*ಯಾಮಾರಿಸುವುದು ಯಾರನ್ನಾದರೂ ಪುಸಲಾಯಿಸಿ ಕೆಲಸ ಮಾಡಿಸಿಕೊಳ್ಳಲು ಯತ್ನಿಸಿದಾಗ, `ಏನ್ ನನ್ನ ಕಿವಿಲಿ ಹೂ ಇಡ್ತಿಯಾ?' ಎಂದು ಹೇಳುವುದಿದೆ. ಇರುವುದೊಂದು ಹೇಳುವುದೊಂದು. ಹಾಗೆ ಹೇಳಿ ಯಾಮಾರಿಸಲು ನೋಡುವವರಿಗೂ ಇದೇ ಮಾತು ಹೇಳುತ್ತಾರೆ.ನಾವೇನು ಕಿವಿಯಲ್ಲಿ ಹೂವಿಟ್ಟುಕೊಂಡು ಕುಳಿತಿದ್ದೇವಾ?’ ಎಂದು ಹೇಳುವುದನ್ನೂ ಕೇಳಿರುತ್ತೀರಿ. ಕಿವಿಯಲ್ಲಿ ಯಾರು ಹೂವು ಇಟ್ಟುಕೊಳ್ಳುವವರು? ದೇವಸ್ಥಾನದಲ್ಲಿ ಕೊಡುವ ಪ್ರಸಾದ ರೂಪದ ಹೂವನ್ನು ಭಕ್ತರು ಕಿವಿಯಲ್ಲಿ ಇಟ್ಟುಕೊಳ್ಳುತ್ತಾರೆ. ಕಿವಿಯಲ್ಲಿ ಇರುವ ಹೂವನ್ನು ನೋಡಿದ ಕೂಡಲೆ ಆತನನ್ನು ಪರಮ ದೈವಭಕ್ತ ಎಂದು ನಿರ್ಧರಿಸಿಬಿಡುವವರು ಇದ್ದಾರೆ. ಕಿವಿಯಲ್ಲಿ ಹೂವಿಟ್ಟುಕೊಳ್ಳುವವರೆಲ್ಲರೂ ನಿಜವಾದ ಭಕ್ತರಾಗಿರುವುದಿಲ್ಲ....
*ಆಯ್ಕೆ ಮಾಡಿಕೊಳ್ಳುವಲ್ಲಿ ಗೊಂದಲ ಕರಿಯ ಎತ್ತು ಕಾಳ, ಬಿಳಿಯ ಎತ್ತು ಬೆಳ್ಳ. `ಕಾಳನನ್ನು ದೂರುವುದು ಬೇಡ, ಬೆಳ್ಳನನ್ನು ಹೊಗಳುವುದು ಬೇಡ’ ಎಂದರೆ ಎರಡೂ ಸಮಾನ ತಪ್ಪು ಮಾಡಿದವೇ. ಕಾಳ ಸರಿಯಾಗಿ ಮಾತು ಕೇಳುತ್ತಾನೆ ಎನ್ನುವಂತಿಲ್ಲ, ಬೆಳ್ಳ ನಡೆಯನ್ನು ತಪ್ಪುವುದಿಲ್ಲ ಎನ್ನುವಂತಿಲ್ಲ. ಇಬ್ಬರೂ ಸಮಾನ ತಪ್ಪುಗಾರರೇ. ನಮ್ಮ ನಿತ್ಯ ಜೀವನದಲ್ಲೂ ಕಾಳ, ಬೆಳ್ಳ ಎದುರಾಗುತ್ತಾರೆ. ನಾವು ಅತ್ಯುತ್ತಮವಾದುದನ್ನೇ ಆಯ್ಕೆಮಾಡಿಕೊಳ್ಳಬೇಕು ಎಂದು ಬಯಸುತ್ತೇವೆ. ಯಾರನ್ನು ಆಯ್ಕೆ ಮಾಡಬೇಕೆಂದರೂ ಅವರಲ್ಲಿ ಒಂದೊಂದು ಲೋಪ. ಅವನನ್ನು ಹೊಗಳುವಂತಿಲ್ಲ, ಇವನನ್ನು ತೆಗಳುವಂತಿಲ್ಲ. ಎಲ್ಲರೂ ಒಂದೇ...
*ಮಾನಸಿಕ ಸಮತೋಲನ ಕಳೆದುಕೊಂಡವರು ತುಂಬ ಚಡಪಡಿಕೆಯ ಸ್ವಭಾವದವರನ್ನು ಕಂಡಾಗ, `ಅವ್ನ ನೋಡು, ಕಾಲು ಸುಟ್ಟ ಬೆಕ್ಕಿನಂಗೆ ಮಾಡ್ತಾ ಅವ್ನೆ' ಎಂದು ಹೇಳುವುದು ಸಾಮಾನ್ಯ. ಬೆಕ್ಕಿನ ಕಾಲು ಬಲು ಮೃದುವಾದದ್ದು. ಸದ್ದಿಲ್ಲದೆ ಹೆಜ್ಜೆಯನ್ನು ಇಕ್ಕುತ್ತ ಇಲಿಯ ಬೇಟೆಯಾಡುವುದರಲ್ಲಿ ಅದು ನಿಸ್ಸೀಮ. ಬೇಟೆಗೆ ಅದರ ಕಾಲೇ ಪ್ರಮುಖ ಸಾಧನ. ಅಂಥ ಕಾಲು ಸುಟ್ಟು ಹೋದರೆ ಅದಕ್ಕೆ ಚಡಪಡಿಕೆ ಸಹಜ. ನಿಂತಲ್ಲಿ ನಿಲ್ಲುವುದಿಲ್ಲ ಅದು. ಮನುಷ್ಯನಿಗೂ ಅಂತಹ ಚಡಪಡಿಕೆ ಶುರುವಾಗುವುದು ಯಾವಾಗ? ಆತನ ಅಹಂಗೆ ಧಕ್ಕೆಯಾದಾಗ, ಸಾಧಿಸಬೇಕು ಅಂದುಕೊಂಡಿದ್ದನ್ನು ಸಾಧಿಸಲು ಆಗದೇ...
*ಸುಳ್ಳು ಭರವಸೆಗಳ ಮೂಟೆ ನಾವು ಏನನ್ನೋ ಪಡೆದುಕೊಳ್ಳಬೇಕು ಎಂದು ಆಸೆಪಟ್ಟಿರುತ್ತೇವೆ. ಅದಕ್ಕಾಗಿ ಪ್ರಯತ್ನವನ್ನೂ ಮಾಡಿರುತ್ತೇವೆ. ಆದರೆ ಅದನ್ನು ದಕ್ಕಿಸಿಕೊಳ್ಳುವುದು ನಮ್ಮಿಂದ ಆಗುವುದೇ ಇಲ್ಲ. ಅಯ್ಯೋ ಆಗಿಯೇ ಹೋಯ್ತು ಎನ್ನುವಂತೆ ಇರುತ್ತದೆ. ಆದರೆ ಏನೂ ಆಗಿಯೇ ಇರುವುದಿಲ್ಲ. ಎಟಕುತ್ತದೆ ಅಂತಿರುವಾಗ ದಕ್ಕುವುದೇ ಇಲ್ಲ. ಹೀಗೆ ಗಮ್ಯವು ಕಾಣುತ್ತಿದ್ದರೂ ಅಗರತ್ತ ಗಮನ ಸಾಧ್ಯವಾಗದೆ ಇದ್ದರೆ ಬಹಳ ನಿರಾಶೆಯಾಗುತ್ತದೆ. ಆಗ `ಕನ್ನಡಿಯೊಳಗಿನ ಗಂಟು’ ಎಂಬ ಉದ್ಗಾರ ತನ್ನಿಂದ ತಾನೇ ಹೊರಡುತ್ತದೆ. ಕನ್ನಡಿಯೊಳಗೆ ಗಂಟು ಕಾಣುತ್ತಿರುತ್ತದೆ. ಕೈಚಾಚಿದರೆ ಅದನ್ನು ನಾವು ಎತ್ತಿಕೊಳ್ಳುವುದು ಸಾಧ್ಯವಿಲ್ಲ....
*ಕ್ಷುಲ್ಲಕ ವಿಷಯ ದೊಡ್ಡದು ಮಾಡುವುದು ಏನ್ ಮಾರಾಯಾ ಅವ್ನು, ಕಡ್ಡಿಯ ಗುಡ್ಡ ಮಾಡ್ದ. ಎಲ್ಲ ಫಜೀತಿ ಆಗಿ ಹೋಯ್ತು ಎಂದು ಅಲವತ್ತುಕೊಳ್ಳುವುದನ್ನು ಕೇಳಿದ್ದೇವೆ. ಕಡ್ಡಿ ಬಹಳ ಚಿಕ್ಕದು. ಕಡ್ಡಿಗೆ ಹೋಲಿಸಿದರೆ ಗುಡ್ಡ ಬಹಳ ದೊಡ್ಡದು. ಚಿಕ್ಕ ವಿಷಯವನ್ನು, ನಿರ್ಲಕ್ಷಿಸಿಬಿಡಬಹುದಾದ ವಿಷಯವನ್ನು ದೊಡ್ಡದು ಮಾಡಿದ ಎನ್ನುವ ಅರ್ಥ ಇಲ್ಲಿದೆ. ಜೊತೆಯಲ್ಲಿಯೇ ಹಾಗೆ ಮಾಡುವ ಅಗತ್ಯವಿರಲಿಲ್ಲ ಎಂಬ ಧ್ವನಿಯೂ ಇದರ ಒಡಲಲ್ಲಿ ಇದೆ. ಇದೇ ರೀತಿಯ ಇನ್ನೂ ಹಲವು ಮಾತುಗಳು ನಮ್ಮಲ್ಲಿವೆ. ಉಗುರಿನಲ್ಲಿ ಆಗುವುದಕ್ಕೆ ಕೊಡಲಿ ಎತ್ತಿದ ಎಂಬುದು ಅವುಗಳಲ್ಲಿ...
*ಪ್ರತಿಭೆಗೆ ಸೂಕ್ತ ಮನ್ನಣೆ ಸಿಗಲಿ ಪ್ರತಿಭೆ ಅರಳಲು ಸೂಕ್ತವಾದ ಅವಕಾಶ ಬೇಕು. ಸೂಕ್ತ ಅವಕಾಶ ದೊರೆಯದೆ ಎಷ್ಟೋ ಪ್ರತಿಭೆ ಮುರುಟಿ ಹೋಗುತ್ತದೆ. ಅವಕಾಶ ಸಿಗದ ಪ್ರತಿಭೆಯನ್ನು ಕಂಡು `ಅವನ ಬದುಕು ಕಾಡ ಬೆಳದಿಂಗಳು' ಆಗಿ ಹೋಯ್ತು ಎಂದು ಅನುಕಂಪ ತೋರಿಸುತ್ತೇವೆ. ಕಾಡಿನಲ್ಲಿಯ ಬೆಳದಿಂಗಳು ಎಷ್ಟೊಂದು ಆಹ್ಲಾದಕರವಾಗಿದ್ದರೂ ಯಾರ ಗಮನಕ್ಕೂ ಬರದೆ ಹೋಗುತ್ತದೆಯಲ್ಲವೆ? ಹಾಗೆ ಇದು. ಇದನ್ನೇ ಕೆಲವರು ವನಸುಮ ಎಂದು ಹೇಳುತ್ತಾರೆ. ವನಸುಮವೆಂದರೆ ಕಾಡಿನಲ್ಲಿ ಅರಳಿದ ಹೂವು. ಈ ಹೂವು ಬೀರುವ ಸುವಾಸನೆ ಯಾರಿಗೂ ತಟ್ಟದೆ ಹೋಗುತ್ತದೆ....
*ಎರಡು ಘಟನೆಗಳ ನಡುವೆ ಸಂಬಂಧ ಇರಲೇಬೇಕಿಲ್ಲ ಕಾಗೆ ಕೂಡುವುದಕ್ಕೂ ಟೊಂಗೆ ಮುರಿಯುವುದಕ್ಕೂ ಸರಿಹೋಯಿತು. ಅದೇ ಕಾಕತಾಳೀಯ. ಕಾಗೆಯ ಭಾರವಾದರೂ ಎಷ್ಟು? ಟೊಂಗೆ ಮುರಿಯುವಷ್ಟು ಬಾಗಿತು ಎಂದರೆ ಕಾಗೆ ಹಾರಿಯೇ ಹೋಗುತ್ತದೆ. ಮುರಿಯುವುದಕ್ಕೆ ಅಲ್ಲಿ ಅವಕಾಶವೇ ಇರುವುದಿಲ್ಲ. ಟೊಂಗೆ ಮುರಿಯುವುದಕ್ಕೆ ಕಾಗೆ ಕುಳಿತದ್ದೇ ಕಾರಣವಲ್ಲ. ಬೇರಾವುದೋ ಕಾರಣವಿರಬಹುದು. ಆದರೆ ಕಾಗೆ ಕುಳಿತೇ ಟೊಂಗೆ ಮುರಿಯಿತು ಎಂದು ಸಾಧಿಸುವುದು ತಪ್ಪು. ಸೇತುವೆಯ ಮೇಲೆ ಬಸ್ಸು ಹೋಗುತ್ತಿರುವಾಗಲೇ ಕೆಳಗೆ ನದಿಯಲ್ಲಿ ಚಲಿಸುತ್ತಿದ್ದ ದೋಣಿ ಮುಳುಗಿತು. ಈ ಎರಡೂ ಘಟನೆಗಳು ತನ್ನಷ್ಟಕ್ಕೆ ತಾನೇ...
*ಬಹಳ ಸುಲಭವಾಗಿ ಸಾಧ್ಯವಾಗುವಂಥದ್ದು ಅವನಿಗೇನಪ್ಪ ಎಲ್ಲವೂ ` ನೀರು ಕುಡಿದಷ್ಟು ಸುಲಭ' ಎಂದು ಸಾಮಾನ್ಯರು ಹೇಳುತ್ತಾರೆ. ಅದನ್ನೇ ಪಂಡಿತರು, ಅವನಿಗೆ ಎಲ್ಲವೂ` ಕರತಲಾಮಲಕ’ ಎಂದು ಹೇಳುತ್ತಾರೆ. ಇದನ್ನೇ ಕನ್ನಡದಲ್ಲಿ ಬಹಳ ಪ್ರೀತಿ ಉಳ್ಳವರು ಅವನಿಗೆ ಎಲ್ಲವೂ `ಅಂಗೈ ನೆಲ್ಲಿಕಾಯಿ’ ಎಂದು ಹೇಳುತ್ತಾರೆ. ಕರತಲಾಮಲಕ ಎನ್ನುವುದು ಸಂಸ್ಕೃತ ನುಡಿ. ಕರತಲ ಎಂದರೆ ಅಂಗೈ. ಅಮಲಕ ಎಂದರೆ ನೆಲ್ಲಿಕಾಯಿ. ನೆಲ್ಲಿಕಾಯಿ ಸುಲಭದಲ್ಲಿ ಸಿಗುವಂಥದ್ದೆ? ಅಲ್ಲವೇ ಅಲ್ಲ. ಕಾಡಿಗೆ ಹೋಗಬೇಕು. ಕಲ್ಲು ಮುಳ್ಳು ತುಳಿದು ಮರ ಏರಿ ಅದನ್ನು ಕಿತ್ತು ತರುವವರೆಗೆ...
*ಶ್ರೀರಾಮನನ್ನೇ ಹಿಡಿದಿತ್ತು ಈ ಬಾಹು ಹತ್ತು ಹಲವು ವಿಷಯಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವವರನ್ನು ಕಂಡಾಗ `ಅದೇನು ಕಬಂಧಬಾಹು ಅವನದು' ಎಂದು ಹೇಳುವುದಿದೆ. ನೈಸರ್ಗಿಕ ಪ್ರಕೋಪಗಳನ್ನು ಹೇಳುವಾಗಲೂಕಾಲ ತನ್ನ ಕಬಂಧಬಾಹುವನ್ನು ಬಳಸಿ ಎಲ್ಲವನ್ನೂ ತನ್ನ ಒಡಲೊಳಗೆ ಸೆಳೆದುಕೊಂಡ’ ಎಂದು ವರ್ಣಿಸುವುದಿದೆ. ಸುನಾಮಿಯಂಥ ಅನಾಹುತವಾದಾಗ ಸಮುದ್ರನಿಗೆ ಕಬಂಧಬಾಹು'ವನ್ನು ಆರೋಪಿಸುವುದಿದೆ. ಯಾರೀತ ಕಬಂಧ? ಅದೇನು ಕಬಂಧಬಾಹು? ಕಬಂಧ ಎನ್ನುವವ ಒಬ್ಬ ರಾಕ್ಷಸ. ರಾಮಾಯಣದಲ್ಲಿ ಶ್ರೀರಾಮ ಸೀತೆಯನ್ನು ಕಳೆದುಕೊಂಡು ಲಕ್ಷ್ಮಣನೊಡನೆ ಆಕೆಯನ್ನು ಹುಡುಕುತ್ತ ದಟ್ಟ ಕಾಡಿನಲ್ಲಿ ಅಲೆಯುತ್ತಿದ್ದಾಗ ಕಬಂಧ ತನ್ನ ಬಾಹುಗಳನ್ನು ಚಾಚಿ...
*ತನಗೆ ತಾನೇ ಗುರುವಾಗುವ ಸಾಧನೆ ಏಕ ಮನಸ್ಸಿನಿಂದ ಯಾರ ಸಹಾಯವೂ ಇಲ್ಲದೆ ಕಾರ್ಯದಲ್ಲಿ ಯಶಸ್ಸನ್ನು ಸಾಧಿಸುವ ವ್ಯಕ್ತಿಯನ್ನು ಕಂಡಾಗ, `ನೋಡಿ, ಅವನದು ಎಂಥ ಏಕಲವ್ಯ ಶ್ರದ್ಧೆ’ ಎಂದು ಮೆಚ್ಚುಗೆಯ ಮಾತನ್ನು ಆಡುತ್ತೇವೆ. ಮಹಾಭಾರತದಲ್ಲಿ ಏಕಲವ್ಯ ಅತ್ಯಂತ ಚಿರಪರಿಚಿತ ಪಾತ್ರವಾಗಿದ್ದಾನೆ. ಮೂಲತಃ ಏಕಲವ್ಯ ಯಾದವ ವಂಶದವನು. ಚಿಕ್ಕಂದಿನಲ್ಲಿಯೇ ಆತ ಕಾಡನ್ನು ಸೇರಿದ ಕಾರಣ ಮೂಲ ವಂಶದ ಕುರುಹು ಮರೆಯಾಯಿತು. ಆದರೆ ಧನುರ್ವಿದ್ಯೆಯನ್ನು ಕಲಿಯಬೇಕೆಂಬ ಇಚ್ಛೆ ಮಾತ್ರ ಆತನಲ್ಲಿ ಬಲವಾಗಿ ಉಳಿಯಿತು. ಆತ ದ್ರೋಣಾಚಾರ್ಯರ ಬಳಿಗೆ ಬಂದು ವಿದ್ಯೆ ಕಲಿಸುವಂತೆ...