ಅಳಿದವರ ಉಳಿದವರ ನಡುವೊಬ್ಬ ಮಧ್ಯಸ್ಥ- ನಮ್ಮ ಮನೆಯಂಗಳ

ಅಂಗಳ ಇಲ್ಲದ ಮನೆ ಇರುವುದೆ? ನಮ್ಮೂರಂಥ ಹಳ್ಳಿಗಳಲ್ಲಿ ಮನೆಯ ಮುಂದೊಂದುಪುಟ್ಟ ಅಂಗಳವಿದ್ದರೆ ಅದರ ಶೋಭೆಯೇ ಬೇರೆ. ನಮ್ಮ ಕರಾವಳಿಯಲ್ಲಾಗಲಿ, ಮಗ್ಗುಲಿನ ಮಲೆನಾಡಿನಲ್ಲಾಗಲಿ ಬಯಲುಸೀಮೆಯಂತೆ ಗುಂಪು ಗುಂಪಾಗಿ ಮನೆಗಳು ಇರುವುದಿಲ್ಲ. ಎಲ್ಲರದೂ ಪ್ರತ್ಯೇಕ ಅಡಕೆ ಅಥವಾ ತೆಂಗಿನ ತೋಟ, ಇಲ್ಲವೆ ಎರಡರ ಬೆರಕೆಯ ಹಿತ್ತಿಲು. ಇದರಲ್ಲಿಯೇ ನಮ್ಮದು ಎನ್ನುವ ಮನೆ.ಕಾತರ್ಿಕ ಮುಗಿಯಿತು ಎನ್ನುವುದೇ ತಡ ಮನೆಯ ಮುಂದೆ ಒಂದು ಅಂಗಳ ಸಿದ್ಧಪಡಿಸುವ ಚಡಪಡಿಕೆ ಎಲ್ಲರ ಮನೆಯ ಹೆಂಗಸರಿಗೆ. ಮುಂದೆ ಒಂದೊಂದೇ ಹಬ್ಬ ಹುಣ್ಣಿಮೆಗಳು, ತೇರು ಜಾತ್ರೆಗಳು, ಮದುವೆ ಮುಂಜಿಗಳು...

ಎದೆಯೊಳಗೆ ಬಿಚ್ಚಿಟ್ಟ ಮುತ್ತು: ಕನ್ನಡ

ಕನ್ನಡದ ಮೇಲೆ ಅನ್ಯ ಭಾಷೆಗಳು, ಕರ್ನಾಟಕದ ಮೇಲೆ ಕನ್ನಡೇತರ ದೊರೆಗಳು ಆಡಳಿತ ನಡೆಸುತ್ತ ಬಂದಿದ್ದರು. ‘ಭಾಷೆ’ ಎನ್ನುವುದೇ ಕನ್ನಡವಲ್ಲ. ‘ನುಡಿ’ ಎಂಬುದು ಕನ್ನಡ. ಕನ್ನಡ ನುಡಿಯ ಮೇಲೆ ಅನ್ಯ ಭಾಷೆಗಳ ಆಕ್ರಮಣವನ್ನುವಿರೋಧಿಸುವ ಪ್ರಯತ್ನ ಕಾಲಕಾಲಕ್ಕೆ ನಡೆಯುತ್ತಲೇ ಬಂದಿದೆ. ಕನ್ನಡಕ್ಕಾಗಿ ಕರ್ನಾಟಕಕ್ಕಾಗಿ ಪಣ ತೊಡುವ ಇನ್ನೊಂದು ಮುಹೂರ್ತ ನಿಗದಿಯಾಗಿದೆ. ಅಯ್ಯೋ, ಈ ವಾಕ್ಯವನ್ನೂ ಇಡಿಯಾಗಿ ಕನ್ನಡದಲ್ಲೇ ಹೇಳುವುದಕ್ಕೆ ಆಗುತ್ತಿಲ್ಲವಲ್ಲ. ಈ ಮುಹೂರ್ತ ಎಲ್ಲಿಂದ ಬಂತು? ಮುಹೂರ್ತಕ್ಕೆ ಕನ್ನಡದಲ್ಲಿಯೇ ಪದ ಇಲ್ಲವೆ? ಗಳಿಗೆಯೆ, ಕ್ಷಣವೆ, ಕಾಲವೆ.. ಓಹೋ! ಇವು ಒಂದೂ ಕನ್ನಡವಲ್ಲವಲ್ಲ!...

ಫ್ಯೂಡಲಿಸ್ಟ್ ಇಂಡಿಯಾ ಮತ್ತು ಬದಲಾವಣೆಯ ಕನಸು

ನನಗಾದ ಒಂದು ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಎನಿಸಿದೆ. ದ್ವಿತೀಯ ಪಿಯುಸಿ ಮಕ್ಕಳಿಗೆ ವೃತ್ತಿಶಿಕ್ಷಣದ ಕೌನ್ಸಿಲಿಂಗನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುತ್ತಿರುವುದು ಸರಿಯಷ್ಟೆ. ಇಲ್ಲಿ ಮಕ್ಕಳು ಕೌನ್ಸೆಲಿಂಗ್ ಸಮಯದಲ್ಲಿ ಸಲ್ಲಿಸುವ ಪ್ರಮಾಣಪತ್ರಗಳ ಝರಾಕ್ಸ್ ಪ್ರತಿಗಳನ್ನು ದೃಢೀಕರಿಸಿ ಸಹಿಮಾಡಿಸಬೇಕು ಎಂಬ ನಿಯಮ ಮಾಡಿದ್ದಾರೆ. ಈ ರೀತಿ ಸಹಿಮಾಡಿಸಿಕೊಳ್ಳಲು ಪತ್ರಾಂಕಿತ ಅಧಿಕಾರಿಗಳು ಎಲ್ಲಿದ್ದಾರೆ ಎಂದು ಹುಡುಕಿಕೊಂಡು ಮಕ್ಕಳೋ ಅವರ ಹೆತ್ತವರೋ ಹೋಗಬೇಕಾಗುತ್ತದೆ. ಅಲ್ಲಿ ಅವರು ಕಚೇರಿಯಲ್ಲಿ ಇದ್ದರೆ ಆಯಿತು, ಇಲ್ಲದಿದ್ದರೆ ಅವರು ಎಷ್ಟು ಹೊತ್ತಿಗೆ ಬರುತ್ತಾರೆ ಎಂದು ಕಾಯ್ದುಕುಳಿತುಕೊಳ್ಳಬೇಕು, ಇಲ್ಲ ಅವರು...

ಆಮರಣ ಉಪವಾಸ ಸತ್ಯಾಗ್ರಹ ಎಷ್ಟು ಸರಿ?

ಈ ದೇಶದ ಕಾನೂನು ಯಾರಿಗೂ ತಮ್ಮ ಸಾವನ್ನು ತಾವೇ ತಂದುಕೊಳ್ಳುವ ಸ್ವಾತಂತ್ರ್ಯವನ್ನು ನೀಡಿಲ್ಲ. ಬೇರೆಯವರ ಜೀವವನ್ನು ತೆಗೆಯುವುದು ಹೇಗೆ ಅಪರಾಧವೋ ತಮ್ಮ ಜೀವವನ್ನು ತೆಗೆದುಕೊಳ್ಳುವುದೂ ಅಪರಾಧವೇ. ಇಂಥ ಕಾನೂನಿನ ವ್ಯವಸ್ಥೆ ಇರುವ ದೇಶದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಎನ್ನುವ ಮಾತು ಅಪರಾಧವೇ. ಕಾನೂನಿನ ಪ್ರಕಾರ ಅದು ಶಿಕ್ಷಾರ್ಹ.ಗಾಂಧೀಜಿಯ ನಾಡಿನಲ್ಲಿ ಉಪವಾಸ ಸತ್ಯಾಗ್ರಹ ಹಾದಿ ತಪ್ಪುತ್ತಿದೆಯೆ ಎಂಬ ಪ್ರಶ್ನೆ ಕಾಡುತ್ತಿದೆ. ಉಪವಾಸ ಸತ್ಯಾಗ್ರಹ ಗಾಂಧೀಜಿಯವರ ದೃಷ್ಟಿಯಲ್ಲಿ ಆತ್ಮಶುದ್ಧಿಯ ಸಾಧನವಾಗಿತ್ತು. ಅವರು ಯಾವುದೇ ಬೇಡಿಕೆ ಇಲ್ಲದೆಯೂ, ಕೆಲವೊಮ್ಮೆ ಪ್ರಾಯಶ್ಚಿತ್ತ ರೂಪದಲ್ಲಿ...

ಸುಲಭವಲ್ಲ

ಈಗ ಕವನ ಬರೆಯುವುದು ಸುಲಭವಲ್ಲ ಗೆಳೆಯ ಏಕೆಂಬೆಯಾಏಕೆಂದರೆ ಕವನಬರೆಯುವುದೆಂದರೆ ಸತ್ಯವನ್ನುಹೇಳಬೇಕು, ಕವನಬರೆಯುವುದೆಂದರೆ ಮಾಡಿದ್ದನ್ನೇಮಾಡಿದ್ದೇನೆ ಎನ್ನಬೇಕುಕವನ ಬರೆಯುವುದೆಂದರೆಜಗ ಮೆಚ್ಚಿ ಅಹುದಹುದುಎನಬೇಕು.ಆದರೆಸತ್ಯ ಹೇಳುವುದುಅಷ್ಟು ಸುಲಭವಲ್ಲಮಾಡಿದ್ದನ್ನೆಲ್ಲ ಹೇಳಿ ಬೆತ್ತಲಾಗುವ ಎದೆಗಾರಿಕೆ ಇಲ್ಲಇನ್ನು ಜಗ ಎಲ್ಲಿಮೆಚ್ಚಬೇಕು ಹೇಳು?ಅದಕ್ಕೇ ಕವನ ಬರೆಯುವುದುಈಗ ಸುಲಭವಲ್ಲ.

ಅನಗೋಡು ಕಳ್ಳರು, ಯಡಿಯೂರಪ್ಪ, ಒಬಾಮಾ, ಪಾಕಿಸ್ತಾನ ಇತ್ಯಾದಿ

ಶರಾವತಿ ದಡದಲ್ಲಿ ಅನಗೋಡು ಎಂಬ ಊರಿದೆ. ಈ ಅನಗೋಡಿನ ಬಗ್ಗೆ ಇತ್ತೀಚಿನ ಹೊಸ ಮಾಹಿತಿ ಎಂದರೆ ವಿಷ್ಣುವರ್ಧನ್ ಅಭಿನಯದ ‘ಮಾತಾಡ್ ಮಾತಾಡ್ ಮಲ್ಲಿಗೆ’ ಸಿನಿಮಾದ ಕೆಲವು ಭಾಗವನ್ನು ಚಿತ್ರೀಕರಿಸಿದ್ದು ಇಲ್ಲಿಯೇ. ಅನಗೋಡಿನ ಜಾನಪದ ಪರಂಪರೆಯಲ್ಲಿ ನಡೆಯುವ ಊರ ಹಬ್ಬ ಪ್ರತಿ ವರ್ಷ ಮೇ ತಿಂಗಳ 21ರಂದು ನಡೆಯುತ್ತದೆ. ಈ ಬಾರಿ ನನಗೆ ಅನಗೋಡು ಹಬ್ಬವನ್ನು ನೋಡುವ ಅವಕಾಶ ದೊರೆಯಿತು. ಅನಗೋಡು ಹಬ್ಬದಲ್ಲಿ ಕುಮಾರರಾಮನನ್ನು ಮತ್ತು ಸತಿಹೋದ ಆತನ ಪತ್ನಿಯರನ್ನು ಪೂಜೆ ಮಾಡುತ್ತಾರೆ. ಮೂಲತಃ ಕುಮಾರರಾಮನು ಕಳ್ಳನೇ ಎಂದು...