*ಸುಳ್ಳು ಭರವಸೆಗಳ ಮೂಟೆ

ನಾವು ಏನನ್ನೋ ಪಡೆದುಕೊಳ್ಳಬೇಕು ಎಂದು ಆಸೆಪಟ್ಟಿರುತ್ತೇವೆ. ಅದಕ್ಕಾಗಿ ಪ್ರಯತ್ನವನ್ನೂ ಮಾಡಿರುತ್ತೇವೆ. ಆದರೆ ಅದನ್ನು ದಕ್ಕಿಸಿಕೊಳ್ಳುವುದು ನಮ್ಮಿಂದ ಆಗುವುದೇ ಇಲ್ಲ. ಅಯ್ಯೋ ಆಗಿಯೇ ಹೋಯ್ತು ಎನ್ನುವಂತೆ ಇರುತ್ತದೆ. ಆದರೆ ಏನೂ ಆಗಿಯೇ ಇರುವುದಿಲ್ಲ. ಎಟಕುತ್ತದೆ ಅಂತಿರುವಾಗ ದಕ್ಕುವುದೇ ಇಲ್ಲ. ಹೀಗೆ ಗಮ್ಯವು ಕಾಣುತ್ತಿದ್ದರೂ ಅಗರತ್ತ ಗಮನ ಸಾಧ್ಯವಾಗದೆ ಇದ್ದರೆ ಬಹಳ ನಿರಾಶೆಯಾಗುತ್ತದೆ. ಆಗ `ಕನ್ನಡಿಯೊಳಗಿನ ಗಂಟು’ ಎಂಬ ಉದ್ಗಾರ ತನ್ನಿಂದ ತಾನೇ ಹೊರಡುತ್ತದೆ. ಕನ್ನಡಿಯೊಳಗೆ ಗಂಟು ಕಾಣುತ್ತಿರುತ್ತದೆ. ಕೈಚಾಚಿದರೆ ಅದನ್ನು ನಾವು ಎತ್ತಿಕೊಳ್ಳುವುದು ಸಾಧ್ಯವಿಲ್ಲ. ಸಾವಿರ ರುಪಾಯಿಯ ನೋಟು ಕನ್ನಡಿಯೊಳಗೆ ಕಂಡರೆ ನಮಗೇನು ಲಾಭ? ಸರ್ಕಾರದ ಎಷ್ಟೋ ಭರವಸೆಗಳು ಹೀಗೆಯೇ ಇರುತ್ತವೆ. ಸ್ವರ್ಗವೇ ಧರೆಗಿಳಿದಂತೆ ಎನ್ನುವ ಹಾಗೆ ಭರವಸೆಗಳನ್ನು ನೀಡುತ್ತಾರೆ. ಆದರೆ ಅವು ಯಾವವೂ ನಮಗೆ ದಕ್ಕದೆ ಹೋದಾಗ ಅದನ್ನೂ ಕನ್ನಡಿಯೊಳಗಿನ ಗಂಟು ಎಂದು ಹೇಳುತ್ತೇವೆ. ಒಟ್ಟಾರೆ, ಸಿಕ್ಕಿಯೇ ಬಿಟ್ಟಿತು ಎನ್ನುವ ಹಾಗೆ ಕಂಡು ಎಂದೆಂದಿಗೂ ಸಿಗದೆ ಇರುವುದೇ ಕನ್ನಡಿಯೊಳಗಿನ ಗಂಟು