ಶರಾವತಿ ದಡದಲ್ಲಿ ಅನಗೋಡು ಎಂಬ ಊರಿದೆ. ಈ ಅನಗೋಡಿನ ಬಗ್ಗೆ ಇತ್ತೀಚಿನ ಹೊಸ ಮಾಹಿತಿ ಎಂದರೆ ವಿಷ್ಣುವರ್ಧನ್ ಅಭಿನಯದ ‘ಮಾತಾಡ್ ಮಾತಾಡ್ ಮಲ್ಲಿಗೆ’ ಸಿನಿಮಾದ ಕೆಲವು ಭಾಗವನ್ನು ಚಿತ್ರೀಕರಿಸಿದ್ದು ಇಲ್ಲಿಯೇ. ಅನಗೋಡಿನ ಜಾನಪದ ಪರಂಪರೆಯಲ್ಲಿ ನಡೆಯುವ ಊರ ಹಬ್ಬ ಪ್ರತಿ ವರ್ಷ ಮೇ ತಿಂಗಳ 21ರಂದು ನಡೆಯುತ್ತದೆ. ಈ ಬಾರಿ ನನಗೆ ಅನಗೋಡು ಹಬ್ಬವನ್ನು ನೋಡುವ ಅವಕಾಶ ದೊರೆಯಿತು. ಅನಗೋಡು ಹಬ್ಬದಲ್ಲಿ ಕುಮಾರರಾಮನನ್ನು ಮತ್ತು ಸತಿಹೋದ ಆತನ ಪತ್ನಿಯರನ್ನು ಪೂಜೆ ಮಾಡುತ್ತಾರೆ. ಮೂಲತಃ ಕುಮಾರರಾಮನು ಕಳ್ಳನೇ ಎಂದು...