ನೂರು ತುಂಬಿದ ಇಂದಿರಾಬಾಯಿ

ಕನ್ನಡದ ಮೊದಲ ಸಾಮಾಜಿಕ ಕಾದಂಬರಿ ಇಂದಿರಾಬಾಯಿಗೆ ಈಗ ನೂರು ತುಂಬಿದೆ. 1899ರಲ್ಲಿ ಗುಲ್ವಾಡಿ ವೆಂಕಟರಾಯರು ಇದನ್ನು ಬರೆದರು. ಇಂದಿರಾಬಾಯಿಯ ಇನ್ನೊಂದು ಹೆಸರು ಸದ್ಧರ್ಮ ವಿಜಯ. ಮಂಗಳೂರಿನ ಬಾಸೆಲ್ ಮಿಶನ್ ಪ್ರೆಸ್್ನಲ್ಲಿ ಇದು ಮೊದಲ ಮುದ್ರಣವನ್ನು ಕಂಡಿತು. ಈ ಶತಮಾನದ 6ನೆ ದಶಕದ ವರೆಗೆ ಇದು ಪ್ರಚಾರದಲ್ಲಿಯೇ ಇರಲಿಲ್ಲ. ಸಾಹಿತ್ಯದ ವಿಮರ್ಶಕರಿಗೂ ಈ ಕೃತಿಯ ಪರಿಚಯ ಇರಲಿಲ್ಲ. 1962ರಲ್ಲಿ ಈ ಕೃತಿಯು ಎಂ. ಗೋವಿಂದ ಪೈ, ಕೆ.ಶಿವರಾಮ ಕಾರಂತ ಮತ್ತು ಸಂತೋಷಕುಮಾರ ಗುಲ್ವಾಡಿ ಇವರ ಜಂಟಿ ಪ್ರಯತ್ನದಿಂದ ಮರುಮುದ್ರಣ...

ಕಣ್ಣು ಕಿವಿ ತೆರೆದಿಟ್ಟುಕೊಂಡಾಗ…

ಬದುಕು ಕಲಿಸುವಷ್ಟು ಚೆನ್ನಾಗಿ ಪಾಠವನ್ನು ಯಾವ ಶಾಲೆ, ಕಾಲೇಜು, ವಿಶ್ವವಿದ್ಯಾಲಯವೂ ಕಲಿಸುವುದಿಲ್ಲ. ಬದುಕಿನಿಂದ ಕಲಿಯುವುದಕ್ಕೆ ನಾವು ಕಣ್ಣನ್ನು, ಕಿವಿಯನ್ನು ಸದಾ ತೆರೆದಿಟ್ಟುಕೊಳ್ಳಬೇಕು ಅಷ್ಟೇ. ಜಗತ್ತಿನ ಬಹುದೊಡ್ಡ ದಾರ್ಶನಿಕ ಗೌತಮ ಬುದ್ಧ ಕಲಿತದ್ದು ಬದುಕಿನಿಂದಲೇ. ಅವನನ್ನು ತಲ್ಲಣಗೊಳಿಸಿದ ಮೂರ್ನಾಲ್ಕು ಘಟನೆಗಳು ಅವನನ್ನು ಅದರ ಬಗೆಗೆ ಚಿಂತಿಸುವುದಕ್ಕೆ ಹಚ್ಚುತ್ತದೆ. ಅವನು ಆ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡಿದ್ದೂ ಬದುಕಿನಿಂದಲೇ. ತಮ್ಮ ಎಲ್ಲ ಸಮಸ್ಯೆಗಳ ಮೂಲ ಹಾಗೂ ಅವುಗಳಿಗೆ ಪರಿಹಾರ ಈ ಜಗತ್ತಿನಲ್ಲಿಯೇ ಇದೆ ಎಂಬ ಸತ್ಯವನ್ನು ಕಂಡುಕೊಂಡಾಗ ಯಾರೊಬ್ಬರೂ ನಿರಾಶರಾಗುವ ಪ್ರಸಂಗ...

ನಾನು… ನಾನೇ…. ನಾನು…

ಮನುಷ್ಯನು ಜಗತ್ತಿನಲ್ಲಿ ಯಾರನ್ನು ಅತಿ ಹೆಚ್ಚು ಪ್ರೀತಿಸುತ್ತಾನೆ ಎಂಬ ಪ್ರಶ್ನೆಯನ್ನು ಎಸೆದರೆ ತನ್ನ ಹೆಂಡತಿಯನ್ನು, ತನ್ನ ಗಂಡನನ್ನು, ತನ್ನ ಮಗನನ್ನು, ತನ್ನ ಮಗಳನ್ನು, ತನ್ನ ತಂದೆ, ತಾಯಿಯನ್ನು…. ಹೀಗೆ ಏನೇನೋ ಉತ್ತರಗಳು ದೊರೆಯಬಹುದು. ಕೆಲವರು ಎಲ್ಲ ಸಂಬಂಧಿಗಳನ್ನು ಬಿಟ್ಟು ಸಾಕಿದ ನಾಯಿಯನ್ನೋ, ಬೆಕ್ಕನ್ನೋ ಅತಿಯಾಗಿ ಪ್ರೀತಿಸುತ್ತೇನೆ ಎಂದು ಹೇಳಬಹುದು. ಇವೆಲ್ಲ ಪ್ರೀತಿಯ ಹಾದಿಯಲ್ಲಿಯ ಕೆಲವು ಹೆಜ್ಜೆಗಳ ಕ್ರಮಣ ಅಷ್ಟೇ. ಹಾಗಾದರೆ ಮನುಷ್ಯ ಅತಿ ಹೆಚ್ಚು ಪ್ರೀತಿಸುವುದು ಯಾರನ್ನು? ಮನುಷ್ಯ ಅತಿ ಹೆಚ್ಚು ಪ್ರೀತಿಸುವುದು ತನ್ನನ್ನೇ. ತನ್ನನ್ನೇ ತಾನು...

ಬ್ರದರ್ ಸ್ಕೂಲಿನ ದೊಡ್ಡ ಗಂಟೆ

ಹೊನ್ನಾವರದ ಪೇಟೆಯಲ್ಲಿ ಕೋಳಿ ಕೂಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ನಸುಕಿನ ಐದು ಗಂಟೆ ಎಂದರೆ ಬ್ರದರ್ ಸ್ಕೂಲಿನ ದೊಡ್ಡ ಗಂಟೆ ಬಡಿದುಕೊಳ್ಳುತ್ತಿತ್ತು. ಬೆಳಗಾಯಿತು ಎಂದು ಅದು ಸಾರುತ್ತಿತ್ತು. ಬರೀ ಪೇಟೆಯೇ ಏಕೆ, ಕೆಳಗಿನ ಪಾಳ್ಯ, ಯೇಸು ಬಂದರ, ಬಿಕಾಸನ ತಾರಿ, ಮಂಜಗುಣಿಕೇರಿ, ರಾಮತೀರ್ಥ ರಸ್ತೆಯಲ್ಲೆಲ್ಲ ಈ ಗಂಟೆಯ ನಾದ ಅನುರಣಿಸುತ್ತಿತ್ತು. ಬ್ರದರ್ ಸ್ಕೂಲಿನಲ್ಲಿ ಕೇರಳ ಕಡೆಯ ಹುಡುಗರು ಓದಲೆಂದು ಬಂದು ಅಲ್ಲಿಯೇ ವಾಸ್ತವ್ಯ ಮಾಡುತ್ತಿದ್ದರು. ಸ್ಕೂಲಿನ ಗೋಪುರದಲ್ಲಿ ಒಂದು ದೊಡ್ಡ ಗಂಟೆಯನ್ನು ಕಟ್ಟಲಾಗಿತ್ತು. ಬೆಳಗಿನ ಐದು ಗಂಟೆ...

ರೇಡಿಯೋ ಅಂದ್ರೆ ಕಾಮೆಂಟರಿ, ಕೃಷಿರಂಗ ಮತ್ತು.. ಮತ್ತು… ಮತ್ತು…

ಆ ಚೀಟಿ ಎತ್ತುವ ಹೊಣೆ ನನ್ನ ಮೇಲೆಯೇ ಬಂತು. ನಮ್ಮ ಮನೆ ಪಾಲಾಗುತ್ತಿತ್ತು. ನಮ್ಮ ತಂದೆ ಮತ್ತು ನಮ್ಮ ಚಿಕ್ಕಪ್ಪ ಬೇರೆಬೇರೆ ಉಳಿಯಲು ನಿರ್ಧರಿಸಿದ್ದರು. ಮನೆಯಲ್ಲಿಯ ಎಲ್ಲ ವಸ್ತುಗಳೂ ಪಾಲಾಗಿದ್ದವು. ಊರಿನ ಪಂಚರೆಲ್ಲ ಬಂದು ಕುಳಿತಿದ್ದರು. ಒಂದೊಂದೇ ಇರುವ ವಸ್ತುಗಳನ್ನು ಒಬ್ಬರಿಗೊಂದು ಒಬ್ಬರಿಗೊಂದು ಎಂದು ಪಂಚರು ಹಂಚಿದರು. ಕೊನೆಯಲ್ಲಿ ಉಳಿದದ್ದು ಆ ಫಿಲಿಪ್ಸ್ ರೇಡಿಯೋ ಮಾತ್ರ. ಅದಕ್ಕೆ ಸರಿಹೊಂದುವಂಥ ಬೇರೊಂದು ವಸ್ತು ಇರಲಿಲ್ಲ. ಹೀಗಾಗಿ ಅದು ಯಾರ ಸೊತ್ತಾಗಬೇಕು ಎಂಬುದನ್ನು ನಿರ್ಧರಿಸಲು ಚೀಟಿ ಎತ್ತುವುದೆಂದು ಪಂಚರಲ್ಲಿ ಒಬ್ಬರು...