಲ್ಲಿ ಬೇರೆಬೇರೆ ಗ್ರಹಗಳ ದೆಸೆ ನಡೆಯುತ್ತದೆ. ಶುಕ್ರದೆಸೆಯು ಇಪ್ಪತ್ತು ವರ್ಷಗಳ ಕಾಲ ನಡೆಯುವುದು. ಶುಕ್ರ ಇದ್ದ ಅವಧಿಯಲ್ಲಿ ಅವರಿಗೆ ಸಮಸ್ತ ಸುಖ, ಸಂಪತ್ತು ಲಭಿಸುವುದು ಎಂಬ ನಂಬಿಕೆ ಇದೆ. ಶುಕ್ರ ಗುಣದಲ್ಲಿ ಸಾತ್ವಿಕ ಅಲ್ಲ. ರಾಜಸ ಗುಣ. ಸಂಪತ್ತು ಇದ್ದಾಗ ಆಳುವ ಬುದ್ಧಿ ಬರುವುದು ಸಹಜ.
ಪಾಶ್ಚಾತ್ಯರಲ್ಲಿ ಶುಕ್ರನನ್ನು ವೀನಸ್‌ ಎಂದು ಕರೆಯುತ್ತಾರೆ. ಅಲ್ಲಿ ಆತ ಪ್ರಣಯ ದೇವತೆ.