ಯಾದವಿ ಕಲಹ

*ಕುಟುಂಬದೊಳಗಿನ ಜಗಳ ಇದು ತಮ್ಮ ತಮ್ಮೊಳಗೇ ಬಡಿದಾಡುವವರನ್ನು ನೋಡಿ ಯಾದವಿ ಕಲಹ ಅವರದು ಎಂದು ಹೇಳುತ್ತಾರೆ. ಒಗ್ಗಟ್ಟೇ ಬಲ ನಿಜ. ಒಗ್ಗಟ್ಟಿಲ್ಲದಿದ್ದರೆ ಯಾದವರ ಹಾಗೆ ತಮ್ಮತಮ್ಮೊಳಗೇ ಬಡಿದಾಡಿ ನಾಶವಾಗುತ್ತಾರೆ. ಶ್ರೀಕೃಷ್ಣ ಜನಿಸಿದ ಯಾದವ ಕುಲ ಅತ್ಯಂತ ಪ್ರಸಿದ್ಧ ಮತ್ತು ಅಜೇಯವಾಗಿತ್ತು. ಅವರನ್ನು ಸೋಲಿಸುವುದು ಯಾರಿಂದಲೂ ಸಾಧ್ಯವಿರಲಿಲ್ಲ. ಇದರಿಂದಾಗಿ ಸಹಜವಾಗಿಯೇ ಅವರಲ್ಲಿ ಅಹಂಕಾರವೂ ಮೂಡಿತ್ತು. ಯಾರನ್ನು ಬೇಕಾದರೂ ತಾವು ನಿಗ್ರಹಿಸಬಲ್ಲೆವು ಎಂಬ ಭಾವದಲ್ಲಿ ಅವರಿದ್ದಾಗ ದ್ವಾರಕೆಗೆ ಒಮ್ಮೆ ದೂರ್ವಾಸ ಮುನಿ ಆಗಮಿಸುತ್ತಾರೆ. ಮದೋನ್ಮತ್ತರಾದ ಯಾದವರು ಕೃಷ್ಣನ ಮಗ ಸಾಂಬನಿಗೆ...

ಯಕ್ಷ ಪ್ರಶ್ನೆ

*ಇದು ಮಿಲಿಯನ್‌ ಡಾಲರ್‌ ಕ್ವೆಶ್ಚನ್‌ಗೆ ಸಂವಾದಿಯೇ? ಮುಂದೇನಾಗುತ್ತದೆ ಎಂದು ಊಹಿಸಲಾಗದ ಸಂದರ್ಭದಲ್ಲಿ, ಉತ್ತರವೇ ಹೇಳಲಾಗದಂಥ ಕಗ್ಗಂಟು ಎದುರಾದಾಗಲೆಲ್ಲ ಇದೊಂದು ಯಕ್ಷ ಪ್ರಶ್ನೆ ಎಂದು ಹೇಳುವುದನ್ನು ನಾವು ಕೇಳಿದ್ದೇವೆ. ಏನಿದು ಯಕ್ಷ ಪ್ರಶ್ನೆ? ಯಾರು ಯಕ್ಷ? ಪ್ರಶ್ನೆ ಕೇಳಿದ್ದು ಯಾರಿಗೆ? ಅದೇನು ಪ್ರಶ್ನೆಗಳು? ಪಗಡೆಯಾಟದಲ್ಲಿ ಸೋತುಹೋದ ಪಾಂಡವರು ವನವಾಸಕ್ಕೆ ತೆರಳುತ್ತಾರೆ. ಅವರ ವನವಾಸ ಮುಗಿದು ಇನ್ನೇನು ಅಜ್ಞಾತವಾಸಕ್ಕೆ ತೆರಳಬೇಕು ಎನ್ನುವ ಸಂಧಿಸಮಯದಲ್ಲಿ ಈ ಪ್ರಸಂಗ ನಡೆಯುತ್ತದೆ. ಕಾಡಿನಲ್ಲಿದ್ದ ಪಾಂಡವರಿಗೆ ವಿಪರೀತ ಬಾಯಾರಿಕೆ. ಧರ್ಮರಾಯನು ನೀರನ್ನು ತೆಗೆದುಕೊಂಡು ಬರುವಂತೆ ನಕುಲನನ್ನು...

ಮುಂದೈತೆ ಮಾರಿ ಹಬ್ಬ

*ಬಲಿ ಕೊಡುತ್ತೇವೆ ಎಂಬ ಎಚ್ಚರಿಕೆ ಇದು ಉತ್ತರ ಕರ್ನಾಟಕದ ಜನರಿಗೆ ಮುಂದೈತೆ ಮಾರಿ ಹಬ್ಬ ಎಬ ಮಾತು ತಕ್ಷಣ ಅರ್ಥವಾಗಿಬಿಡುತ್ತದೆ. ಈಗೇನೋ ತಪ್ಪಿಸಿಕೊಂಡುಬಿಟ್ಟೆ. ಮುಂದೆ ನಿನ್ನನ್ನು ನೋಡಿಕೊಳ್ಳುತ್ತೇವೆ. ನಿನ್ನ ಮೇಲೆ ಸೇಡು ತೀರಿಸಿಕೊಳ್ಳುತ್ತೇವೆ. ನೀನು ಸಾಯುವಂತೆ ಹೊಡೆಯುತ್ತೇವೆ ಎಂಬೆಲ್ಲ ಅರ್ಥಗಳು ಇದರಲ್ಲಿವೆ. ಮಾರಿ ಹಬ್ಬದಲ್ಲಿ ಸಾಮಾನ್ಯವಾಗಿ ಪ್ರಾಣಿಗಳನ್ನು ಬಲಿ ಕೊಡುತ್ತಾರೆ. ಬಲಿ ಇಲ್ಲದ ಮಾರಿ ಹಬ್ಬ ಇಲ್ಲವೇ ಇಲ್ಲ. ಮಾರಿ ಹಬ್ಬದಲ್ಲಿ ಬಲಿ ಕೊಡುವ ಪ್ರಾಣಿಯನ್ನು ಹೇಗೆ ಮಾಲೆಗೀಲೆ ಹಾಕಿ ಶೃಂಗಾರಗೊಳಿಸುತ್ತಾರೆ ಎಂಬುದಕ್ಕೆ ದೇವನೂರ ಮಹಾದೇವ ಅವರು...

ಮುಂಡಾಸು ಮೂವತ್ತು ಮೊಳ

*ಅಸಾಂದರ್ಭಿಕವಾಗಿ ಪ್ರವರ ಹೇಳಿಕೊಳ್ಳುವವರು ಊಟ ಆಯಿತೆ ಕೇಳಿದರೆ ಮುಂಡಾಸು ಮೂವತ್ತು ಮೊಳ ಅಂದ ಎಂಬ ಮಾತೊಂದಿದೆ. ಅಳಿಯನೊಬ್ಬ ಹೊಸದಾಗಿ ಮುಂಡಾಸವನ್ನು ಖರೀದಿಸಿದ್ದ. ಆ ಮುಂಡಾಸವನ್ನು ತೋರಿಸುವುದಕ್ಕಾಗಿಯೇ ಮಾವನ ಮನೆಗೆ ಹೋಗುತ್ತಾನೆ. ಚೆನ್ನಾಗಿ ನೆರಿಗೆಗಳನ್ನು ಮಾಡಿಕೊಂಡು ತಲೆಗೆ ಸುತ್ತಿಕೊಂಡಿದ್ದ. ಮಾವನ ಮನೆಯಲ್ಲಿ ಯಾರೂ ಅವನ ಮುಂಡಾಸದ ಬಗ್ಗೆ ಮಾತೇ ಆಡಲಿಲ್ಲ. ಮಾವನು, ಮನೆಯಲ್ಲಿ ಎಲ್ಲರೂ ಕ್ಷೇಮವೆ ಎಂದಷ್ಟೇ ಕೇಳಿ ಸುಮ್ಮನಾದ. ಅತ್ತೆ ಬಂದವಳು ತನ್ನ ಮಗಳು, ಮೊಮ್ಮಕ್ಕಳು ಮೊದಲಾದವರ ಕುರಿತು ಕೇಳಿ ಸುಮ್ಮನಾದಳು. ಅಳಿಯನ ತಾಳ್ಮೆ ತಪ್ಪತೊಡಗಿತು. ತನ್ನ...

ಮಂಗನ ಕೈಯಲ್ಲಿ ಮಾಣಿಕ್ಯ

*ಯೋಗ್ಯತೆಯನ್ನು ಗುರುತಿಸುವುದೂ ಒಂದು ವಿಶೇಷ ಕಲೆ ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟರೆ ಅದು ಏನು ಮಾಡುತ್ತದೆ? ಒಮ್ಮೆ ಅದನ್ನು ಮೂಸಿ ನೋಡಿ ಎಸೆದುಬಿಡುತ್ತದೆ. ಮಾಣಿಕ್ಯದ ಮೌಲ್ಯ ಅದಕ್ಕೇನು ಗೊತ್ತಿದೆ? ಅಥವಾ ಮಾಣಿಕ್ಯದಿಂದ ಅದಕ್ಕೆ ಆಗಬೇಕಾದದ್ದು ಏನೂ ಇರುವುದಿಲ್ಲ. ಮಂಗನಿಗೆ ಉಪಯುಕ್ತವಾದದ್ದು ಮಾವಿನ ಹಣ್ಣೋ ಇನ್ನೇನೋ ಆಗಿದ್ದರೆ ಅದು ಅದನ್ನು ಮಾತ್ರ ತಿನ್ನುತ್ತಿತ್ತು. ವಸ್ತು ಎಷ್ಟೇ ಅಮೂಲ್ಯವಾದದ್ದು ಆಗಿರಬಹುದು. ಆದರೆ ಅದು ಉಪಯೋಗಕ್ಕೆ ಬರದಿದ್ದರೆ ಅದು ಕಸಕ್ಕಿಂತ ನಿಕೃಷ್ಟ ಎಂಬುದು ಈ ಹೇಳಿಕೆಯ ಒಂದು ಮುಖ. ಇದಕ್ಕೆ ಇನ್ನೊಂದು...

ಮೊಸಳೆ ಕಣ್ಣೀರು

*ತೋರಿಕೆಯ ದುಃಖ ಪ್ರದರ್ಶನ ಮೊಸಳೆ ಕಣ್ಣೀರು ಸುರಿಸುತ್ತಾನೆ ಅವನು, ನಂಬಬೇಡಿ ಅವನನ್ನು ಎಂದೋ, ನಿನ್ನ ಮೊಸಳೆ ಕಣ್ಣೀರಿಗೆ ನಾವೇನು ಕರಗಿ ಬಿಡುತ್ತೇವೆ ಅಂದುಕೊಂಡಿದ್ದೀಯಾ ಎಂದೋ ಹೇಳುವುದನ್ನು ಕೇಳಿದ್ದೇವೆ. ಏನಿದು ಮೊಸಳೆ ಕಣ್ಣೀರು? ಯಾವುದಾದರೂ ಮೃಗಾಲಯಕ್ಕೆ ಹೋದಾಗ ನೀವು ಮೊಸಳೆಯನ್ನು ನೋಡಿರಬಹುದು. ಕಣ್ಣು ಮುಚ್ಚಿ ಮಲಗಿರುವ ಮೊಸಳೆಯ ಕಣ್ಣಿಂದ ನೀರು ಹರಿಯುತ್ತಿರುವುದನ್ನೂ ನೀವು ಕಂಡಿರಬಹುದು. ಮೊಸಳೆ ತನ್ನ ಆಹಾರವನ್ನು ಆಕರ್ಷಿಸಲು ಕಣ್ಣೀರು ಸುರಿಸುತ್ತದೆ ಎಂಬ ಕತೆ ಇದೆ. ಮೊಸಳೆಯ ಕಣ್ಣಿಂದ ನೀರು ನಿರಂತರವಾಗಿ ಹರಿಯುತ್ತಿರುತ್ತದೆ. ಮೊಸಳೆಗೆ ದುಃಖವಾಗಿ ಅದು...

ಮೊಣಕೈಗೆ ಹತ್ತಿದ ಬೆಲ್ಲ

*ಸಿಕ್ಕಿಯೇ ಬಿಟ್ಟಿತು ಎನ್ನುವಂತಿರುತ್ತದೆ, ಆದರೆ ಸಿಗದು ಬೆಲ್ಲವೆಂದರೆ ಬಾಯಲ್ಲಿ ನೀರೂರದೆ ಇರುತ್ತದೆಯೇ? ತಿನ್ನಬೇಕೆಂಬ ಆಸೆ. ಬೆಲ್ಲದ ವಾಸನೆಯೇ ತಿನ್ನುವ ಆಸೆಯನ್ನು ಹುಟ್ಟಿಸುತ್ತದೆ. ಆದರೆ ಬೆಲ್ಲ ಇರುವುದು ಎಲ್ಲಿ? ಮೊಣಕೈಗೆ ಮೆತ್ತಿಕೊಂಡಿದೆ. ನಾಲಿಗೆಯನ್ನು ಚಾಚಿ ನೆಕ್ಕೋಣವೆಂದರೆ ನಾಲಿಗೆಯನ್ನು ಅಲ್ಲಿಗೆ ಒಯ್ಯುವುದು ಸಾಧ್ಯವೇ ಇಲ್ಲ. ಮಾಯದ ಜಿಂಕೆಯ ಹಾಗೆ ಕಣ್ಣೆದುರಿಗೆ ಇರುತ್ತದೆ. ಆದರೆ ಕೈಗೆ ಎಟಕುವುದೇ ಇಲ್ಲ. ಅನೇಕ ವಿಷಯಗಳು ನಮ್ಮ ಜೀವನದಲ್ಲೂ ಇದೇ ರೀತಿ ಇರುತ್ತವೆ. ಯಾವುದಕ್ಕೋ ಪ್ರಯತ್ನಿಸುತ್ತಿರುತ್ತೇವೆ. ಸಿಕ್ಕಿಯೇ ಬಿಟ್ಟಿತು ಎನ್ನುವಂತಿರುತ್ತದೆ. ಆದರೆ ಅದು ಎಂದಿಗೂ ನಮಗೆ...

ಮಣೆ ಹಾಕು

*ಮನ್ನಣೆ ನೀಡುವುದು ಅವನು ಹೇಳಿದ್ದಕ್ಕೆಲ್ಲ ಇವನು ಮಣೆ ಹಾಕುತ್ತಾನೆ ಎಂದು ಹೇಳುವುದನ್ನು ಕೇಳಿದ್ದೇವೆ. ಮಣೆ ಹಾಕುವುದೆಂದರೆ ಇಲ್ಲಿ ಎರಡು ಮಾತಿಲ್ಲದೆ ಒಪ್ಪಿಕೊಳ್ಳುವುದು ಎಂದರ್ಥ. ಅವನ ಮಾತಿಗೆ ಇವನು ಸಂಪೂರ್ಣ ಮನ್ನಣೆ ನೀಡಿದ ಎನ್ನುವುದು ತಾತ್ಪರ್ಯ. ನಮ್ಮ ಗ್ರಾಮೀಣ ಭಾಗದಲ್ಲಿ ಇಂದಿಗೂ ಕುರ್ಚಿಗಳಿಲ್ಲದೆ ಇರುವ ಮನೆಗಳು ತುಂಬಾ ಇವೆ. ಮನೆಗೆ ಯಾರಾದರೂ ಅತಿಥಿಗಳು ಬಂದರೆ, ಅವರು ಕುಳಿತುಕೊಳ್ಳುವುದಕ್ಕೆ, ತಂಗಿ, ಮಣೆ ತಂದುಕೊಂಡು ಎಂದು ಹೇಳುತ್ತಾರೆ. ಬಂದವರನ್ನು ಆದರಿಸುವ ಕ್ರಿಯೆಗಳಲ್ಲಿ ಇದೂ ಒಂದು. ಮಣೆ ಹಾಕುವುದು ನಮ್ಮ ಸಂಸ್ಕೃತಿಯ ಒಂದು...

ಮಣ್ಣಿನ ವಾಸನೆ

*ಸಾಹಿತ್ಯ ಮತ್ತು ನೆಲದ ಸಂಬಂಧವನ್ನು ಇದು ಹೇಳುತ್ತದೆ ಅವನ ಕಾವ್ಯದಲ್ಲಿ ಮಣ್ಣಿನ ವಾಸನೆಯೇ ಇಲ್ಲ ಎಂದು ಹೇಳುವುದನ್ನು ಕೇಳಿದ್ದೇವೆ. ಮಣ್ಣಿನ ವಾಸನೆ ಎಂಬ ನುಡಿಗಟ್ಟು ನವ್ಯ ಸಾಹಿತ್ಯ ವಿಮರ್ಶೆಯಲ್ಲಿ ಹೆಚ್ಚಾಗಿ ಪ್ರಚಾರಕ್ಕೆ ಬಂತು. ಸಾಮಾನ್ಯ ಜನರ ಮಾತಿನಲ್ಲಿ ಇದು ಬಳಕೆಯಾಗದಿದ್ದರೂ ಸಾಹಿತಿಗಳು ಪರಸ್ಪರ ಮಾತನಾಡುವಾಗ ಇದನ್ನು ಬಳಸುತ್ತಾರೆ. ಅವನ ಸಾಹಿತ್ಯದಂತೆ ಅವನ ಬದುಕಿಗೂ ಮಣ್ಣಿನ ವಾಸನೆ ಇಲ್ಲ ಎಂದೋ, ಅವನ ಮಾತಿನಲ್ಲಿ ಮಣ್ಣಿನ ವಾಸನೆಯ ಘಾಟು ಹೆಚ್ಚಾಗಿದೆ ಎಂದೋ ಹೇಳುವುದನ್ನು ಕೇಳಿದ್ದೇವೆ. ನವೋದಯ ಸಾಹಿತ್ಯಕ್ಕೆ ಪ್ರತಿಕ್ರಿಯಾತ್ಮಕವಾಗಿ ಹುಟ್ಟಿದ...

ಮಡಕೆಯಲ್ಲಿ ದೀಪ ಬೆಳಗುವುದು

*ಬದುಕು ಹಲವರಿಗೆ ಉಪಯುಕ್ತವಾಗುವಂತಿರಬೇಕು ಕೆಲವು ಲೋಭಿಗಳನ್ನು ಕಂಡಾಗ ಮಡಕೆಯಲ್ಲಿ ದೀಪ ಬೆಳಗುವವರು ಎಂದು ಅವರನ್ನು ಟೀಕಿಸುವುದನ್ನು ಕೇಳಿದ್ದೇವೆ. ಏನು ಹಾಗಂದರೆ? ದೀಪವನ್ನು ಬೆಳಗುವುದು ಜಗದ ಕತ್ತಲೆಯನ್ನು ಕಳೆಯಲೆಂದು. ಅದು ಬಯಲಿನಲ್ಲಿ ಇರಬೇಕು. ಪ್ರಕಾಶದ ವ್ಯಾಪ್ತಿ ದೂರದವರೆಗೂ ಬೀಳುತ್ತದೆ. ಚಿಕ್ಕ ಮಡಕೆಯಲ್ಲಿ ದೀಪವನ್ನು ಬೆಳಗಿ ಇಟ್ಟರೆ ಮಡಕೆಯೊಳಗಷ್ಟೇ ಪ್ರಕಾಶ ಬೀಳುತ್ತದೆ. ಅದರಿಂದ ಮಡಕೆಗೂ ಪ್ರಯೋಜನವಿಲ್ಲ. ಬೆಳಗಿದವರಿಗೂ ಪ್ರಯೋಜನವಿಲ್ಲ. ಇದ್ದೂ ಇಲ್ಲದಂತೆ ಅದು. ಕಾಡಿನಲ್ಲಿ ಅರಳಿದ ಕುಸುಮ ಅತ್ತ ದೇವರ ಅಡಿಗೂ ಇಲ್ಲ, ಹೆಣ್ಣಿನ ಮುಡಿಗೂ ಇಲ್ಲ. ಪರಿಮಳವನ್ನು ಆಘ್ರಾಣಿಸುವವರಿಗೂ...