ಗಾಂಧಿ Ways ನಾಯಕರಿವರು ಗಾಂಧಿ ಬದುಕಿದ ರೀತಿ ಇಂದು ಲೋಕದೆಲ್ಲೆಡೆ ಆದರ್ಶವೆನಿಸಿದ್ದರೆ, ಅದಕ್ಕೆ ಅವರನ್ನು ಪ್ರಭಾವಿಸಿದ ಅಸಂಖ್ಯ ಇತರ ಮಾದರಿಗಳೂ ಕಾರಣ. ಗಾಂಧಿಜಯಂತಿ ಸಂದರ್ಭದಲ್ಲಿ ಅಂಥದೊಂದು ನೆನಪು. ಆಧುನಿಕ ಜಗತ್ತಿಗೆ ಭಾರತದ ಅತಿ ದೊಡ್ಡ ಕೊಡುಗೆ ಯಾವುದೆಂದು ಯಾರಾದರೂ ಕೇಳಿದರೆ ‘ಮಹಾತ್ಮ ಗಾಂಧಿ’ ಎಂದು ಸ್ವಲ್ಪವೂ ಅನುಮಾನಿಸದೆ ಹೇಳಿಬಿಡಬಹುದು. ಗಾಂಧೀಜಿಯವರಿಗೆ ಸತ್ಯ ದೇವರಷ್ಟೇ ವಾಸ್ತವ. ದೇವರಷ್ಟೇ ಸರ್ವಶಕ್ತ. ವಾಸ್ತವವಾಗಿ ಸತ್ಯವೇ ದೇವರು. ಏಕೆಂದರೆ ಜಗತ್ತು ನಿಂತಿರುವುದೇ ಸತ್ಯದ ಅಡಿಗಲ್ಲಿನ ಮೇಲೆ. ಅದು ಎಂದಿಗೂ ನಾಶವಾಗುವಂಥದ್ದಲ್ಲ. ಗಾಂಧೀಜಿಗೆ ಅತ್ಯಂತ...
ಕನಕದಾಸರು ನಮಗೆ ಮುಖ್ಯವಾಗುವುದು ಎರಡು ಕಾರಣಗಳಿಗಾಗಿ. ಒಂದು, ಅವರು ರಚಿಸಿದ ಕೀರ್ತನಗಳು ಮತ್ತು ಇತರ ಸಾಹಿತ್ಯ ಕೃತಿಗಳಿಗಳಿಗಾಗಿ. ಇದು ಸಾಹಿತ್ಯದ ಭಾಗ. ಇನ್ನೊಂದು, ಸಮಕಾಲೀನ ಸಮಾಜದಲ್ಲಿ ಅವರು ಬಹುದೊಡ್ಡ ಸಮುದಾಯದ ನಾಯಕನೆಂದು ಪರಿಗಣಿಸಲ್ಪಟ್ಟು ಆ ಜನಾಂಗದ ಅಸ್ಮಿತೆಗೆ ಅವರು ನೆಲೆಯನ್ನು ಒದಗಿಸಿದ್ದಕ್ಕಾಗಿ. ಇದು ಸಾಮಾಜಿಕ ಭಾಗ. ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಕನಕ ಅಧ್ಯಯನ ಪೀಠ ಸ್ಥಾಪನೆ, ಕನಕ ಭವನಗಳ ನಿರ್ಮಾಣ, ಕನಕದಾಸ ಪ್ರಶಸ್ತಿಯ ಸ್ಥಾಪನೆ ಮೊದಲಾದವೆಲ್ಲ ಕನಕದಾಸರ ಪ್ರಾಮುಖ್ಯತೆಯನ್ನು ಹೇಳುತ್ತದೆ. ಈ ಕಾರಣಕ್ಕಾಗಿಯೇ ಉಳಿದ ದಾಸವರೇಣ್ಯರಿಂದ ಕನಕದಾಸರು ಪ್ರತ್ಯೇಕವಾಗಿ...
ಕನ್ನಡ ಸಾಹಿತ್ಯದ ಅಗ್ರಗಣ್ಯ ಲೇಖಕರಲ್ಲಿ ಒಬ್ಬರಾಗಿದ್ದ ದೇವುಡು ನರಸಿಂಹ ಶಾಸ್ತ್ರಿಗಳ ವ್ಯಕ್ತಿತ್ವ ಹಾಗೂ ಕೃತಿಗಳ ದರ್ಶನ ಮಾಡಿಸುವ “ದೇವುಡು ದರ್ಶನ’ ಕೃತಿಯನ್ನು ಹೊ.ರಾ. ಸತ್ಯನಾರಾಯಣ ಮತ್ತು ಗಂಗಾಧರ ದೇವುಡು ಅವರು ಸಂಪಾದಿಸಿದ್ದಾರೆ. ದೇವುಡು ಅವರ ಜೀವನ ಒಂದು ಭಾಗ ಮತ್ತು ಅವರ ಸಾಹಿತ್ಯ ಕೃತಿಗಳ ವಿಮರ್ಶೆ ಎರಡನೇ ಭಾಗದಲ್ಲಿದೆ.ನಿಟ್ಟೂರು ಶ್ರೀನಿವಾಸರಾಯರು, ವಿ. ಸೀತಾರಾಮಯ್ಯ, ಅ.ನ. ಕೃಷ್ಣರಾಯರು, ಬಿ. ಶಿವಮೂರ್ತಿಶಾಸ್ತ್ರಿಗಳು, ಎನ್.ಕೆ. ಕುಲಕರ್ಣಿ ಮೊದಲಾದವರ ಲೇಖನಗಳು ಈ ಭಾಗದಲ್ಲಿವೆ. ದೇವುಡು ಅವರೇ ಬರೆದಿರುವ ಆತ್ಮಕಥನವೂ ಇದರಲ್ಲಿದೆ. ದೇವುಡು ನರಸಿಂಹ ಶಾಸ್ತ್ರಿಗಳ...
ಕನ್ನಡ ಭಾಷೆಯಲ್ಲಿ ನಾನು ಆಡಿದ ಮೊದಲನೇ ನುಡಿ ಯಾವುದು ಎನ್ನುವುದನ್ನು ನನ್ನ ಅಮ್ಮ ಮತ್ತು ನನ್ನ ಸಂಬಂಧದವರು ನೆನಪು ಮಾಡುತ್ತಾ ಇದ್ದುದರಿಂದ ನನಗೂ ನೆನಪಿದೆ. ಒಂದು ಸಾರಿ ಅಬ್ಬಕ್ಕ (ಅವರ ಮನೆಯ ಕೆಲಸದ ಹೆಂಗಸು) ನಮ್ಮ ಮನೆಗೆ ಬಂದಾಗ ನಾನು ಅವಳ ಬಗ್ಗೆ ಹೀಗೆ ತಮಾಷೆ ಮಾತನಾಡಿದೆನಂತೆ, “ಅಬ್ಬಕ್ಕನ ಗುಬ್ಬಕ್ಕ ಕಚ್ಕೊಂಡೋಯ್ತು’. ಅದೇನು ಬಹಳ ದೊಡ್ಡ ವಾಕ್ಯವಲ್ಲ. ಆದರೆ ನನ್ನ ಅಮ್ಮ “ನೋಡು, ನಮ್ಮ ಅನಂತು “ಅಬ್ಬಕ್ಕನ ಗುಬ್ಬಕ್ಕ ಕಚ್ಕೊಂಡೋಯ್ತು’’ ಎಂದು ಯಾವಾಗಲೂ ಎಲ್ಲರಿಗೂ ಹೇಳುತ್ತಿದ್ದರು. ಇಲ್ಲೊಂದು...
ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರಾದ ಕೆ.ಸತ್ಯನಾರಾಯಣ ಅವರ ಹೊಸ ಕಥಾಸಂಕಲನ “ಹೆಗ್ಗುರುತು’ ಹತ್ತು ಕತೆಗಳನ್ನು ಒಳಗೊಂಡಿದೆ. ಈ ಸಂಕಲನದ ಮೂಲಕ ಕನ್ನಡ ಕಥನಕ್ರಿಯೆಯಲ್ಲಿ ಹೊಸ ಹೆಗ್ಗುರುತು ಮೂಡಿಸುವ ಪ್ರಯತ್ನವನ್ನು ಅವರು ಮಾಡಿದ್ದಾರೆ. ಈ ಸಂಕಲನಕ್ಕೆ ಮಲ್ಲಿಕಾರ್ಜುನ ಹಿರೇಮಠ ಅವರು ವಿಸ್ತಾರವಾದ, ಅಧ್ಯಯನಪೂರ್ಣ ವಿಮರ್ಶೆಯನ್ನು ಮುನ್ನುಡಿಯ ರೂಪದಲ್ಲಿ ಬರೆದಿರುವರು. ಹಿರೇಮಠ ಅವರು ಹೇಳದೆ ಬಿಟ್ಟ ಒಳನೋಟಗಳು ಏನಾದರೂ ಇವೆಯೇ ಎಂದು ನೋಡಿ ಹೇಳುವುದಕ್ಕೆ ಮಾಡಿರುವ ಪುಟ್ಟ ಪ್ರಯತ್ನ ಇದು. ಕೆ.ಸತ್ಯನಾರಾಯಣ ಅವರು ಕಥಾರಚನೆಯನ್ನು ಒಂದು ಸವಾಲಿನ, ಸೃಜನಶೀಲ ಮನಸ್ಸಿನ ಪ್ರತಿಷ್ಠೆಯ...
ಶಾಂತಾದೇವಿ ಕಣವಿಯವರು ತಮ್ಮ ಮೊದಲ ಕತೆಯನ್ನು ಬರೆದದ್ದು 1958ರಲ್ಲಿ. ಅಲ್ಲಿಂದ ಇಲ್ಲಿಗೆ ಸರಿಸುಮಾರು ಐವತ್ತೈದು ವರ್ಷಗಳೇ ಕಳೆದುಹೋಗಿವೆ. ಈ ನಡುವೆ ಅವರು ಬರೆದು ಪ್ರಕಟಿಸಿದ ಕಥಾಸಂಕಲನಗಳು ಏಳು. ಕಥಾ ಸಂಕಲನದಲ್ಲಿ ಬಾರದೆ ಇರುವ ಕೆಲವು ಕತೆಗಳನ್ನು ಸೇರಿಸಿದರೆ ನೂರಹತ್ತರಷ್ಟು ಕತೆಗಳನ್ನು ಶಾಂತಾದೇವಿಯವರು ಬರೆದಿರುವರು. ಹೆಚ್ಚೂಕಡಿಮೆ ವರ್ಷಕ್ಕೆ ಎರಡು ಕತೆಗಳಂತೆ ಅನ್ನಿ. ಶಾಂತಾದೇವಿ ಕಣವಿಯವರ ಈ ವರೆಗಿನ ಎಲ್ಲ ಕತೆಗಳನ್ನು ಸೇರಿಸಿ ಸಮಗ್ರ ಸಂಪುಟವನ್ನು ಬೆಂಗಳೂರಿನ ಸಪ್ನ ಬುಕ್ ಹೌಸ್ ಹೊರತಂದಿದೆ. ಅವರಿಗೆ ಸರಿಯಾದ ವಿಮರ್ಶನ ನ್ಯಾಯವನ್ನು ಒದಗಿಸುವ ರೀತಿಯಲ್ಲಿ...
ವಿವೇಕ ಶಾನಭಾಗ ಅವರ ಹೊಸ ಕತೆಗಳ ಸಂಕಲನ ‘ಘಾಚರ್ ಘೋಚರ್’. ಇದರಲ್ಲಿ ಆರು ಕತೆಗಳಿವೆ. ಮೊದಲ ಕತೆ ಘಾಚರ್ ಘೋಚರ್ 63 ಪುಟಗಳಷ್ಟು ದೀರ್ಘವಾಗಿರುವುದರಿಂದ ಅದೊಂದು ಕಿರುಕಾದಂಬರಿಯೇ ಸೈ. ಇದರಲ್ಲಿ ಕಥಾನಾಯಕ, ಆತನ ಪತ್ನಿ ಅನಿತಾ, ಆತನ ತಂದೆ, ಚಿಕ್ಕಪ್ಪ, ತಾಯಿ, ಗಂಡನ ಬಿಟ್ಟು ಬಂದಿರುವ ತಂಗಿ ಮಾಲತಿ ಇವರನ್ನೊಳಗೊಂಡ ಒಂದು ಕೂಡು ಕುಟುಂಬವಿದೆ. ಚಿಕ್ಕಪ್ಪ ವೆಂಕಟಾಚಲನೇ ಕುಟುಂಬದ ಕೇಂದ್ರ ವ್ಯಕ್ತಿ. ಏಕೆಂದರೆ ಅವನು ಕುಟುಂಬದ ಆದಾಯ ಮೂಲ. ಬಡತನದಲ್ಲಿದ್ದ ಕುಟುಂಬವು ಈ ವೆಂಕಟಾಚಲ ಸೋನಾ ಮಸಾಲಾ ಕಾರ್ಖಾನೆಯನ್ನು...
ಕ ಹೊಸ ತಲೆಮಾರಿನ ಕತೆಗಾರರಲ್ಲಿ ಬಹಳ ಭರವಸೆ ಮೂಡಿಸಿರುವ ವಿಕ್ರಮ ಹತ್ವಾರ ಅವರ ‘ಝೀರೋ ಮತ್ತು ಒಂದು’ ಕಥಾಸಂಕಲನದ ಒಂದು ಕತೆಯಲ್ಲಿ ‘ನಾನು ಬರೆಯುತ್ತಿರುವ ಕಥೆ ನಿಜದಲ್ಲಿ ಕಾಣಿಸತೊಡಗಿದೆ. ಕಲ್ಪಿಸಿಕೊಂಡ ಪಾತ್ರಗಳೆಲ್ಲ ನಿಜದಲ್ಲಿ ಕಾಣಿಸುತ್ತಿವೆ. ನಿಜದಲ್ಲಿ ಕಾಣಿಸುತ್ತಿದ್ದವೆಲ್ಲ ಕಥೆಯೆನಿಸತೊಡಗಿದೆ. ಬದುಕು, ಸತ್ಯ, ಕಥೆ, ಮಿಥ್ಯೆ ಎಲ್ಲವೂ ಮಿಲತಗೊಂಡಿವೆ. ಕಥೆಯಲ್ಲಿ ಸತ್ಯವೂ ಇಲ್ಲ; ಮಿಥ್ಯೆಯೂ ಇಲ್ಲ’.ಬಹುಶಃ ಎಲ್ಲ ಕಥೆಗಾರ ಅನುಭವಿಸುವ ಒಳತೋಟಿ ಇದಾಗಿರಬಹುದು ಮತ್ತು ಈ ಮೂಲಕ ಕಥೆಗಳಿಗೊಂದು ವ್ಯಾಖ್ಯೆಯನ್ನು ನೀಡಲು ಹತ್ವಾರ ಇಲ್ಲಿ ಪ್ರಯತ್ನಿಸಿರಬಹುದು.ಬದುಕಿನ ಸಾರ್ಥಕತೆಯ ಬಗ್ಗೆ...
ಶೀತಲ ಯುದ್ಧದ ಸಮಯದಲ್ಲಿ ಬ್ರಿಟನ್ನಿನ ಬೇಹುಗಾರನಾಗಿ ನಿಯುಕ್ತನಾಗಿದ್ದ ವ್ಯಕ್ತಿಯೊಬ್ಬ ರಶಿಯಾದ ಕೆಜಿಬಿಗೆ ಕೆಲಸ ಮಾಡಿ ಯುರೋಪಿನ ನೂರಾರು ಬೇಹುಗಾರರ ಪ್ರಚ್ಛನ್ನ ಬದುಕಿನ ಬಗ್ಗೆ ಮಾಹಿತಿ ನೀಡಿ ಹಲವರ ಹತ್ಯೆಗೆ ಕಾರಣನಾದ ರೋಚಕ ಕಥೆ ಇದು. ಆತ ಡಬ್ಬಲ್ ಏಜೆಂಟ್ ಜಾರ್ಜ್ ಬ್ಲೇಕ್. ಇದೀಗ ರಶಿಯಾದಲ್ಲಿ ನೆಮ್ಮದಿಯ ಬದುಕನ್ನು ಕಳೆಯುತ್ತಿರುವ ಬ್ಲೇಕ್ ಇತ್ತೀಚೆ ತಮ್ಮ 90ನೆ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇವರ ವಿದ್ರೋಹದಿಂದ ಯುರೋಪಿನ ನೂರಾರು ಗುಪ್ತ ಏಜೆಂಟರ ಹತ್ಯೆ ನಡೆದುಹೋಯಿತು.– ಜೈಲು ಸಿಬ್ಬಂದಿಯೊಬ್ಬರು ನನ್ನನ್ನು ಸಂದರ್ಶಕರ ಕೊಠಡಿಗೆ ಕರೆದುಕೊಂಡು...
ಕನ್ನಡದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾದ ಚಂದ್ರಶೇಖರ ಕಂಬಾರರಿಗೆ ಪ್ರತಿಷ್ಠಿತ ಜ್ಞಾನಪೀಠ ಪುರಸ್ಕಾರವು ಸಂದಿರುವ ಈ ಸಂದರ್ಭದಲ್ಲಿ ನಾವೆಲ್ಲ ಈ ಬಗ್ಗೆ ಹೆಮ್ಮೆ ಪಡಬೇಕೆ ಹೊರತು ಅಪಸ್ವರ ಎತ್ತಬಾರದು. ನಾಡಿನ ಇನ್ನೊಬ್ಬ ಶ್ರೇಷ್ಠ ಸಾಹಿತಿ ಎಸ್.ಎಲ್.ಭೈರಪ್ಪ ಕೂಡ ಈ ಪ್ರಶಸ್ತಿಗೆ ಅರ್ಹರಾಗಿದ್ದವರೇ. ಅವರಿಗೆ ಇದಕ್ಕಿಂತಲೂ ಬಹಳ ಮೊದಲೇ ಈ ಪ್ರಶಸ್ತಿ ಲಭಿಸಬೇಕಿತ್ತು. ಆದರೆ “ಭಾರತೀಯ ಜ್ಞಾನಪೀಠವು’ ಪ್ರಶಸ್ತಿಗೆ ಹೇಗೆ ಆಯ್ಕೆಮಾಡುತ್ತದೆ ಎಂಬುದನ್ನು ಗಮನಿಸಿದರೆ ಪ್ರಶಸ್ತಿಗಾಗಿ ಲಾಬಿ ಮಾಡಿದ್ದಾರೆ ಎಂಬಂಥ ಅಪಸ್ವರಗಳಿಗೆ ಆಸ್ಪದವಿರುವುದಿಲ್ಲ. ಹಲವರು ಕೇಂದ್ರ ಸರ್ಕಾರವೇ ಜ್ಞಾನಪೀಠ ಪ್ರಶಸ್ತಿಯನ್ನು ಕೊಡುತ್ತದೆ...