ನಮ್ಮೂರಿನ ರಾಮಯ್ಯನವರು ಅವತ್ತು ಮೂರು ಬಾರಿ ಮನೆಯಲ್ಲಿದ್ದ ಜನರನ್ನು ಪೋಸ್ಟ್್ಮನ್ ಬಂದುಹೋದನೆ ಎಂದು ವಿಚಾರಿಸಿದ್ದರು. ಕೊನೆಗೂ ತಡೆದುಕೊಳ್ಳುವುದು ಆಗದೆ ಅಂಚೆಕಚೇರಿಗೇ ಹೋದರು. ತಮ್ಮ ವಿಳಾಸದ ಪತ್ರ ಏನಾದರೂ ಬಂದಿದೆಯೆ ಎಂದು ವಿಚಾರಿಸಿದರು. `ಇಲ್ಲ’ ಎಂಬ ಪೋಸ್ಟ್್ಮಾಸ್ತರನ ಉತ್ತರದಿಂದ ನಿರಾಶೆಗೊಂಡವರಂತೆ ಕಂಡುಬಂದರು. ಮಾರನೆ ದಿನವೂ ಮತ್ತೆ ಅದೇ ಕಾತರ. ಮೂರು ದಿನದ ನಂತರ ಅಂಚೆಯವನು ಅವರು ನಿರೀಕ್ಷಿಸುತ್ತಿದ್ದ ಪತ್ರ ತಂದು ಕೊಟ್ಟನು. ಓದುವುದಕ್ಕೆಂದು ಧಾರವಾಡಕ್ಕೆ ಹೋಗಿದ್ದ ಅವರ ಮಗ ಬರೆದ ಪತ್ರ ಅದು. ಅವನ ಯೋಗಕ್ಷೇಮದ ಬಗ್ಗೆ, ಅಲ್ಲಿಯ...
ಆಷಾಢ ಕಳೆದೇ ಬಿಟ್ಟಿತು, ಬಂತು ಶ್ರಾವಣ. ಇನ್ನೇನು ಹಬ್ಬಗಳದೇ ಸುಗ್ಗಿ. ಜಿನುಗುವ ಮಳೆ, ಇಳೆಯೊಡಲಿಗೆ ಹಸಿರ ಉಡುಗೆ, ತಂಪು ಗಾಳಿ. ಪ್ರಕೃತಿಯ ಸಂದಿ ಸಂದಿಗಳಲ್ಲೂ ಜೀವ ಚೈತನ್ಯದ ಚಿಲುಮೆ. ಹೊರಗೆಲ್ಲ ಆಹ್ಲಾದ ತುಂಬಿರಲು ಮನೆಯೊಳಗೂ ಖುಷಿ ಅನ್ನುವುದು ಬೇಡವೆ? ಅದಕ್ಕಾಗಿಯೇ ಸಾಲುಸಾಲು ಹಬ್ಬಗಳು.ಹಾಗೆ ನೋಡಿದರೆ ಆಷಾಢವೇ ಹಬ್ಬಗಳಿಗೆ ಖೋ ಕೊಟ್ಟಿರುತ್ತದೆ. ಆಷಾಢದ ಅಮಾವಾಸ್ಯೆಯೇ ಅಳಿಯನ ಅಮಾವಾಸ್ಯೆ. ಹೊಸದಾಗಿ ಮದುವೆಯಾದವರಿಗೆ ಇದು ದೊಡ್ಡ ಹಬ್ಬ. ಈ ಹಬ್ಬವನ್ನು ತಪ್ಪಿಸುವ ಅಳಿಯಂದಿರು ಕಡಿಮೆ. ಮಾವನ ಮನೆಗೆ ಹೋಗಿ ಹಬ್ಬದ ಊಟ...
ಬುದುವಂತ ಕಂಬಳಿಕೊಪ್ಪೆ ಝಾಡಿಸಿ ಮಾಡಿಗೆ ಕಟ್ಟಿದ ಹಗ್ಗಕ್ಕೆ ನೇತು ಬಿಟ್ಟ. `ನಿನ್ನೆ ರಾತ್ರಿ ಹಿಡ್ಕಂಡ ಮಳೆ ಇವತ್ತು ಇಷ್ಟೊತ್ತಾದ್ರೂ ಹನಿ ಕಡಿಲಿಲ್ಲ. ಆಕಾಶಕ್ಕೆ ತೂತು ಬಿದ್ದಂಗೆ ಹೊಯ್ದೇ ಹೊಯ್ಯುಕೆ ಹತ್ತಿದೆ’. ಇಂಥದ್ರಲ್ಲಿ ಸಣ್ಣಯ್ಯ ಯಾವ ಕೆಲಸ ಇಟ್ಕೊಂಡು ತನಗೆ ಬರೂಕೆ ಹೇಳಿದ್ದಾರೋ ಅಂದುಕೊಳ್ಳುತ್ತ ಸಣ್ಣಯ್ಯನವರ ಮನೆ ಹೊಸ್ತಿಲು ತುಳಿದ. ಸಣ್ಣಯ್ಯ ಕವಳಕ್ಕೆ ನೀರಡಿಕೆ ಸುಲಿದು ಕೆರಿಸುತ್ತ ಕುಳಿತಿದ್ದರು. ಬುದುವಂತನನ್ನು ನೋಡಿ, ಬಂದ್ಯಾ, ಬಾ ಬಾ, ಈ ಮಳೆ ನೋಡಿ ಮನೆಯಿಂದ ಹೊರಗೆ ಬೀಳುತ್ತಿಯೋ ಇಲ್ಲವೋ ಅಂದ್ಕಂಡಿದ್ದೆ ಅಂದರು.ಅಲ್ಲ,...
ಉಳಿದ ಊರುಗಳಲ್ಲಿ ಎಂತೋ ಏನೋ, ನಮ್ಮೂರಲ್ಲಂತೂ ಗಡುಗಾಲ ಬಂತೆಂದರೆ ಒಂದು ನಮೂನೆ ಗಡಿಬಿಡಿ ಜೋರಾಗಿಬಿಡುವುದು. ತೆಂಕು ದಿಕ್ಕಿನಲ್ಲಿ ಆಗೊಮ್ಮೆ ಈಗೊಮ್ಮೆ ಕೇಳಿಸುವ ಗುಡುಗಿನ ಸದ್ದು, ರಾತ್ರಿ ಮನೆಯ ಅಂಗಳದಲ್ಲಿ ಮಲಗಿದವರಿಗೆ ಕಾಣಿಸುವ ಮಿಂಚು ಬರಲಿರುವ ಮಳೆಗಾಲಕ್ಕೆ ಮುನ್ನುಡಿ ಬರೆಯುತ್ತವೆ.ನಮಗೆ ಗೊತ್ತಿರುವ ಹಾಗೆ ಕಾಲಪುರುಷನಿಗೆ ಮೂರೇ ಮುಖ. ಮಳೆಗಾಲ, ಚಳಿಗಾಲ ಹಾಗೂ ಬೇಸಿಗೆ. ಆದರೆ ಬೇಸಿಗೆ ಹಾಗೂ ಮಳೆಗಾಲಗಳ ನಡುವೆ ಗಡುಗಾಲವೆಂಬ ಅತಂತ್ರ ಅವಧಿಯೊಂದಿದೆ. ಅದು ಎಂಥ ಸಮಯ ಗೊತ್ತೆ?ಬೆಸಿಗೆ ಮುಗಿಯುವ, ಮಳೆಗಾಲ ಆರಂಭವಾಗುವ ನಡುವಿನ ಸಂಧಿಕಾಲವೇ ಈ...
ಅದು ಪುಷ್ಯವೋ ಪುನರ್ವಸುವೋ ಇರಬೇಕು. ಬಿಟ್ಟೂ ಬಿಡದೆ ಎಂಟೆಂಟು ದಿನ ಮಳೆಯ ಸುರಿಸುವ ತಾಕತ್ತು ಇರುವುದು ಈ ನಕ್ಷತ್ರಗಳಿಗಲ್ಲದೆ ಬೇರೆ ಯಾವುದಕ್ಕಿದೆ? ಇವು ಮಾಡುವ ಅನಾಹುತಗಳು ಒಂದೇ ಎರಡೇ? ಅಪ್ಪುಗೈಗೆ ನಿಲುಕದ ಗಾತ್ರದ ಮಾವಿನ ಮರ, ಮುಗಿಲ ಚುಂಬಿಸ ಹೊರಟ ತೆಂಗಿನ ಮರ, ಎಕರೆಯಷ್ಟು ಜಾಗದಲ್ಲಿ ಬೇರ ಜಾಲವ ಬೀಸಿ ಚಪ್ಪರ ಹಾಕಿದ್ದ ಆಲದ ಮರ ಹೀಗೆ ಯಾವುದೆಂದರೆ ಅದನ್ನು ಕಿತ್ತು ಧರೆಗುರುಳಿಸುವ ಅಗಾಧ ಶಕ್ತಿ ಈ ಮಳೆ ಗಾಳಿಗಳಿಗೆ ಇರುತ್ತದೆ. ಸತತ ಮಳೆಯಿಂದ ನೀರು ಕುಡಿದು...
ಪುಷ್ಯ ಕಳೆಯುವುದೇ ತಡ ಕರಾವಳಿಯಲ್ಲಿ ಒಂದಲ್ಲ ಒಂದು ತೇರು. ಒಂದೂರಿನಲ್ಲಿ ತೇರು ಎಂದರೆ ಏಜುಬಾಜಿನ ಹತ್ತೂರಲ್ಲಿ ಮನೆಮನೆಯಲ್ಲೂ ಹಬ್ಬವೇ ಹಬ್ಬ. ಆಗಲೆ ಕಾತ್ಗಿ ಬೆಳೆಯ ಕುಯ್ಲು ಮುಗಿದು ಎಲ್ಲರ ಮನೆಯಲ್ಲೂ ಕಾಳುಕಡಿ ಸಮೃದ್ಧವಾಗಿರುತ್ತದೆ. ಸುಗ್ಗಿ ಬೆಳೆಯ ಸಾಧ್ಯತೆ ಇದ್ದಲ್ಲಿ ಬಿತ್ತನೆ, ನಾಟಿ ಮುಗಿದಿರುತ್ತದೆ. ಕೆಲಸವೆಲ್ಲ ಮುಗಿಯಿತಪ್ಪ ಎಂದು ರೈತರಲ್ಲ ನಿರುಂಬಳವಾಗಿ ಉಸಿರಾಡಿಸಿಕೊಳ್ಳುತ್ತಿರುವಾಗಲೆ ಈ ತೇರುಗಳು ಬಂದುಬಿಡುತ್ತವೆ.ಒಂದೇ, ಎರಡೇ….ಇಡಗುಂಜಿಯ ತೇರು, ಬಳಕೂರು ತೇರು, ದಿಬ್ಬಣಗಲ್ಲ ತೇರು, ಕೊಳಗದ್ದೆ ತೇರು, ಕಾಸರಕೋಡು ತೇರು, ಹಳದಿಪುರ ತೇರು, ಅಗ್ರಹಾರ ತೇರು, ಧಾರೇಶ್ವರ...
ನಾನಿನ್ನೂ ಆಗ ಚಿಕ್ಕವನು. ಏಳೆಂಟು ವರ್ಷಗಳು ಇರಬಹುದು. ನಮ್ಮ ಮನೆಗೆ ಒಂದು ಎಮ್ಮೆಯನ್ನು ತರಬೇಕು ಎಂಬ ವಿಷಯದಲ್ಲಿ ನನ್ನ ಅಪ್ಪ ಅಮ್ಮ ಚರ್ಚೆ ನಡೆಸಿದ್ದರು. ಗಂಟಿಗಳಿಗೂ ಕಾಲುಗುಣ ಎನ್ನುವುದು ಇರುತ್ತದೆ. ಎಂಥೆಂಥದ್ದೋ ತಳಿಗಳನ್ನು ತಂದು ಹೊಕ್ಕಿಸಿದರೆ ಇರುವ ದನಕರುಗಳೂ ನಾಶವಾಗುವವು ಎನ್ನುವ ಜನರಾಗಿದ್ದರು ಅವರು. ನೀವು ಮಾಡಿದ್ದು ಸರಿ ಎಂದು ಶಕುನದ ನುಡಿ ಅವರಿಗೆ ಹೇಳುವವರು ಯಾರು?ಅದಕ್ಕೆ ಅವರೇನು ಮಾಡಿದರು ಗೊತ್ತೆ? ಒಂದು ಮೊರದಲ್ಲಿ ಎರಡು ಮೂಲೆಗಳಿಗೂ ಎರಡೆರಡು ಬೊಗಸೆ ಅಕ್ಕಿಯನ್ನು ಹಾಕಿದರು. ಒಂದರಲ್ಲಿ ಅವರು ಇದ್ದಲಿಯನ್ನೂ...
ದೇವರು ಬಂದರು ದಾರಿಬಿಡಿ ಪಲ್ಲಕ್ಕಿ! ಹೌದು, ಪಲ್ಲಕ್ಕಿಯೆಂದರೆ ಪಲ್ಲಕ್ಕಿಯೇ. ಆದು ಬಂತೆಮದರೆ ಇಡೀ ಊರಿಗೆ ಊರೇ ಎಚ್ಚರ. ಪಲ್ಲಕ್ಕಿ ಇದ್ದಾಗ ಕಳ್ಳತನವಿರಲಿಲ್ಲ. ಜನರನ್ನು ರೋಗ ಬಾಧಿಸುತ್ತಿರಲಿಲ್ಲ. ಬರೀ ಮನುಷ್ಯರೇ ಏನು, ದನ ಕರು ಕೋಳಿಗಳಿಗೂ ರೋಗ ತಟ್ಟುತ್ತಿರಲಿಲ್ಲ! ಮಿಂದು ಅದೆಷ್ಟೋ ದಿನಗಳಾದವರೂ ಪಲ್ಲಕ್ಕಿ ಊರಲ್ಲಿ ಇದ್ದಷ್ಟು ದಿನ ಮಿಂದುಬಿಡುತ್ತಿದ್ದರು. ಬೇಲಿಯಲ್ಲಿ ಅರಳಿ ಮುಡಿಗೂ ಜಡೆಗೂ ಸಲ್ಲುವ ಭಾಗ್ಯವಿಲ್ಲದೆ ಬಾಡಿಹೋಗುತ್ತಿದ್ದ ಕೋಟೆ ಹೂವು, ಕೆಂಪುದಾಸವಾಳ, ಹುಲಿಮೀಸೆ ಹೂವುಗಳು ಪಲ್ಲಕ್ಕಿ ಇದ್ದ ಅವಧಿಯಲ್ಲಿ ತಮ್ಮ ಬದುಕನ್ನು ಸಾರ್ಥಕಪಡಿಸಿಕೊಳ್ಳುತ್ತಿದ್ದವು.ನಮ್ಮೂರ ಪುರಾಣ ಬಿಚ್ಚಿದರೆ...
ಅದು ಹೀಗಾಯಿತು. ಶರಾವರಿ ನದಿಯಲ್ಲಿ ಹೊನ್ನಾವರದಿಂದ ಗೇರಸಪ್ಪಾ ವರೆಗೆ ಕೇರಳದ ಕಡೆಯವರೊಬ್ಬರು ಲಾಂಚ್ ಸವರ್ಿಸ್ ಇಟ್ಟಿದ್ದರು. ಒಂದಲ್ಲ ಎರಡು ಲಾಂಚುಗಳು. ಬರಿ ಲಾಂಚ್ ಎಂದರೆ ಕಲ್ಪನೆಗೆ ನಿಲುಕುವುದಿಲ್ಲ. ಒಮ್ಮೆಲೆ ಸುಮಾರು 500 ಜನರನ್ನು ಒಯ್ಯಬಹುದಾದಷ್ಟು ದೊಡ್ಡ ಲಾಂಚು ಅದು. ಇದಕ್ಕೆ ಮಾಳಿಗೆ ಕೂಡ ಇತ್ತು. ಅಲ್ಲಿ `ಎ’ ಕ್ಲಾಸ್ ಸೀಟುಗಳು. ಬಸ್ಸಿನಲ್ಲಿರುವಂತೆ ಗ್ಲಾಸಿನ ಕಿಡಕಿಗಳು. ಕೆಳಗಡೆ ಕೇವಲ ಕಟ್ಟಿಗೆಯ ಹಲಗೆಗಳು.ಹೊನ್ನಾವರದಿಂದ ಗೇರಸಪ್ಪಾಗೆ ಕ್ರಮಿಸಲು ಕನಿಷ್ಠ ಮೂರೂವರೆ ತಾಸು ಹಿಡಿಯುತ್ತಿತ್ತು. ಒಂದು ಲಾಂಚನ್ನು ಗೇರಸಪ್ಪಾದಿಂದ ಬೆಳಿಗ್ಗೆ ಆರು ಆರೂವರೆಗೆ...
ಇತ್ತೀಚಿನ ಹದಿನೈದು ವರ್ಷಗಳಲ್ಲಿ ಡಿಂಗೀ ಇಲ್ಲದೆ ಹೊಳೆಸಾಲಿನವರಿಗೆ ಬದುಕೇ ಇಲ್ಲ ಅನ್ನಿಸಿಬಿಟ್ಟಿದೆ. ಅವರ ಬದುಕಿನ ಹಾಸುಹೊಕ್ಕುಗಳಲ್ಲಿ ಯಾವುದೋ ಒಂದು ಎಳೆಯಾಗಿ ಅದು ನೇಯ್ದುಕೊಂಡುಬಿಟ್ಟಿದೆ. ನಿಶ್ಶಬ್ದ ನದಿ ಕೊಳ್ಳದಲ್ಲಿ ಒಂದು ದಿನ ಡಿಂಗೀಯ ಸದ್ದು ಕೇಳಲಿಲ್ಲವೆಂದರೆ ಅದೇನೋ ಕಳೆದುಕೊಂಡ ಹಾಗೆ ಜನರು ಚಡಪಡಿಸುವರು. ಅವರ ಬದುಕಿನ ವೇಳಾಪಟ್ಟಿಯಲ್ಲಿ ಏರುಪೇರು ಸಂಭವಿಸಿ ಬಿಡುವುದು.ಪ್ರಶಾಂತವಾದ ಶರಾವತಿ ಕೊಳ್ಳದಲ್ಲಿ ಡಿಂಗೀಯಲ್ಲಿ ಪ್ರಯಾಣಿಸುವುದೇ ಒಂದು ವಿಶಿಷ್ಟವಾದ ಅನುಭವ. ಗೇರುಸೊಪ್ಪೆಯಿಂದ ಹೊನ್ನಾವರದ ವರೆಗಿನ ಹೊಳೆಸಾಲಿನ ಜನರಿಗೆ ಜಲಸಂಚಾರದ ಸಾಧನವಾಗಿ ಡಿಂಗೀ ಬಳಕೆಯಾಗುತ್ತಿದೆ. ಏನಿದು ಡಿಂಗೀ? ಹೆಸರು...