ಮಂಕು ತಿಮ್ಮನ ಕಗ್ಗಕ್ಕಿಂತ ಒಂದು ಮೆಟ್ಟಿಲು ಮೇಲಿನ ವೈಚಾರಿಕತೆ ಇದರಲ್ಲಿದೆ (ನಾನು ಮರುಳ ಮುನಿಯನ ಕಗ್ಗವನ್ನು ಓದಿದ್ದು ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ 1984ರಲ್ಲಿ. ಪಠ್ಯಕ್ರಮದ ಭಾಗವಾಗಿ ಬರೆದ ವಿಮರ್ಶೆ ಇದು. ಸುಮಾರು 38 ವರ್ಷಗಳ ಹಿಂದೆ.) ಅಕಸ್ಮಾತ್ತಾಗಿ ಡಿವಿಜಿ ಕನ್ನಡಿಗರ ನೆನಪಿನಿಂದ ಮರೆಯಾದರೂ ಅವರ ಮಂಕುತಿಮ್ಮ ಮಾತ್ರ ಮರೆಯಾಗಲಾರ. ಡಿವಿಜಿ ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲ. ಅವರು ಟ್ಟುಹೋದ ಸಾಹಿತ್ಯ ರಾಶಿ ಮಾತ್ರ ಇದೆ. ಅವರು ನಿಧನರಾಗಿ ಒಂಬತ್ತು ವರ್ಷಗಳ ನಂತರ (1984) ಅವರದೇ ಆದ ಕೃತಿಯೊಂದು...
ಶ್ರೀಯುತ ಎಲ್.ಎಸ್.ಶಾಸ್ತ್ರಿಯವರು ಅವಿಶ್ರಾಂತ ಬರೆಹಗಾರರು. ಅವರ ಬರೆವಣಿಗೆಯನ್ನು ನಾನು ಮೂರು ದಶಕಗಳಿಗೂ ಅಧಿಕ ಕಾಲದಿಂದ ಓದುತ್ತ ಬಂದವನು. ನಾನು ಬೆಳಗಾವಿಯಲ್ಲಿ ನಾಡೋಜ ಪತ್ರಿಕೆಯಲ್ಲಿ ನನ್ನ ಪತ್ರಿಕೋದ್ಯೋಗವನ್ನು ಆರಂಭಿಸಿದಾಗ ನನ್ನ ಮತ್ತು ಅವರ ಮೊದಲ ಭೇಟಿ. ಅವರ ತಾಲೂಕಿನವನೇ ನಾನು ಆಗಿದ್ದರಿಂದ ಅವರಿಗೆ ನನ್ನ ಮೇಲೆ ವಿಶೇಷ ಪ್ರೀತಿ. ನಾಡೋಜದ ಸಾಪ್ತಾಹಿಕ ಪುರವಣಿಯನ್ನು ಅವರೇ ಆಗ ನೋಡಿಕೊಳ್ಳುತ್ತಿದ್ದರು. ಶಾಸ್ತ್ರಿಯವರು ಹಲವು ಪ್ರಕಾರದ ಬರೆವಣಿಗೆಯನ್ನು ಮಾಡಿದ್ದರೂ ಕಾದಂಬರಿಯೊಂದನ್ನು ಬರೆದಿರುವುದು ಇದೇ ಮೊದಲು. ಅವರಿಗೆ ಈಗ ಹತ್ತಿರ ಹತ್ತಿರ 80 ವರ್ಷ....
(ಈ ಲೇಖನ ಕನ್ನಡಪ್ರಭ ಪತ್ರಿಕೆಯ ಸಾಪ್ತಾಹಿಕ ಪ್ರಭದಲ್ಲಿ 26-1-2003ರಂದು ಪ್ರಕಟವಾದದ್ದು)ಮೋಹನದಾಸ ಕರಮಚಂದ ಗಾಂಧಿ ಉರ್ಫ್ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನು 1948ರ ಜನವರಿ 30ರಂದು ನಥೂರಾಮ ಗೋಡಸೆ ದಿಲ್ಲಿಯ ಬಿರ್ಲಾ ಭವನದಲ್ಲಿ ಗುಂಡಿಕ್ಕಿ ಕೊಂದು ಹಾಕಿದ. ಈ ಹತ್ಯೆಗಾಗಿ ಅವನನ್ನು ಗಲ್ಲಿಗೇರಿಸಲಾಯತು.ಈ ಎರಡು ವಾಕ್ಯಗಳಲ್ಲಿ ಸ್ವತಂತ್ರ ಭಾರತದ ಅತ್ಯಂತ ದುರಂತವಾದ ಘಟನೆಯೊಂದನ್ನು ಪೊಲೀಸ್ ಶೈಲಿಯಲ್ಲಿ ಹೇಳಿ ಮುಗಿಸಬಹುದು. ಗಾಂಧೀಜಿಯವರ ಹತ್ಯೆ ನಡೆದು 55 ವರ್ಷಗಳಾದವು. ಗಾಂಧೀಜಿ ಹತ್ಯೆ ನಂತರದ ಎರಡನೆ ತಲೆಮಾರು ಗಾಂಧೀಜಿ ಹತ್ಯೆಯ ವಿವರಗಳ ಬಗೆಗೆ ಕತ್ತಲೆಯಲ್ಲಿದೆ....
ಹಿಂದೆಲ್ಲ ಹೊಳೆಸಾಲಿನಲ್ಲಿ ಹೆಂಚಿನ ಮನೆಗಳು ಅಪರೂಪ. ಒಂದೂರಿನಲ್ಲಿ ಹೆಂಚಿನ ಮನೆಗಳು ಎಷ್ಟು ಎಂದು ಕೇಳಿದರೆ ಕೈಬೆರಳಿನಲ್ಲಿ ಎಣಿಕೆ ಮಾಡಿ ಹೇಳಬಹುದಾಗಿತ್ತು. ಕಾಸರಕೋಡು, ಮಾವಿನಕುರ್ವೆಗಳಲ್ಲಿ ಹೆಂಚಿನ ಕಾರ್ಖಾನೆಗಳಿದ್ದರೂ ಮಚ್ವೆಯಲ್ಲಿ ತಂದ ಮಂಗಳೂರು ಹೆಂಚಿನ ಮನೆಯೇ ಶ್ರೇಷ್ಠ ಎಂಬ ನಂಬಿಕೆಯೂ ಇತ್ತು. ಅಂಥ ಒಂದೆರಡು ಮನೆಗಳೂ ಹೊಳೆಸಾಲಿನಲ್ಲಿದ್ದವು. ಅದು ಬಿಟ್ಟರೆ ಉಳಿದವು ಹೊದಿಕೆಯ ಮನೆಗಳಾಗಿದ್ದವು. ಹೊದಿಕೆಯ ಮನೆಗಳೆಂದರೆ ತೆಂಗಿನ ಮಡ್ಲು ನೇಯ್ದು ಮಾಡಿದ ತಡಿಕೆಯನ್ನು ಹೊದಿಸಿದ್ದು, ಕಬ್ಬಿನ ಗರಿಗಳನ್ನು ಹೊದೆಸಿದ್ದು, ಅಡಕೆ ಮರದ ಸೋಗೆಯನ್ನು ಹೊದೆಸಿದ್ದು, ತಾಳೆ ಮರದ ಗರಿಯನ್ನು...
ಈ ಶತಮಾನ ಕಂಡಿರುವ ಅತ್ಯಂತ ಭೀಕರವಾದ ಮಾನವ ದುರಂತ ಕೊರೋನಾ ವೈರಸ್ಸಿನ ಹಾವಳಿ ಮಾಡಿರುವ ಗಾಯ ಮಾಯುವುದಕ್ಕೆ ಹಲವು ವರ್ಷಗಳೇ ಬೇಕಾಗಬಹುದು. ಸಮಾಜಜೀವಿಯಾದ ಮನುಷ್ಯ ಅನಿವಾರ್ಯವಾಗಿ ತನ್ನನ್ನೇ ತಾನು ಹೇಗೆ ಒಂದೊಂದು ದ್ವೀಪವಾಗಿ ಮಾರ್ಪಡಿಸಿಕೊಳ್ಳಬೇಕಾಗಿ ಬಂತು ಎಂಬುದು ಇದೀಗ ಬದುಕಿರುವ ಎಲ್ಲರ ಅನುಭವವೂ ಆಗಿದೆ. ಈ ಕೋವಿಡ್ ಆಘಾತವನ್ನು ಸೃಜನಶೀಲ ಮನಸ್ಸು ಹೇಗೆ ಪರಿಭಾವಿಸಿತು ಎಂಬುದು ಒಂದು ಕುತೂಹಲ. ಹಲವರು ಹಲವು ರೀತಿಯಲ್ಲಿ ಇದಕ್ಕೆ ಬರೆಹದ ರೂಪವನ್ನು ಕೊಟ್ಟಿದ್ದಾರೆ. ಬಹುತೇಕ ಎಲ್ಲರೂ ಮೋಡ ಕರಗಿ ನೀರಾಗಿ ಸುರಿದ...
ಕಾಲುಬಂದ ಕುರುವ ಕಥಾಸಂಕಲನ ಇದರಲ್ಲಿ 10 ಕತೆಗಳು ಇವೆ. ಬೆಂಗಳೂರಿನ ಶ್ರೀನಿವಾಸ ಪುಸ್ತಕ ಪ್ರಕಾಶನ ಇದನ್ನು 2011ರಲ್ಲಿ ಪ್ರಕಟಿಸಿತು. 1.ಚಂಪಾಲು ಸೆಟ್ಟಿಯೂ ಲಕುಮವ್ವಿಯೂ 2.ಬೆಟ್ಟದ ನೆಲ್ಲಿಕಾಯ ಸಮುದ್ರದೊಳಗಣ ಉಪ್ಪು 3.ಕುನ್ನಿಯೊಂದು ದಾಸನಾಗಿ ಸತ್ತುದರ ವಿವರಗಳು 4.ಗೋಕರ್ಣದಲ್ಲಿ ಹೀಗೊಂದು ಲಿಂಗಪೂಜೆ 5.ಕಾಲುಬಂದ ಕುರುವ 6.ಸಂಕರ 7.ವಿಲೋಮ 8.ಪತ್ತೆ 9.ಕ್ಷೇತ್ರೋತ್ಸವ 10.ನಿರಾಕರಣ ನನ್ನ ಬಗೆಗೆ ನಾನು ನಾನು ಒಬ್ಬ ಬರೆಹಗಾರ ಆಗುವ ಪೂರ್ವದಲ್ಲಿ ನಾನೊಬ್ಬ ಒಳ್ಳೆಯ ಓದುಗ ಆಗಿದ್ದೆ. ಈಗಲೂ ಒಳ್ಳೆಯ ಗ್ರಂಥಗಳನ್ನು ಓದಬೇಕು ಎಂಬ ಆಸೆಯನ್ನು ಇಟ್ಟುಕೊಂಡಿದ್ದೇನೆ. ಹೊನ್ನಾವರ...
ಕನ್ನಡದ ಹಿರಿಯ ಸಾಹಿತಿಗಳಲ್ಲಿ ಒಬ್ಬರಾದ ಕೆ.ಸತ್ಯನಾರಾಯಯಣ ಅವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದವರು. ಸೃಜನ ಶಕ್ತಿಯ ಜೊತೆಯಲ್ಲಿ ವಿಮರ್ಶನ ಶಕ್ತಿಯನ್ನೂ ಮೇಳೈಸಿಕೊಂಡವರು. ಅವರ ಹೊಸ ಕೃತಿ `ಅವರವರ ಭವಕ್ಕೆ ಓದುಗರ ಭಕುತಿಗೆ' ಅವರ ಸೃಷ್ಟಿಕ್ರಿಯೆಯ ಹೊಸ ಸಾಮರ್ಥ್ಯದ ಕಡೆಗೆ ಬೆರಳು ತೋರಿಸುತ್ತದೆ. ಈ ಕೃತಿಯಲ್ಲಿ ಅವರು ಕನ್ನಡದ ಏಳು ಜನ ಹೆಸರಾಂತ ಸಾಹಿತಿಗಳು ರಚಿಸಿರುವ ಆತ್ಮಚರಿತ್ರೆಗಳನ್ನು ಪರಿಶೀಲನೆಗೆ ಎತ್ತಿಕೊಂಡಿದ್ದಾರೆ. ಅದರ ಮೂಲಕ ಅವರು ಆತ್ಮಚರಿತ್ರೆ ಪ್ರಕಾರಕ್ಕೆ ಒಂದು ವ್ಯಾಖ್ಯೆಯನ್ನು ನೀಡುವ ಪ್ರಯತ್ನ ಮಾಡಿರುವುದನ್ನು ಗಮನಿಸಬಹುದು. ಈ...
ಕೆ.ಸತ್ಯನಾರಾಯಣ ಅವರ ಕಪಾಳಮೋಕ್ಷ ಪ್ರವೀಣ ತಮ್ಮ ನಿರಂತರ ಬರೆಹಗಳಿಂದ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಶ್ರೀಮಂತಗೊಳಿಸುತ್ತಿರುವ ಕೆ.ಸತ್ಯನಾರಾಯಣ ಅವರು ಇದೀಗ ಕಪಾಳಮೋಕ್ಷ ಪ್ರವೀಣ' ಎಂಬ ನೂತನ ಕೃತಿಯಲ್ಲಿ ಕೆಲವು ಸ್ವಭಾವ ಚಿತ್ರಗಳನ್ನು ನೀಡಿದ್ದಾರೆ. ತಮ್ಮ ಈ ಬರೆಹಗಳ ಹೊಳಹು ಹೊಳೆದದ್ದು ಡಿವಿಜಿಯವರಜ್ಞಾಪಕ ಚಿತ್ರಶಾಲೆ’ ಎಂಬ ಕೃತಿಯಿಂದ ಎಂದು ಲೇಖಕರು ಹೇಳಿಕೊಂಡಿದ್ದಾರೆ. ಹಾಗೆಯೇ ಜಾರ್ಜ್ ಆರ್ವೆಲ್ಲರ ಬರೆಹಗಳೂ ಅವರ ಮೇಲೆ ಪ್ರಭಾವ ಬೀರಿರಬಹುದು. ತುದಿವಾದಿಗಳು' ಬರೆಹದಲ್ಲಿ ಅವರು ಆರ್ವೆಲ್‌ರ,ಒಬ್ಬ ಮನುಷ್ಯ ನಮಗೆ ವೈಯಕ್ತಿಕ ಸ್ತರದಲ್ಲಿ ಪರಿಚಯವಾದಮೇಲೆ, ಆತ್ಮೀಯತೆ ಮೂಡಿದ...
ಕನ್ನಡದ ಜನಪ್ರಿಯ ಕಾದಂಬರಿಕಾರರಲ್ಲಿ ಒಬ್ಬರಾದ ಕೃಷ್ಣಮೂರ್ತಿ ಪುರಾಣಿಕರ ಕೊನ್ನಾರ ಕಿಂಕಿಣಿ' ಕಾದಂಬರಿಯು ಅವರ ಬರೆವಣಿಗೆಯ ಆರಂಭದ ದಿನಗಳಲ್ಲಿ ರಚನೆಗೊಂಡಿದ್ದು. ಇದು ಪ್ರಕಟವಾದದ್ದು 1961ರ ಆಗಸ್ಟ್ ತಿಂಗಳಿನಲ್ಲಿ. ಸರಿಸುಮಾರು ಅರವತ್ತು ವರ್ಷಗಳ ನಂತರ ಈ ಕಾದಂಬರಿಯ ಮರು ಅವಲೋಕನ ಮಾಡುವಾಗ ಕೆಲವು ಹೊಳಹುಗಳು ನಮಗೆ ಇರಬೇಕಾಗುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಕನ್ನಡ ನವೋದಯ ಮತ್ತು ಪ್ರಗತಿಶೀಲ ಲೇಖಕರು ಕಾದಂಬರಿ ಪ್ರಕಾರಕ್ಕೆ ಒಂದು ಗಟ್ಟಿಯಾದ ಪರಂಪರೆಯನ್ನು ಹಾಕಿಕೊಟ್ಟಿದ್ದರು. ಐತಿಹಾಸಿಕ ಕಾದಂಬರಿಗಳು, ಸಾಮಾಜಿಕ ಕಾದಂಬರಿಗಳು, ಅನ್ಯಭಾಷೆಯಿಂದ ಅನುವಾದಗೊಂಡ ಕಾದಂಬರಿಗಳು ಎಲ್ಲವೂ ಹುಲುಸಾಗಿ ಎಂಬಂತೆ...