ನನಗೆ ಅರ್ಥವಾಗದ ಅದೆಷ್ಟೋ ಸಂಗತಿಗಳು ಈ ಜಗತ್ತಿನಲ್ಲಿ ಇವೆ ಎಂಬುದು ನನಗೆ ಅರ್ಥವಾಗಿದ್ದು ಅವತ್ತೇ, ಅದೇಕ್ಷಣದಲ್ಲಿ. ಅದು ಅರಿವಾದೊಡನೆಯೇ ನನ್ನ ಬಗೆಗೇ ನನಗೆ ಕ್ಷುಲ್ಲಕ ಅನ್ನಿಸಿಬಿಟ್ಟಿತು. ಬಾವಿಯೊಳಗಿನ ಕಪ್ಪೆಯಂತೆ ಬದುಕಿದ್ದೆನಲ್ಲ ಇಷ್ಟು ದಿನ ಅನ್ನಿಸಿತು. ಮೆಲ್ಲನೆ ಅತ್ತ ಇತ್ತ ಕಣ್ಣು ಹೊರಳಿಸಿದೆ. ನಿಜಕ್ಕೂ ಆ ಕ್ಷಣದಲ್ಲಿ ನಿನ್ನ ನೆನಪು ಬಂದುಬಿಟ್ಟಿತು. ಇದೀಗ ನೀನು ನನ್ನ ಜೊತೆಯಲ್ಲಿ ಇದ್ದಿದ್ದರೆ.. ನಿನ್ನ ಕೋಮಲ ಕೈ ಬೆರಳುಗಳು ನನ್ನ ಭುಜವನ್ನು ಮೆಲ್ಲಾತಿಮೆಲ್ಲನೆ ಅದುಮದೆ ಇರುತ್ತಿರಲಿಲ್ಲ. ಭರವಸೆಯ ಬೆಳಕಿನ ಕಿಡಿ ನಿನ್ನ ಕಣ್ಣಿಂದ...
ಅವನು ಮೈತುಂಬಿಕೊಂಡ ನಾಗಬೆತ್ತದ ಹಾಗೆ ಇದ್ದ. ತುಂಬ ಸಣಕಲು. ನೆಟ್ಟಗೆ ಅಂದರೆ ನೆಟ್ಟಗೆ ನಿಲವು. ನಾಗಬೆತ್ತದ ಮೇಲಿನ ಕಪ್ಪು ಬಳೆಗಳಂತೆ ಅವನ ಪಕ್ಕೆಲಬುಗಳೆಲ್ಲವೂ ಕಾಣಿಸುತ್ತಿದ್ದವು. ಕೆಂಪಗಿನ ದಪ್ಪಗಿರುವ ಒಂದು ದಾರವನ್ನು ಉಡಿದಾರ ಮಾಡಿಕೊಂಡಿದ್ದ. ಆರು ಮೊಳದ ಮಗ್ಗದ ಪಂಚೆಯ ಒಂದು ತುದಿಯನ್ನು ಕಚ್ಚೆಯಾಗಿ ಹಿಂಬದಿಗೆ ಸಿಕ್ಕಿಸಿಕೊಂಡು ಅದರ ಉಳಿದ ಭಾಗವನ್ನು ಲುಂಗಿಯಂತೆ ಅಡ್ಡ ಸುತ್ತಿಕೊಳ್ಳುತ್ತಿದ್ದ. ಅದು ಬಿಟ್ಟರೆ ಮೈಯೆಲ್ಲ ಬೋಳು ಬೋಳು. ಸೊಂಟಕ್ಕೆ ಕತ್ತಿ ಸಿಕ್ಕಿಸಿಕೊಳ್ಳುವ ಒಂದು ಕೊಕ್ಕೆಯನ್ನು ಕಟ್ಟಿಕೊಳ್ಳುತ್ತಿದ್ದ. ಆದರೆ ಮನೆಯಿಂದ ಅವನು ಕತ್ತಿಯನ್ನು ತರುತ್ತಿರಲಿಲ್ಲ....
ನೇಮಯ್ಯನದು ಇದು ಮರುಹುಟ್ಟು ಎಂದು ಹೊಳೆಸಾಲಿನವರು ಮಾತನಾಡಿಕೊಳ್ಳುತ್ತಾರೆ. ತನ್ನ ಬಗ್ಗೆ ಈ ಜನ ಹೀಗೆಲ್ಲ ಮಾತನಾಡುತ್ತಾರೆ ಎಂಬುದು ಸ್ವತಃ ನೇಮಯ್ಯನಿಗೇ ಗೊತ್ತಿರಲಿಲ್ಲ. ಈ ನೇಮಯ್ಯನನ್ನು ಒಂದು ಪದದಲ್ಲಿ ಹೇಳಬೇಕೆಂದರೆ ಅದು ಸಾಧ್ಯವೇ ಇಲ್ಲ. ವೃತ್ತಿಯಿಂದ ಹೇಳೋಣವೆ? ಒಂದೆಕರೆಯಷ್ಟು ಬಾಗಾಯ್ತ ಇತ್ತು. ಹೀಗಾಗಿ ಅವನನ್ನು ರೈತ ಎನ್ನಬಹುದೆ? ಊರಲ್ಲಿಯ ಮಾಸ್ತಿಮನೆಯ ಪೂಜೆಯನ್ನು ಅವನೇ ಮಾಡಿಕೊಂಡು ಬಂದಿದ್ದ. ಅಂದರೆ ಅವನನ್ನು ಪೂಜಾರಿ ಎನ್ನಬಹುದೆ? ಊರಲ್ಲಿಯ ಮಕ್ಕಳಿಗೆ ಮುದುಕರಿಗೆ ದೆವ್ವದ ಕಾಟ ಇದೆ ಎಂದು ಯಾರಾದರೂ ಅವನ ಬಳಿಗೆ ಬಂದರೆ ಅವನು...
ಕೆ.ಸತ್ಯನಾರಾಯಣ ಅವರ- ಮಹಾ ಕಥನದ ಮಾಸ್ತಿ ಕನ್ನಡದ ಪ್ರಮುಖ ಗದ್ಯ ಬರೆಹಗಾರರಲ್ಲಿ ಒಬ್ಬರಾಗಿರುವ ಕೆ.ಸತ್ಯನಾರಾಯಣ ಅವರು ಸುಮಾರು ನಾಲ್ಕು ದಶಕಗಳಿಂದ ಕನ್ನಡದ ಆಸ್ತಿ ಎಂದು ಹೆಸರಾಗಿರುವ ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರನ್ನು ಓದುತ್ತ, ಅವರ ಪ್ರಭಾವಕ್ಕೆ ಒಳಗಾಗುತ್ತ, ಆ ಪ್ರಭಾವವನ್ನು ಮೀರಿ ಬೆಳೆಯಲು ಪ್ರಯತ್ನಿಸುತ್ತ, ತಮ್ಮದೇ ಒಂದು ಕಥನ ಶೈಲಿಯನ್ನು ರೂಢಿಸಿಕೊಂಡವರು. ಮಾಸ್ತಿಯವರ ಪ್ರಥಮ ಕಥಾ ಸಂಕಲನ ಪ್ರಕಟವಾಗಿ ನೂರು ವರ್ಷಗಳು ಆಗುತ್ತಿರುವ ಸಂದರ್ಭದಲ್ಲಿ ಮಾಸ್ತಿಯವರ ಕತೆಗಳನ್ನು ಸುದೀರ್ಘವಾಗಿ ಅಧ್ಯಯನ ಮಾಡಿ `ಮಹಾ ಕಥನದ ಮಾಸ್ತಿ’ ಎಂಬ...
ಮರಾಠಿ ಸಾಹಿತ್ಯದಲ್ಲಿ ಆತ್ಮಕಥನವು ಅತ್ಯಂತ ಪ್ರಬಲವಾದ ಅಭಿವ್ಯಕ್ತಿಯಾಗಿದೆ. ಅಲ್ಲಿಯ ಸತ್ವಶಾಲಿ ಮತ್ತು ಬೆಂಕಿಯುಂಡೆಯಂಥ ಬರೆಹಗಳು ಅವತರಿಸಿದ್ದು ಆತ್ಮಕಥನದ ರೂಪದಲ್ಲಿಯೇ. ಅದರಲ್ಲಿಯೂ ದಲಿತ ವರ್ಗದವರು ಬರೆದಿರುವ ಆತ್ಮಕಥನಗಳು ಅದರಲ್ಲಿಯ ಹಸಿಹಸಿಯಾದ ಮತ್ತು ಅಕ್ಷರಲೋಕಕ್ಕೆ ಮುಖಾಮುಖಿಯಾದವರ ತಾಜಾತನದಿಂದಾಗಿ ಉತ್ಕೃಷ್ಟ ಸಾಹಿತ್ಯವಾಗಿಯೂ ಮನ್ನಣೆ ಗಳಿಸಿದವು. ಆ ಸಾಲಿನಲ್ಲಿ ನಿಲ್ಲುವ ಆತ್ಮಕಥನ ಪ್ರಸಿದ್ಧ ವಿಜ್ಞಾನಿ ನಾಮದೇವ ನಿಮ್ಗಾಡೆಯವರ ‘ಹುಲಿಯ ನೆರಳಿನೊಳಗೆ’. ಇದಕ್ಕೊಂದು ಉಪಶೀರ್ಷಿಕೆ ‘ಅಂಬೇಡ್ಕರ್‌ವಾದಿಯ ಆತ್ಮಕಥೆ’ ಎಂದು. ಇದನ್ನು ಬಿ.ಶ್ರೀಪಾದ ಅವರು ಭಾವಾನುವಾದ ಮಾಡಿದ್ದಾರೆ. ಮೂಲ ಆತ್ಮಕತೆಯನ್ನು ಓದುವಾಗ ತಮಗೆ ಮುಖ್ಯವೆನಿಸಿದ್ದು ಕನ್ನಡದ...
ನಮ್ಮ ಕಾಲದಲ್ಲಿ ಓದುಗರನ್ನು ದೊಡ್ಡ ಸಂಖ್ಯೆಯಲ್ಲಿ ಹಿಡಿದಿಟ್ಟುಕೊಂಡಿರುವ ಲೇಖಕರಲ್ಲಿ ಎಸ್.ಎಲ್. ಭೈರಪ್ಪನವರು ಒಬ್ಬರು. ವಿಮರ್ಶಕರಿಂದ ಮೆಚ್ಚುಗೆ ಮತ್ತು ಟೀಕೆಗಳನ್ನು ಹೆಚ್ಚಾಗಿ ಪಡೆದ ಲೇಖಕರೂ ಹೌದು. ಅವರೊಬ್ಬ ಬಲಪಂಥೀಯ ಲೇಖಕ. ತಮ್ಮ ಸಿದ್ಧ ಸೂತ್ರಗಳಿಗೆ ಘಟನೆಗಳನ್ನು ಜೋಡಿಸುತ್ತ ಕತೆಯನ್ನು ಹೆಣೆಯುತ್ತಾರೆ ಎಂದು ಎಡಪಂಥೀಯ ಚಿಂತಕರು ದೂರುತ್ತಾರೆ. ಭೈರಪ್ಪನವರು ತಮ್ಮ ಸ್ತ್ರೀ ಪಾತ್ರಗಳಿಗೂ ಸರಿಯಾದ ನ್ಯಾಯವನ್ನು ಒದಗಿಸಿಲ್ಲ ಎಂಬ ಇನ್ನೊಂದು ಆರೋಪವೂ ಸ್ತ್ರೀವಾದಿ ಚಿಂತಕರಿಂದ ಕೇಳಿ ಬಂದಿದೆ. ಅದಕ್ಕೆ ಭೈರಪ್ಪನವರು ವಿವಿಧ ವೇದಿಕೆಗಳಲ್ಲಿ ತಮ್ಮ ಸಮಜಾಯಿಷಿಯನ್ನು ನೀಡಿದ್ದಾರೆ.ಆದರೆ ಈ ಎಲ್ಲ...
*ಕೆಡುಕನ್ನು ಬಿಟ್ಟು ಕೇವಲ ಒಳಿತನ್ನು ಮಾತ್ರ ಸ್ವೀಕರಿಸುವುದು ಹಂಸವನ್ನು ನಿರ್ಮಲತೆಗೆ ಸಂಕೇತವಾಗಿ ಬಳಸುತ್ತಾರೆ. ಬೆಳ್ಳಗಿರುವ ಹಂಸ ಪರಿಶುಭ್ರವಾಗಿರುತ್ತದೆ. ಕಪಟ, ಕಲ್ಮಷ ಇಲ್ಲದವರು ಎಂದು ಹೇಳಬೇಕೆಂದರೆ ಹಂಸದಂತೆ ಅವರು ಎಂದು ಹೇಳುವುದಿದೆ. ಹೇಗೆ ಹಂಸವು ಶುಭ್ರವೋ ಅದು ಸೇವಿಸುವ ಆಹಾರವೂ ಶುಭ್ರವೇ. ಬೆಳ್ಳಗಿರುವ ಹಂಸ ಶುಭ್ರತೆಯ ಇನ್ನೊಂದು ಪ್ರಮಾಣವಾದ ಹಾಲನ್ನು ಕುಡಿಯುತ್ತದೆ ಎನ್ನುವ ಪ್ರತೀತಿ ಇದೆ. ಹಂಸ ಪಕ್ಷಿಯು ನೀರು ಬೆರೆಸಿದ ಹಾಲನ್ನು ಅದಕ್ಕೆ ನೀಡಿದರೂ ಅದು ಹಾಲನ್ನಷ್ಟೇ ಬೇರೆ ಮಾಡಿ ಕುಡಿದು ನೀರನ್ನು ಉಗುಳುತ್ತದೆಯಂತೆ. ನೀರು ಬೆರೆಸಿದ...
*ಸಾಯುವಾಗ ಮಾತ್ರ ಶ್ರೇಷ್ಠತೆ ಹೊರಬೀಳುತ್ತದೆ ಹಂಸ ತುಂಬ ಸುಂದರವಾದ ಪಕ್ಷಿ. ಪರಿಶುದ್ಧತೆಯ ಸಂಕೇತ ಅದು. ಹಾಲಿನಿಂದ ನೀರನ್ನು ಬೇರ್ಪಡಿಸಿ ಅದು ಕುಡಿಯುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ. ಹಂಸಕ್ಕೆ ಸಂಬಂಧಿಸಿದ ಇನ್ನೊಂದು ನಂಬಿಕೆ, ಅದು ಸಾಯುವಾಗ ಅತ್ಯಂತ ಮಧುರವಾಗಿ ಹೃದಯಂಗಮವಾಗಿ ಹಾಡುತ್ತದೆಯಂತೆ. ಹಾಗೆ ಹಾಡುತ್ತ ಹಾಡುತ್ತ ಅದು ಸತ್ತುಹೋಗುವುದಂತೆ. ಭಾರತೀಯ ಸಾಹಿತ್ಯದಲ್ಲಿ ಇದನ್ನು ಉಪಮೆಯ ರೀತಿಯಲ್ಲೋ ದೃಷ್ಟಾಂತದ ರೀತಿಯಲ್ಲೋ ಬಳಸಿಕೊಂಡಿದ್ದಾರೆ. ಅದೇ ಪಾಶ್ಚಾತ್ಯ ಸಾಹಿತ್ಯದಲ್ಲೂ ಇದು ಸ್ವಾನ್ ಸಾಂಗ್ ಎಂದು ಬಳಕೆಯಾಗಿದೆ. ಷೇಕ್ಸ್‌ಪಿಯರ್‌ನ ಮರ್ಚೆಂಟ್ ಆಫ್ ವೆನಿಸ್‌ನಲ್ಲಿ ಇದರ...
*ಸ್ವಂತ ಬುದ್ಧಿ ಬಳಸದ ಕೆಲಸಗಾರ ಒಂದೂರಿನಲ್ಲಿ ಪುಟ್ಟ ಎಂಬ ಹೆಸರಿನವನಿದ್ದ. ಸ್ವಲ್ಪ ಆತುರ ಸ್ವಭಾವದವನು. ಹೇಳಿದ್ದಷ್ಟೇ ಮಾಡುವವನು. ಸ್ವಂತ ಬುದ್ಧಿ ಉಪಯೋಗಿಸುವವನಲ್ಲ. ರಾತ್ರಿ ಮನೆಯಲ್ಲಿ ಏನೋ ಗಹನವಾದ ವಿಚಾರ ಮಾತನಾಡುತ್ತಿದ್ದರು. ಮಾತಿನ ನಡುವೆ ಬೆಳಿಗ್ಗೆ ಪುಟ್ಟನನ್ನು ಪಕ್ಕದೂರಿಗೆ ಕಳುಹಿಸಬೇಕು ಎಂಬ ಮಾತು ಇವನ ಕಿವಿಗೂ ಬಿತ್ತು. ಬೆಳಿಗ್ಗೆ ಎದ್ದು ನೋಡಿದರೆ ಮನೆಯಲ್ಲಿ ಪುಟ್ಟ ಇಲ್ಲ. ಪುಟ್ಟ ಎಲ್ಲಿ ಎಂದು ಹುಡುಕಿಯೇ ಹುಡುಕಿದರು. ಪುಟ್ಟನ ಪತ್ತೆಯೇ ಇಲ್ಲ. ಹೊತ್ತು ಮಾರು ಏರುವ ಹೊತ್ತಿಗೆ ಪುಟ್ಟ ಬೈಸಾರದಿಂದ ಬೆವರು ಒರೆಸಿಕೊಳ್ಳುತ್ತ...
*ಹೊಗಳಿ ಅಟ್ಟಕ್ಕೇರಿಸುವುದು ಹೊಗಳಿದವರೆನ್ನ ಹೊನ್ನಶೂಲದಲ್ಲಿಕ್ಕಿದರು ಎಂದು ಬಸವಣ್ಣನವರು ಹೇಳಿದ್ದು ಹಲವರಿಗೆ ಗೊತ್ತು. ಕೆಲಸವಾಗಬೇಕು ಎಂದರೆ ಹೊಗಳಬೇಕು ಅಥವಾ ಹೊಗಳಿದರಷ್ಟೇ ಕೆಲಸವಾಗುತ್ತದೆ ಎನ್ನುವ ಕಾಲ ಬಂದಿದೆ. ಇಂಥ ಸಂದರ್ಭದಲ್ಲಿ ಅಪಾತ್ರರಿಗೂ ಹೊಗಳಿಕೆ ಸಂದಾಯವಾಗುತ್ತದೆ. ಅನೇಕರಿಗೆ ತಮ್ಮನ್ನು ಏಕೆ ಹೊಗಳುತ್ತಿದ್ದಾರೆ ಎನ್ನುವುದು ಗೊತ್ತಾಗುವುದಿಲ್ಲ. ಹೊಗಳಿದಾಗ ಉಬ್ಬಿಬಿಡುತ್ತಾರೆ. ಅಲ್ಲಿಗೆ ಹೊಗಳಿದವರ ಉದ್ದೇಶ ಈಡೇರಿದಂತೆ. ತಮ್ಮನ್ನು ಹೊಗಳಿದಾಗ ಆ ಹೊಗಳಿಕೆಗೆ ಅರ್ಹರಾದವರೆ ತಾವು ಎಂಬ ಆತ್ಮವಿಮರ್ಶೆಯಲ್ಲಿ ಕೆಲವರು ತೊಡಗುತ್ತಾರೆ. ಅದಕ್ಕೆ ತಾವು ಅರ್ಹರು ಎಂದು ಅನ್ನಿಸಿದರೆ ಸಂಭ್ರಮಪಡುತ್ತಾರೆ. ಇಲ್ಲದಿದ್ದರೆ ಅಪಮಾನ ಹೊಂದಿದವರಂತೆ ಕುಗ್ಗುತ್ತಾರೆ....