ಕವಿತೆ

ಮೋಡಗಳಾಚೆ

ಮೋಡಗಳು ಕವುಚಿಕೊಂಡಿವೆ ಆಗಸದ ತುಂಬ ಸೂರ್ಯನ ಪ್ರಖರ ಕಿರಣಗಳಾಗಲಿ ಚಂದ್ರನ ತಂಗದಿರಾಗಲಿ ಯಾವವೂ ನಿಮ್ಮ ತಲುಪುವುದೇ ಇಲ್ಲ ಮೋಡಗಳು ಕವುಚಿಕೊಂಡಿವೆ ಮಬ್ಬುಗತ್ತಲೆ ಕವಿದಿದೆ ಹೊರಗೆ ಹಗಲಲ್ಲೇ ಮನೆಯೊಳಗೆ ಹಚ್ಚಿದ ದೀಪ ಆಗೋ ಈಗೋ ಬಂದೇ ಬಿಡುವುದು ಮಳೆ ಎನ್ನುವಂತೆ ಬಿರುಗಾಳಿ ಪತರಗುಟ್ಟುವ ಬೆಳಕು ಸಂದಣಿಸಿದ ಮೋಡಗಳು ಹೊಡೆದ ಡಿಕ್ಕಿಗೆ ಫಳ್‌ ಫಳ್‌ ಮಿಂಚು ಒಮ್ಮೆಲೇ ಕತ್ತಲೆಲ್ಲ ಬೆತ್ತಲು ಒಬ್ಬರ ಮುಖ ಒಬ್ಬರು ದಿಟ್ಟಿಸಲು ಸಿಕ್ಕಿತು ಒಂದರೆಕ್ಷಣ ಅದೇ ಬದುಕು ಕಣಾ ಕವಿದ ಮೋಡ ಕರಗಲೇ ಬೇಕು ಮುಪ್ಪಿನೆಡೆಗೆ...

ಅವಸ್ಥೆ ಕವನ ಸಂಕಲನ

ಅವಸ್ಥೆ ಕವನಗಳ ಸಂಕಲನ ವಾಸುದೇವ ಶೆಟ್ಟಿ ಸತ್ಯವಾನ ಪ್ರಕಾಶನ ಜಲವಳ್ಳಿ ಅರ್ಪಣೆ ನಾನು ನಾನಾಗಿಯೇ ಉಳಿದು ಬೆಳೆಯಲು ಕಾರಣರಾದ ನನ್ನ ದಿವಂಗತ ತೀರ್ಥರೂಪರ ನೆನಪುಗಳಿಗೆ ಪ್ರಥಮ ಮುದ್ರಣ- ೧೯೮೭ ಪ್ರತಿಗಳು ೫೦೦, ಬೆಲೆ ೫ ರು. ಮುದ್ರಕರು- ಆದರ್ಶ ಸಹಕಾರಿ ಮುದ್ರಣಾಲಯ, ಕಾರವಾರ ————————— ಗೋಧೂಳಿಜಯಲಕ್ಷ್ಮೀಪುರಂಮೈಸೂರು 570012ಮಾರ್ಚ್ 23, 1987 ಪ್ರಿಯ ಮಿತ್ರರೆ,ನೀವು ಕೃಪೆಮಾಡಿ ಕಳಿಸಿದ ಕವನ ಸಂಗ್ರಹ ಬಂದಿದೆ. ಅದಕ್ಕಾಗಿ ವಂದನೆಗಳು. ನಿಮ್ಮ ಕವನಗಳನ್ನು ಓದಿದ್ದೇನೆ. ಕಡಲನ್ನು ಕುರಿತ ಕವಿತೆಗಳು ನನಗೆ ಇಷ್ಟವಾದವು. ನೀವು ಇನ್ನೂ...

ಮಳೆಗಾಲದ ನನ್ನೂರು

ಅಶ್ವಿನಿ ಇಲ್ಲ ಭರಣಿ ಇಲ್ಲ ಕೃತ್ತಿಕೆಯಲ್ಲಿ ಬಿಳಿ ಮೋಡ ಕರಿದಾಗತೊಡಗಿದೆ ನೆಲದೊಳಗಿನ ಕಪ್ಪೆ ಮುಗಿಲು ಹನಿಸುವ ಹನಿಗೆ ಕೂಗಿಯೇ ಕೂಗುತ್ತ್ತದೆ ಕಪ್ಪೆ ಕೂಗಿಗೆ ಮನಕರಗಿತೋ ಎಂಬಂತೆ ರೋಹಿಣಿಯು ಹನಿಸುವುದು ನಾಲ್ಕೇ ನಾಲ್ಕು ಹನಿ ಆಗ, ಗಡುಗಾಲ ಬಂತೆಂದು ಗಡಿಬಿಡಿಯ ಮಾಡುವರು ನಮ್ಮೂರ ಜನರು ಹೊದಿಕೆ ಹೂಂಟಿಯು ಎಂದು ಬಿದಿರು ಬೀಜವು ಎಂದು ಧೂಳು ತುಂಬಿದ ಹಾಳೆಯಲ್ಲಿ ಇನಿತು ಬೇಸರ ಪಡದೆ ಮೂಡಿಸುವರು ಹೆಜ್ಜೆ ಗುರುತು ಮೃಗ- ಶಿರ ಬಿತ್ತೆನ್ನುವದೇ ತಡ ನಮ್ಮೂರಲ್ಲಿ ದೊಡ್ಡ ಬೊಬ್ಬೆ ಎತ್ತು, ಕೋಣ...

ಕವನ ಕಾಡು

ನನ್ನ ಕವನಗಳನ್ನೆಲ್ಲ ಕಾಡು ಆಗಿಸುವ ಬಯಕೆ ನನ್ನದು ವ್ಯಾಘ್ರ ಕೇಸರಿಗಳು, ಜೊತೆಗೆ ಚಿರತೆ ಚಿಗರೆಗಳಿಹುದು. ಮತ್ತೆ ಆಡು- ಆನೆ, ಮೊಲಗಳಿಗೆ ಆಡುಂಬೊಲವು ಆಲಸಿಗಳ ಬೀಡಲ್ಲ, ನಿತ್ಯ ಕರ್ಮಯೋಗಿಗಳ ತಾಣವದು ಬದುಕು ಹೆರರ ಹೆಗಲ ಮೇಲಿನ ಹೊರೆಯಲ್ಲ ನಿತ್ಯ ಹಸುರಿನ ಮರವು, ಬಳಲಿದವರಿಗೆ ನೆರಳು, ಕೂರುವವೆ ಕಣ್ಣು? ಕೇಳಿ, ಹಕ್ಕಿಗಳ ನಿನದ ಒತ್ತೊತ್ತಿ ಹೇರಿಟ್ಟ ಬಂಡೆಗಳ ತೇರುಂಟು ಅದನೆ ಒಡೆದು ಹರಿಯುವ ಹಳ್ಳ ಸುತ್ತು ಬಳಸಿಹೆ ಮುಳ್ಳು ನಡುವೆ ಬಿರಿದೊಗೆದ ಸುಮವು ಸೂಸಿಹುದು ಗಂಧ ತೀಡಿ ತೀಡಿ ಗಿಳಿ...

ಗೆ,

ಗೆಳತಿ, ನಿನ್ನ ಪ್ರೀತಿ ಪುಂಡ ಮಳೆ ಇದ್ದ ಹಾಗೆ ಸುರಿದರೆ ಬಿಟ್ಟೂ ಬಿಡದೆ ದಿನ ಪೂರ್ತಿ ಮಹಾಪೂರದ ಭೀತಿ ಇಲ್ಲದಿರೆ ಇಲ್ಲವೇ ಇಲ್ಲ ಬರಿ ಬಿಸಿಲು ಕುಡಿದ ನೀರೂ ಮತ್ತ್ತೆ ಬೆವರು

ಜೀವವೃಕ್ಷ

ನಾನು ಒಂದು ಮರ ನನಗೆ ಗೊತ್ತಾಗುವ ಮೊದಲೇ ಈ ಮಣ್ಣಿನೊಳಗೆ ನನ್ನ ಬೇರು ಇಳಿಸಿ ಬಿಟ್ಟಿದ್ದೆ ದಿನವೂ ಇಳಿಯುತ್ತಿದ್ದೇನೆ ಪಾತಾಳಕ್ಕೆ ಮತ್ತೆ ಬೆಳೆಯುತ್ತಿದ್ದೇನೆ ಆಕಾಶಕ್ಕೆ ಆಶೆ ತಳೆಯುತ್ತೇನೆ ಸದಾ ಹಸಿರಾಗಿರಲು ತಳಿರಿಸಲು, ಹೂವಿಸಲು ಕನಸ ಕಾಣುವೆ ಎಲೆಗೊಂದು ಕಾಯಿ ಪಡೆವ ಬಯಕೆ, ಬಸಿರು ನನ್ನದು ಆದರೆ, ನಾ ಬೆಳೆಯುತ್ತಿದ್ದಂತೆ ಕಾಗೆ, ಗೂಗೆ, ಗಿಡುಗಗಳು ಚೇಳು ಹಾವುಗಳೆಲ್ಲ ನನ್ನನ್ನೇರಿವೆ ಇದಕ್ಕೂ ಭಯಂಕರ, ಜೀವ ಕೋಶ ಕೋಶಗಳೆಲ್ಲ ವರಲೆಗಳ ಜೀವ ಕ್ಷೇತ್ರಗಳಾಗಿ ಬಿಟ್ಟಿವೆ. ಬೇರ ಜಾಲವ ಬೀಸಿ ನೀರು, ಕ್ಷಾರವ...

ನಿನ್ನ ನೆನಪಾಗುವುದು

ನಿನ್ನ ನೆನಪಾಗುವುದು, ಹಬ್ಬದೂಟಗಳಲ್ಲಿ ಶ್ಯಾವಿಗೆಯ ಎಳೆಗಳಲ್ಲಿ ನಿನ್ನ ತೂಗುವಾಗ ಹಾಲ ಹನಿಗಳಲ್ಲಿ ನಿನ್ನ ತೇಲಿಸುವಾಗ ಹಾಲು-ಶ್ಯಾವಿಗೆ ರುಚಿಗೆ ಪುಟಿದ ಲಾಲಾರಸದಿ ನಾ ತೊಯ್ದು ತೊಪ್ಪೆಯಾದಾಗ ನಿನ್ನ ನೆನಪಾಗುವುದು, ಮುಳ್ಳುಗಳ ನಡುವೆ ನಳನಳಿಸಿ ಬಿರಿದ ಗುಲಾಬಿಯ ಕಂಡಾಗ ಪಕಳೆಗಳೆಲ್ಲ ಉದುರಿ ಉಳಿದ ಬರಿ ತೊಟ್ಟು ಕಂಡಾಗ ನಿನ್ನ ನೆನಪಾಗುವುದು ಗಾಳಿಪಟವ ಹಾರಿಸುವಾಗ ಸೂತ್ರ ಹರಿದ ಪಟವು ಸಿಡಿಲ್ಬೆಂಕಿಗೆ ಸುಟ್ಟು ಕಣ್ಣಿಗೆ ಕಾಣದಾದಾಗ ನಿನ್ನ ನೆನಪಾಗುವುದು ಕಡಲಂಚಿಗೆ ನಿಂತಾಗ ಹಕ್ಕಿಯೊಂದು ತಟ್ಟನೆರಗಿ ನೀರ ಮೀನ ಗಕ್ಕನೆತ್ತಿ ಹಾರಿದಾಗ ನಿನ್ನ ನೆನಪಾಗುವುದು.....

ದೇವಿಯಾಗಿಸಿದರು

ಇಲ್ಲಿ, ಕಾಲಕ್ಕೆ ಉಸಿರುಗಟ್ಟಿದೆ ಅಪ್ರಸಿದ್ಧರೆಲ್ಲ ಕ್ಷಣದಲ್ಲಿ ಸಿದ್ಧಪ್ರಸಿದ್ಧರು ಸ್ಥಳ ಮಹಿಮೆ. ದೇವ ರಾಲ; ಇದರ ಆಳ ಲೆಕ್ಕಹಾಕಿ ನಿ ರಾಳವಾಗಿ ಬದುಕುವುದು ಸಾಧ್ಯವಿಲ್ಲ ರೂಪಾ, ನಿನ್ನ ರೂಪ ಅಪರೂಪ ನಿನ್ನ ದೇವಿಯಾಗಿಸ ಹೊರಟವರಿಗೆ ಅದೇ ನಿನ್ನ ‘ಅರ್ಹತೆ’ಯಾಗಿ ಕಂಡಿರಬೇಕು! ನೀನು ಕನಸಿದ ಸೌಧಗಳೆಲ್ಲ ಇವರ ಬುಲ್‌ಡೋಜರ್‌ಗೆ ಸಿಕ್ಕಿ ಪುಡಿ ಪುಡಿಯಾದಾಗ ನೀ ನಕ್ಕೆ ಅಂದು ಕೊಂಡದ್ದು ನನ್ನ ಭ್ರಮೆ ಇದ್ದಿರಬೇಕು ಕನ್ವರ್, ಇದು ನಿನ್ನೊಬ್ಬಳ ಇಂದು ನಿನ್ನಿನ ಕಣ್ಣೀರ ಕಥೆಯಲ್ಲ ಶತಶತಮಾನಗಳ ಕಾಲ ಕೆಂಪು ಮಸಿಯಲ್ಲಿ ಹರಿದು...

ಬಕ ಧ್ಯಾನ

ಕಟ್ಟೀಮನಿ ನೀವು ಸ್ವಂತಕ್ಕೆ ಮನೆ ಕಟ್ಟಿದಿರೋ ಇಲ್ಲವೋ ಆದರೆ, ಕಟ್ಟುಗಳನ್ನೆಲ್ಲ ಮೆಟ್ಟಿ ಮುರಿದಿಕ್ಕುವುದಕ್ಕೇ ಹುಟ್ಟಿ ಬಂದವರು ನೀವು ಎಂಬುದಂತೂ ನಿಜ ಮೊನ್ನೆ ಖಾನಾವಳಿಯ ನೀಲಾ ಸಿಕ್ಕಿದ್ದಳು ಎಳ್ಳಷ್ಟೂ ಬದಲಾಗಿಲ್ಲ; ಇನ್ನಷ್ಟು ಸೊರಗಿದ್ದಾಳೆ ಅಷ್ಟೇ ಕಳೆದ ವಾರ ಹಳ್ಳಿಗೆ ಹೋದಾಗ ಗ್ರಾಮ ಸೇವಿಕಾ ಭೆಟ್ಟಿ ಆಗಿದ್ದಳು ಜ್ವಾಲಾಮುಖಿಯ ಮೇಲೆ ನಿಂತವಳಂತೆ ಮಾತನಾಡಿದಳು ಬೆಂಗಳೂರಿಗೊಂದು ಟಿಕೆಟ್ ಪಡೆದವರೆಲ್ಲ ಕಿಸಿದದ್ದು ಏನು? ಅಂತೆ ಕಂತೆ ಸಂತೆ ಎಲ್ಲ ಒದರಿಬಿಟ್ಟಳು ವಿಕೇಂದ್ರೀಕರಣ ಆಗಿದ್ದು ನಿಜ ಮೊದಲು ಗೌಡ ಒಬ್ಬ ಸುಲೀತಿದ್ದ ಈಗ ಅವನ...

ಗೋಯ್ದಜ್ಜನ ಹಾಡು

ಇವತ್ತು ಗೋಯ್ದಜ್ಜ ಹಪ್ಪು ಮುದುಕ ಹಿಡಿಗೋಲಿನೊಡೆಯನವ, ನಡು ನಡುಗಿ ನಡೆವ ಧೂಳು ಕೆಸರಿನ ದಾರಿಯಲಿ ಮೂಡಿದ ಅವನ ಹೆಜ್ಜೆ ಗುರುತು ನೆನಪ ಚಿತ್ತಾರವ ಬಿಡಿಸುತ್ತ ಹೋಗುವವು ಗೋಯ್ದಜ್ಜ ಪೊಕಳೆ ಹೊಡೆಯುವುದರಲ್ಲಿ ನಿಸ್ಸೀಮ. ಗಾಂಧೀಜಿಯ ಐವತ್ತನೆ ಹುಟ್ಟಿದ ವರ್ಷವೇ ನಾನು ಹುಟ್ಟಿದವನು ಎನ್ನುತ್ತಿರುತ್ತಾನೆ. ಬೆಟ್ಟದ ಗೋವಿಂದನ ಹೆಸರಿರಲಿ ಎಂದು ಅವನಪ್ಪನಿಟ್ಟ ಹೆಸರು ಸಾಲ ಕೊಡುವ ಧಣಿಗಳಿಗೆ, ಅವನ ನರ ಹರಿಯುವವರೆಗೆ ಕೆಲಸ ಕೊಳ್ಳುವ ಪ್ರಭುಗಳಿಗೆ ಕರೆಯಲು ದೊಡ್ಡದೆನಿಸಿ ‘ಗೋಯ್ದ’ ಅಂತಾಯ್ತು ಸರೀಕರು ಗೋಯ್ದಣ್ಣ ಅಂದರೆ ಗಡ್ಡ ನೆರೆತ ಅವನನ್ನು...