ವಿಮರ್ಶೆ

`ಗ್ರಹಣ’ದ ಭೈರಪ್ಪ ಒಬ್ಬ ಪುರೋಗಾಮಿ ಲೇಖಕ

ಕಾದಂಬರಿಕಾರ ಎಸ್‌.ಎಲ್‌. ಭೈರಪ್ಪನವರ ಮೇಲೆ ವಿಮರ್ಶಕರ ಮತ್ತು ಚಿಂತಕರ ಹಲವು ಆಕ್ಷೇಪಗಳಿವೆ. ಅವರೊಬ್ಬ ಪ್ರತಿಗಾಮಿ ಲೇಖಕ, ಸ್ತ್ರೀಪಾತ್ರಗಳನ್ನು ಗೌಣವಾಗಿ ತೋರಿಸುತ್ತಾರೆ, ಜೀವವಿರೋಧಿ ಧೋರಣೆ ಅವರದು ಎಂದೆಲ್ಲ ಹೇಳುತ್ತಾರೆ. ಆದರೆ ಈ ಆಕ್ಷೇಪಗಳಿಗೆಲ್ಲ ಉತ್ತರ ಎನ್ನುವಂತೆ ಇದೆ ಅವರ `ಗ್ರಹಣ’ ಕಾದಂಬರಿ.

ನಿರುದ್ವಿಗ್ನ ನಿರೂಪಣೆಯ ಬಾಡಿಗೆ ಮನೆಗಳ ರಾಜಚರಿತ್ರೆ

ಕಳೆದ ಶತಮಾನದ ಕೊನೆಯ ಎರಡು ದಶಕಗಳು ಮತ್ತು ಈ ಶತಮಾನದ ಕಳೆದೆರಡು ದಶಕಗಳಲ್ಲಿ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರೆಯುತ್ತಿರುವ ಕೆ. ಸತ್ಯನಾರಾಯಣ ಅವರು ಮುಖ್ಯವಾಗಿ ಕತೆಗಾರ ಎಂದೇ ಪ್ರಸಿದ್ಧರಾದವರು. ತಮ್ಮ ಬರೆಹಗಳಲ್ಲಿ ಸದಾ ಪ್ರಯೋಗಶೀಲರಾಗಿರುವ ಅವರು ಹೊಸ ರೀತಿಯಲ್ಲಿ ಹೇಳುವುದಕ್ಕೆ ಸದಾ ತುಡಿಯುತ್ತಿರುತ್ತಾರೆ. ಈ ಮಾತಿಗೆ ಅವರ ಆತ್ಮಕಥನವೇ ಸಾಕ್ಷಿ. ಆತ್ಮಕಥನಗಳನ್ನು ಹೀಗೂ ಬರೆಯಬಹುದೇ ಎಂದು ಆಶ್ಚರ್ಯಪಡುವ ಹಾಗೆ ವಿಶಿಷ್ಟವಾಗಿ ಅವರು ಬರೆದಿರುವರು. ಅದು ಒಂದಲ್ಲ, ನಾಲ್ಕು ಸಂಪುಟಗಳಲ್ಲಿ. ಮೊದಲಿನದು, ನಾವೇನು ಬಡವರಲ್ಲ, ಎರಡನೆಯದು ಸಣ್ಣಪುಟ್ಟ...

ಸಾಮಾನ್ಯ ಚಿತ್ರಕ್ಕೆ ಭಾಷೆಯ ಸುವರ್ಣ ಚೌಕಟ್ಟು

ನಾಟಕಕಾರ ಮತ್ತು ವರ್ಣಚಿತ್ರ ಕಲಾವಿದ ಡಿ.ಎಸ್‌. ಚೌಗಲೆವರು ತಮ್ಮ ಸ್ವತಂತ್ರ ನಾಟಕ ‘ದಿಶಾಂತರ'ದ ಎರಡನೆಯ ಆವೃತ್ತಿಗೆ ನಾನೇ ವಿಮರ್ಶೆ ಬರೆಯಬೇಕು ಎಂದು ಒತ್ತಾಯ ಮಾಡಿದ ಕಾರಣ ಬಹು ದಿನಗಳ ಬಳಿಕ ನಾಟಕವೊಂದನ್ನು ಓದುವ ಅವಕಾಶ ದೊರೆಯಿತು. ನಾಟಕ 76 ಪುಟಗಳಲ್ಲಿದ್ದರೆ ಇತರರು ಈ ನಾಟಕದ ಬಗ್ಗೆ ಲೇಖನ ಇತ್ಯಾದಿ 43 ಪುಟಗಳಲ್ಲಿವೆ. ಸಾಹಿತಿ ಚಂದ್ರಕಾಂತ ಕುಸನೂರರ ಅನಿಸಿಕೆ, ಲೇಖಕರ ನನ್ನ ಮಾತು, ರಂಗಕರ್ಮಿ ಸಿ.ಬಸವಲಿಂಗಯ್ಯನವರ ದಿಶಾಂತರದ ಜಾಡಿನಲ್ಲಿ...., ರಂಗನಿರ್ದೇಶಕ ಬಿ.ಸುರೇಶ ಅವರು ನಾಟಕ ಕುರಿತು ಮಾಹಿತಿಗಾಗಿ ಮಾಡಿಕೊಂಡ...

ಸಲಿಂಗಿಗಳ ಒಳ ಬದುಕಿನ ಚಿತ್ರಣ ನೀಡುವ ಲೈಂಗಿಕ ಜಾತಕ

ಕನ್ನಡದ ಈಗಿನ ಗದ್ಯ ಬರೆಹಗಾರರಲ್ಲಿ ಕೆ.ಸತ್ಯನಾರಾಯಣ ಅವರು ಪ್ರಮುಖರು. ಗದ್ಯ ಬರೆಹಗಾರರು ಎಂದು ಉದ್ದೇಶಪೂರ್ವಕವಾಗಿ ನಾನು ಇಲ್ಲಿ ಹೇಳಿದ್ದೇನೆ. ಅವರು ಕವಿತೆ ಬರೆದಿಲ್ಲ. ಆದರೆ ಇದುವರೆಗೆ ಒಂಬತ್ತು ಕಾದಂಬರಿ, ಹದಿನಾಲ್ಕು ಕಥಾಸಂಕಲನಗಳು, ಆರು ಪ್ರಬಂಧ ಸಂಕಲನಗಳು, ವಿಮರ್ಶೆ-ಸಾಂಸ್ಕೃತಿಕ ಬರೆಹ ಎಂದು ಆರು ಸಂಕಲನಗಳು, ನಾಲ್ಕು ಅಂಕಣ ಬರೆಹಗಳ ಕೃತಿಗಳು, ಒಂದು ಪ್ರವಾಸ ಕಥನ, ಒಂದು ವ್ಯಕ್ತಿ ಚಿತ್ರ, ಮೂರು ಆತ್ಮಚರಿತ್ರೆ ಹೀಗೆ ಇಷ್ಟೊಂದು ವೈವಿಧ್ಯಮಯ ಬರೆಹಗಳನ್ನು ಅವರು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ. ಮೂರು ಸಂಪಾದನೆ ಕೃತಿಗಳನ್ನು ಪ್ರಕಟಿಸಿದ್ದಾರೆ....

ಪೂರ್ಣಚಂದ್ರ ತೇಜಸ್ವಿಯವರ ‘‘ಹುಲಿಯೂರಿನ ಸರಹದ್ದು’’

ನವ್ಯ ಸಾಹಿತ್ಯ ತನ್ನ ಅಭಿವ್ಯಕ್ತಿಯ ಸಾಧ್ಯತೆಗಳನ್ನು ಕಂಡುಕೊಳ್ಳುತ್ತಿರುವ ಸಂದರ್ಭದಲ್ಲಿಯೇ ಕತೆಗಳನ್ನು ಬರೆಯಲು ತೊಡಗಿದ ಪೂರ್ಣಚಂದ್ರತೇಜಸ್ವಿಯವರು ‘‘ಅಬಚೂರಿನ ಪೋಸ್ಟಾಫೀಸು’’ ಕಥಾ ಸಂಕಲನಕ್ಕೆ ‘‘ಹೊಸದಿಗಂತದ ಕಡೆಗೆ’’ ಎನ್ನುವ ಮುನ್ನುಡಿ ಬರೆಯುತ್ತ, ‘‘ಕನ್ನಡ ನವ್ಯ ಸಂಪ್ರದಾಯವನ್ನು ಸಂಪೂರ್ಣವಾಗಿ ತೊರೆದು ಹೊಸ ದಿಕ್ಕಿನಲ್ಲಿ ನಾವೀಗ ಅನ್ವೇಷಿಸಬೇಕಾಗಿದೆ’’ ಎಂದು ಹೇಳಿದ್ದಾರೆ. ಇದನ್ನು ಲಕ್ಷಿಸಿ ಕೆಲವು ವಿಮರ್ಶಕರು ತೇಜಸ್ವಿಯವರನ್ನು ನವ್ಯೋತ್ತರ ಕಾಲದ ಶ್ರೇಷ್ಠ ಕತೆಗಾರ ಎಂದು ಗುರುತಿಸುತ್ತಾರೆ. ನವ್ಯದ ವ್ಯಾಖ್ಯೆ ವಿಮರ್ಶೆಯ ನಿಲುಕು- ನೆಲೆಯಲ್ಲಿ ನಿಷ್ಕೃಷ್ಟವಾಗಿ ನಿರ್ಣಯಿಸಲ್ಪಡುವವರೆಗೆ ಅವರನ್ನು ನವ್ಯರಲ್ಲೇ ಒಬ್ಬರೆಂದು ಪರಿಗಣಿಸುವುದು ಸೂಕ್ತ. ಏಕೆಂದರೆ...

ಮೊಗಸಾಲೆಯವರ ಗಾಂಧಿ ಮಾರ್ಗ

ಕನ್ನಡ ಸಾಹಿತ್ಯದಲ್ಲಿ ಕಾದಂಬರಿ ಪ್ರಕಾರವು ಮಹಾಕಾದಂಬರಿಯ ರೂಪಕ್ಕೆ ಹಿಗ್ಗಿಕೊಂಡ ಗಳಿಗೆಯಲ್ಲಿಯೇ ಸಾಹಿತ್ಯವೆನ್ನುವುದು ತಲೆಮಾರುಗಳ ಶತಮಾನಗಳ ದೀರ್ಘ ಹರಹಿನ ಚಿತ್ರಣ ಎಂಬ ಅರ್ಥವ್ಯಾಪ್ತಿಯನ್ನು ಪಡೆದುಕೊಂಡಿತು. ಮಹಾಕಾದಂಬರಿಗೆ ವ್ಯಾಖ್ಯೆಯೊಂದನ್ನು ರೂಪಿಸಿಕೊಡುವ ಪರ್ವಕಾಲ ಈಗ ಪ್ರಾಪ್ತವಾದಂತೆ ಕಾಣುತ್ತಿದೆ. ಏಕೆಂದರೆ ವಿಸ್ತಾರವಾದ ವಸ್ತುವಿನ್ಯಾಸದ ಹಲವು ಕೃತಿಗಳು ಈಗ ಬರುತ್ತಿವೆ. ಕುವೆಂಪು ಅವರ ಎರಡು ಮಹಾಕಾದಂಬರಿಗಳು, ಕಾರಂತರ ಮರಳಿ ಮಣ್ಣಿಗೆ, ಗೋಕಾಕರ ಸಮರಸವೇ ಜೀವನ, ರಾವ್‌ಬಹಾದ್ದೂರ್‌ ಅವರ ಗ್ರಾಮಾಯಣ, ಮಾಸ್ತಿಯವರ ಚಿಕವೀರ ರಾಜೇಂದ್ರ, ಭೈರಪ್ಪನವರ ದಾಟು, ಶ್ರೀಕೃಷ್ಣ ಅಲನಹಳ್ಳಿಯವರ ಭುಜಂಗಯ್ಯನ ದಶಾವತಾರಗಳು, ಲಂಕೇಶರ ಮುಸ್ಸಂಜೆಯ...

ನೂರು ತುಂಬಿದ ಇಂದಿರಾಬಾಯಿ

ಕನ್ನಡದ ಮೊದಲ ಸಾಮಾಜಿಕ ಕಾದಂಬರಿ ಇಂದಿರಾಬಾಯಿಗೆ ಈಗ ನೂರು ತುಂಬಿದೆ. 1899ರಲ್ಲಿ ಗುಲ್ವಾಡಿ ವೆಂಕಟರಾಯರು ಇದನ್ನು ಬರೆದರು. ಇಂದಿರಾಬಾಯಿಯ ಇನ್ನೊಂದು ಹೆಸರು ಸದ್ಧರ್ಮ ವಿಜಯ. ಮಂಗಳೂರಿನ ಬಾಸೆಲ್ ಮಿಶನ್ ಪ್ರೆಸ್್ನಲ್ಲಿ ಇದು ಮೊದಲ ಮುದ್ರಣವನ್ನು ಕಂಡಿತು. ಈ ಶತಮಾನದ 6ನೆ ದಶಕದ ವರೆಗೆ ಇದು ಪ್ರಚಾರದಲ್ಲಿಯೇ ಇರಲಿಲ್ಲ. ಸಾಹಿತ್ಯದ ವಿಮರ್ಶಕರಿಗೂ ಈ ಕೃತಿಯ ಪರಿಚಯ ಇರಲಿಲ್ಲ. 1962ರಲ್ಲಿ ಈ ಕೃತಿಯು ಎಂ. ಗೋವಿಂದ ಪೈ, ಕೆ.ಶಿವರಾಮ ಕಾರಂತ ಮತ್ತು ಸಂತೋಷಕುಮಾರ ಗುಲ್ವಾಡಿ ಇವರ ಜಂಟಿ ಪ್ರಯತ್ನದಿಂದ ಮರುಮುದ್ರಣ...

ಅವಿನ್ಯೂ ರೋಡಿನಲ್ಲಿ ಮುಲ್ಲಾ

‘ಅವಿನ್ಯೂ ರೋಡಿನಲ್ಲಿ ಮುಲ್ಲಾ’ ಆರ್.ವಿಜಯರಾಘವನ್ ಅವರು ಬರೆದಿರುವ ಲೇಖನಗಳ ಸಂಕಲನ ಅವಿನ್ಯೂ ರೋಡಿನಲ್ಲಿ ಮುಲ್ಲಾ ಸಾಹಿತ್ಯದ ಯಾವ ಪ್ರಕಾರಕ್ಕೆ ಸೇರುತ್ತದೆ ಎಂಬುದನ್ನು ಹೇಳುವುದು ಕಷ್ಟ. ಅದಕ್ಕಾಗಿಯೇ ಅದನ್ನೊಂದು ಸಂಕೀರ್ಣ ಎಂದು ಕರೆಯಬಹುದು. ಏಕೆಂದರೆ ಇದರಲ್ಲಿ ಕೃತಿ ವಿಮರ್ಶೆ ಇದೆ, ಮೀಮಾಂಸೆ ಇದೆ, ವ್ಯಕ್ತಿ ಚಿತ್ರಗಳಿವೆ, ಚಿಂತನೆ ಇದೆ, ಮುನ್ನುಡಿಗಳಿವೆ. ಇದರಲ್ಲಿಯ ಮೊದಲ ಲೇಖನ ಕೆ.ಸತ್ಯನಾರಾಯಣ ಅವರ ‘ಈ ತನಕದ ಕಥೆಗಳು ಮತ್ತು ವಿಚ್ಛೇದನಾ ಪರಿಣಯ’ ಎಂಬ ಕಾದಂಬರಿಯ ಕುರಿತಿದೆ. ಸತ್ಯನಾರಾಯಣರಿಗೆ ಈ ಲೋಕದಲ್ಲಿ ಚೆಲ್ಲಾಪಿಲ್ಲಿ ಬಿದ್ದಿರುವ ಬಹುಜನರು...

ಸಹಸ್ರ ಚಂದ್ರ

ಕನ್ನಡದಲ್ಲಿ ಹನಿಗವನಗಳು ಸಾಹಿತ್ಯದ ಒಂದು ಪ್ರಕಾರವಾಗಿ ಈಗಾಗಲೆ ಮನ್ನಣೆಯನ್ನು ಪಡೆದುಕೊಂಂಡಿವೆ. ಯಾವುದೋ ಒಂದು ಸುಂದರ ಕ್ಷಣವನ್ನು ಪಕ್ಕನೆ ಹಿಡಿದು ಅಕ್ಷರಗಳಲ್ಲಿ ಮೂಡಿಸುವುದಕ್ಕೆ ವಿಶೇಷ ಪ್ರತಿಭೆಯೇ ಬೇಕು. ಸಂಸ್ಕೃತ ಸಾಹಿತ್ಯದಲ್ಲಿ ಮುಕ್ತಕಗಳ ಪರಂಪರೆಯೇ ಇದೆ. ರಾಮಾಯಣದಂಥ ಮಹಾಕಾವ್ಯವನ್ನೇ ಅನುಷ್ಟುಪ್ ಎಂಬ ದ್ವಿಪದಿಯ ಛಂದಸ್ಸಿನಲ್ಲಿ ಬರೆಯಲಾಗಿದೆ. ಸುಭಾಷಿತಗಳ ದೊಡ್ಡ ಗಣಿಯೇ ಅಲ್ಲಿದೆ. ಉರ್ದುದಲ್ಲಿಯೂ ಇಂಥ ಹನಿಗವನಗಳ ಪರಂಪರೆ ಇದೆ. ಕನ್ನಡದಲ್ಲಿಯೂ ಭಾವನೆಗಳನ್ನು ಆರೆಂಟು ಪದಗಳಲ್ಲಿ ಹಿಡಿದಿಡುವ ಪ್ರಯತ್ನ ನಡೆದಿದೆ. ಜಪಾನಿನ ಹೈಕುಗಳ ಪ್ರಭಾವ ಇದರ ಮೇಲಿದೆ. ಈ ಪ್ರಭಾವ ಅವುಗಳ...

ಗಂಟೆ ಗೋಪುರ

ಅನುವಾದವೆಂದರೆ ಪುನರ್‌ಸೃಷ್ಟಿ. ಒಂದು ಭಾಷೆಯಲ್ಲಿರುವ ಸಾಹಿತ್ಯವನ್ನು ಇನ್ನೊಂದು ಭಾಷೆಯಲ್ಲಿ ಪುನರ್‌ನಿರ್ಮಾಣ ಮಾಡುವುದು. ಅನುವಾದಿಸುವವನಲ್ಲಿ ಇರಬೇಕಾದ ಪ್ರಮುಖ ಅರ್ಹತೆ ಎಂದರೆ ಎರಡೂ ಭಾಷೆಯಲ್ಲಿ ಇರಬೇಕಾದ ಸಮಾನ ಪ್ರಭುತ್ವ. ಅನುವಾದವು ಕೆಲವೊಮ್ಮೆ ಅನುಸೃಷ್ಟಿಯೂ ಆಗಬಹುದು. ಒಂದೇ ದೇಶದ ಸಮಾನ ಸಂಸ್ಕೃತಿಯ ಪಠ್ಯವೊಂದನ್ನು ಅನುವಾದಿಸುವುದು ಅಂಥ ಸವಾಲಿನ ಕೆಲಸವಾಗಲಾರದು. ಆದರೆ ಬೇರೊಂದು ದೇಶದ, ಭಿನ್ನ ಸಂಸ್ಕೃತಿಯ ಪಠ್ಯವನ್ನು ಅನುವಾದಿಸುವುದು ಕಷ್ಟದ ಕೆಲಸ. ಇಂಥ ಸಂದರ್ಭಗಳಲ್ಲಿ ಅನುವಾದಕನು ಆ ಸಂಸ್ಕೃತಿಯ ವಿಶೇಷತೆಗಳನ್ನು ಪ್ರಸ್ತಾವನೆಯ ರೂಪದಲ್ಲಿ ನೀಡುತ್ತಾನೆ. ಅಂದರೆ ಓದುಗನಿಗೆ ಅನುವಾದಿತ ಪಠ್ಯವು ಆಗಂತುಕ...