*ದುರ್ಬಲ ದೈಹಿಕ ಸ್ಥಿತಿ

ಡಕಲಾಗಿರುವ ಹಸುವನ್ನು ಕಂಡಾಗ ಅದನ್ನು ಬಲರಾಮನ ಗೋವು ಎಂದು ಹೇಳುವುದಿದೆ. ಅದೇ ರೀತಿ ಬಡಪಾಯಿ ವ್ಯಕ್ತಿಯನ್ನೂ ಬಲರಾಮನ ಗೋವು ಎಂದು ಕರೆಯುತ್ತಾರೆ.
ಏನಿದು ಬಲರಾಮನ ಗೋವು? ಒಂದು ದಿನ ಬಲರಾಮನ ಮನೆಯ ಮುಂದಿನ ತೋಟವನ್ನು ಹೊಕ್ಕ ಒಂದು ಗೋವು ಗಿಡಗಳನ್ನು ತಿನ್ನುತ್ತಿತ್ತು. ಅದನ್ನು ಓಡಿಸಲು ಬಲರಾಮ ಒಂದು ಚಿಕ್ಕ ಕಲ್ಲನ್ನು ಎತ್ತಿ ಹೊಡೆಯುತ್ತಾನೆ. ಆ ಕಲ್ಲು ತಾಗಿದ ಕೂಡಲೇ ಗೋವು ಸತ್ತುಹೋಗುತ್ತದೆ.
ಅಲ್ಲಿಗೆ ಬಂದ ಶ್ರೀಕೃಷ್ಣ, ಗೋಹತ್ಯೆಯ ಪಾಪ ನಿವಾರಣೆಗಾಗಿ ತೀರ್ಥಯಾತ್ರೆಗೆ ಹೋಗುವಂತೆ ಬಲರಾಮನಿಗೆ ಸಲಹೆ ನೀಡುತ್ತಾನೆ. ಇದು ಶ್ರೀಕೃಷ್ಣನದೇ ತಂತ್ರವಾಗಿರುತ್ತದೆ. ಮಹಾಭಾರತದ ಯುದ್ಧದಲ್ಲಿ ಬಲರಾಮ ಪಾಲ್ಗೊಳ್ಳಬಾರದು ಎಂದು ಈ ತಂತ್ರ ಹೂಡಿರುತ್ತಾನೆ. ತೀರ್ಥಯಾತ್ರೆಗೆ ಹೋದ ಬಲರಾಮ ಮಹಾಭಾರತ ಯುದ್ಧದ ಕೊನೆಯ ದಿನ ಗದಾಯುದ್ಧದ ಸಮಯಕ್ಕೆ ಬರುತ್ತಾನೆ. ಅಷ್ಟರೊಳಗೆ ಆಗಬೇಕಾದ ಅನಾಹುತ ಆಗಿಹೋಗಿರುತ್ತದೆ.