*ಶಾಶ್ವತವಲ್ಲ ಈ ವೈರಾಗ್ಯ

ಕೆ ಇವೆಲ್ಲ ಬೇಕಾಗಿತ್ತ? ನನಗೆ ಇವುಗಳಲ್ಲಿ ಯಾವುದರಲ್ಲೂ ಆಸಕ್ತಿ ಇಲ್ಲ. ನಾನೀಗ ಎಲ್ಲವನ್ನೂ ಬಿಟ್ಟುಬಿಟ್ಟಿದ್ದೇನೆ ಎಂದು ಹೇಳುವ ಮಾತನ್ನು ನಾವು ಕೇಳಿಸಿಕೊಂಡಿದ್ದೇವೆ. ಇದೇ ವ್ಯಕ್ತಿಗಳು ತಮ್ಮ ಈ ಹೇಳಿಕೆಗೆ ವಿರುದ್ಧವಾಗಿ ಸಂಪೂರ್ಣ ಆಸಕ್ತರಾಗಿ ವರ್ತಿಸಿದ್ದನ್ನೂ ನೋಡಿದ್ದೇವೆ.
ಇಂಥ ಉಲ್ಟಾ ಪಲ್ಟಾ ಜನರನ್ನು ನೋಡಿದಾಗ ಇವರದು ಸ್ಮಶಾನ ವೈರಾಗ್ಯ ಎಂದು ಹಾಸ್ಯ ಮಾಡಿದ್ದರೂ ಮಾಡಿರಬಹುದು ನೀವು. ಏನಿದು ಸ್ಮಶಾನ ವೈರಾಗ್ಯ?
ಹೆಣವನ್ನು ಸುಡುವುದಕ್ಕೆ ಸ್ಮಶಾನಕ್ಕೆ ಒಯ್ಯುತ್ತಾರೆ. ಸುಡಲು ಹೋದವರಲ್ಲಿ ಒಂದು ರೀತಿಯ ವೈರಾಗ್ಯ ಮೂಡುತ್ತದೆ. ಎಷ್ಟೆಲ್ಲ ಹೋರಾಡಿದ, ಎಷ್ಟೆಲ್ಲ ಬಡಿದಾಡಿದ, ಎಷ್ಟೆಲ್ಲ ಗಳಿಸಿಟ್ಟ. ಆದರೆ ಈಗ ಏನಾದರೂ ತೆಗೆದುಕೊಂಡು ಹೋದನೆ? ಇದ್ದಾಗಲಾದರೂ ಸುಖವಾಗಿ ಇದ್ದನೆ? ಇನ್ನು ಯಾರನ್ನೂ ನೋಯಿಸಬಾರದು, ಯಾರನ್ನೂ ವಂಚಿಸಬಾರದು. ಸತ್ತ ಮೇಲೆ ಇವೆಲ್ಲ ನಮ್ಮ ಜೊತೆ ಬರುವುದಿಲ್ಲ. ನಾವು ಮಾಡಿದ ಪಾಪ ಪುಣ್ಯ ಮಾತ್ರ ನಮ್ಮ ಜೊತೆ ಬರುವುದು ಎಂದೆಲ್ಲ ಆಲೋಚಿಸುತ್ತಿರುತ್ತೇವೆ.
ಮರುದಿನ ಮತ್ತೆ ಯಥಾಪ್ರಕಾರ ಮೊದಲಿನಂತೇ ನಮ್ಮ ಆಚಾರ ವಿಚಾರ ಎಲ್ಲ ಇರುತ್ತದೆ.
ಇಂಥ ಕ್ಷಣಭಂಗುರವಾದ ಉದರ ವೈರಾಗ್ಯ, ಹೆರಿಗೆ ವೈರಾಗ್ಯ ಇತ್ಯಾದಿಗಳೆಲ್ಲ ಇವೆ.