*ಸಂಪತ್ತು ಇದ್ದಾಗ ಬೇಕಾಬಿಟ್ಟಿ ಖರ್ಚು ಮಾಡುವವ

ತಿಯಾಗಿ ದುಂದುವೆಚ್ಚ ಮಾಡುತ್ತಿರುವುದನ್ನು ಕಂಡಾಗ, ವೈಭವದ ಜೀವನ ನಡೆಸುವವರನ್ನು ಕಂಡಾಗ `ಅವಂದೇನು, ನಂದೋರಾಯನ ದರ್ಬಾರು' ಎಂದು ಹೇಳಿಬಿಡುತ್ತಾರೆ. ಹಾಗೆ ಹೇಳುವವರಿಗೆ ಈ ನಂದೋರಾಯ ಯಾರು ಎನ್ನುವುದು ಗೊತ್ತಿರುವುದಿಲ್ಲ. ದಾನದಲ್ಲಿ ಪ್ರಸಿದ್ಧರಾದವರು ಬಲಿ ಮತ್ತು ಕರ್ಣ ಇಬ್ಬರೇ. ಈ ನಂದೋರಾಯ ಯಾರು? ಈ ಮಾತು ಹುಟ್ಟಿಕೊಂಡ ಕಾಲದಲ್ಲಿ ಮತ್ತು ಪ್ರದೇಶದಲ್ಲಿ ಇದ್ದ ಬಹುದೊಡ್ಡ ಶ್ರೀಮಂತನಿರಬೇಕು. ದಾನ ಮಾಡಿ ಮಾಡಿ ಕೊನೆಯಲ್ಲಿ ಎಲ್ಲವನ್ನೂ ಕಳೆದುಕೊಂಡವನಿರಬೇಕು. ಅದಕ್ಕಾಗಿಯೇಎಷ್ಟು ದಿನ ನಡೆಯುತ್ತದೆ ಈ ನಂದೋರಾಯನ ದರ್ಬಾರು?’ ಎಂದು ಹೇಳುವುದು. ಈ ಹೇಳಿಕೆಯಲ್ಲಿಯೇ ಎಚ್ಚರಿಕೆಯ ಧ್ವನಿಯೂ ಇದೆ. ಅತಿ ದಾನ ಅಪಾಯಕಾರಿ, ಕೊನೆಯಲ್ಲಿ ಬಿಕಾರಿಯಾಗಬೇಕಾಗುತ್ತದೆ ಎಂಬುದನ್ನು ಅದು ಸೂಚಿಸುತ್ತದೆ.
ಪುರಾಣದಲ್ಲಿ ಶ್ರೀಕೃಷ್ಣನ ಸಾಕು ತಂದೆ ನಂದ. ಇತಿಹಾಸದಲ್ಲಿ ಚಂದ್ರಗುಪ್ತ ಮೌರ್ಯನಿಂದ ಪದಚ್ಯುತನಾದ ನಂದವಂಶದ ಮಹಾಪದ್ಮನಂದ ಒಬ್ಬ ಇದ್ದಾನೆ. ಅವರೆಲ್ಲ ದೂರವಾಯಿತು. ಮಂಗಳೂರು ಸಮೀಪ ನಂದಿಪುರವಿದೆ. ಇಲ್ಲಿ ನಂದವಂಶದ ರಾಜರು ಆಳಿದ್ದರಂತೆ. `ನಂದೋರಾಯನ ದರ್ಬಾರು’ ಎಂಬ ಮಾತು ಪ್ರಚಲಿತದಲ್ಲಿರುವುದು ಕರಾವಳಿ ಭಾಗದಲ್ಲಿ. ಆದ ಕಾರಣ, ಇವರಿಂದಲೇ ಈ ಮಾತು ಪ್ರಚಲಿತದಲ್ಲಿ ಬಂದಿರಲೂಬಹುದು ಅಥವಾ ಯಾವುದಾದರೂ ಜಾನಪದ ಪುರುಷನಿರಬಹುದು ಈ ನಂದೋರಾಯ.