ಎಲ್ಲ ಬಿಟ್ಟ ಬಂಗಿ ನೆಟ್ಟ

*ಎಲ್ಲದರಲ್ಲಿಯೂ ಕೈಯಾಡಿಸಲು ಹೋಗಿ ಎಲ್ಲಿಯೂ ಯಶಸ್ಸನ್ನು ಕಾಣದವರು ನಮ್ಮೂರ ಶಂಕರ ಜೀವನದಲ್ಲಿ ನೆಲೆ ನಿಲ್ಲಲು ಏನೇನೋ ಮಾಡಿದ. ಮೊದಲು ಗೇರುಬೀಜದ ವ್ಯಾಪಾರ, ನಂತರ ಚಹಾದಂಗಡಿ, ನಂತರ ಕಲ್ಲಂಗಡಿ ಬೆಳೆ, ಐಸ್‌ಕ್ಯಾಂಡಿ ಫ್ಯಾಕ್ಟರಿ ಹೀಗೆ ಒಂದಾದ ಮೇಲೆ ಒಂದನ್ನು ಮಾಡುತ್ತ ಹೋದ. ಕೊನೆಗೆ ಅವನು ಸಿನಿಮಾ ಟಾಕೀಸಿನಲ್ಲಿ ಬ್ಲ್ಯಾಕ್‌ ಟಿಕೆಟ್‌ ಮಾರಾಟವನ್ನೂ ಮಾಡಿದ. ಊರಿನಲ್ಲಿ, ಶಂಕರ ಈಗ ಏನು ಮಾಡ್ತಿದ್ದಾನೆ ಎಂದು ಯಾರನ್ನಾದರೂ ಕೇಳಿದರೆ, `ಎಲ್ಲ ಬಿಟ್ಟ ಬಂಗಿ ನೆಟ್ಟ' ಎಂದು ಹೇಳುತ್ತಾರೆ. ಶಂಕರನ ಇತ್ಯೋಪರಿ ಎಲ್ಲ ತಿಳಿದವರಿಗೆ...

ಎರಡು ಕುದುರೆ ಸವಾರಿ

*ಸ್ಪಷ್ಟ ನಿರ್ಧಾರ ಇಲ್ಲದವರ ಪರಿ ಇದು ಪ್ರತಿಯೊಬ್ಬರ ಬದುಕಿನಲ್ಲೂ ನಿರ್ಧಾರವನ್ನು ಕೈಗೊಳ್ಳಬೇಕಾದ ಕಾಲ ಬಂದೇ ಬರುತ್ತದೆ. ಆಗ ಯಾವುದು ಸರಿ ಯಾವುದು ಸರಿಯಲ್ಲ ಎಂಬ ದ್ವಂದ್ವ ಎದುರಾಗುತ್ತದೆ. ಯಾವುದನ್ನು ಒಪ್ಪುವುದು ಯಾವುದನ್ನು ಬಿಡುವುದು? ಅಕ್ಕಿಯ ಮೇಲೆ ಆಸೆ, ನೆಂಟರ ಮೇಲೂ ಪ್ರೀತಿ ಎನ್ನುವ ಸ್ಥಿತಿ. ಅದೂ ಇರಲಿ ಇದೂ ಇರಲಿ ಎಂಬ ಡೋಲಾಯಮಾನ ಸ್ಥಿತಿ. ಮನೆಯವರ ಒತ್ತಾಯಕ್ಕೆ ಒಂದು ಮದುವೆ, ಮನಸ್ಸಿನ ಒತ್ತಾಯಕ್ಕೆ ಒಂದು ಮದುವೆ ಮಾಡಿಕೊಂಡ ಇಬ್ಬರು ಹೆಂಡಿರ ಮುದ್ದಿನ ಗಂಡನ ಗೋಳಾಟ ಇದು. ಆಯ್ಕೆ...

ಓಬಿರಾಯ

*ಹಳೆಯದಕ್ಕೇ ಜೋತುಬೀಳುವವನು ಅವನ್ಯಾವನಪ್ಪ ಓಬಿರಾಯನ ಕಾಲದವನು- ಎಂದು ಸಾಮಾನ್ಯವಾಗಿ ಅಂದು ಬಿಡುತ್ತಾರೆ. ಹೊಸತು ಬಂದು ಹಳೆಯದನ್ನೆಲ್ಲ ಕೊಚ್ಚಿಕೊಂಡು ಹೋಗುತ್ತಿದ್ದರೂ ಹಳೆಯದಕ್ಕೇ ಜೋತುಬೀಳುವವರಿಗೆ, ಬದಲಾವಣೆಯನ್ನು ಜಪ್ಪಯ್ಯ ಎಂದರೂ ಒಪ್ಪಿಕೊಳ್ಳದವರಿಗೆ ಓಬಿರಾಯನ ಪಟ್ಟ ಕಟ್ಟಿಟ್ಟ ಬುತ್ತಿ. ಓಬಿರಾಯ ಎನ್ನುವವನು ಇದ್ದನೋ ಇಲ್ಲವೋ ಗೊತ್ತಿಲ್ಲ. ಇದ್ದಿದ್ದರೆ ಅವನಂತೂ ಸಂಪ್ರದಾಯದಿಂದ ಒಂದಿಂಚೂ ಈಚೆಗೆ ಬರುವುದಕ್ಕೆ ಒಲ್ಲೆ ಎಂದು ಪಟ್ಟು ಹಿಡಿದಿದ್ದಂತೂ ನಿಜವಿರಬೇಕು. ಆಡುಮಾತಿನಲ್ಲಿ ಅಲ್ಲದೆ ಗ್ರಂಥಗಳಲ್ಲಿ, ಪತ್ರಿಕೆಗಳಲ್ಲಿ ಓಬಿರಾಯ, ಓಬೀರಾಯನ ಪ್ರಸ್ತಾಪವಿದೆ. `ಓಬಿರಾಯನ ಕಥೆ ನಮಗೆ ಹೇಳಬೇಡ’ ಎಂಬ ಉಲ್ಲೇಖವನ್ನು ಹಳೆಯ ಗ್ರಂಥಗಳಲ್ಲಿ...

ಏಳು ಹನ್ನೊಂದು

*ಇದು ಮಹಾಭಾರತದ ಹದಿನೆಂಟು ದಿನಗಳ ಯುದ್ಧ ಏನೋ ಒಂದನ್ನು ತುಂಬ ಕಷ್ಟಪಟ್ಟು ಸಾಧಿಸಿಕೊಂಡವರು ತಮ್ಮ ಸಾಧನೆಯ ಕಷ್ಟದ ಹಾದಿಯ ಬಗ್ಗೆ ಹೇಳುವಾಗ `ಏಳು ಹನ್ನೊಂದು ಆಯ್ತು' ಎಂದು ಹೇಳುವುದನ್ನು ಕೇಳಿದ್ದೇವೆ. ಸಾಧನೆಯ ಹಾದಿ ಹೂವಿನದಲ್ಲ, ಕಲ್ಲು ಮುಳ್ಳಿನಿಂದ ಕೂಡಿದ್ದು. ಆದನ್ನು ಸಾಧಿಸಿಯೇ ಬಿಟ್ಟೆ ಎಂದು ಹೆಚ್ಚಳವನ್ನು ಹೇಳಿಕೊಳ್ಳುವುದು ಅವರ ಉದ್ದೇಶ. ಏಳು ಹನ್ನೊಂದು’ ಅಂದರೆ ಏನು? ಮಹಾಭಾರತದಲ್ಲಿ ಕೌರವ ಪಾಂಡವರಿಗೆ ಯುದ್ಧ ಸಂಭವಿಸುತ್ತದೆಯಲ್ಲವೆ? ಆಗ ಪಾಂಡವರ ಕಡೆಯಲ್ಲಿ ಏಳು ಅಕ್ಷೋಹಿಣಿ ಸೈನ್ಯ ಮತ್ತು ಕೌರವರ ಕಡೆ ಹನ್ನೊಂದು...

ಊರಿಗೊಬ್ಬಳೇ ಪದ್ಮಾವತಿ

*ಊರವರ ಕಣ್ಣೆಲ್ಲ ಇವಳ ಮ್ಯಾಲೆ ಜಂಬದ ಕೋಳಿಯಂಥ ಹೆಂಗಸನ್ನು ಕಂಡಾಗ, ತನ್ನ ಸೌಂದರ್ಯದ ಬಗ್ಗೆ ಬಹಳ ಅಹಂಕಾರ ಪಡುವ ಹೆಂಗಸನ್ನು ಕಂಡಾಗ, `ಊರಿಗೊಬ್ಬಳೇ ಪದ್ಮಾವತಿ ಅನ್ನುವ ಹಾಗೆ ಮೆರೆದಾಡ್ತವ್ಳೆ’ ಎಂದು ಕೊಂಡು ನುಡಿ ಆಡುವುದನ್ನು ಕೇಳಿದ್ದೇವೆ. ಯಾರು ಇವಳು ಪದ್ಮಾವತಿ? ಪದ್ಮಾವತಿ ಸುಂದರಿ, ಸುರಸುಂದರಿ. ಊರಿನ ವೇಶ್ಯೆ. ಊರಿನ ಕಣ್ಣೆಲ್ಲ ಇವಳ ಮ್ಯಾಲೇ. ಅವಳಲ್ಲಿಗೆ ಹೋಗಬೇಕೆಂದರೆ ತುಂಬಾ ಹಣ ಇರಬೇಕು, ಚೆಲುವು ಇರಬೇಕು, ಜೊತೆಯಲ್ಲಿ ಪಾಳಿ ಹಚ್ಚಬೇಕು. ಹೀಗಾಗಿ ಪದ್ಮಾವತಿಗೆ ಡಿಮ್ಯಾಂಪ್ಪೋ ಡಿಮ್ಯಾಂಡ್‌. ಇಷ್ಟು ಡಿಮ್ಯಾಂಡ್‌ ಇದ್ದ...

ಉಂಡೂ ಹೋದ ಕೊಂಡೂ ಹೋದ

*ವಿಶ್ವಾಸಕ್ಕೆ ಬಗೆಯುವ ದ್ರೋಹ ಯಾರೋ ಅಪರಿಚಿತ ಬರುತ್ತಾನೆ. ನಿಮ್ಮ ಪರಿಚಯ ಮಾಡಿಕೊಳ್ಳುತ್ತಾನೆ. ನಿಮ್ಮ ಆಶ್ರಯ ಪಡೆಯುತ್ತಾನೆ. ವಿಶ್ವಾಸಿಕನಂತೆ ಇರುತ್ತಾನೆ. ಒಂದು ದಿನ ನಿಮ್ಮ ವಿಶ್ವಾಸಕ್ಕೆ ದ್ರೋಹ ಬಗೆದು ನಿಮ್ಮ ಅಮೂಲ್ಯ ವಸ್ತುವನ್ನು ಎತ್ತಿಕೊಂಡು ಪರಾರಿಯಾಗುತ್ತಾನೆ. ಆಗ ನಿಮ್ಮ ಬಾಯಿಂದ `ಉಂಡೂ ಹೋದ ಕೊಂಡೂ ಹೋದ’ ಎಂಬ ಮಾತು ಬರುತ್ತದೆ. ಯಾವುದೋ ಊರಿನಲ್ಲಿ ಅಧಿಕ ಬಡ್ಡಿದರದ ಆಮಿಷ ಒಡ್ಡುವ ಹಣಕಾಸು ಸಂಸ್ಥೆ ಹಣ ಸಂಗ್ರಹಿಸಿ ನಾಪತ್ತೆಯಾಗುವುದು, ಇಂದು ಹಣ ನೀಡಿ ಹದಿನೈದು ದಿನದ ನಂತರ ಸಾಮಾನುಗಳನ್ನು ಅರ್ಧ ಬೆಲೆಗೆ...

ಉತ್ತರನ ಪೌರುಷ

*ತೋಳುಬಲವಲ್ಲ, ಬಾಯಿ ಬಲ ಸುಮ್ಮನೆ ಬಡಾಯಿ ಕೊಚ್ಚುಕೊಳ್ಳುವವರನ್ನು ಕಂಡಾಗ,`ಸಾಕೋ ಗೊತ್ತಿದೆ, ನಿಂದು ಉತ್ತರನ ಪೌರುಷ’ ಎಂದು ಛೇಡಿಸುವುದನ್ನು ಕೇಳಿದ್ದೇವೆ. ಕೈಯಲ್ಲಿ ಆಗದಿದ್ದರೂ ಎಲ್ಲವನ್ನೂ ತಾನು ಮಾಡುವೆ ಎಂದು ಹೇಳುವವರಿಗೂ, ಬೇರೆಯವರು ಮಾಡಿದ್ದನ್ನು ತಾನೇ ಮಾಡಿದ್ದೇನೆ ಎಂದು ಹೇಳಿಕೊಳ್ಳುವವರಿಗೂ ಹೀಗೇ ಹೇಳುವುದು. ಯಾರೀತ ಉತ್ತರ? ಏನವನ ಪೌರುಷ? ವಿರಾಟನಗರಿಯ ಮಹಾರಾಜ ವಿರಾಟನ ಮಗ ಉತ್ತರ. ಪಾಂಡವರು ತಮ್ಮ ಅಜ್ಞಾತವಾಸದ ಅವಧಿಯನ್ನು ಕಳೆಯಲು ಬಂದದ್ದು ಅಲ್ಲಿಯೇ. ಅಜ್ಞಾತವಾಸದ ಕೊನೆಯಲ್ಲಿ ಪಾಂಡವರು ಅಲ್ಲಿರುವುದರ ಬಗ್ಗೆ ಕೌರವರಿಗೆ ಅದು ಹೇಗೋ ಗೊತ್ತಾಗಿಬಿಡುತ್ತದೆ. ಅವರು...

ಈಚಲುಮರದ ಕೆಳಗೆ ಮಜ್ಜಿಗೆ ಕುಡಿಯುವುದು

*ಪ್ರಾಮಾಣಿಕತೆಗೆ ಪುರಾವೆ ಒದಗಿಸುವ ಸ್ಥಿತಿ ಬರಬಾರದು ಈಚಲುಮರ ಯಾವುದಕ್ಕೆ ಪ್ರಸಿದ್ಧ ಹೇಳಿ? ಈ ಮರದಿಂದ ಶೇಂದಿಯನ್ನು ಇಳಿಸುತ್ತಾರೆ. ಈ ಮರದ ಬುಡದಲ್ಲಿ ಕುಳಿತು ಏನನ್ನಾದರೂ ಕುಡಿದರೆ ಅದು ಶೇಂದಿಯಲ್ಲದೆ ಮತ್ತೇನು ಇದ್ದೀತು? ಇದು ಸಾಮಾನ್ಯವಾದ ತರ್ಕ. ಈ ರೀತಿ ತರ್ಕ ಮಾಡುವುದರಲ್ಲಿ ಯಾವುದೇ ತಪ್ಪು ಇಲ್ಲ. ಮಜ್ಜಿಗೆಯನ್ನು ಮಾಡುವುದು ಮನೆಯಲ್ಲಿ ತಾನೆ? ಮನೆಯಲ್ಲಿ ಮಜ್ಜಿಗೆ ಕುಡಿಯದೆ ಈಚಲುಮರದ ಬುಡಕ್ಕೆ ಹೋಗಿ ಏಕೆ ಕುಡಿಯಬೇಕು? ನಾವು ಯಾವುದೇ ಕೆಲಸವನ್ನು ಮಾಡಿದರೂ ಅದು ಪಾರದರ್ಶಕವಾಗಿರಬೇಕು. ಯಾರೂ ನಮ್ಮನ್ನು ಅನುಮಾನಿಸುವುದಕ್ಕೆ ಅವಕಾಶವನ್ನು...

ಇಂಗು ತಿಂದ ಮಂಗ

*ಮಾಡಬಾರದ್ದನ್ನು ಮಾಡಿ ಫಜೀತಿಗಿಟ್ಟುಕೊಳ್ಳುವುದು ಮಾಡಬಾರದ್ದನ್ನು ಮಾಡಲು ಹೋಗಿ ಪೆಟ್ಟು ತಿಂದವರನ್ನು ಕಂಡಾಗ ಇಂಗು ತಿಂದ ಮಂಗನಂತಾದ ಎದು ಹೇಳುವುದನ್ನು ಕೇಳಿದ್ದೇವೆ. ಮಂಗ ಯಾವತ್ತಾದರೂ ಇಂಗನ್ನು ತಿಂದುದನ್ನು ಕಂಡಿದ್ದೀರಾ? ಇಂಗು ನಮ್ಮ ನೆಲದ ಬೆಳೆ ಏನಲ್ಲ. ಹೀಗಿರುವಾಗ ಮಂಗ ಇಂಗು ತಿನ್ನುವುದಾದರೂ ಹೇಗೆ? ಇಂಗು ತಿಂದರೆ ಮಂಗನಿಗೆ ಏನಾಗುತ್ತದೆ? ಇಂಗಿನ ಮೂಲ ಇರಾನ್‌. ಅಫ್ಘಾನಿಸ್ತಾನದಲ್ಲೂ ಇಂಗನ್ನು ಬೆಳೆಯುತ್ತಾರೆ. ಅದೇ ರೀತಿ ಟೆಕ್ಸಾಸ್‌- ಮೆಕ್ಸಿಕೋದ ಗಡಿಯಲ್ಲೂ ಇಂಗನ್ನು ಬೆಳೆಯುತ್ತಾರೆ. ಸುಮಾರು ಎರಡು ಮೀಟರ್‌ ಎತ್ತರಕ್ಕೆ ಬೆಳೆಯುವ ಇಂಗದ ಗಿಡದ ಕಾಂಡ...

ಆಯಾರಾಂ ಗಯಾರಾಂ

*ಪಕ್ಷಾಂತರಿಗಳು ಅವತಾರ ಪುರುಷರು ರಾಜಕೀಯದಲ್ಲಿ ತತ್ವ ಆದರ್ಶಗಳು ಮುಖ್ಯವಾಗಿದ್ದ ಕಾಲ ಒಂದಿತ್ತು. ಅಧಿಕಾರವೇ ಮುಖ್ಯ ಎನ್ನುವ ಕಾಲವೂ ಬಂತು. ಅಧಿಕಾರ ರಾಜಕಾರಣಿಗಳಿಗೆ ಮುಖ್ಯವಾಗತೊಡಗಿದಾಗ ತತ್ವಗಳಿಗೆ ತಿಲಾಂಜಲಿ ಬಿಟ್ಟರು. ಬೆಳಿಗ್ಗೆ ಒಂದು ಪಕ್ಷ, ಸಂಜೆ ಇನ್ನೊಂದು ಪಕ್ಷ, ರಾತ್ರಿ ಮಗದೊಂದು ಪಕ್ಷ ಎನ್ನುವ ಮಟ್ಟಿಗೆ ರಾಜಕಾರಣ ಕುಲಗೆಟ್ಟು ಹೋಯಿತು. 1977ರಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿಯನ್ನು ಹಿಂದಕ್ಕೆ ಪಡೆದು ಚುನಾವಣೆಯನ್ನು ಘೋಷಣೆ ಮಾಡಿದ ಬಳಿಕ ಅವರ ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದ ಬಾಬು ಜಗಜೀವನರಾಂ ಅವರು ಪಕ್ಷವನ್ನು ತೊರೆದು ಹೊಸ...