ಇದು ಹಳ್ಳಿಕೇರಿ ಹಾದಿ

ಸಂಶೋಧನೆಯನ್ನು ಗಂಭೀರವಾಗಿ ಸ್ವೀಕರಿಸಿದ ಹೊಸ ತಲೆಮಾರಿನವರಲ್ಲಿ ಡಾ.ಎಫ್.ಟಿ.ಹಳ್ಳಿಕೇರಿಯವರ ಹೆಸರು ಮೊದಲ ಸಾಲಿನಲ್ಲಿಯೇ ಬರುವುದು. ಡಾ.ವಿವೇಕ ರೈ ಅವರು ಹೇಳಿರುವಂತೆ ಕರ್ನಾಟಕದಲ್ಲಿ ಹಸ್ತಪ್ರತಿ ಮತ್ತು ಗ್ರಂಥಸಂಪಾದನ ಅಧ್ಯಯನಗಳು ಅವಗಣಿತವಾದ ಆಧುನಿಕ ಕಾಲಘಟ್ಟದಲ್ಲಿ ತಮ್ಮ ತಾರುಣ್ಯದ ಕಾಲದಲ್ಲೇ ‘ಜನಪ್ರಿಯತೆ ಇಲ್ಲದ’ ಈ ಕ್ಷೇತ್ರಗಳಿಗೆ ತಮ್ಮನ್ನು ತೆತ್ತುಕೊಂಡು ನೋಂಪಿಯಂತೆ ಕಾಯಕದಲ್ಲಿ ತೊಡಗಿ, ನಲುವತ್ತಕ್ಕೂ ಹೆಚ್ಚು ವಿದ್ವತ್ ಹೊತ್ತಗೆಗಳಿಗೆ ತಮ್ಮ ಅಂಕಿತವನ್ನು ಹಾಕಿದವರು ಹಳ್ಳಿಕೇರಿ. ಇದೀಗ ಅವರ ಎರಡು ಕೃತಿಗಳು ಬಂದಿವೆ. ‘ಕಂಠ ಪತ್ರ ೩’ ಅವರ ಬಹುಶಿಸ್ತೀಯ ಅಧ್ಯಯನ ಲೇಖನಗಳ ಸಂಕಲನವಾದರೆ...

ಲಕ್ಷ್ಮೀನಾರಾಯಣ ಭಟ್ಟರ ಕನ್ನಡ ಸಾಹಿತ್ಯ ಚರಿತ್ರೆ

ಒಂದು ಭಾಷೆಯ ಸಾಹಿತ್ಯ ಚರಿತ್ರೆ ಎಂದರೆ ಆ ಭಾಷೆಯನ್ನಾಡುವ ಜನರ ಸಾಂಸ್ಕೃತಿಕ ಚರಿತ್ರೆಯೂ ಆಗಿರುತ್ತದೆ ಮತ್ತು ಆ ಭಾಷೆಯ ಜನರು ಬದುಕಿರುವ ಭೂ ಪ್ರದೇಶದ ಚರಿತ್ರೆಯೂ ಆಗಿರುತ್ತದೆ. ಕನ್ನಡದಂಥ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿರುವ ಭಾಷೆಯೊಂದರಲ್ಲಿ ಸಾವಿರಕ್ಕೂ ಮಿಕ್ಕಿದ ವರ್ಷಗಳಲ್ಲಿ ರಚನೆಯಾಗಿರುವ ಸಾಹಿತ್ಯದ ಚರಿತ್ರೆಯನ್ನು ಬರೆಯುವುದೆಂದರೆ ಏಕ ವ್ಯಕ್ತಿಯಿಂದ ಅಸಾಧ್ಯವಾದ ಮಾತೇ ಸರಿ. ಈಗಾಗಲೆ ರಂ.ಶ್ರೀ ಮುಗಳಿಯವರು, ಮರಿಯಪ್ಪ ಭಟ್ಟರು ರಚಿಸಿದ ಸಾಹಿತ್ಯ ಚರಿತ್ರೆಗಳಿವೆ. ಆರ್.ನರಸಿಂಹಾಚಾರ್ ಅವರ ಕವಿಚರಿತೆ ಇದೆ. ಸಾಹಿತ್ಯವನ್ನು ವರ್ಗ ವ್ಯವಸ್ಥೆಯ ನೆಲೆಯಲ್ಲಿ...

ಪಾಕಿಸ್ತಾನದ ತೆಹಮಿನಾ ಬರೆದ ಸ್ತ್ರೀಶೋಷಣೆಯ ಕೈಫಿಯತ್ತು

‘ಆರನೆಯ ಹೆಂಡತಿಯ ಆತ್ಮಕಥೆ’ಯನ್ನು ಬರೆದು ಭಾರೀ ಸುದ್ದಿ ಮಾಡಿದ್ದ ತೆಹಮಿನಾ ದುರ‌್ರಾನಿಯವರು ಇದೀಗ ‘ಪೀಠಾಧಿಪತಿಯ ಪತ್ನಿ’ ಎಂಬ ಕಾದಂಬರಿಯನ್ನು ಬರೆದಿರುವರು. ಇದರ ವಸ್ತು ಕೂಡ ಸ್ತ್ರೀಶೋಷಣೆಯೇ. ಈ ಕಾದಂಬರಿಯ ಪ್ರಮುಖ ಪಾತ್ರಗಳು ಹೀರ್ ಮತ್ತು ಪೀರ್ ಸಾಯಿಬ್. ತಂದೆಯಿಲ್ಲದ ಬಡ ಕುಟುಂಬದ ಹೆಣ್ಣುಮಗಳು ಈ ಹೀರ್. ಅವಳ ತಾಯಿ ಕಷ್ಟಪಟ್ಟು ಹೇಗೋ ಗಣ್ಯವರ್ಗದ ಪೀರ್ ಸಾಯಿಬ್‌ನ ಜೊತೆ ಮಗಳ ಸಂಬಂಧವನ್ನು ಕುದುರಿಸುತ್ತಾಳೆ. ಅವನ ಸಂಬಂಧದಿಂದ ತಮ್ಮ ಸಾಮಾಜಿಕ ಅಂತಸ್ತು ಏರುವುದೆಂದೂ, ಇತರ ಹೆಣ್ಣುಮಕ್ಕಳಿಗೆ ಉತ್ತಮ ಸಂಬಂಧ ಸಿಗುವುದೆಂದೂ...

ಕೋಮಗಾತ ಮರು ಎಂಬ ನೌಕೆಯ ತ್ರಿಶಂಕು ಯಾನ

ಭಾರತೀಯರು ಸಾಹಸಪ್ರಿಯರು. ಬಹು ಹಿಂದೆಯೇ ಅವರು ಜಗತ್ತಿನ ಬೇರೆಬೇರೆ ಭೂಭಾಗಗಳಿಗೆ ವಲಸೆ ಹೋಗಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಅಲ್ಲಿ ತಮ್ಮ ಅಸ್ಮಿತೆಯನ್ನು ತೋರಿಸಿದ್ದಾರೆ. ಇದು ಕ್ರಿಸ್ತಪೂರ್ವ ಕಾಲದಿಂದಲೂ ನಡೆದುಬಂದ್ದದು. ಭಾರತದಲ್ಲಿ ಬ್ರಿಟಿಷರು ತಮ್ಮ ಸತ್ತೆಯನ್ನು ಸ್ಥಾಪಿಸಿದ ಸಂದರ್ಭದಲ್ಲಿ ಇಲ್ಲಿಯ ಬಡತನಕ್ಕೆ ಬೇಸತ್ತು ಉತ್ತಮ ಬದುಕನ್ನು ಹುಡುಕಿಕೊಂಡು, ಅಥವಾ ಅಂಥದ್ದೊಂದು ಭ್ರಮೆಯನ್ನು ಸೃಷ್ಟಿಸಿದವರ ಮಾತನ್ನು ನಂಬಿಕೊಂಡು ಕೆನಡಾ ದೇಶಕ್ಕೆ ವಲಸೆ ಹೊರಟು ಅಲ್ಲಿಂದ ತಿರಸ್ಕೃತರಾಗಿ ಮರಳಿ ತಾಯ್ನಾಡಿಗೆ ಬಂದಾಗ ಇಲ್ಲಿಯೂ ಸುಲಭದಲ್ಲಿ ಪ್ರವೇಶ ದೊರೆಯದೆ ಅತಂತ್ರರಾಗಿ ಕೆಲವರು ಸಾವನ್ನಪ್ಪಿದ...