ಕೂಡಂಕುಲಂ ೮ ಸಾವಿರ ಜನರ ಮೇಲೆ ದೇಶದ್ರೋಹದ ಪ್ರಕರಣ

ದೇಶದ್ರೋಹದ ಆಪಾದನೆಯ ಮೇಲೆ ಬಂಧಿತನಾಗಿ ನಂತರ ದೆಹಲಿ ಹೈ ಕೋರ್ಟ್‌ನಿಂದ ಜಾಮೀನು ಪಡೆದು ಹೊರಬಂದಿರುವ ದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ನಾಯಕ ಕನ್ಹಯ್ಯಕುಮಾರ್ ಮಾಡಿದ ಭಾಷಣವನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೇಳಿಸಿಕೊಂಡಿದ್ದಾರೆ ಎಂದೇ ಭಾವಿಸೋಣ. ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮಾಡಿದ ಭಾಷಣವನ್ನೂ ಮೀರಿಸುವ ಶೈಲಿಯಲ್ಲಿ ಅಂದು ಆತ ಆಡಿದ ಮಾತು ಈ ದೇಶವನ್ನು ಆಳಿದವರನ್ನು ಆಳುವವರನ್ನು ಚಿಂತನೆಗೆ ಹಚ್ಚುವಂತಿತ್ತು. ಅದ್ಯಾವ ರಾಜಕೀಯ ಸಿದ್ಧಾಂತದ ಹಿನ್ನೆಲೆಯಿಂದ ಬಂದವನಾದರೂ ಆತ ಮುಂದಿಟ್ಟ ಕಟು ವಾಸ್ತವ ಪಕ್ಷಗಳ ಎಲ್ಲೆಯನ್ನು...