ಮಠದೊಳಗಿನ ಬೆಕ್ಕು

*ಚಂಚಲ ಮನಸ್ಸಿನ ಮಾರ್ಜಾಲ ಅತಿಯಾದ ಚಂಚಲ ಬುದ್ಧಿಯವರನ್ನು ಕಂಡಾಗ, ಮಠದೊಳಗಿನ ಬೆಕ್ಕು ಇದ್ದಾಂಗ ಅವ್ನೆ ನೋಡು ಎಂದು ಟೀಕೆಯನ್ನು ಮಾಡುವುದನ್ನು ಕೇಳಿದ್ದೇವೆ. ಮಠದೊಳಗಿನ ಬೆಕ್ಕಿಗೆ ಅದೇನು ವಿಶೇಷ? ಸನ್ಯಾಸಿಯೊಬ್ಬರು ಮಠದಲ್ಲಿ ಬೆಕ್ಕನ್ನು ಸಾಕಿದ್ದರಂತೆ. ಬಂದವರಿಗೆಲ್ಲ ಆ ಸನ್ಯಾಸಿ ಅಹಿಂಸೆಯನ್ನು ಬೋಧಿಸುತ್ತಿದ್ದರು. ಆ ಬೋಧನೆ ಬೆಕ್ಕಿನ ಕಿವಿಗೂ ಬೀಳುತ್ತಿತ್ತು. ಸನ್ಯಾಸಿಯ ಪಕ್ಕದಲ್ಲಿಯೇ ಬೆಕ್ಕು ಕಣ್ಣು ಮುಚ್ಚಿಕೊಂಡು ಕುಳಿತಿರುತ್ತಿತ್ತು. ಸನ್ಯಾಸಿಯ ಸಾಮೀಪ್ಯದಿಂದ ಬೆಕ್ಕು ತನ್ನ ಮೂಲ ಸ್ವಭಾವವನ್ನು ಬಿಟ್ಟುಕೊಟ್ಟಿದೆಯೇನೋ ಎಂಬ ಅನುಮಾನ ಬರುವ ಹಾಗಿತ್ತು. ಹೀಗಿರುವಾಗ ಮಠದ ಮೂಲೆಯಲ್ಲಿ ಇಲಿಯೊಂದು...

ಭರತ ವಾಕ್ಯ

*ಪರದೆ ಬಿದ್ದರೂ ಅಭಿನಯ ನಿಲ್ಲಿಸದವರು ಭರತ ಎಂದರೆ ನಟ. ನಾಟಕದ ಕೊನೆಯಲ್ಲಿ ನಟನಾದವನು ದೇಶಕ್ಕೆ, ಜನತೆಗೆ ಒಳಿತಾಗಲಿ ಎಂದು ಶುಭವನ್ನು ಕೋರುವ ವಾಕ್ಯವನ್ನು ಹೇಳುತ್ತಾನೆ. ಅದೇ ಭರತ ವಾಕ್ಯ. ಭರತ ವಾಕ್ಯ ಮುಗಿದ ಮೇಲೆ ನಾಟಕ ಮುಗಿದ ಹಾಗೆ. ಕೆಲವೊಮ್ಮೆ, ಅವನದೇನು ಭರತ ವಾಕ್ಯವೆ?' ಎಂದು ಪ್ರಶ್ನಿಸುವುದಿದೆ. ಅಂದರೆ ಆತನೇನು ಪ್ರಶ್ನಾತೀತನೆ? ಅವನ ಮಾತನ್ನು ಮೀರಿ ಬೇರೆಯವರ ಮಾತು ಅಲ್ಲಿ ನಡೆಯುವುದಿಲ್ಲವೆ ಎಂದು ಕೇಳುವ ರೀತಿ ಅದು. ಕೆಲವೊಮ್ಮೆಭರತ ವಾಕ್ಯ ಮುಗಿದರೂ ನಾಟಕ ಮುಗಿದೇ ಇಲ್ಲ ನೋಡು...

ಭಟ್ಟಿ ಇಳಿಸು

*ಯಥಾವತ್ತಾಗಿ ನಕಲು ಮಾಡು ಏನಿದೆ ಇವಂದು? ಎಲ್ಲ ಅವನದ್ದೇ ಭಟ್ಟಿ ಇಳಿಸಿದ್ದಾನೆ ಎಂದು ಹೇಳುವುದನ್ನು ಕೇಳಿದ್ದೇವೆ. ಅಂದರೆ ಎಲ್ಲವನ್ನೂ ಯಥಾವತ್ತಾಗಿ ಸ್ವೀಕರಿಸಿದ್ದಾನೆ ಎಂಬ ಅರ್ಥ ಇಲ್ಲಿದೆ. ಬೇರೆಯವರದ್ದನ್ನು ಕದ್ದು ತಮ್ಮದೆಂದು ಹೇಳಿಕೊಳ್ಳುವಲ್ಲೂ ಈ ಭಟ್ಟಿ ಇಳಿಸುವಿಕೆ ಬಳಕೆಯಾಗುತ್ತದೆ. ಇದು ಚೌರ್ಯ. ಭಟ್ಟಿ ಇಳಿಸುವುದರ ಮೂಲ ಅರ್ಥ ಶುದ್ಧೀಕರಿಸು ಎನ್ನುವುದು. ಶುದ್ಧ ನೀರನ್ನು ತಯಾರಿಸುವ ವಿಧಾನಗಳಲ್ಲಿ ಭಟ್ಟಿ ಇಳಿಸುವುದೂ ಒಂದು. ನೀರನ್ನು ಕಾಯಿಸಿ ಅದರ ಹಬೆಯನ್ನು ಬೇರೊಂದು ಪಾತ್ರೆಯಲ್ಲಿ ಸಂಗ್ರಹಿಸಿ ಅದನ್ನು ತಂಪುಗೊಳಿಸಿದಾಗ ಶುದ್ಧ ನೀರು ದೊರೆಯುತ್ತದೆ. ಇದು...

ಭಗೀರಥ ಪ್ರಯತ್ನ

*ಪಟ್ಟುಬಿಡದೆ ಕೆಲಸವನ್ನು ಸಾಧಿಸುವುದು ಶ್ರೀರಾಮಚಂದ್ರ ಹುಟ್ಟಿದ ಇಕ್ಷ್ವಾಕು ವಂಶದಲ್ಲಿ ಸಗರನೆಂಬ ಅರಸ ಇದ್ದ. ಸಗರನ ಅರವತ್ತು ಸಾವಿರ ಮಕ್ಕಳು ಮುನಿ ಶಾಪದಿಂದ ಸುಟ್ಟು ಭಸ್ಮವಾಗುತ್ತಾರೆ. ಅವರಿಗೆ ಸದ್ಗತಿ ಬರಬೇಕೆಂದರೆ ದೇವಗಂಗೆಯನ್ನು ಅವರ ಬೂದಿಯ ಮೇಲೆ ಹರಿಸಬೇಕು ಎಂದು ಹೇಳುತ್ತಾರೆ. ಇದಕ್ಕಾಗಿ ಅವರ ಸಹೋದರ ದಿಲೀಪ ಪ್ರಯತ್ನ ಮಾಡುತ್ತಾನೆ. ಅವನಿಂದ ಅದು ಸಾಧ್ಯವಾಗುವುದಿಲ್ಲ. ದಿಲೀಪನ ಮಗ ಭಗೀರಥ ದೇವಗಂಗೆಯನ್ನು ಕುರಿತು ತಪಸ್ಸು ಮಾಡುತ್ತಾನೆ. ಗಂಗೆ ಧರೆಗಿಳಿಯಲು ಒಪ್ಪುತ್ತಾಳೆ. ದೇವಗಂಗೆಯ ರಭಸವನ್ನು ತಡೆಯುವುದು ಹೇಗೆ? ಭಗೀರಥ ಶಿವನನ್ನು ಒಲಿಸಿ ಗಂಗೆಯ...

ಬ್ರಹ್ಮವಿದ್ಯೆ

*ವಿದ್ಯೆಯ ದೇವತೆಯೆಂದು ಸರಸ್ವತಿಯನ್ನು ಪೂಜಿಸುತ್ತಾರೆ ಏನೋ ಒಂದನ್ನು ಸಾಧಿಸಬೇಕು, ಸಿದ್ಧಿಯನ್ನು ಪಡೆಯಬೇಕು ಎಂದು ಪ್ರಯತ್ನಿಸುತ್ತೇವೆ. ನಮ್ಮ ಪ್ರಯತ್ನವನ್ನು ನೋಡಿ ಕೆಲವರು, ಅದು ನಿನ್ನಿಂದ ಸಾಧ್ಯವಾಗದು ಎಂದು ಸವಾಲಿನ ರೀತಿಯಲ್ಲಿ ಹೇಳಬಹುದು. ಆಗ ನಾವು, `ಅದೇನು ಬ್ರಹ್ಮ ವಿದ್ಯೆಯೇ?’ ಎಂದು ಅವರನ್ನು ಪ್ರಶ್ನಿಸುತ್ತೇವೆ. ಬ್ರಹ್ಮವಿದ್ಯೆ ಎಂದರೇನು? ಇದು ಬಹಳ ಶ್ರೇಷ್ಠವಾದ ವಿದ್ಯೆ. ಗಳಿಸಲು ಕಷ್ಟವಾದ ವಿದ್ಯೆ ಎಂಬ ಅಭಿಪ್ರಾಯವಿದೆ. ಬ್ರಹ್ಮನನ್ನು ವೇದಬ್ರಹ್ಮ ಎಂದು ಕರೆಯುತ್ತಾರೆ. ಬ್ರಹ್ಮನ ನಾಲ್ಕು ಮುಖಗಳಿಂದ ನಾಲ್ಕು ವೇದಗಳು ಹೊರಬಿದ್ದವು ಎಂದು ನಂಬುತ್ತಾರೆ. ವೇದ ಎಂಬುದು...

ಬ್ರಹ್ಮಲಿಪಿ

*ಓದಲಾಗದಂಥ ಅಕ್ಷರಗಳು ಅದೇನು ಬ್ರಹ್ಮಲಿಪಿನೋ ಏನೋ? ಒಂದಾದರೂ ಓದಲಿಕ್ಕೆ ಆಗುತ್ತದೆಯೆ? ಎಂದು ತಾತ್ಸಾರದಿಂದ ಹೇಳುವುದನ್ನು ಕೇಳಿದ್ದೇವೆ. ತೀರಾ ಕೆಟ್ಟದ್ದಾಗಿ ಓದಲಿಕ್ಕೂ ಆಗದ ಹಾಗೆ ಬರೆದಿರುವುದನ್ನು ಕಂಡಾಗ ಹೀಗೆ ಹೇಳುವುದು ಸಾಮಾನ್ಯವಾಗಿದೆ. ಎಲ್ಲರ ಹಣೆಯಲ್ಲೂ ಬ್ರಹ್ಮನೇ ಭವಿಷ್ಯವನ್ನು ಬರೆಯುವವನಂತೆ. ಅದೇ ಬ್ರಹ್ಮ ಬರೆಹ. ಅದು ಯಾರಿಗೂ ಗೊತ್ತಿರುವುದಿಲ್ಲ. ಅದನ್ನು ಓದಿದವರು ಯಾರೂ ಇಲ್ಲ. ಯಾರೂ ಓದದ ಲಿಪಿಯೇ ಬ್ರಹ್ಮಲಿಪಿಯಾದ ಕಾರಣ ಕೆಟ್ಟದ್ದಾಗಿ ಬರೆದದ್ದೂ ಬ್ರಹ್ಮಲಿಪಿ ಇರಬಹುದೇನೋ? ಇನ್ನೊಂದಿದೆ. ನಮ್ಮೆಲ್ಲ ಭಾಷೆಯ ಲಿಪಿಗಳು ವಿಕಾಸಗೊಳ್ಳುತ್ತ ಬಂದದ್ದು ಬ್ರಾಹ್ಮಿ ಲಿಪಿಯಿಂದ ಎಂದು...

ಬ್ರಹ್ಮ ಕಪಾಲ

*ಶಿವನಿಗೆ ಅಂಟಿಕೊಂಡ ಬ್ರಹ್ಮನ ತಲೆಬುರುಡೆ ಒಂದು ಕಾಲದಲ್ಲಿ ಅತ್ಯಂತ ವೈಭವದ ಬದುಕನ್ನು ಬದುಕಿದವರು ಕಾರಣಾಂತರದಿಂದ ಹೀನ ಸ್ಥಿತಿಯನ್ನು ತಲುಪಿ ಕಂಡಕಂಡವರೆದುರು ಕೈಚಾಚುವಂತಾದರೆ ಅಂಥವರನ್ನು ಕಂಡು ಬ್ರಹ್ಮ ಕಪಾಲ ಅವನಿಗೆ ಹಿಡಿದಿದೆ ಎಂದು ಹೇಳುವುದಿದೆ. ಏನಿದು ಬ್ರಹ್ಮ ಕಪಾಲ? ಕಪಾಲವೆಂದರೆ ತಲೆಬುರುಡೆ. ಬ್ರಹ್ಮನ ತಲೆಬುರುಡೆ. ಹಿಂದೆ ದಕ್ಷಬ್ರಹ್ಮ ಯಾಗವನ್ನು ಮಾಡುತ್ತಾನೆ. ಅದಕ್ಕೆ ಶಿವನಿಗೆ ಆಹ್ವಾನವನ್ನು ನೀಡುವುದೇ ಇಲ್ಲ. ದಕ್ಷನ ಮಗಳೇ ದಾಕ್ಷಾಯಿಣಿ. ಶಿವನ ಪತ್ನಿ. ತಂದೆಯ ಯಜ್ಞಕ್ಕೆ ತಾನು ಹೋಗಬೇಕೆಂದು ಬಯಸುತ್ತಾಳೆ. ಅಲ್ಲಿ ಹೋದರೆ ಅಪಮಾನಕ್ಕೀಡಾಗುವಿ ಎಂದು ಶಿವ...

ಬೆನ್ನಿಗೆ ಬಿದ್ದ ಬೇತಾಳ

*ಬೇಡವೆಂದರೂ ಬೆಂಬಿಡದ ಅನಪೇಕ್ಷಿತ ವ್ಯಕ್ತಿ ಯಾರಾದರೊಬ್ಬ ವ್ಯಕ್ತಿಯಿಂದ ನಾವು ತಪ್ಪಿಸಿಕೊಳ್ಳಬೇಕು ಎಂದು ಬಯಸುತ್ತಿರುತ್ತೇವೆ. ಆದರೆ ಆಗುವುದೇ ಇಲ್ಲ. ಹೋದಲ್ಲಿ ಬಂದಲ್ಲಿ ಅದೇ ವ್ಯಕ್ತಿ ವಕ್ಕರಿಸುತ್ತಲೇ ಇರುತ್ತಾನೆ. ಆಗ ಗೊಣಗುತ್ತೇವೆ, ಬೆನ್ನಿಗೆ ಬಿದ್ದ ಬೇತಾಳ, ಇವನಿಂದ ತಪ್ಪಿಸಿಕೊಳ್ಳುವುದು ಹೇಗಪ್ಪ… ಎಂದು. ಬೇತಾಳ ಪಂಚವಿಂಶತಿ ಎಂಬ ಕತೆಗಳು ಕನ್ನಡದಲ್ಲೂ ಬೇತಾಳ ಕತೆಗಳು ಎಂದು ಪ್ರಸಿದ್ಧವಾಗಿವೆ. ಇದರಲ್ಲಿ ರಾಜಾ ವಿಕ್ರಮಾದಿತ್ಯನು ಸಿದ್ಧಿಗೋಸ್ಕರ ಸ್ಮಶಾನದಲ್ಲಿ ಮರದ ಮೇಲಿದ್ದ ಶವವನ್ನು ಕೆಳಗಿಳಿಸಿ ತರುವಾಗ ಆ ಶವದಲ್ಲಿ ಇದ್ದ ಭೂತವು (ಇದೇ ಬೇತಾಳ) ರಾಜನಿಗೆ ಕತೆಯೊಂದನ್ನು...

ಬೆಣ್ಣೆಯಲ್ಲಿ ಕೂದಲು ತೆಗೆ

*ಸಂಧಿವಿಗ್ರಹಿಗಳಿಗೆ ಇರಬೇಕಾದ ನೈಪುಣ್ಯ ಇದು ಅತ್ಯಂತ ನಯವಾಗಿ ಕೆಲಸವನ್ನು ಸಾಧಿಸಿಕೊಳ್ಳುವವರನ್ನು ಕಂಡಾಗ ಅವರ ಚಾಣಾಕ್ಷತೆಗೆ ತಲೆದೂಗಿ, ಬೆಣ್ಣೆಯಲ್ಲಿ ಕೂದಲು ತೆಗೆಯುವ ಕೆಲಸ ಮಾಡಿದ್ದಾನೆ ಎಂದು ಹೊಗಳುವುದನ್ನು ಕೇಳಿದ್ದೇವೆ. ಬೆಣ್ಣೆಯಲ್ಲಿ ಕೂದಲನ್ನು ಹಾಕಿ ಎಳೆದರೆ ಅದರ ಗುರುತೇ ಸಿಗುವುದಿಲ್ಲ. ಆದರೆ ಕೂದಲನ್ನು ತೆಗೆದಿದ್ದಂತೂ ನಿಜ. ತಮ್ಮದು ಯಾವುದಾದರೂ ಕೆಲಸವನ್ನು ಮಾಡಿಸಿಕೊಳ್ಳಬೇಕಿದ್ದರೆ ಮೇಲಧಿಕಾರಿಗಳ ಎದುರು ಇಂಥ ನಯಗಾರಿಕೆ ಬೇಕಾಗುತ್ತದೆ. ತಾವು ನಮಗಾಗಿ ಕೇಳುತ್ತಿದ್ದೇವೆ ಎಂದು ಅವರಿಗೆ ಅನಿಸಬಾರದು. ಆದರೆ ತಮ್ಮ ಕೆಲಸವಾಗಿರಬೇಕು. ರಾಯಭಾರಿಗಳಿಗೆ ಇಂಥ ಕಲೆ ಸಿದ್ಧಿಸಿರಬೇಕು. ಇವರನ್ನೇ ಹಿಂದೆ...

ಬೆಕ್ಕಿಗೊಂದು ಬಿಡಾರ

*ಗುಂಪಿನಲ್ಲಿದ್ದೂ ಅದರ ಭಾಗವಾಗದವ ಬೆಕ್ಕು ಬಿಡಾರ ಕಟ್ಟಿದ್ದು ನೋಡಿದ್ದೀರಾ? ಬಿಡಾರ ಅಂದರೆ ಪುಟ್ಟದಾದ ಮನೆ. ಬೆಕ್ಕು ಇರುವುದೇ ಮನೆಯಲ್ಲಿ. ಅಷ್ಟೊಂದು ದೊಡ್ಡದಾದ ಮನೆ ಇದ್ದರೂ ಬೆಕ್ಕು ತನ್ನದೇ ಒಂದು ಸ್ಥಳವನ್ನು ಮಲಗುವುದಕ್ಕೆ ಕಂಡುಕೊಂಡಿರುತ್ತದೆ. ಅದು ಮರಿಯನ್ನು ಹಾಕುವುದೂ ಅಲ್ಲೇ. ಮನೆಯೊಳಗೊಂದು ಮನೆಯನ್ನು ನಿರ್ಮಿಸಿಕೊಳ್ಳುವ ಬೆಕ್ಕಿನ ಸ್ವಭಾವವನ್ನು ಮನುಷ್ಯರಿಗೂ ಅನ್ವಯಿಸಿ ಹೇಳುವುದಿದೆ. ಎಲ್ಲರೂ ಸೇರಿ ಒಂದು ಕಾರ್ಯ ಸಾಧನೆಯಲ್ಲಿ ತೊಡಗಿರುವಾಗ ಒಬ್ಬರು ಪ್ರತ್ಯೇಕವಾಗಿ ತಮ್ಮದೇ ಕಾರ್ಯಕ್ರಮವನ್ನು ಜಾರಿಗೆ ತರಲು ಹೊರಟಾಗ `ಬೆಕ್ಕಿಗೆ ಬೇರೆ ಬಿಡಾರವೆ?’ ಎಂದು ಪ್ರಶ್ನಿಸುವುದಿದೆ. ಗುಂಪಿನಲ್ಲಿದ್ದೂ...