ದೊಡ್ಡವ್ವ

ಮುದ್ದು ಮಾದೇವಿ ಕಳಚಿಟ್ಟ ಕರಿಮಣಿಯನ್ನು ಮತ್ತೊಮ್ಮೆ ನೋಡಿದಳು. ಮಲಗುವ ಕೋಣೆಯಲ್ಲಿದ್ದ ಮಂಚದ ಎದುರಿನ ಗಿಳಿಗೂಟಕ್ಕೆ ಅದನ್ನು ಹಾಕಿದ್ದಳು. ಮೂರು ದಿನದಿಂದ ಅದನ್ನೇ ನೋಡುತ್ತಿದ್ದಾಳೆ. ಅವನು ಸತ್ತ ಸುದ್ದಿ ಹೊಲಕ್ಕೆ ಸೌದೆ ತರಲು ಹೋಗಿದ್ದ ಪಕ್ಕದ ಮನೆಯ ವೆಂಕಟೇಶ ಹೇಳಿದ್ದ. ಹಾಗೆ ಹೇಳುವಾಗ ಅವನಿಗೆ ಯಾವ ಹಿಂಜರಿಕೆಯೂ ಕಾಡಲಿಲ್ಲ. ಹೇಗೆ ಹೇಳುವುದು ಎಂಬ ಸಂದಿಗ್ಧ ಎದುರಾಗಲಿಲ್ಲ. ಯಾವುದೋ ಊರಿನಲ್ಲಿ ಯಾರೋ ಸತ್ತ ಸುದ್ದಿ ಪೇಪರಿನಲ್ಲಿ ಬಂದುದನ್ನು ಓದಿ ಹೇಳುವಂತೆ ಬಹಳ ಸರಳವಾಗಿ, “ಏ ಮುದ್ದು, ನಿನ್ನ ಅವ್ನು ರಾತ್ರಿನೇ...