ಮತ್ತೆ ಅವನು ಬಂದೇ ಬರ್ತಾನೆ…

ಹುಲ್ಲು ಬೆಳೆಯುಲ್ಲಿ ಮರ ನೆಟ್ಟರೆ ನಮಗೆ ನೊಬೆಲ್ ಪ್ರಶಸ್ತಿ ಬರುವುದು ಕಡಿಮೆ, ಒಲಿಂಪಿಕ್ಸ್‌ನಲ್ಲಿ ಪದಕ ಬರುವುದು ಬೆರಳೆಣಿಕೆಯಷ್ಟು ಎಂದು ಅವನು ಹೇಳುತ್ತಿದ್ದ. ಎಲ್ಲಿಂದೆಲ್ಲಿಯ ಸಂಬಂಧ? ———- ಅವನೊಬ್ಬ ಹುಡುಕಾಟದಲ್ಲಿ ತೊಡಗಿದ್ದ ವ್ಯಕ್ತಿಯಾಗಿದ್ದ. ತಾನು ಏನನ್ನು ಹುಡುಕುತ್ತಿದ್ದೇನೆ ಎಂಬುದು ಸ್ವತಃ ಅವನಿಗೂ ಸ್ಪಷ್ಟವಿರಲಿಲ್ಲ. ಎದುರಿಗೆ ಬಂದವರನ್ನೆಲ್ಲ ಗುಮಾನಿಯಿಂದ ಎಂಬಂತೆ ನೋಡುತ್ತಿದ್ದ. ಅವನ ದೃಷ್ಟಿ ಎಷ್ಟು ತೀಕ್ಷ್ಣವಾಗಿತ್ತು ಎಂದರೆ ಅದೆಲ್ಲಿ ತಾಗಿದವರ ಮೈಯಲ್ಲಿ ಹುಣ್ಣನ್ನು ಮಾಡುವುದೋ ಎಂಬ ಆತಂಕ ಕಾಡುತ್ತಿತ್ತು. ಅವರ ಚಿತ್ತದಲ್ಲಿ ಮೂಡಿದ ಎಲ್ಲ ಆಲೋಚನೆಗಳನ್ನು ತಾನು ಓದಬಲ್ಲೆ...