*ಪ್ರತಿಭೆಗೆ ಸೂಕ್ತ ಮನ್ನಣೆ ಸಿಗಲಿ

ಪ್ರತಿಭೆ ಅರಳಲು ಸೂಕ್ತವಾದ ಅವಕಾಶ ಬೇಕು. ಸೂಕ್ತ ಅವಕಾಶ ದೊರೆಯದೆ ಎಷ್ಟೋ ಪ್ರತಿಭೆ ಮುರುಟಿ ಹೋಗುತ್ತದೆ. ಅವಕಾಶ ಸಿಗದ ಪ್ರತಿಭೆಯನ್ನು ಕಂಡು `ಅವನ ಬದುಕು ಕಾಡ ಬೆಳದಿಂಗಳು' ಆಗಿ ಹೋಯ್ತು ಎಂದು ಅನುಕಂಪ ತೋರಿಸುತ್ತೇವೆ. ಕಾಡಿನಲ್ಲಿಯ ಬೆಳದಿಂಗಳು ಎಷ್ಟೊಂದು ಆಹ್ಲಾದಕರವಾಗಿದ್ದರೂ ಯಾರ ಗಮನಕ್ಕೂ ಬರದೆ ಹೋಗುತ್ತದೆಯಲ್ಲವೆ? ಹಾಗೆ ಇದು. ಇದನ್ನೇ ಕೆಲವರು ವನಸುಮ ಎಂದು ಹೇಳುತ್ತಾರೆ. ವನಸುಮವೆಂದರೆ ಕಾಡಿನಲ್ಲಿ ಅರಳಿದ ಹೂವು. ಈ ಹೂವು ಬೀರುವ ಸುವಾಸನೆ ಯಾರಿಗೂ ತಟ್ಟದೆ ಹೋಗುತ್ತದೆ. ಅದರ ಸೌಂದರ್ಯ ಯಾರ ಆಸ್ವಾದನೆಗೂ ಸಿಗುವುದಿಲ್ಲ. ದೇವರ ಅಡಿಗೂ ಇಲ್ಲ, ಹೆಣ್ಣಿನ ಮುಡಿಗೂ ಇಲ್ಲ ಎಂಬಂಥ ಸ್ಥಿತಿ. ಪ್ರತಿಭೆಯನ್ನು ಗುರುತಿಸುವುದು, ಅದಕ್ಕೆ ಸೂಕ್ತ ಸ್ಥಾನಮಾನವನ್ನು ಕೊಡುವ ಕೆಲಸ ಆಗಬೇಕು ಎನ್ನುವುದಕ್ಕಾಗಿ ಈ ಮಾತನ್ನು ಹೇಳುತ್ತಾರೆ. ಮುದ್ದಣನ ಕತೆ ಯಾರಿಗೆ ಗೊತ್ತಿಲ್ಲ?ಭವತಿ ಭಿಕ್ಷಾಂದೇಹಿ’ ಎಂಬ ಸಪ್ತಾಕ್ಷರಿ ಮಂತ್ರವೇ ಆಧಾರ ಎನ್ನುವಂಥ ಸ್ಥಿತಿ ಅವರದು. ನಂದಳಿಕೆ ಲಕ್ಷ್ಮೀನಾರಾಯಣಪ್ಪನ ಕೃತಿಯನ್ನು ಪ್ರಕಟಿಸುವವರು ಯಾರೂ ಇರಲಿಲ್ಲ. ತಮ್ಮದೇ ಹಸ್ತಪ್ರತಿಯನ್ನು ಅವರು `ಮುದ್ದಣ’ ಎಂಬ ಪ್ರಾಚೀನ ಕವಿ ಬೆದ ಕಾವ್ಯ ಎಂದು ಹೇಳಿದರು. ಆಗಷ್ಟೇ ಅದು ಪ್ರಕಟವಾಗಿದ್ದು.
ಪ್ರತಿಭೆ ಎದುರಿಗಿದ್ದರೂ ಅದನ್ನು ಗುರುತಿಸದಿದ್ದರೆ ಅದು ಕಾಡ ಬೆಳದಿಂಗಳೇ. ಅದು ವನಸುಮವೂ ಹೌದು.