ಸೊಪ್ಪು ಹಾಕು

*ದೈವಕ್ಕೆ ರಕ್ಷಣೆಯ ಹೊಣೆ ಒಪ್ಪಿಸುವುದು ನಾನು ಅವನಿಗೆ ಸೊಪ್ಪು ಹಾಕುವುದಿಲ್ಲ ಎಂದು ಯಾರೋ ಹೇಳಿದ್ದನ್ನು ನೀವು ಕೇಳಿಸಿಕೊಂಡಿರಬಹುದು. ಆತನ ಮಾತಿನ ಭಾವಾರ್ಥವೂ ನಿಮಗೆ ವೇದ್ಯವಾಗಿರಬಹುದು. ಅವನಿಗೆ ನಾನು ಯಾವುದೇ ಗೌರವ ಕೊಡುವುದಿಲ್ಲ. ಅವನ ಮಾತು ನಾನು ಕೇಳುವುದಿಲ್ಲ. ಅವನ ಅಧೀನವಾಗಿ ನಾನು ಇರುವುದಿಲ್ಲ… ಹೀಗೆ ಅರ್ಥಪರಂಪರೆಯನ್ನು ಅದು ಹೇಳುತ್ತಿದೆ. ಏನಿದು ಸೊಪ್ಪು ಹಾಕುವುದು? ಸೊಪ್ಪು ಹಾಕಿದರೆ ಗೌರವ ನೀಡಿದಂತೆ ಅಂತ ಇಲ್ಲಿ ಅರ್ಥ ಹೊರಡುತ್ತದೆ. ಸೊಪ್ಪು ಹಾಕದಿರುವುದು ಇದರ ವಿರುದ್ಧ ಅರ್ಥವನ್ನು ನೀಡುತ್ತದೆ. ಊರ ಗಡಿಯಲ್ಲಿ ಒಂದು...

ನಿರುದ್ವಿಗ್ನ ನಿರೂಪಣೆಯ ಬಾಡಿಗೆ ಮನೆಗಳ ರಾಜಚರಿತ್ರೆ

ಕಳೆದ ಶತಮಾನದ ಕೊನೆಯ ಎರಡು ದಶಕಗಳು ಮತ್ತು ಈ ಶತಮಾನದ ಕಳೆದೆರಡು ದಶಕಗಳಲ್ಲಿ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರೆಯುತ್ತಿರುವ ಕೆ. ಸತ್ಯನಾರಾಯಣ ಅವರು ಮುಖ್ಯವಾಗಿ ಕತೆಗಾರ ಎಂದೇ ಪ್ರಸಿದ್ಧರಾದವರು. ತಮ್ಮ ಬರೆಹಗಳಲ್ಲಿ ಸದಾ ಪ್ರಯೋಗಶೀಲರಾಗಿರುವ ಅವರು ಹೊಸ ರೀತಿಯಲ್ಲಿ ಹೇಳುವುದಕ್ಕೆ ಸದಾ ತುಡಿಯುತ್ತಿರುತ್ತಾರೆ. ಈ ಮಾತಿಗೆ ಅವರ ಆತ್ಮಕಥನವೇ ಸಾಕ್ಷಿ. ಆತ್ಮಕಥನಗಳನ್ನು ಹೀಗೂ ಬರೆಯಬಹುದೇ ಎಂದು ಆಶ್ಚರ್ಯಪಡುವ ಹಾಗೆ ವಿಶಿಷ್ಟವಾಗಿ ಅವರು ಬರೆದಿರುವರು. ಅದು ಒಂದಲ್ಲ, ನಾಲ್ಕು ಸಂಪುಟಗಳಲ್ಲಿ. ಮೊದಲಿನದು, ನಾವೇನು ಬಡವರಲ್ಲ, ಎರಡನೆಯದು ಸಣ್ಣಪುಟ್ಟ...

ಸುಪಾರಿ

*ಹತ್ಯೆಗೆ ನೀಡುವ ವೀಳ್ಯ ಹಿಂದೂ ಸಂಪ್ರದಾಯದಲ್ಲಿ ಅಡಕೆಗೆ ಮಹತ್ವದ ಸ್ಥಾನವಿದೆ. ಪೂಜೆಯ ಸಂದರ್ಭದಲ್ಲಿ ದೇವರ ಪ್ರತಿಮೆಗೆ ಬದಲಾಗಿ ಅಡಕೆಯನ್ನೇ ಇಟ್ಟು ಪೂಜಿಸುವ ಪದ್ಧತಿಯೂ ಇದೆ. ಹಿಂದೆ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸದೆ ಇದ್ದ ಕಾಲದಲ್ಲಿ ಎಲೆ ಮತ್ತು ಅಡಕೆಯನ್ನು ನೀಡಿ ಶುಭಕಾರ್ಯಗಳಿಗೆ ಆಹ್ವಾನ ನೀಡಲಾಗುತ್ತಿತ್ತು. ಇದನ್ನು ವೀಳ್ಯ ಎಂದು ಕರೆಯಲಾಗುತ್ತಿತ್ತು. ಶತ್ರು ರಾಜನನ್ನು ಯುದ್ಧಕ್ಕೆ ಆಹ್ವಾನಿಸುವಾಗಲೂ ಎಲೆ ಅಡಕೆಯನ್ನು ಕಳುಹಿಸಲಾಗುತ್ತಿತ್ತು. ಇದು ರಣವೀಳ್ಯ. ಅಡಕೆಗೆ ಹಿಂದಿ, ಮರಾಠಿಯಲ್ಲಿ ಸುಪಾರಿ ಎಂದು ಕರೆಯುತ್ತಾರೆ. ಅವನ ಕೊಲೆಗೆ ಇವನು ಸುಪಾರಿ ಕೊಟ್ಟಿದ್ದಾನೆ...

ಸುಗ್ರೀವಾಜ್ಞೆ

*ಕಠಿಣವಾದ ಆದೇಶ ಸುಗ್ರೀವಾಜ್ಞೆ ಎಂಬ ಪದವನ್ನು ಆಗಾಗ ಕೇಳುತ್ತಿರುತ್ತೇವೆ, ಓದುತ್ತಿರುತ್ತೇವೆ. ಯಾರಾದರೂ ಹೀಗೇ ಮಾಡು ಎಂದು ಕಟ್ಟುನಿಟ್ಟಾಗಿ ಹೇಳಿದರೆ, ನಿಂದೇನು ಸುಗ್ರೀವಾಜ್ಞೆನಾ ಎಂದು ಕೇಳುತ್ತಾರೆ. ಯಾವುದೋ ವಿಷಯದ ಕುರಿತು ಸರ್ಕಾರ ಸುಗ್ರೀವಾಜ್ಞೆಯನ್ನು ಹೊರಡಿಸಿದೆ ಎಂದು ಪತ್ರಿಕೆಯಲ್ಲಿ ಬಂದುದನ್ನು ಓದುತ್ತೇವೆ. ಹಿಂದೆ ರಾಮಾಯಣದಲ್ಲಿ ಶ್ರೀರಾಮ ಸೀತೆಯನ್ನು ಕಳೆದುಕೊಂಡು ಆಕೆಯನ್ನು ಹುಡುಕುತ್ತ ಸುಗ್ರೀವನ ಸ್ನೇಹವನ್ನು ಸಂಪಾದಿಸುತ್ತಾನೆ. ವಾಲಿಯನ್ನು ಕೊಂದ ಶ್ರೀರಾಮನು ಸುಗ್ರೀವನಿಗೆ ಆತನ ಪತ್ನಿಯನ್ನು ಮರಳಿ ಕೊಡಿಸುತ್ತಾನೆ. ಸೀತೆಯನ್ನು ಹುಡುಕಿಕೊಡಬೇಕಾದ ಅನಿವಾರ್ಯತೆ ಈಗ ಸುಗ್ರೀವನ ಮೇಲೆ. ಸುಗ್ರೀವನು ವಾನರರನ್ನೆಲ್ಲ ಕರೆದು...

ಸಿಂಹಸ್ವಪ್ನ

*ಕೇಳಿದರೇ ಭಯವಾಗುವ ಸ್ಥಿತಿ ಎದುರಾಳಿಗಳಿಗೆ ಆತ ಸಿಂಹಸ್ವಪ್ನವಾಗಿದ್ದ ಎಂದು ವರ್ಣಿಸುವುದನ್ನು ಕೇಳಿದ್ದೇವೆ. ಅಂದರೆ ಎದುರಾಳಿಗಳು ಅವನನ್ನು ಕಂಡರೆ ಅಂಜುತ್ತಿದ್ದರು, ಎದುರಾಳಿಗಳಲ್ಲಿ ಆತ ಭಯವನ್ನು ಹುಟ್ಟಿಸುತ್ತಿದ್ದ, ಎದುರಾಳಿಗಳನ್ನು ನಾಶ ಮಾಡುವ ಸಾಮರ್ಥ್ಯ ಅತನಲ್ಲಿತ್ತು ಎಂದೆಲ್ಲ ಭಾವಾರ್ಥ ಇಲ್ಲಿ ಹುಟ್ಟುತ್ತದೆ. ಆತನ ಹೆಸರು ಕೇಳಿದರೆ ನಿದ್ದೆಯಲ್ಲೂ ಬೆಚ್ಚಿಬೀಳುತ್ತಾರೆ ಎಂದರೆ ಆತನ ಕ್ರೂರತೆಯನ್ನೂ ಇದು ಹೇಳುತ್ತದೆ. ಪೊಲೀಸ್‌ ಅಧಿಕಾರಿಯೊಬ್ಬನ ವಿಷಯದಲ್ಲಿ ಅಪರಾಧಿಗಳಿಗೆ ಸಂಬಂಧಿಸಿದಂತೆ ಹೀಗೆ ಹೇಳಿದರೆ ಆತ ದಕ್ಷ ಎಂದರ್ಥ. ಇದೇ ಮಾತುಗಳನ್ನು ಅಪರಾಧಿಗಳ, ರೌಡಿಗಳ ವಿಷಯದಲ್ಲಿ ಹೇಳಿದರೆ ಆತ ಕ್ರೂರಿ...

ಸಾಡೇಸಾತಿ

*ಇದು ಏಳೂವರೆ ವರ್ಷ ಕಾಡುವ ಶನಿ ತುಂಬಾ ಕಾಡುವವರನ್ನು ಕಂಡಾಗ, ಇದೆಲ್ಲಿ ಸಾಡೇಸಾತಿ ಗಂಟುಬಿತ್ತಪ್ಪ ಎಂದು ಉದ್ಗಾರ ತೆಗೆಯುತ್ತೇವೆ. ಈ ಸಾಡೇಸಾತಿಯಿಂದ ತಪ್ಪಿಸಿಕೊಂಡರೆ ಸಾಕು ಎಂದೋ, ಈ ಸಾಡೇಸಾತಿ ಯಾವಾಗ ಮುಗಿಯುತ್ತದೋ ಗೊತ್ತಿಲ್ಲ ಎಂದೋ ಹೇಳುವುದು ನಿಮ್ಮ ಕಿವಿಗೂ ಬಿದ್ದಿರಬಹುದು. ಏನಿದು ಸಾಡೇಸಾತಿ? ಏಳೂವರೆ ಎಂದರೆ ಸಾಡೇಸಾತಿ. ಗ್ರಹಗಳಲ್ಲಿ ಶನಿ ವಕ್ರಗ್ರಹ ಎಂಬ ಖ್ಯಾತಿ ಇದೆ. ಯಾರದಾದರೂ ರಾಶಿಯಲ್ಲಿ ಶನಿಯ ಪ್ರವೇಶವಾದರೆ ಅವರಿಗೆ ಕಷ್ಟಗಳು ಪ್ರಾರಂಭವಾಗುತ್ತವೆ ಎಂಬ ನಂಬಿಕೆ ಇದೆ. ಈ ಶನಿಯು ಏಳೂವರೆ ವರ್ಷ ಕಾಡುವನಂತೆ....

ಸವ್ಯಸಾಚಿ

*ಎರಡೂ ಕೈಯಿಂದ ಬಾಣ ಬಿಡುವವನು ಒಂದಕ್ಕಿಂತ ಹೆಚ್ಚು ಭಾಷೆಗಳಲ್ಲಿ ಬರೆಯಬಲ್ಲವನನ್ನು, ಎರಡೆರಡು ವಿಷಯಗಳಲ್ಲಿ ಸಮಾನ ಪರಿಣತಿಯನ್ನು ಹೊಂದಿದವನನ್ನು ಕಂಡಾಗ ಸವ್ಯಸಾಚಿ ಎಂದು ಅವನನ್ನು ಕರೆಯುವುದಿದೆ. ಮಹಾಭಾರತದಲ್ಲಿ ಅರ್ಜುನನ್ನು ಸವ್ಯಸಾಚಿ ಎಂದು ಕರೆಯಲಾಗಿದೆ. ಅರ್ಜುನ ಎರಡೂ ಕೈಯಿಂದ ಗಾಂಡೀವ ಧನುಸ್ಸಿನಲ್ಲಿ ಬಾಣವನ್ನು ಹೂಡಿ ಪ್ರಯೋಗಿಸಬಲ್ಲವನಾಗಿದ್ದ. ಅದೊಂದು ಅಪರೂಪದ ಕೌಶಲ್ಯ. ಸವ್ಯ ಎಂದರೆ ಎಡ, ಬಲ, ತಿರುಗು ಮುರುಗು ಎಂಬ ಅರ್ಥಗಳಿವೆ. ಸವ್ಯ ಅಪಸವ್ಯ ಪದಗಳನ್ನು ಅಪರಕರ್ಮದಲ್ಲಿ ಪ್ರಯೋಗಿಸುತ್ತಾರೆ. ಸವ್ಯಕ್ಕೇ ಎಡ ಬಲ ಎಂಬ ಅರ್ಥಗಳಿದ್ದರೂ ಅಲ್ಲಿ ಸವ್ಯವನ್ನು ಕೇವಲ...

ಸರ್ಪಗಾವಲು

*ಕಟ್ಟುನಿಟ್ಟಾದ ಎಚ್ಚರಿಕೆಯ ಕಾವಲು ಏನೋ ಗಲಾಟೆಯಾಗುತ್ತದೆ. ಯಾವುದೋ ಕಾರಣಕ್ಕೆ ಬಂದೋಬಸ್ತಿಯನ್ನು ಏರ್ಪಡಿಸಬೇಕಾಗುತ್ತದೆ. ಆಗ ಅಧಿಕ ಸಂಖ್ಯೆಯಲ್ಲಿ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸುತ್ತಾರೆ. ದುಷ್ಕರ್ಮಿಗಳು ನುಸುಳದಂತೆ ಪಹರೆ ಕಾಯುತ್ತಾರೆ. ಆ ಕಾವಲನ್ನು ಕುರಿತು, ಪೊಲೀಸರು ಸರ್ಪಗಾವಲು ಏರ್ಪಡಿಸಿದ್ದರು ಎಂದು ಹೇಳುವುದನ್ನು ಕೇಳಿದ್ದೇವೆ. ಸರ್ಪಗಾವಲು ಎಂದರೆ ಕಟ್ಟುನಿಟ್ಟಿನ, ಅತ್ಯಂತ ಎಚ್ಚರಿಕೆಯ ಕಾವಲು ಎಂದರ್ಥ. ಸರ್ಪದ ಕಾವಲು ಅತ್ಯಂತ ಎಚ್ಚರಿಕೆಯದೆ? ಸರ್ಪವೆಂದರೆ ವಿಷದ ಪ್ರಾಣಿ. ಅದರ ಹತ್ತಿರ ಹೋಗುವುದಕ್ಕೇ ಜನ ಭಯ ಬೀಳುತ್ತಾರೆ. ಸರ್ಪದ ಇರುವೇ ಭದ್ರತೆಯನ್ನು ಒದಗಿಸುತ್ತದೆ. ಸರ್ಪ ನಿಧಿಯನ್ನು...

ಸ್ಮಶಾನ ವೈರಾಗ್ಯ

*ಶಾಶ್ವತವಲ್ಲ ಈ ವೈರಾಗ್ಯ ಏಕೆ ಇವೆಲ್ಲ ಬೇಕಾಗಿತ್ತ? ನನಗೆ ಇವುಗಳಲ್ಲಿ ಯಾವುದರಲ್ಲೂ ಆಸಕ್ತಿ ಇಲ್ಲ. ನಾನೀಗ ಎಲ್ಲವನ್ನೂ ಬಿಟ್ಟುಬಿಟ್ಟಿದ್ದೇನೆ ಎಂದು ಹೇಳುವ ಮಾತನ್ನು ನಾವು ಕೇಳಿಸಿಕೊಂಡಿದ್ದೇವೆ. ಇದೇ ವ್ಯಕ್ತಿಗಳು ತಮ್ಮ ಈ ಹೇಳಿಕೆಗೆ ವಿರುದ್ಧವಾಗಿ ಸಂಪೂರ್ಣ ಆಸಕ್ತರಾಗಿ ವರ್ತಿಸಿದ್ದನ್ನೂ ನೋಡಿದ್ದೇವೆ. ಇಂಥ ಉಲ್ಟಾ ಪಲ್ಟಾ ಜನರನ್ನು ನೋಡಿದಾಗ ಇವರದು ಸ್ಮಶಾನ ವೈರಾಗ್ಯ ಎಂದು ಹಾಸ್ಯ ಮಾಡಿದ್ದರೂ ಮಾಡಿರಬಹುದು ನೀವು. ಏನಿದು ಸ್ಮಶಾನ ವೈರಾಗ್ಯ? ಹೆಣವನ್ನು ಸುಡುವುದಕ್ಕೆ ಸ್ಮಶಾನಕ್ಕೆ ಒಯ್ಯುತ್ತಾರೆ. ಸುಡಲು ಹೋದವರಲ್ಲಿ ಒಂದು ರೀತಿಯ ವೈರಾಗ್ಯ ಮೂಡುತ್ತದೆ....

ಶಂಖದಿಂದ ಬಂದದ್ದು ತೀರ್ಥ

*ದಂಡನಾಧಿಕಾರದಿಂದ ಬರುವ ಮಾತು ತೀರ್ಥ ಪವಿತ್ರ ಜಲ. ಜಲಕ್ಕೆ ಪಾವಿತ್ರ್ಯ ಹೇಗೆ ಬರುತ್ತದೆ? ಗಂಗಾನದಿಯನ್ನು ದೇವನದಿ ಎಂದು ಕರೆಯುತ್ತಾರೆ. ಹೀಗಾಗಿ ಗಂಗಾಜಲ ಪವಿತ್ರ ಜಲವಾಗುತ್ತದೆ. ಅದು ತೀರ್ಥವೂ ಆಗುತ್ತದೆ. ನಮ್ಮಲ್ಲಿ ಎಲ್ಲ ನದಿಗಳನ್ನೂ ಪವಿತ್ರ ಎಂದೇ ಭಾವಿಸಲಾಗುತ್ತದೆ. ಝರಿಗಳನ್ನು ತೀರ್ಥ ಎನ್ನುತ್ತೇವೆ. ರಾಮತೀರ್ಥ, ಲಕ್ಷ್ಮಣ ತೀರ್ಥ, ಅಗಸ್ತ್ಯ ತೀರ್ಥ ಇತ್ಯಾದಿ. ಇನ್ನು ಸಾಮಾನ್ಯ ಬಾವಿಯ ನೀರು ತೀರ್ಥದ ಮಟ್ಟಕ್ಕೆ ಏರುವುದು ಯಾವಾಗ? ಇದಕ್ಕೆ ನಮ್ಮ ಶಾಸ್ತ್ರದಲ್ಲಿ ಉಪಾಯಗಳಿವೆ. ಬಾವಿಯ ನೀರನ್ನು ಶಂಖದ ಮೂಲಕ ಹಾಯಿಸಿದಾಗ ಅದು ತೀರ್ಥವಾಗುತ್ತದೆ....