ಆಡುಕಳ, ಆಕಾಶಕ್ಕೆ ಹಚ್ಚಿದ ಏಣಿ

ಸ್ವಾರ್ಥವು ಮನುಷ್ಯನ ಕ್ರಿಯಾಶಕ್ತಿಯನ್ನು, ಮನುಷ್ಯತ್ವವನ್ನು ಹೇಗೆ ಕಳೆದುಬಿಡುತ್ತದೆ, ವ್ಯಕ್ತಿಯ ಸ್ವಾತಂತ್ರ್ಯ ಹೇಗೆ ಹರಣವಾಗುತ್ತ ಹೋಗುತ್ತದೆ ಎಂಬುದನ್ನು ಶ್ರೀಧರ ಬಳಗಾರ ಅವರು ತಮ್ಮ ‘ಆಡುಕಳ’ ಕಾದಂಬರಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಯಲ್ಲಾಪುರ ತಾಲೂಕಿನ ಬಿದ್ರಳ್ಳಿಯ ಮಣ್ಮನೆಯ ಕೃಷ್ಣಪ್ಪ ಮತ್ತು ದಶರಥ ಅಣ್ಣ ತಮ್ಮಂದಿರು. ದಶರಥ ತನ್ನ ಪಿತ್ರಾರ್ಜಿತ ಸ್ವತ್ತನ್ನು ಹಿಸ್ಸೆ ಮಾಡಿಕೊಂಂಡು, ಬಿದ್ರಳ್ಳಿಯ ಸಂಪರ್ಕಹೀನ ದ್ವೀಪದಂತೆ ಇದ್ದ ಆಡುಕಳದ ಆಸ್ತಿಯನ್ನು ಪಡೆದುಕೊಂಡ. ಹವ್ಯಕರಾದ ಇವರಿಗೆ ಕೃಷಿಯಲ್ಲಿ ಪ್ರೀತಿ ಇತ್ತು. ಆಡುಕಳದ ಪ್ರಶಾಂತ ಪರಿಸರ ಸ್ವಭಾವತಃ ನಿಸ್ಸಂಗಿಯಾಗಿದ್ದ ದಶರಥನಿಗೆ ಖುಷಿ ತಂದಿತ್ತು. ಆತನ...

ನೆನಪಿನಿಂದಳಿಯದ ‘ನೆನಪಿನ ಹಳ್ಳಿ’

ಪ್ರೊ.ಎಂ.ಎನ್.ಶ್ರೀನಿವಾಸ್ ಅವರು ಪ್ರಖ್ಯಾತ ಸಮಾಜ ಶಾಸ್ತ್ರಜ್ಞರು. ‘ದಿ ರಿಮೆಂಬರ್ಡ್ ವಿಲೇಜ್’ ಎಂಬುದು ಅವರ ಶ್ರೇಷ್ಠ ಕೃತಿ. ಶ್ರೀನಿವಾಸ್ ಅವರು ಅಮೆರಿಕದ ಸ್ಟಾನ್ಸ್‌ಫರ್ಡ್‌ನ ‘ಸೆಂಟರ್ ಫಾರ್ ಅಡ್‌ವಾನ್ಸ್ ಸ್ಟಡೀ ಇನ್ ಬಿಹೇವಿಯರಲ್ ಸೈಯನ್ಸಸ್’ನಲ್ಲಿ ಇದ್ದಾಗ ಅವರು ಮಾಡಿಟ್ಟುಕೊಂಡ ಟಿಪ್ಪಣಿಗಳೆಲ್ಲ ಬೆಂಕಿಗೆ ಆಹುತಿಯಾದವು. ಬಳಿಕ ಅವರು ತಮ್ಮ ಕ್ಷೇತ್ರಾನುಭವದ ನೆನಪಿನ ಆಧಾರದ ಮೇಲೆಯೇ ಬರೆದ ಕೃತಿ ಇದು. ಇದನ್ನು ‘ನೆನಪಿನ ಹಳ್ಳಿ’ ಹೆಸರಿನಲ್ಲಿ ಟಿ.ಆರ್.ಶಾಮಭಟ್ಟ ಅವರು ಕನ್ನಡಕ್ಕೆ ತಂದಿರುವರು. ಇಲ್ಲಿಯ ಕೇಂದ್ರ ಪಾತ್ರ ರಾಮಪುರ ಎಂಬ ಹಳ್ಳಿ. ಒಬ್ಬ ವ್ಯಕ್ತಿಗೆ...

ರೆಕ್ಕೆ ಬಿಚ್ಚಿದ ಕಥನಗಾರಿಕೆ

ಇನ್ನು ಒಳಗಿಟ್ಟುಕೊಳ್ಳುವುದು ಸಾಧ್ಯವೇ ಇಲ್ಲವೇನೋ ಎನ್ನುವಂಥ ಒತ್ತಡದಲ್ಲಿ ಸೃಜನಕ್ರಿಯೆಗೆ ತೊಡಗಿಕೊಳ್ಳುವ ಟಿ.ಕೆ.ದಯಾನಂದ ಅವರು ತಮ್ಮ ಕಥಾಸಂಕಲನ ‘ರೆಕ್ಕೆ ಹಾವು’ದಲ್ಲಿ ಎಂಟು ವಿಶಿಷ್ಟವಾದ ಕತೆಗಳನ್ನು ನೀಡಿದ್ದಾರೆ. ಈ ಎಲ್ಲ ಕತೆಗಳ ವಸ್ತು ಮತ್ತು ಪಾತ್ರಗಳು ತಳ ಸಮುದಾಯದ ಜನರು. ಒಂದೆಡೆ ಕೋಲಾರ, ಮತ್ತೊಂದೆಡೆ ತುಮಕೂರು, ಇನ್ನೊಂದೆಡೆ ಅಂಕೋಲಾ, ಹಾಗೆಯೇ ದ.ಕ.ದ ಪರಿಸರದಲ್ಲಿ ಹುಟ್ಟಿಕೊಳ್ಳುವ ಕತೆಗಳು ಒಂದೇ ಆವೇಗದಲ್ಲಿ, ಒಂದರಿಂದ ಇಪ್ಪತ್ತರ ವರೆಗಿನ ಮಗ್ಗಿಯನ್ನು ಕಂಠಪಾಠ ಮಾಡಿದ ಮಕ್ಕಳು ಅದನ್ನೆಲ್ಲ ಒಂದೇ ಉಸುರಿಗೆ ಕಕ್ಕಿ ನಿರುಂಬಳವಾಗುವ ರೀತಿಯಲ್ಲಿ, ಇನ್ನೇನೋ ಮಾಡುವುದು...

ಗಾಂಧೀಜಿಯ ಆ ಯಾತನಾಮಯ ಕೊನೆಯ ದಿನಗಳು

ನಾನೇನೋ ಹೇಳ್ತಾಹೇಳ್ತಾ ಹೋಗ್ಬಿಡ್ತೇನೆ, ಆದರೆ ಯಾವುದಾದರೊಂದುದಿನ ನಾನು ನೆನಪಿಗೆ ಬರ್ತೇನೆ, ಒಬ್ಬ ದೀನ ಮನುಷ್ಯ ಹೇಳ್ತಾ ಇದ್ನಲ್ಲ, ಅದು ಸರಿನೇ ಇತ್ತು ಅಂತ. (ಗಾಂಧಿ, ೧೬ ಅಕ್ಟೋಬರ್ ೧೯೪೭) ದೇಶ ಸ್ವಾತಂತ್ರ್ಯವನ್ನು ಪಡೆದ ಎರಡೇ ತಿಂಗಳಲ್ಲಿ ರಾಷ್ಟ್ರಪಿತನು ಆಡಿದ ಮಾತುಗಳು ಇವು. ದೇಶಕ್ಕೆ ಸ್ವಾತಂತ್ರ್ಯ ಸಿಗುವುದು ಖಚಿತವಾಗುತ್ತಿದ್ದಂತೆಯೇ ಅವರ ನೆಚ್ಚಿನ ಭಂಟರೇ ಗಾಂಧಿ ಇನ್ನು ಅಪ್ರಸ್ತುತ, ಗಾಂಧಿಯ ಸಿದ್ಧಾಂತಗಳು ಸ್ವತಂತ್ರ ಭಾರತಕ್ಕೆ ಅಗತ್ಯವಿಲ್ಲ, ಹಿಂದ್ ಸ್ವರಾಜ್ ಎಂಬುದು ಬಹಳ ಹಳೆಯ ಕಲ್ಪನೆ, ಈಗ ಜಾಗತಿಕವಾಗಿ ಅದೆಷ್ಟೋ ಬದಲಾವಣೆಗಲಾಗಿವೆ,...