ಎದೆಯೊಳಗೆ ಬಿಚ್ಚಿಟ್ಟ ಮುತ್ತು: ಕನ್ನಡ

ಕನ್ನಡದ ಮೇಲೆ ಅನ್ಯ ಭಾಷೆಗಳು, ಕರ್ನಾಟಕದ ಮೇಲೆ ಕನ್ನಡೇತರ ದೊರೆಗಳು ಆಡಳಿತ ನಡೆಸುತ್ತ ಬಂದಿದ್ದರು. ‘ಭಾಷೆ’ ಎನ್ನುವುದೇ ಕನ್ನಡವಲ್ಲ. ‘ನುಡಿ’ ಎಂಬುದು ಕನ್ನಡ. ಕನ್ನಡ ನುಡಿಯ ಮೇಲೆ ಅನ್ಯ ಭಾಷೆಗಳ ಆಕ್ರಮಣವನ್ನುವಿರೋಧಿಸುವ ಪ್ರಯತ್ನ ಕಾಲಕಾಲಕ್ಕೆ ನಡೆಯುತ್ತಲೇ ಬಂದಿದೆ. ಕನ್ನಡಕ್ಕಾಗಿ ಕರ್ನಾಟಕಕ್ಕಾಗಿ ಪಣ ತೊಡುವ ಇನ್ನೊಂದು ಮುಹೂರ್ತ ನಿಗದಿಯಾಗಿದೆ. ಅಯ್ಯೋ, ಈ ವಾಕ್ಯವನ್ನೂ ಇಡಿಯಾಗಿ ಕನ್ನಡದಲ್ಲೇ ಹೇಳುವುದಕ್ಕೆ ಆಗುತ್ತಿಲ್ಲವಲ್ಲ. ಈ ಮುಹೂರ್ತ ಎಲ್ಲಿಂದ ಬಂತು? ಮುಹೂರ್ತಕ್ಕೆ ಕನ್ನಡದಲ್ಲಿಯೇ ಪದ ಇಲ್ಲವೆ? ಗಳಿಗೆಯೆ, ಕ್ಷಣವೆ, ಕಾಲವೆ.. ಓಹೋ! ಇವು ಒಂದೂ ಕನ್ನಡವಲ್ಲವಲ್ಲ!...