ಹೆಗಲ ಮೇಲಿನ ಅವರ ಕೈ ಭಾರದ ಬಿಸಿ

ಇದು ಎಂದಿನ ಭಾನುವಾರವಲ್ಲ. ಕಲಬುರ್ಗಿಯವರ ಹತ್ಯೆಯ ಸುದ್ದಿಯನ್ನು ಸಿದ್ದಣ್ಣನವರ ಹೇಳುತ್ತಿದ್ದಂತೆಯೇ ಒಂದು ಕ್ಷಣ ಕಂಪಿಸಿದೆ. ಬಹುಶಃ ಕಲಬುರ್ಗಿಯವರ ಎಲ್ಲ ಶಿಷ್ಯಕೋಟಿಯ ಸ್ಥಿತಿಯೂ ಅದೇ ಆಗಿರಬಹುದು. ನೆನಪುಗಳು ಕಳೆದ ಶತಮಾನದ ೮೦ರ ದಶಕಕ್ಕೆ ಜಾರಿತು. ೮೩-೮೫ರ ಅವಧಿಯಲ್ಲಿ ಅವರು ಕವಿವಿಯ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥರಾಗಿದ್ದರು. ಅದೇ ಅವಧಿಯಲ್ಲಿ ನಾನು ಕೂಡ ಅಲ್ಲಿ ಎಂ.ಎ.ವಿದ್ಯಾರ್ಥಿಯಾಗಿದ್ದೆ. ಅದೇ ವರ್ಷದಿಂದ ವಿವಿಧ ಡೀನ್‌ಗಳಿಗೆ ಎರಡು ವರ್ಷಗಳ ರೊಟೇಶನ್ ಪದ್ಧತಿ ಆರಂಭವಾಗಿತ್ತು. ಇವರಿಗಿಂತ ಮೊದಲು ಎಸ್.ಎಂ.ವೃಷಭೇಂದ್ರಸ್ವಾಮಿಯವರು ವಿಭಾಗದ ಮುಖ್ಯಸ್ಥರಾಗಿದ್ದರು. ಹೊಸ ಪದ್ಧತಿಯಿಂದಾಗಿ ವೃಷಭೇಂದ್ರ...

ಕ್ಯಾಲೆಂಡರ್ ಸುಂದರಿ ಬದಲಾಗುತ್ತಾಳೆ

ವರ್ಷ ಜಾರಿಹೋಗುತ್ತಿದೆ. ಗೋಡೆಯಲ್ಲಿ ಕ್ಯಾಲೆಂಡರ್ ಸುಂದರಿ ಬದಲಾಗುತ್ತಾಳೆ. ಮನೆಯ ಗೇಟಲ್ಲಿ ಅದೇ ಪೇಪರ್, ಅದೇ ಹಾಲಿನ ಹುಡುಗ, ಅದೇ ತರಕಾರಿಯವನ ಸೈಕಲ್, ಅದೇ ಕಸದ ಗಾಡಿ, ಮರದ ನೆರಳಲ್ಲಿ ಇಸ್ತ್ರಿಯವನು. ಆದರೆ ಉದಯಿಸುವ ಸೂರ್ಯ ಹಲವು ಹೊಸ ಹಂಬಲಗಳನ್ನು ಹೊತ್ತು ತರುತ್ತಿದ್ದಾನೆ. ಎಲ್ಲರಲ್ಲೂ ಒಂದೊಂದು ಸಂಕಲ್ಪ ತೊಡುವ ತುಡಿತ. ಎಂಥ ಸಿನಿಕನಾದರೂ, ಛೇ ಈ ವರ್ಷವಾದರೂ ಅಂಥದ್ದೆಲ್ಲ ಆಗುವುದಕ್ಕೆ ಬಿಡುವುದಿಲ್ಲ ಎಂದೋ, ಈ ವರ್ಷದಲ್ಲಿ ಇದನ್ನು ಮಾಡಿ ಮುಗಿಸುತ್ತೇನೆ ಎಂದೋ ಅಂದುಕೊಳ್ಳದೆ ಇರಲಾರ. ಇದೇ ಭೂಮಿ, ಇದೇ...