ತ್ರಿಶಂಕು ಸ್ವರ್ಗ

*ಗುರಿ ತಲುಪದ ಅತಂತ್ರ ಸ್ಥಿತಿ ಅಲ್ಲಿಯೂ ಸಲ್ಲದ ಇಲ್ಲಿಯೂ ಸಲ್ಲದ ಸ್ಥಿತಿಯನ್ನು ಅನುಭವಿಸುವವರಿಗೆ ತ್ರಿಶಂಕು ಎಂದು ಹೇಳುತ್ತಾರೆ. ತ್ರಿಶಂಕು ಸ್ವರ್ಗವಾಯಿತು ಅವನ ಸ್ಥಿತಿ ಎಂದು ಹಾಸ್ಯ ಮಾಡುತ್ತಾರೆ ಇಲ್ಲವೇ ಮರುಕ ಪಡುತ್ತಾರೆ. ಏನಿದು ತ್ರಿಶಂಕು? ಮೂರು ಪಾಪಗಳೇ ತ್ರಿಶಂಕು. ಇದನ್ನು ಮಾಡಿದವನೇ ತ್ರಿಶಂಕು. ಪುರಾಣ ಪ್ರಸಿದ್ಧ ತ್ರಿಶಂಕು ಮಹಾರಾಜನ ಕತೆ ಯಾರಿಗೆ ಗೊತ್ತಿಲ್ಲ? ಈ ಮಹಾತ್ಮನ ತಂದೆ ಸತ್ಯವ್ರತನೇ ತ್ರಿಶಂಕು. ಈತ ತನ್ನ ಯವ್ವನದಲ್ಲಿ ವಿವಾಹಿತ ಸ್ತ್ರೀಯೊಬ್ಬಳನ್ನು ಮೋಹಿಸಿ ಆಕೆಯ ಅಪಹರಣ ಮಾಡಿದ್ದ. ಇದರಿಂದ ಆತನ ತಂದೆ...

ತೌಡುಕುಟ್ಟು

*ಪ್ರಯೋಜನಕ್ಕೆ ಬಾರದ ಮಾತನಾಡುವುದು ಒಬ್ಬ ತಾಸುಗಟ್ಟಲೆ ಭಾಷಣವನ್ನು ಮಾಡುತ್ತಲೇ ಇರುತ್ತಾನೆ. ಅದರಲ್ಲಿ ವಿಷಯವೇನೂ ಇರುವುದಿಲ್ಲ. ಹೇಳಿದ್ದನ್ನೇ ಹಿಂದೆ ಮುಂದೆ ಮಾಡಿ ಉಂಡೆಗೆ ನೂಲು ಸುತ್ತುವಂತೆ ಸುತ್ತುತ್ತಿರುತ್ತಾನೆ. ಅದನ್ನು ಕೇಳಿದವರು, ಬೇಸರ ಬಂದು, ಅದೇನು ತೌಡುಕುಟ್ಟುತ್ತಾನಲ್ಲ ಎನ್ನುತ್ತಾರೆ. ಅರ್ಥವಿಲ್ಲದ, ಪ್ರಯೋಜನಕ್ಕೆ ಬಾರದ ಮಾತನಾಡುವುದು ಹೇಗೆ ತೌಡು ಕುಟ್ಟುವ ಕೆಲಸವೋ ಅದೇ ರೀತಿ ಯಾವುದೇ ಪ್ರಯೋಜನಕ್ಕೆ ಬಾರದ ಕೆಲಸ ಮಾಡುವುದೂ ತೌಡುಕುಟ್ಟುವ ಕಾಯಕವೇ. ತೌಡು ಎಂದರೆ ಬತ್ತದ ಮೇಲಿನ ಕವಚ. ಈ ಕವಚವನ್ನು ತೆಗೆದಾಗ ಅದು ಅಕ್ಕಿ ಎನಿಸಿಕೊಳ್ಳುತ್ತದೆ. ಈ...

ತೂಗುಗತ್ತಿ

*ಅಧಿಕಾರದ ಅನಿಶ್ಚಿತತೆ ಶಿಕ್ಷೆಯ ವಿಧಾನಗಳೇ ವಿಚಿತ್ರ. ಹೇಳಿಕೇಳಿ ಶಿಕ್ಷೆ ಎನ್ನುವುದೇ ಕ್ರೂರವಾದುದು. ಇದನ್ನು ಇನ್ನಷ್ಟು ಕ್ರೂರಗೊಳಿಸುವ ಕ್ರಮಗಳೂ ಇವೆ. ಅದು ಶಿಕ್ಷೆ ವಿಧಿಸುವವರ ಮನೋವೃತ್ತಿಯನ್ನು ಅವಲಂಬಿಸಿರುತ್ತದೆ. ಶಿಕ್ಷೆ ವಿಧಿಸುವ ವ್ಯಕ್ತಿ ಸ್ವಲ್ಪ ದಯಾಳುವಾಗಿದ್ದರೆ ಶಿಕ್ಷೆ ಸರಳ ಮತ್ತು ನೇರವಾಗಿರುತ್ತದೆ. ಆತ ವಿಕ್ಷಿಪ್ತ ಮನೋಭಾವದ ವ್ಯಕ್ತಿಯಾಗಿದ್ದರೆ ವಿಚಿತ್ರ ಶಿಕ್ಷೆಗಳನ್ನು ನೀಡುತ್ತಾನೆ. ಹಿಂದೆಲ್ಲ ಶಿಕ್ಷೆಯನ್ನು ವಿಧಿಸುವ ಅಧಿಕಾರ ರಾಜರಲ್ಲಿ ಮಾತ್ರ ಇರುತ್ತಿತ್ತು. ಹುಲಿಯ ಪಂಜರದಲ್ಲಿ ಹಾಕಿ ಕೊಲ್ಲಿಸುವುದು, ಆನೆಯ ಕಾಲಲ್ಲಿ ತುಳಿಸಿ ಕೊಲ್ಲಿಸುವುದು, ಕಾದ ಎಣ್ಣೆಯಲ್ಲಿ ಕೈ ಅದ್ದಿಸುವುದು, ಕಣ್ಣುಗಳನ್ನು...

ತುಳಸಿನೀರು ಬಿಡು

*ಮರಳಿ ಬರುವ ಆಸೆ ತೊರೆದು ಕೊಡುವುದು ಅವನೇನು ವಾಪಸ್‌ ಕೊಡುತ್ತಾನಾ? ತುಳಸಿ ನೀರು ಬಿಟ್ಟ ಹಾಗೆ ಆಯ್ತು ನೋಡು ಎಂದು ಅಲವತ್ತುಕೊಳ್ಳುವುದನ್ನು ಕೇಳಿದ್ದೇವೆ. ಕೊಟ್ಟಿದ್ದು ಮರಳಿ ಬರದೆ ಇದ್ದಾಗ, ಬರುವುದಿಲ್ಲ ಎನ್ನುವುದು ನಿಶ್ಚಿತವಾದಾಗ ಇಂಥ ಅನಿಸಿಕೆ ಮೂಡುವುದು. ತುಳಸಿನೀರು ಬಿಡುವುದು ಎಂದರೇನು? ದಾನವನ್ನು ನೀಡುವಾಗ ತುಳಸಿದಳದಿಂದ ನೀರನ್ನು ಬಿಡಿಸಿ ಕೃಷ್ಣಾರ್ಪಣಮಸ್ತು ಎಂದು ಹೇಳುತ್ತಾರೆ. ನೀಡಿದ ದಾನ ಶ್ರೀಕೃಷ್ಣನಿಗೆ ಸಲ್ಲಲಿ ಎನ್ನುವುದು ಇದರ ತಾತ್ಪರ್ಯ. ಇನ್ನು, ದೇವರಿಗೆ ನೈವೇದ್ಯವನ್ನು ಮಾಡುವಾಗಲೂ ತುಳಸಿದಳದಿಂದ ನೀರನ್ನು ಸುಳಿದು ದೇವರಿಗೆ ಅರ್ಪಿಸುತ್ತಾರೆ. ಸತ್ತವರ...

ತುಘಲಕ್‌ ದರ್ಬಾರ್‌

*ಮನಬಂದಂತೆ ನಡೆಸುವ ಆಡಳಿತ ಮನಸ್ಸಿಗೆ ಬಂದುದನ್ನು ಮಾಡುವವರನ್ನು ಕಂಡಾಗ, ಅದೇನು ತುಘಲಕ್‌ ದರ್ಬಾರ್‌ ಆಗಿಹೋಯ್ತೆ?' ಎಂದು ಉದ್ಗಾರ ತೆಗೆಯುವವರನ್ನು ಕಾಣುತ್ತೇವೆ. ಹೀಗೆ ಮನಸ್ಸಿಗೆ ಬಂದುದನ್ನು ಮಾಡುವಾಗ ಅದರಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚಿಗೆ ಇರುತ್ತದೆ. ಯಾರೀತ ತುಘಲಕ್‌? ಕ್ರಿ.ಶ. 1325-1351ರ ವರೆಗೆ ದೆಹಲಿಯನ್ನು ಆಳಿದ ಸುಲ್ತಾನರಲ್ಲಿ ಒಬ್ಬ. ಇವನಲ್ಲಿ ಉದಾತ್ತವಾದ ಆಲೋಚನೆಗಳು ಇದ್ದವು. ಆದರೆ ಅವನ್ನು ಕಾರ್ಯರೂಪಕ್ಕೆ ತಂದಾಗ ಅವು ಯಶಸ್ವಿಯಾಗದೆ ಅವನಿಗೆ ಕೆಟ್ಟ ಹೆಸರನ್ನು ತಂದವು. ತನ್ನ ರಾಜಧಾನಿಯು ಕೇಂದ್ರ ಸ್ಥಳದಲ್ಲಿ ಇರಬೇಕು ಎಂದು ಆತ ಬಯಸಿದ....

ತಿರುಕನ ಕನಸು

*ಎಟುಕದ ಆಸೆಗಳು ನಿಜವಾಗುವುದು ಕನಸಿನಲ್ಲೇ ಕಿತ್ತು ತಿನ್ನುವ ಬಡತನ. ಹೀಗಿದ್ದೂ ಅರಸನಾಗುವ ಆಸೆ ಹೊತ್ತರೆ ಹೇಗೆ? ತೀವ್ರ ಬಡತನವೇ ಏನೇನೋ ಆಸೆಗಳನ್ನು ಮನಸ್ಸಿನಲ್ಲಿ ಹುಟ್ಟಿಸುತ್ತದೆ. ಆದರೆ ಅವು ಒಂದೂ ಈಡೇರುವುದಿಲ್ಲ. ಭಿಕ್ಷುಕ ರಾಜನಾಗುವುದು ಸಾಧ್ಯವೆ? ಅದು ಕನಸಿನಲ್ಲಿ ಮಾತ್ರ ಸಾಧ್ಯ. ಇಂಥ ಅಘಟಿತ ಘಟನಾವಳಿಗಳು ತಮ್ಮ ಬದುಕಿನಲ್ಲಿ ಘಟಿಸಲಿ ಎಂದು ಎಲ್ಲರೂ ಆಸೆಪಡುತ್ತಾರೆ. ಲಾಟರಿ ಟಿಕೆಟ್‌ ಕೊಳ್ಳುವ ಪ್ರತಿಯೊಬ್ಬನೂ ಬಂಪರ್‌ ಬಹುಮಾನ ತನಗೇ ಸಿಕ್ಕುವುದೆಂದು ಅದಕ್ಕೆ ತಕ್ಕಂತೆ ಕನಸನ್ನು ಹೊಸೆಯುತ್ತಾನೆ. ತನ್ನ ಕನಸನ್ನು ಇತರರೊಂದಿಗೆ ಹಂಚಿಕೊಂಡಾಗ ಅವರು,...

ಜೋಕುಮಾರ

*ಸಂತಾನ/ ಸಸ್ಯಸಮೃದ್ಧಿಯ ಪ್ರತೀಕ ಹೆಣ್ಣುಗಳ ವಿಷಯದಲ್ಲಿ ದುರ್ಬಲರಾಗಿರುವವರು, ಅತಿ ಕಾಮುಕರನ್ನು ಕಂಡಾಗ `ಒಳ್ಳೆ ಜೋಕುಮಾರ ಇದ್ದಾಂಗ ಇದ್ದಾನೆ’ ಎಂದು ಉತ್ತರ ಕರ್ನಾಟಕದಲ್ಲಿ ಬಯ್ಯುವುದನ್ನು ಕೇಳಿದ್ದೇವೆ. ಜೋಕುಮಾರ ಒಬ್ಬ ಜನಪದ ದೇವತೆ. ಅತಿ ಕಾಮಿ ಮತ್ತು ಏಳೇ ದಿನ ಬದುಕಿದ್ದವ ಎಂಬ ಜನಪದ ಕತೆ ಇದೆ. ಕಾಮುಕತೆಯಿಂದಾಗಿಯೇ ತನ್ನ ಜೀವಕ್ಕೆ ಎರವಾದವ ಎಂಬುದರಲ್ಲಿ ನೀತಿಯೂ ಇದೆ. ಭಾದ್ರಪದ ಮಾಸದ ಅಷ್ಟಮಿಯ ದಿನ ಜೋಕುಮಾರನ ಹಬ್ಬ ಆಚರಣೆ ನಡೆಯುತ್ತದೆ. ಹುಣ್ಣಿಮೆಯ ವರೆಗೂ ಇದು ಇರುತ್ತದೆ. ಜೋಕು ಮುನಿಯ ಅಂಶದಿಂದ ಹುಟ್ಟಿದ...

ಜುಗಲ್‌ಬಂದಿ

*ಒಬ್ಬರಿಗೊಬ್ಬರು ಪೈಪೋಟಿ ನೀಡುವ ದ್ವಂದ್ವ ಗಾಯನ ಇದು ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ಸಂಬಂಧಿಸಿದ ಪದ. ಇಬ್ಬರು ಗಾಯಕರು ಒಟ್ಟಿಗೆ ಹಾಡುವುದು ಅಥವಾ ಇಬ್ಬರು ಸಂಗೀತಗಾರರು ಜೊತೆಯಲ್ಲಿ ತಮ್ಮ ಸಂಗೀತ ವಾದನವನ್ನು ನುಡಿಸುವುದು ಜುಗಲ್‌ಬಂದಿ ಎನ್ನಿಸಿಕೊಳ್ಳುತ್ತದೆ. ಈ ಜುಗಲ್‌ಬಂದಿಯಲ್ಲಿ ಪರಸ್ಪರ ಸ್ಪರ್ಧೆ ಇರುತ್ತದೆ. ಪೈಪೋಟಿ ಇರುತ್ತದೆ. ಹಾಡುಗಾರಿಕೆಯಲ್ಲಿ ಹಾಡುವವರು ಮುಖ್ಯವಾಗುತ್ತಾರೆಯೇ ಹೊರತು ಪಕ್ಕವಾದ್ಯದವರಲ್ಲ. ಸಂಗೀತಸಾಧನದ ಜುಗಲ್‌ಬಂದಿಯಲ್ಲಿ ಪರಸ್ಪರ ಒಂದೇ ಸಾಧನವನ್ನು ನುಡಿಸಬೇಕೆಂದೇನಿಲ್ಲ. ಸಿತಾರ್‌-ಸಂತೂರ್‌, ತಬಲಾ- ಕೊಳಲು ಹೀಗೆ ಜೋಡಿ ಬೇರೆಬೇರೆ ಆಗಬಹುದು. ಇಂದು ಜಗಲ್‌ಬಂದಿ ಎನ್ನುವ ಪದ ಸಂಗೀತ...

ಜಟಕಾ ಬಂಡಿ

*ಗುರಿಯಿಲ್ಲದ ಪಯಣ ಸಾಧನ ಬದುಕನ್ನು ಜಟಕಾ ಬಂಡಿಗೆ ಹೋಲಿಸುವುದು ಕ್ಲೀಷೆಯೆನ್ನುವಷ್ಟು ಸಲ ಆಗಿದೆ. ಡಿ.ವಿ.ಜಿ.ಯವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಇದನ್ನು ಬರೆಯುವ ಮೊದಲು ಬೇರೆ ಯಾರಾದರೂ ಈ ಹೋಲಿಕೆ ನೀಡಿದ್ದರೋ ಇಲ್ಲವೋ ಗೊತ್ತಿಲ್ಲ. ಜಟಕಾ ಬಂಡಿಯಿಂದ ಡಿ.ವಿ.ಜಿ.ಯವರಿಗೆ ಹೆಸರು ಬಂತೋ ಡಿ.ವಿ.ಜಿ.ಯವರಿಂದ ಜಟಕಾ ಬಂಡಿ ಹೆಸರಾಯಿತೋ ಎಂಬುದನ್ನು ಹೇಳುವುದು ಕಷ್ಟ. ಮಂಕುತಿಮ್ಮನಂತೆಯೇ ಜಟಕಾ ಸಾಬೀಯೂ ಪ್ರಸಿದ್ಧನಾಗಿದ್ದಾನೆ. ಬಂಡಿ ಎಂದರೆ ಸಂಸಾರ. ಅದು ನಡೆಯಬೇಕೆಂದರೆ ಎರಡು ಗಾಲಿ ಗಂಡ ಮತ್ತು ಹೆಂಡತಿ ಅಗತ್ಯ. ಇಬ್ಬರೂ ಅನ್ಯೋನ್ಯವಾಗಿ ಇದ್ದರೆ ಸಂಸಾರ...

ಚಂಡಿಹಿಡಿ

*ಹೇಳಿದ್ದರ ವಿರುದ್ಧ ಮಾಡುವುದು ಮಕ್ಕಳು ತಮಗೆ ಅದೇನೋ ಬೇಕು ಎಂದು ತುಂಬಾ ಹಟ ಮಾಡುತ್ತಾರೆ. ಅವರು ಕೇಳಿದ್ದನ್ನು ಬಿಟ್ಟು ಬೇರೆ ಏನೇನೋ ಕೊಡುತ್ತೇವೆ ಎಂದರೂ ಅವರು ಸುಮ್ಮನಾಗುವುದೇ ಇಲ್ಲ. ಕೋಪ ಹೆಚ್ಚಾದಾಗ ಕೆಲವೊಮ್ಮೆ ತಲೆಯನ್ನು ಗೋಡೆಗೋ ನೆಲಕ್ಕೋ ಬಡಿದುಕೊಳ್ಳುವುದೂ ಇದೆ. ಇದನ್ನು ಕಂಡಾಗ, ಅದೇನು ಚಂಡಿ ಹಿಡಿದವರಂಗೆ ಮಾಡುತ್ತದೋ ಏನೋ ಎಂದು ಗೊಣಗುವುದಿದೆ. ಯಾರು ಈ ಚಂಡಿ? ಏನು ಚಂಡಿ ಕತೆ? ಉದ್ದಾಲಕ ಎಂಬ ಋಷಿಯೊಬ್ಬರು ಇದ್ದರು. ಅವರ ಹೆಂಡತಿಯೇ ಈ ಚಂಡಿ. ಆಕೆ ತಾನು ಹೇಳಿದಂತೆ...